Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮ ಪತಿ ಜೊತೆ ಯಾರಾದರೂ ಫ್ಲರ್ಟ್ ಮಾಡುತ್ತಿದ್ದರೆ ಈ ರೀತಿ ಮಾಡಿ!
ಪತಿ ನಮ್ಮ ಮೇಲೆ ಮಾತ್ರ ಪ್ರೀತಿ ತೋರಿಸ್ಬೇಕು. ನಮ್ಮನ್ನು ಮಾತ್ರ ಕಾಳಜಿ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಮಹಿಳೆಗೂ ಇದ್ದೇ ಇರುತ್ತದೆ. ಆದರೆ ಏಕಾ ಏಕಿ ಆ ಪ್ರೀತಿ ಮತ್ತೊಬ್ಬ ಮಹಿಳೆಗೆ ಹಂಚಿಕೆಯಾಗ್ತಿದೆ ಅನ್ನೋದನ್ನು ಅರಗಿಸಿಕೊಳ್ಳೋದಕ್ಕೆ ಕಷ್ಟ ಆಗುತ್ತೆ. ಹೌದು, ನಿಮ್ಮ ಪತಿಗೆ ಅನ್ಯ ಮಹಿಳೆಯ ಮೇಲೆ ಆಸಕ್ತಿ ಇದ್ಯಾ? ಇಲ್ವೋ ಗೊತ್ತಿಲ್ಲ. ಆದರೆ ಅನ್ಯ ಮಹಿಳೆಯೊಬ್ಬಳು ನಿಮ್ಮ ಪತಿಯ ಮೇಲೆ ಆಸಕ್ತಿ ತೋರಿಸುತ್ತಿದ್ದರೆ ಆ ಸಮಯದಲ್ಲಿ ನೀವು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.
1. ಈ ಸಂದರ್ಭದಲ್ಲಿ ಭೀತಿಗೆ ಒಳಗಾಗಬೇಡಿ
ಒಂದು ವೇಳೆ ಅನ್ಯ ಮಹಿಳೆಯೊಬ್ಬಳು ನಿಮ್ಮ ಪತಿಯ ಮೇಲೆ ಆಸಕ್ತಿ ತೋರಿಸುತ್ತಿರೋದು ಗೊತ್ತಾದರೆ ನೀವು ಆ ಕ್ಷಣಕ್ಕೆ ಭೀತಿಗೊಳಗಾಗೋದು ಗ್ಯಾರಂಟಿ. ಹೀಗಾಗಿ ಆ ಕ್ಷಣ ಯಾವುದೇ ರೀತಿ ಪ್ರತಿಕ್ರಿಯೆಯನ್ನು ಕೊಡೋದಕ್ಕೆ ಹೋಗಬೇಡಿ. ಯಾಕಂದ್ರೆ ಎಲ್ಲರ ಎದುರು ನೀವು ಏಕಾ ಏಕಿ ಪ್ರತಿಕ್ರಿಯೆ ನೀಡುವುದು ತಪ್ಪಾಗಬಹುದು. ಹೀಗಾಗಿ ಆ ಕ್ಷಣಕ್ಕೆ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಉತ್ತಮ.

2. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ
ನೀವು ಎಲ್ಲಿಯಾದರೂ ಹೊರಗಡೆ ಹೋದಾಗ ಈ ರೀತಿ ಘಟನೆ ನಡೆದಿರಬಹುದು. ಯಾವುದಾದರೂ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬಳು ನಿಮ್ಮ ಪತಿಯನ್ನೇ ನೋಡುತ್ತಿದ್ದು, ಆತನ ಬಳಿ ಪದೇ ಪದೇ ಬಂದು ಮಾತನಾಡಲು ಇಚ್ಛಿಸಿದರೆ. ನೀವು ಇದೇ ವಿಚಾರವನ್ನಿಟ್ಟುಕೊಂಡು ಆ ಕಾರ್ಯಕ್ರಮದಲ್ಲಿ ರಂಪಾ ಮಾಡೋದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಮರ್ಯಾದೆಗೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಿಜವಾಗಿಯೂ ಅಲ್ಲಿ ಏನಾಗುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸಿ.
3. ನಿಮ್ಮ ಪತಿಯ ಬಳಿ ಮಾತನಾಡಿ
ಒರ್ವ ಮಹಿಳೆಯು ನಿಮ್ಮ ಪತಿಯಲ್ಲಿ ಆಸಕ್ತಿ ತೋರಿಸುತ್ತಿದ್ದರೆ ನೀವು ಮೊದಲು ಮಾಡಬೇಕಾದ ಕೆಲಸ ನಿಮ್ಮ ಪತಿಯಲ್ಲಿ ಮಾತನಾಡುವುದು. ಸಮಾಧಾನವಾಗಿ ಕುಳಿತುಕೊಂಡು ಮೊದಲು ನಿಮ್ಮ ಪತಿಯ ಬಳಿ ಮಾತನಾಡಿ. ಏನಾಗುತ್ತಿದೆ ಅನ್ನೋದನ್ನು ತಿಳಿದುಕೊಳ್ಳಿ. ಆ ಮಹಿಳೆಯು ಈ ಮೊದಲು ಇದೇ ರೀತಿ ವರ್ತಿಸುತ್ತಿದ್ದಳಾ ಅನ್ನೋದ್ರ ಬಗ್ಗೆ ಮಾಹಿತಿ ಪಡೆಯಿರಿ. ಒಂದು ವೇಳೆ ನಿಮ್ಮ ಪತಿಗೆ ಈ ಬಗ್ಗೆ ಗೊತ್ತಿರದಿದ್ದರೆ ಅವರಿಗೆ ಅರಿವು ಮೂಡಿಸಿ.
4. ಆಕೆಯಿಂದ ದೂರ ಇರೋದಕ್ಕೆ ಪ್ರಯತ್ನಿಸಿ
ಅನ್ಯ ಮಹಿಳೆ ನಿಮ್ಮ ಸಂಬಂಧಿಕರೇ ಆಗಿದ್ದು, ಅವರೇ ನಿಮ್ಮ ಪತಿಯ ಮೇಲೆ ಆಸಕ್ತಿ ತೋರಿಸೋದಕ್ಕೆ ಬಯಸಿದಾಗ ಅವರಿಂದ ಆದಷ್ಟು ದೂರ ಇರೋದು ಒಳ್ಳೆಯದು. ಆ ಮಹಿಳೆ ಬರುವ ಕಾರ್ಯಕ್ರಮಗಳಿಗೆ ನೀವು ಹೋಗಬೇಡಿ. ನಿಮ್ಮ ಮನೆಯ ಶುಭ ಸಮಾರಂಭಗಳಿಗೆ ಅವರನ್ನು ಆಹ್ವಾನ ಮಾಡಬೇಡಿ. ಇನ್ನೂ ಸಾಧ್ಯವಾದರೆ ಆ ಮಹಿಳೆಯಲ್ಲಿ ನೀವು ಮಾತನಾಡೋದಕ್ಕೆ ಪ್ರಯತ್ನಿಸಿ. ಏಕಾಏಕಿ ಅವರ ಜೊತೆಗೆ ಜಗಳವಾಡಬೇಡಿ. ಬದಲಾಗಿ ಅವರಲ್ಲಿ ಸೌಮ್ಯವಾಗಿ ಮಾತನಾಡಿ ತನ್ನ ಗಂಡನ ಜೊತೆಗೆ ಫ್ಲರ್ಟ್ ಮಾಡೋದನ್ನು ಬಿಡೋದಕ್ಕೆ ಹೇಳಿ.
5. ನಿಮ್ಮ ಗಂಡನ ಮೇಲೆ ನಂಬಿಕೆಯಿಡಿ
ನಿಮ್ಮ ಗಂಡನ ಜೊತೆಗೆ ಫ್ಲರ್ಟ್ ಮಾಡೋದಕ್ಕೆ ಯತ್ನಿಸುತ್ತಿರುವ ಮಹಿಳೆ ಅವರ ಆಫಿಸ್ ನಲ್ಲೇ ಕೆಲಸ ಮಾಡುತ್ತಿದ್ದರೆ ಮಹಿಳೆಯಿಂದ ನಿಮ್ಮ ಗಂಡನನ್ನು ದೂರ ಇಡೋದು ಕಷ್ಟ. ಬದಲಾಗಿ ನೀವೇ ನಿಮ್ಮ ಗಂಡನ ಬಳಿ ನಂಬಿಕೆಯಿಡಿ. ನಿಮ್ಮ ಗಂಡ ಸಂಬಂಧದಲ್ಲಿ ಪ್ರಾಮಾಣಿಕವಾಗಿದ್ದರೆ ಎನ್ನುವ ನಂಬಿಕೆ ನಿಮಗಿದ್ದರೆ ಭಯ ಪಡುವ ಅಗತ್ಯವೇ ಇಲ್ಲ.
6. ನೀವು ನಿಮ್ಮ ಗಂಡನಿಗೆ ಸಾಧ್ಯವಾದಷ್ಟು ಹತ್ತಿರವಾಗಿ
ಮದುವೆಯಾದ ಹೊಸತರಲ್ಲಿ ನೀವಿಬ್ಬರೂ ತುಂಬಾನೇ ಆತ್ಮೀಯವಾಗಿ ಇರುತ್ತೀರಿ. ಒಬ್ಬರ ಮೇಲೆ ಮತ್ತೊಬ್ಬರು ಪ್ರೀತಿ, ಕಾಳಜಿಯನ್ನು ವಹಿಸುತ್ತೀರಿ. ಆದರೆ ಮದುವೆಯಾಗಿ ಸ್ವಲ್ಪ ವರ್ಷಗಳ ನಂತರ ಇದು ತನ್ನಿಂದ ತಾನೇ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧದಲ್ಲಿ ನೀವು ಹೊಸತನವನ್ನು ಕಾಯ್ದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಗಂಡನ ಕಾಳಜಿ ಮಾಡಿ, ಅವರ ಮೇಲೆ ಪ್ರೀತಿಯನ್ನು ತೋರಿಸಿ.
7. ಆಪ್ತರ ಬಳಿ ಈ ಬಗ್ಗೆ ಮಾತನಾಡಿ
ಗಂಡನ ಮೇಲೆ ಬೇರೊಬ್ಬ ಮಹಿಳೆ ಆಸಕ್ತಿ ತೋರುತ್ತಿದ್ದರೆ ನೀವು ಖಂಡಿತ ಭಯ ಭೀತರಾಗಿ ಇರುತ್ತೀರಿ. ನಿಮ್ಮಲ್ಲಿ ಆತಂಕ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಈ ವಿಚಾರವನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳಬೇಡಿ. ಬದಲಾಗಿ ಯಾರ ಬಳಿಯಾದರೂ ಈ ಬಗ್ಗೆ ಮಾತನಾಡಿ. ಆಪ್ರ ಬಳಿ ಮಾತನಾಡಿ ಇದಕ್ಕೆ ಪರಿಹಾರ ಕಂಡುಕೊಳ್ಳಿ. ನಮ್ಮವರ ಬಳಿ ಈ ವಿಚಾರದ ಬಗ್ಗೆ ಮಾತನಾಡುವಾಗ ಮನಸ್ಸು ಹಗುರಾಗುತ್ತದೆ.
ನಿಮ್ಮ ಸಂಸಾರವನ್ನು ನೀವು ಉಳಿಸಬೇಕೆಂದಿದ್ದರೆ ಖಂಡಿತ ನೀವು ಅಲರ್ಟ್ ಆಗಿರಲೇಬೇಕಾಗುತ್ತದೆ. ಆರಂಭದಲ್ಲೇ ಸಮಸ್ಯೆಯನ್ನು ಚಿವುಟಿ ಹಾಕಿದರೆ ಮಾತ್ರ ನೀವು ನೆಮ್ಮದಿಯಿಂದ ಸಂಸಾರ ಮಾಡಬಹುದು.



Click it and Unblock the Notifications

