Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹಣ, ಸಂಪತ್ತು ಹೆಚ್ಚಾದಾಗ ಪತಿ ಬೇರೆ ಕಡೆ ಆಕರ್ಷಿತನಾಗಲು ಪ್ರಮುಖ ಕಾರಣಗಳಿವು
ಒಂದು ಹೆಣ್ಣಿನ ನಿಯತ್ತು ಗೊತ್ತಾಗುವುದು ಅವಳ ಗಂಡನಿಗೆ ಕಷ್ಟ ಬಂದಾಗ, ಅದೇ ಒಂದು ಗಂಡಿನ ನಿಯತ್ತು ಗೊತ್ತಾಗುವುದು ಅವನಿಗೆ ಯಶಸ್ಸು ಸಿಕ್ಕಾಗ ಎಂಬ ಮಾತಿದೆ. ಹೌದು ಏನೂ ಇಲ್ಲದಿದ್ದಾಗ ತನ್ನ ಗಂಡನ ಕಷ್ಟಕ್ಕೆ ಹೆಗಲು ಕೊಡುವವಳೇ ನಿಜವಾದ ಸತಿ, ಅದೇ ಐಶ್ವರ್ಯ, ಸಂಪತ್ತು ವೃದ್ಧಿಸಿದಾಗ ತನ್ನ ಪತ್ನಿಗೆ ಮೋಸ ಮಾಡದವನೇ ಆದರ್ಶ ಗಂಡನಾಗಲು ಸಾಧ್ಯ.

ನಮ್ಮ ಸುತ್ತ ಮುತ್ತ ಎಷ್ಟೋ ಜನರನ್ನು ನೋಡುತ್ತೇವೆ, ಇಬ್ಬರು ಕಷ್ಟಪಟ್ಟು ಜೀವನ ಕಟ್ಟಿಕೊಂಡಿರುತ್ತಾರೆ, ಅವರಿಗೆ ಅದೃಷ್ಟ ಲಕ್ಷ್ಮಿಯೂ ಒಲಿಯುತ್ತಾಳೆ, ಬಂಗಲೆ, ಹಣ ಅಂತ ಐಶ್ವರ್ಯದ ಬದುಕು ಸಿಗುವುದು, ಆವಾಗ ಅದುವರೆಗೆ ಅವರ ಬದುಕಿನಲ್ಲಿ ಇಲ್ಲದ ಕಷ್ಟ ಕಂಡು ಬರುವುದು, ಆಕೆಗೆ ತನ್ನ ಗಂಡ ನನ್ನ ಕಡೆ ಒಲವು ತೋರುತ್ತಿಲ್ಲ, ಬೇರೆ ಕಡೆ ಆಕರ್ಷಣೆ ಉಂಟಾಗಿದೆ ಎಂದು ಅನಿಸಲಾರಂಭಿಸುತ್ತದೆ, ಆತ ಕೂಡ ಕಷ್ಟದಲ್ಲಿ ತನ್ನ ಜೊತೆ ಇದ್ದವಳನ್ನು ಮರೆತು ಬೇರೆ ಕಡೆ ಆಕರ್ಷಣೆಗೆ ಒಳಗಾಗುತ್ತಾನೆ, ಪುರುಷರು ಈ ರೀತಿಯಾಗಲು ಪ್ರಮುಖ ಕಾರಣವೇನು?
ನಾನು ಏನು ಮಾಡಿದರೂ ನಡೆಯುತ್ತೆ ಎಂಬ ಅಹಂ
ಇದೆಲ್ಲವೂ ಮಾಡಿದ್ದು ನಾನು, ನಾನು ಏನು ಮಾಡಿದರೂ ನಡೆಯುತ್ತೆ ಎಂಬ ಯೋಚನೆ ಬರುತ್ತದೆ, ನಮ್ಮ ಆರ್ಥಿಕ ಸ್ಥಿತಿ ಬದಲಾದಂತೆ ನಾವು ನಮ್ಮ ಮನೆಯ ಚಿತ್ರಣ ಬದಲಾಯಿಸುತ್ತೇವೆ, ಪುಟ್ಟ ಮನೆ ಇದ್ದ ಕಡೆ ಬಂಗಲೆ ಕಟ್ಟುತ್ತೇವೆ, ನಮ್ಮಲ್ಲಿ ಲಕ್ಷುರಿ ಹೆಚ್ಚಾಗುವುದು, ಅಲ್ಲದೆ ತನ್ನ ಪತ್ನಿ ಅನುಭವಿಸುತ್ತಿರುವ ಸೌಲಭ್ಯಗಳೆಲ್ಲವೂ ನನ್ನಿಂದ ಸಿಕ್ಕಿದ್ದು ಎಂಬ ಅಹಂ, ತಾನು ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಧೈರ್ಯ ಅವಳಲ್ಲಿ ಎಂಬ ಆಲೋಚನೆ...
ಶ್ರೀಮಂತ ವ್ಯಕ್ತಿಯನ್ನು ಸೆಳೆಯಲೆಂದೇ ಬರುವ ಮಾಯಾಂಗನೆಗಳು
ಆ ವ್ಯಕ್ತಿಯಲ್ಲಿ ಹಣ, ಆಸ್ತಿ ಇದೆ ಎಂದು ಗೊತ್ತಾದಾಗ ಅವನಿಗೆ ಮದುವೆಯಾಗಿದೆ ಮಕ್ಕಳಿದೆ ಎಂದು ಗೊತ್ತಿದ್ದರೂ ಅವನ ಜೊತೆ ಅವನ ಸ್ನೇಹ, ಪ್ರೀತಿ ಪಡೆಯುವ ಪ್ರಯತ್ನ ಮಾಡುತ್ತಾರೆ, ಅವರ ಉದ್ದೇಶ ಒಂದೇ ಆಗಿರುತ್ತದೆ ಅವನ ಮೂಲಕ ತನ್ನ ಬದುಕು ಸೆಟ್ಲ್ ಮಾಡುವುದು ಅವರ ಗುರಿ.
ಬದಲಾಗುವ ಜೀವನಶೈಲಿ
ಹಣ ಹೆಚ್ಚಾದಾಂತೆ ನಮ್ಮ ಜೀವನಶೈಲಿ ಬದಲಾಗುವುದು, ಕೆಲವರು ಅಭಿರುಚಿ ಕೂಡ ಇದ್ದಕ್ಕಿದ್ದಂತೆ ಬದಲಾಗುವುದು, ತನ್ನ ಹೆಂಡತಿ ನನಗೆ ಸರಿ ಹೊಂದುತ್ತಿಲ್ಲ ಎಂದು ಅನಿಸಲಾರಂಭಿಸುವುದು, ನಾನು ಕಷ್ಟದಲ್ಲಿದ್ದಾಗ ಹೆಗಲು ಕೊಟ್ಟವಳು ಎಂಬುವುದನ್ನು ಮರೆತು ತನ್ನಲ್ಲಿರುವ ಹಣ ನೋಡಿ ಬಂದ ವ್ಯಕ್ತಿಯೇ ನನ್ನ ಪ್ರೇಮಿ ಎಂದು ನಂಬುವುದು. ಅಲ್ಲದೆ ವ್ಯಕ್ತಿ ಬೆಳೆಯುತ್ತಿದ್ದಂತೆ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯುವುದು ಕಷ್ಟವಾಗುವುದು, ಈ ಸಮಯದಲ್ಲಿ ಅವರ ಆಫೀಸ್‌ನಲ್ಲಿರುವ, ಅವರಿಗೆ ಪಾರ್ಟಿಯಲ್ಲಿ ಸಿಗುವ ವ್ಯಕ್ತಿ ಜೊತೆ ಆಕರ್ಷಣೆ ಬೆಳೆಯುವುದು.
ಗಂಡನಲ್ಲಿನ ಈ ಬದಲಾವಣೆ ಕಂಡು ಹಿಡಿಯುವುದು ತುಂಬಾನೇ ಸುಲಭ
ಹೆಂಡತಿಗೆ ತನ್ನ ಗಂಡನಲ್ಲಿ ಚಿಕ್ಕ ಬದಲಾವಣೆಯಾದರೂ ಗಮನಿಸುತ್ತಾಳೆ, ಅವಳು ಪ್ರತಿಭಟಿಸುತ್ತಾಳೆ, ಕೋಪಗೊಳ್ಳುತ್ತಾಳೆ, ಹೆಂಡತಿ ನನಗೆ ಅವಮಾನ ಮಾಡಿದಳು ಎಂಬ ಸುಳ್ಳು ಸಬೂಬುನೊಂದಿಗೆ ಬೇರೆ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳುವ ಪುರುಷರೂ ಇದ್ದಾರೆ.
ಸಾಮಾನ್ಯವಾಗಿ 40 ವರ್ಷ ದಾಟಿದ ಪುರುಷರಲ್ಲಿ ಈ ಗುಣ ಕಂಡು ಬರುವುದು
ಹೆಂಡತಿ ಮನೆ, ಮಕ್ಕಳು ಎಂದು ಬ್ಯುಸಿಯಾಗಿರುತ್ತಾಳೆ, ಈತನಿಗೆ ಹೆಂಡತಿ ನನ್ನ ಕಡೆ ಗಮನಹರಿಸುತ್ತಿಲ್ಲ ಎಂದು ಅನಿಸಲಾರಂಭಿಸುವುದು, ಈ ಒಂಟಿತನ ಹೋಗಲಾಡಿಸಲು ಬೇರೆ ಕಡೆ ಆಕರ್ಷಣೆಗೆ ಒಳಗಾಗುತ್ತಾರೆ.



Click it and Unblock the Notifications