Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಸಂಬಂಧಗಳಲ್ಲಿ ಹುಳಿ ಹಿಂಡೋದಕ್ಕೆ ಇಷ್ಟು ಕಾರಣಗಳು ಸಾಕು !
ಗಂಡ-ಹೆಂಡತಿ ನಡುವಿನ ಸಂಬಂಧ, ಸ್ನೇಹಿತರ ನಡುವಿನ ಸಂಬಂಧ, ಪ್ರೇಮಿಗಳ ಸಂಬಂಧ. ಹೀಗೆ ಯಾವುದೇ ಸಂಬಂಧವಿದ್ರೂ ಕೂಡ ಆ ಎಲ್ಲಾ ಸಂಬಂಧದಲ್ಲೂ ಕೊನೆವರೆಗೂ ನಾವು ಖುಷಿಯನ್ನೇ ಕಾಣುತ್ತೇವೆಂದು ಹೇಳೋದಿಕ್ಕಾಗೋದಿಲ್ಲ. ಸಂಬಂಧ ಎಂದ ಮೇಲೆ ಅದರಲ್ಲಿ ಮನಸ್ಥಾಪ, ಒದ್ದಾಟಗಳು ಇದ್ದೇ ಇರುತ್ತದೆ. ಕೆಲವೊಂದು ಸಲ ಹೇಗಾಗುತ್ತೆ ಅಂದ್ರೆ ಈ ಸಂಬಂಧವೇ ಬೇಡ ಅನ್ನುವ ಮಟ್ಟಿಗೆ ಆಗಿ ಬಿಡುತ್ತೆ. ಹಾಗಾದ್ರೆ ಈ ಸಂಬಂಧದಲ್ಲಿ ಒದ್ದಾಟಗಳು ಉಂಟಾಗೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
1. ಅತಿಯಾದ ನಿರೀಕ್ಷೇ ಇಟ್ಟುಕೊಳ್ಳುವುದು
ನಾವು ಒಬ್ಬರನ್ನು ಇಷ್ಟ ಪಟ್ಟಾಗ ಅವರು ಹೇಗಿರುತ್ತಾರೆಯೋ ಅದೇ ರೀತಿ ನಾವು ಅವರನ್ನು ಸ್ವೀಕರಿಸುತ್ತೇವೆ. ಆದರೆ ಅವರು ನಮ್ಮವರು ಎಂದು ಖಾತರಿಯಾದ ಮೇಲೆ ನಮಗೆ ಅವರ ಮೇಲೆ ನಿರೀಕ್ಷೇಗಳು ಹೆಚ್ಚಾಗುತ್ತದೆ. ನಾವು ಅವರನ್ನು ಬದಲಾಯಿಸೋದಕ್ಕೆ ಮುಂದಾಗ್ತೀವಿ. ಇದು ಅವರಿಗೂ ಕೂಡ ಕಿರಿ ಕಿರಿ ಅನ್ನಿಸೋದಕ್ಕೆ ಶುರುವಾಗುತ್ತದೆ. ಇದೇ ಕಾರಣಕ್ಕೆ ಸಂಬಂಧದಲ್ಲಿ ಒದ್ದಾಟಗಳು ಶುರುವಾಗುತ್ತದೆ.

2. ಬೇರೆಯವರಿಂದ ನಾವು ಪರಿಪೂರ್ಣತೆಯನ್ನು ಬಯಸುತ್ತೇವೆ
ಅನೇಕ ಸಲ ನಾವು ಅಪೂರ್ಣವಾಗಿದ್ದೇವೆ ಎಂಬ ಅನುಮಾನ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಬಾಳಲ್ಲಿ ಯಾರಾದರೂ ಬಂದು ನಮ್ಮನ್ನು ಪೂರ್ಣಗೊಳಿಸಲಿ ಎಂದು ಬಯಸುತ್ತೇವೆ. ಕೆಲವೊಂದು ಸಲ ಮತ್ತೊಬ್ಬರು ನಮ್ಮ ಬಾಳಲ್ಲಿ ಬಂದರೂ ಕೂಡ ನಮಗೆ ಅಪೂರ್ಣ ಎಂಬ ಭಾವನೆ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನಾವು ಅವರ ಮೇಲೆ ಒತ್ತಡ ಹಾಕೋದಕ್ಕೆ ಶುರು ಮಾಡುತ್ತೇವೆ. ಆಗ ಸಂಬಂಧಗಳು ಹಾಳಾಗೋದಕ್ಕೆ ಶುರುವಾಗುತ್ತದೆ. ನಮ್ಮ ಒತ್ತಡವನ್ನು ಬೇರೆಯವರ ಮೇಲೆ ಹೇರುವುದು ತಪ್ಪು.
3. ಸಂವಹನ ಚೆನ್ನಾಗಿಲ್ಲದಿರುವುದು
ಪ್ರತಿಯೊಂದು ಸಂಬಂಧದಲ್ಲೂ ಸಂವಹನ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸಂಬಂಧದಲ್ಲಿ ಸಂವಹನ ಚೆನ್ನಾಗಿ ಇದ್ದಾಗ ಮಾತ್ರ ಆ ಸಂಬಂಧ ಉತ್ತಮವಾಗಿರಲು ಸಾಧ್ಯ. ಅದು ಸ್ನೇಹಿತರು ಅಥವಾ ಪ್ರೇಮಿಗಳು ಆಗಿರಬಹುದು. ನಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ನಾವು ಹೇಳಿಬಿಡಬೇಕು. ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಒದ್ದಾಡಬಾರದು. ಹೀಗಾಗಿ ಯಾವಾಗ ಮುಕ್ತ ಮಾತುಕತೆ ಇರುವುದಿಲ್ಲವೋ ಆಗ ಸಂಬಂಧದಲ್ಲಿ ಒಂದೊಂದೇ ಸಮಸ್ಯೆಗಳು ಶುರುವಾಗುತ್ತದೆ.
4. ಸುಳ್ಳು ಹೇಳುವುದು
ಸುಳ್ಳಿನ ಮೇಲೆ ಸಂಬಂಧಗಳು ನಿಲ್ಲೋದಕ್ಕೆ ಸಾಧ್ಯವೇ ಇಲ್ಲ. ಇವತ್ತು, ನಾಳೆ ನಮ್ಮನ್ನು ಸುಳ್ಳು ರಕ್ಷಿಸಬಹುದು. ಆದರೆ ಪ್ರತಿ ಸಾರಿ ನಮ್ಮನ್ನು ಸುಳ್ಳು ರಕ್ಷಿಸೋದಿಲ್ಲ. ಸುಳ್ಳು ಎಂಬ ಕೆಂಡವನ್ನು ಮಡಿಲಿನಲ್ಲಿಟ್ಟುಕೊಂಡು ಬದುಕೋದಕ್ಕೆ ಸಾಧ್ಯವೇ ಇಲ್ಲ. ಇದರಿಂದ ನಿಧಾನವಾಗಿ ನಮ್ಮ ಸಂಬಂಧಗಳಲ್ಲಿ ಒಂದೊಂದೇ ತೊಡಕುಗಳು ಉಂಟಾಗುತ್ತದೆ. ಆದರೆ ಸತ್ಯ ಎಷ್ಟೇ ಕಹಿಯಾಗಿದ್ರೂ ಕೂಡ ಅದು ನಮ್ಮನ್ನು ಹಾಗೂ ನಮ್ಮ ಸಂಬಂಧವನ್ನು ಕೊನೆವರೆಗೂ ರಕ್ಷಿಸುತ್ತದೆ.
5. ಉಪಸ್ಥಿತಿಯ ಕೊರತೆ
ಒಂದು ಸಂಬಂಧದಲ್ಲಿ ನಮ್ಮ ಉಪಸ್ಥಿತಿ ತುಂಬಾನೇ ಮುಖ್ಯವಾಗುತ್ತದೆ. ಕೇವಲ ಒಬ್ಬರ ಉಪಸ್ಥಿತಿಯಿಂದ ಸಂಬಂಧವನ್ನು ಮುನ್ನಡೆಸೋದಕ್ಕೆ ಆಗೋದಿಲ್ಲ. ಉದಾಹರಣೆಗೆ ಇಬ್ಬರು ಪ್ರೀತಿಸುತ್ತಿದ್ದಾರೆ ಎಂದರೆ ಒಬ್ಬರ ಭಾವನೆಗಳಿಗೆ ಮತ್ತೊಬ್ಬರು ಬೆಲೆ ಕೊಡಬೇಕು. ಕಷ್ಟ ಕಾಲದಲ್ಲಿ ಒಬ್ಬರಿಗೆ ಮತ್ತೊಬ್ಬರು ಹೆಗಲಾಗಿ ನಿಲ್ಲಬೇಕು. ಆದರೆ ಎಲ್ಲರ ಸಂಬಂಧಗಳು ಹೀಗಿರೋದಿಲ್ಲ. ಹೆಸರಿಗಷ್ಟೇ ಅವರು ಬಾಯ್‌ಫ್ರೆಂಡ್ - ಗರ್ಲ್‌ಫ್ರೆಂಡ್‌ನಂತಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ಇವರ ಪ್ರೀತಿ ಕೇವಲ ತೋರ್ಪಡಿಕೆ ಅಷ್ಟೇ. ಅಲ್ಲಿ ಉಪಸ್ಥಿತಿಯ ಕೊರತೆ ಇರುತ್ತದೆ.
6. ಆರ್ಥಿಕ ಪ್ರೋತ್ಸಾಹ ಇಲ್ಲದಿರುವುದು
ಇತ್ತೀಚಿನ ಕಾಲದಲ್ಲಿ ಆರ್ಥಿಕವಾಗಿ ಸದೃಢರಾಗಿರೋದು ತುಂಬಾನೇ ಮುಖ್ಯವಾಗುತ್ತದೆ. ಸಂಬಂಧದಲ್ಲಿ ನಾವು ಯಾವಾಗ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತೇವೆಯೋ ಆ ವೇಳೆ ಆರಂಭದಲ್ಲಿ ನಮ್ಮ ಸಂಗಾತಿ ನಮಗೆ ಹೆಗಲಾಗಿ ನಿಲ್ಲುತ್ತಾರೆ. ಪ್ರತಿಸಾರಿ ಹೀಗಾದಾಗ ನಿಮ್ಮ ಸಂಗಾತಿ ಅದನ್ನು ಒಪ್ಪಿಕೊಳ್ಳೋದಕ್ಕೆ ಸಿದ್ಧರಿರೋದಿಲ್ಲ. ಕಷ್ಟದ ಜೀವನದಲ್ಲಿ ಬದುಕುವುದು ಅವರಿಗೆ ಕಷ್ಟ ಅನ್ನಿಸೋದಕ್ಕೆ ಶುರುವಾಗುತ್ತದೆ. ಇಲ್ಲಿಂದ ಎಲ್ಲಾ ಸಮಸ್ಯೆಗಳು ಶುರುವಾಗುತ್ತದೆ.
7. ನಂಬಿಕೆಯ ಕೊರತೆ
ಸಂಬಂಧದಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ಸಲ ನಂಬಿಕೆಯನ್ನು ಉಳಿಸಿಕೊಳ್ಳೋದ್ರಲ್ಲಿ ಜನ ಸೋತು ಹೋಗುತ್ತಾರೆ. ಪ್ರತಿ ಸಲ ತಮ್ಮ ಸಂಗಾತಿ ನಂಬಿಕೆಯನ್ನುಕಳೆದುಕೊಳ್ಳುತ್ತಿದ್ದರೆ ಆ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಒಬ್ಬರಿಗೆ ಮತ್ತೊಬ್ಬರ ಮೇಲೆ ಆಳವಾದ ನಂಬಿಕೆ ಇರಬೇಕು. ಹಾಗೆಯೇ ಆ ವ್ಯಕ್ತಿ ತಮ್ಮ ಸಂಗಾತಿಯ ನಂಬಿಕೆಯನ್ನು ಉಳಿಸಿಕೊಳ್ಳಬೇಕು.
ಈ ಎಲ್ಲಾ ಕಾರಣಗಳಿಂದ ಸಂಬಂಧದಲ್ಲಿ ಒದ್ದಾಟಗಳು ಶುರುವಾಗುತ್ತದೆ. ಕೊನೆಗೆ ಸಂಬಂಧವೇ ಬೇಡವೆಂದು ಮುರಿದುಕೊಳ್ಳುವ ಹಂತದವರೆಗೂ ಹೋಗುತ್ತದೆ. ಹೀಗಾಗಿ ಸಂಬಂಧದಲ್ಲಿ ಒಂದು ಸಣ್ಣ ಬಿರುಕು ಮೂಡದಂತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.



Click it and Unblock the Notifications
