Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮದುವೆಯಾಗಬೇಕು ಅಂದುಕೊಂಡಿದ್ದೀರಾ? ಈ ಲೇಖನ ಓದಲೇಬೇಕು!
ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ ಅಂತಾನೇ ಹೇಳಬಹುದು. ಕೆಲವರ ದಾಂಪತ್ಯ ಚೆನ್ನಾಗಿದ್ರೆ ಇನ್ನೂ ಕೆಲವರ ದಾಂಪತ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಹೀಗಾದಾಗ ಮನುಷ್ಯನಿಗೆ ಜೀವನದಲ್ಲಿ ಮನಃಶಾಂತಿ ಅನ್ನೋದೇ ಇರೋದಿಲ್ಲ.

ಈ ರೀತಿ ದಾಂಪತ್ಯ ಸಮಸ್ಯೆಗಳು ಎದುರಾದಾಗ ಮೊದಲಿಗೆ ನಮ್ಮ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಹಾಗೆಂದ ಮಾತ್ರಕ್ಕೆ ದಾಂಪತ್ಯದಲ್ಲಿ ಎಲ್ಲವೂ ಕೆಟ್ಟದೇ ಆಗುತ್ತೆ ಅಂತ ಹೇಳೋದಿಕ್ಕಾದಿಲ್ಲ. ಅದೆಷ್ಟೋ ಜನ ಮದುವೆಯ ನಂತರ ಸುಂದರ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಅಷ್ಟಕ್ಕು ಮದುವೆ ಒರ್ವ ವ್ಯಕ್ತಿಯ ಆರೋಗ್ಯದಲ್ಲಿ ಯಾವ ರೀತಿ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ಬೀರುತ್ತೆ ಅನ್ನೋದನ್ನು ತಿಳಿಯೋಣ.
ಮದುವೆಯಿಂದಾಗುವ ಧನಾತ್ಮಕ ಪರಿಣಾಮಗಳೇನು?
1. ಆರೋಗ್ಯ ಉತ್ತಮವಾಗಿರುತ್ತದೆ
ನಮ್ಮ ಬ್ಯಾಚುರಲ್ ಬದುಕಿಗೂ ಮದುವೆಯಾದ ನಂತರ ಬದುಕಿಗೂ ತುಂಬಾನೇ ವ್ಯತ್ಯಾಸ ಇರುತ್ತದೆ. ಮದುವೆಯಾದ ನಂತರ ಹೆಚ್ಚಿನ ಜನರ ದಿನಚರಿ ಉತ್ತಮವಾಗಿರುತ್ತದೆ. ಪೌಷ್ಠಿಕಾಂಶಯುಕ್ತ ಊಟ-ತಿಂಡಿಯನ್ನು ಸೇವನೆ ಮಾಡಬಹುದು. ದಂಪತಿಗಳಿಬ್ಬರು ಫಿಟ್ ನೆಸ್ ಕಡೆಗೆ ಹೆಚ್ಚಾಗಿ ಫೋಕಸ್ ಮಾಡ್ಬಹುದು. ನಮಗೆ ಹುಷಾರಿಲ್ಲದಾಗ ಸಂಗಾತಿ ನಮ್ಮ ಬೇಕು-ಬೇಡಗಳನ್ನು ವಿಚಾರಿಸಿ ನಮ್ಮ ಕಾಳಜಿ ಮಾಡುತ್ತಾರೆ.
2. ಅಪಾಯ ಎದುರಾಗೋದಿಲ್ಲ
ಮದುವೆಗೂ ಮೊದಲು ನಾವು ಯಾವುದೇ ಅಪಾಯ ಅಥವಾ ರಿಸ್ಕ್ ತೆಗೆದುಕೊಳ್ಳೋದಕ್ಕೆ ಹಿಂದೆ-ಮುಂದೆ ನೋಡೋದಿಲ್ಲ. ಆಗ ನಾವು ನಮ್ಮ ಬಗ್ಗೆ ಮಾತ್ರ ಚಿಂತಿಸುತ್ತಿರುತ್ತೇವೆ. ಆದ್ರೆ ಮದುವೆಯ ನಂತರ ಹಾಗಲ್ಲ, ನಾವು ನಮ್ಮ ಜೊತೆಗೆ ನಮ್ಮ ಸಂಗಾತಿ, ಮಕ್ಕಳ ಬಗ್ಗೆಯೂ ಆಲೋಚನೆ ಮಾಡುತ್ತೇವೆ. ಹೀಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಮೊದಲು ನೂರು ಬಾರಿ ಆಲೋಚನೆ ಮಾಡುತ್ತೇವೆ.
3. ದೀರ್ಘಾಯುಷ್ಯ
ಹುಟ್ಟು-ಸಾವು ನಮ್ಮ ಕೈನಲ್ಲಿ ಇರೋದಿಲ್ಲ. ಆದ್ರೆ ನಾವು ಉತ್ತಮ ಜೀವನ ಶೈಲಿಗಳನ್ನು ಅಳವಡಿಸಿಕೊಂಡರೆ ನಮ್ಮ ಆಯುಷ್ಯ ವೃದ್ಧಿಯಾಗುತ್ತೆ ಎನ್ನುವ ನಂಬಿಕೆಯಿದೆ. ಮದುವೆಯ ನಂತರ ನಾವು ತಿನ್ನುವ ಆಹಾರದಿಂದ ಹಿಡಿದು, ನಾವು ಪಾಲಿಸುವ ಜೀವನ ಶೈಲಿ ಕೂಡ ಉತ್ತಮವಾಗಿರುತ್ತದೆ. ಒಂದು ವೇಳೆ ನಾವು ಈ ಬಗ್ಗೆ ಕಾಳಜಿ ವಹಿಸದಿದ್ದರೂ ಕೂಡ ನಮ್ಮ ಸಂಗಾತಿ ನಮ್ಮ ಕಾಳಜಿ ಮಾಡುತ್ತಾರೆ.
4. ದುಃಖಗಳನ್ನು ಮರೆಯೋದಕ್ಕೆ ಸಾಧ್ಯವಾಗುತ್ತದೆ!
ಮನುಷ್ಯ ಎಂದ ಮೇಲೆ ಆತನಿಗೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ. ಆರ್ಥಿಕ ಸಮಸ್ಯೆ, ವೃತ್ತಿ ಜೀವನ ಸಮಸ್ಯೆ ಹೀಗೆ ಅನೇಕ ರೀತಿಯ ಸಮಸ್ಯೆಗಳು ಇದ್ದಾಗ ಆತನ ಚಿಂತೆಯಲ್ಲಿ ಮುಳುಗಿ ಹೋಗಿರುತ್ತಾನೆ. ಹೀಗಿರುವಾಗ ಮನೆಗೆ ಬಂದ ತಕ್ಷಣ ಸಂಗಾತಿ ಹಾಗೂ ಮಕ್ಕಳನ್ನು ನೋಡಿದ ತಕ್ಷಣ ನಮ್ಮೆಲ್ಲಾ ದುಃಖ, ನೋವನ್ನು ಮರೆಯುತ್ತಾರೆ. ಕೆಲವೊಂದು ಸಲ ಸಂಗಾತಿಯ ಸ್ಫೂರ್ತಿಯ ಮಾತುಗಳಿಂದ ಎಂತಹ ಕಠಿಣ ಸಮಸ್ಯೆಗಳನ್ನು ಗೆದ್ದು ಬರಲು ಸಾಧ್ಯವಾಗುತ್ತದೆ.
ಮದುವೆಯಿಂದಾಗುವ ಋಣಾತ್ಮಕ ಪರಿಣಾಮಗಳೇನು?
1. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ!
ವೈವಾಹಿಕ ಜೀವನದಲ್ಲಿ ಕಲಹಗಳು ಇದ್ದರೆ ಜನ ಒತ್ತಡ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದಾಗಿ ರಕ್ತದೊತ್ತಡದ ಹೆಚ್ಚಳ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗೋದ್ರಿಂದ ಇವುಗಳು ಹೃದ್ರೋಗದ ಅಪಾಯಕ್ಕೂ ಕಾರಣವಾಗಬಹುದು. ಹೀಗಾಗಿ ದಾಂಪತ್ಯದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಸಾಧ್ಯವಾದಷ್ಟು ಹೊಂದಾಣಿಕೆ ಬದುಕಲು ಕಲಿಯಿರಿ.
2. ಸಕ್ಕರೆ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ!
ವೈವಾಹಿಕ ಜೀವನದಲ್ಲಿನ ಒತ್ತಡವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಟೈಪ್ ಟು ಡಯಾಬಿಟಿಸ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ಮಾನಸಿಕ ಒತ್ತಡ ಅಥವಾ ಪರಿಹರಿಸಲಾಗದ ಘರ್ಷಣೆಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು ಎಂದು ಸಾಬೀತಾಗಿದೆ.
3. ಅನಾರೋಗ್ಯದಿಂದ ಹೊರ ಬರೋದಕ್ಕೆ ಕಷ್ಟ ಆಗುತ್ತದೆ!
ನಮ್ಮ ವೈವಾಹಿಕ ಸಂಬಂಧಗಳು ಚೆನ್ನಾಗಿ ಇಲ್ಲದಿದ್ದಾಗ ನಾವು ಯಾವುದೇ ರೋಗದಿಂದ ಹೊರಬರೋದು ಕಷ್ಟ ಆಗುತ್ತದೆ. ಒಂದು ಕಡೆಯಿಂದ ನಮ್ಮ ಆರೈಕೆ ಮಾಡುವವರು ಕೂಡ ಯಾರು ಇರೋದಿಲ್ಲ. ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದಿದ್ದಾಗ ದೈಹಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಕಷ್ಟ ಆಗುತ್ತದೆ. ಹೀಗಾಗಿ ನಮಗೆ ಬಂದಿರೋ ರೋಗ ಗುಣವಾಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ.
4. ಹಾನಿಕಾರಕ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ!
ವೈವಾಹಿಕ ಜೀವನ ಚೆನ್ನಾಗಿ ಇಲ್ಲದಿದ್ದಾಗ ಮನಸ್ಸಿಗೆ ನೆಮ್ಮದಿ ಅನ್ನೋದು ಇರೋದಿಲ್ಲ. ಮನೆಗೆ ಬರೋದಕ್ಕೂ ಇಷ್ಟ ಆಗೋದಿಲ್ಲ. ಖಿನ್ನತೆ, ಒತ್ತಡ ನಮ್ಮನ್ನು ಕಾಡುತ್ತದೆ. ಇದರಿಂದ ಹೊರ ಬರಲು ಹೆಚ್ಚಿನವರು ಕೆಲವೊಂದು ಚಟಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಕುಡಿತ, ಸಿಗರೇಟ್ ಇತ್ಯಾದಿ. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ.
ಮದುವೆಯಿಂದ ನಮ್ಮ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವೂ ಬೀಳಬಹುದು. ಆದರೆ ನಾವು ನಮ್ಮ ಸಂಗಾತಿಯ ಜೊತೆಗೆ ಯಾವ ರೀತಿ ಬಾಂಧವ್ಯವನ್ನು ಇಟ್ಟುಕೊಳ್ಳುತ್ತೇವೆ ಅನ್ನೋದ್ರ ಮೇಲೆ ನಮ್ಮ ಸಂಬಂಧ ಹೇಗಿರುತ್ತೆ ಎನ್ನುವುದು ನಿರ್ಧಾರ ಆಗುತ್ತದೆ.



Click it and Unblock the Notifications