Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಬೆಂಗಳೂರಿಗೆ ಕಾಲಿಟ್ಟ ಸ್ಪೀಡ್ ಡೇಟಿಂಗ್: ಯುವಕ-ಯುವತಿಯರೇ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳದಿರಿ!
ಹೆಣ್ಣು-ಗಂಡು ಮದುವೆ ಪ್ರಾಯಕ್ಕೆ ಬಂದಾಗ ತಮ್ಮ ಬಾಳಿಗೆ ಸಂಗಾತಿ ಬೇಕೆಂದು ಬಯಸುವುದು ಸಹಜ. ಮನಸ್ಸು ಹಾಗೂ ದೇಹಕ್ಕೆ ಸಂಗಾತಿ ಅವಶ್ಯಕವಿರುತ್ತದೆ, ಈ ಅವಶ್ಯಕತೆಯನ್ನು ಮದುವೆ ಎಂಬ ಸುಂದರ ಚೌಕಟ್ಟಿನ ಮೂಲಕ ನೆರವೇರುವಂತೆ ಮಾಡಲಾಗುವುದು.
ಆದರೆ ಹೆಣ್ಣು-ಗಂಡು ಜೊತೆಯಾಗಿ ಬಾಳಲು ಬರೀ ದೈಹಿಕ ಆಕರ್ಷಣೆ ಮಾತ್ರ ಸಾಲದು ಹಲವು ಅಂಶಗಳು ಮುಖ್ಯವಾಗಿರುತ್ತದೆ, ಅದರಲ್ಲೂ ಗುಣ, ಹೊಂದಾಣಿಕೆ ಇವೆಲ್ಲಾ ತುಂಬಾನೇ ಮುಖ್ಯವಾಗುವುದು. ಆದರೆ ಇತ್ತೀಚೆಗೆ ಲಿವಿಂಗ್ ಟುಗೆದರ್, ಡೇಟಿಂಗ್ ಈ ಬಗೆಯ ಟ್ರೆಂಡ್‌ನಲ್ಲಿ ಯುವ ಜನತೆ ದಾರಿ ತಪ್ಪಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಡೇಟಿಂಗ್ ಎಂಬುವುದು ಹೊಸತಲ್ಲ... ಡೇಟಿಂಗ್‌ಗಾಗಿಯೇ ಹಲವಾರು ಆ್ಯಪ್‌ಗಳಿವೆ, ಈ ಡೇಟಿಂಗ್ ಆ್ಯಪ್‌ಗಳ ಹಿಂದೆ ಬಿದ್ದು ಹಲವಾರು ಜನ ತಮ್ಮ ಬದುಕು ಕಳೆದುಕೊಂಡಿರುವ ಎಷ್ಟೋ ಉದಾಹರಣೆಗಳಿವೆ, ಹಾಗಂತ ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾಗುವವರು ಎಲ್ಲರೂ ವಂಚಕರು ಎಂದು ಹೇಳುತ್ತಿಲ್ಲ ಕೆಲವರು ಒಳ್ಳೆಯ ಜೀವನ ಸಂಗಾತಿಯನ್ನು ಪಡೆದಿದ್ದಾರೆ, ಆದರೆ ಮೋಸ ಹೋದವರ ಸಂಖ್ಯೆಯೇ ಅಧಿಕ. ಈಗ ಮತ್ತೊಂದು ಹೊಸ ಟ್ರೆಂಡ್ ಶುರುವಾಗಿದೆ ಅದುವೇ ಸ್ಪೀಡ್ ಡೇಟಿಂಗ್.
ಏನಿದು ಹೊಸದಾಗಿ ಬಂದಿರುವ ಸ್ಪೀಡ್ ಡೇಟಿಂಗ್?
ಸ್ಪೀಡ್ ಡೇಟಿಂಗ್ ಎಂಬುವುದು ಹೊಸತಲ್ಲ, ಆದರೆ ಬೆಂಗಳೂರಿಗೆ ಇದು ಹೊಸತು. ಬೆಂಗಳೂರಿನಲ್ಲಿ ಇಂಥ ಸ್ಪೀಡ್ ಡೇಟಿಂಗ್ ಟ್ರೆಂಡ್ ಹುಟ್ಟಿಕೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ. ಸ್ಪೀಡ್ ಡೇಟಿಂಗ್ ಅನ್ನು ಪಬ್‌ಗಳು, ಕೆಲವೊಂದು ರೆಸ್ಟೋರೆಂಟ್‌ಗಳು ಆಯೋಜಿಸುತ್ತವೆ, ಇದರಲ್ಲಿ ತಮ್ಮ ಅಭಿರುಚಿಗೆ ಹೊಂದುವ ವ್ಯಕ್ತಿಯನ್ನು ಕಂಡು ಕೊಳ್ಳುವುದು ಸುಲಭ, ಅವರ ಜೊತೆ ಡೇಟಿಂಗ್ ಮಾಡಬಹುದು ಎಂಬುವುದು ಇದರ ಕಾನ್ಸೆಪ್ಟ್ ಆಗಿದೆ.
ಸ್ಪೀಡ್ ಡೇಟಿಂಗ್ ಈವೆಂಟ್ ನಡೆಸುತ್ತಿರುವ ಈವೆಂಟ್ ಕಂಪನಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಇದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ ಅದರಲ್ಲೂ ಯುವತಿಯನ್ನು ಆಕರ್ಷಿಸಲು ಎಂಟ್ರಿ ಪೀಸ್ ಮಹಿಳೆಯರಿಗೆ ರೂ.99 ಇಟ್ಟಿದೆ, ಪುರುಷರಿಗೆ ರೂ. 1499 ನಿಗದಿ ಮಾಡಿದೆ.
ದುಡ್ಡು ಮಾಡಲು ಮಾಡುವ ಇಂಥ ಡೆಟಿಂಗ್ ನಿಮ್ಮ ಭವಿಷ್ಯಕ್ಕೆ ಕುತ್ತು ತರುವುದು ಹುಷಾರ್!
ಈಗ ಜಗತ್ತು ತುಂಬಾನೇ ವೇಗವಾಗಿ ಓಡುತ್ತಿದೆ ಹೌದು, ನಮಗೆ ಯಾವುದಕ್ಕೂ ಸಮಯವಿಲ್ಲ, ಕುಟುಂಬದ ಜೊತೆ ಕಳೆಯಲು ಯಾವುದಕ್ಕೂ ಸಮಯವಿಲ್ಲ, ಹಾಗಂತ ಬಾಳ ಸಂಗಾತಿ ಆಯ್ಕೆ ಮಾಡುವಾಗ ಸ್ವಲ್ಪ ಎಡವಿದರೆ ಬದುಕೇ ನರಕವಾಗುವುದು. ಆದ್ದರಿಂದ ಈ ವಿಷಯದಲ್ಲಿ ಪುರುಷ-ಮಹಿಳೆ ಇಬ್ಬರು ಜಾಗ್ರತೆವಹಿಸಬೇಕಾಗಿದೆ. ಸ್ಪೀಡ್ ಡೇಟಿಂಗ್‌ನಲ್ಲಿ ಪಟ್ ಅಂತ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರ ಜೊತೆ ಡೇಟಿಂಗ್ ಮಾಡಲು ಶಾಪಿಂಗ್ ಮಾಲ್‌ಗೆ ಹೋಗಿ ಡ್ರೆಸ್ ಸೆಲೆಕ್ಟ್ ಮಾಡಿದಂತಿಲ್ಲ, ಅದ್ದರಿಂದ ಈ ಕುರಿತು ತುಂಬಾನೇ ಜಾಗ್ರತೆವಹಿಸಿ.
ಮನೆಯಿಂದ ದೂರವಿರುವವರೇ ಇವರ ಟಾರ್ಗೆಟ್
ಬೆಂಗಳೂರಿನಂಥ ಸಿಟಿಗೆ ಕೆಲಸ ಮಾಡಲು ಬರುವ ಯುವಕ-ಯುವತಿಯರು ಮನೆಯಿಂದ ದೂರವಿರುತ್ತಾರೆ. ಇಲ್ಲಿ ಅವರನ್ನು ಗಮನಿಸುವವರು ಕಡಿಮೆ ಇರುತ್ತಾರೆ, ಈ ಕಾರಣಕ್ಕೆ ಕೆಲವರು ಸ್ವೇಚ್ಛಾಚಾರದ ಹಾದಿ ಹಿಡಿಯುತ್ತಾರೆ, ಆದರೆ ಎಲ್ಲೆ ಮೀರಿದ ಜೀವನ ಯಾವತ್ತಿಗೂ ನೆಮ್ಮದಿ ನೀಡುವುದಿಲ್ಲ. ಆದ್ದರಿಂದ ಇಂಥ ಡೇಟಿಂಗ್ ಆ್ಯಪ್‌ಗಳ ಮಾಯಾಜಾಲಕ್ಕೆ ಸಿಲುಕಿ ಬದುಕು ನಾಶ ಮಾಡಿಕೊಳ್ಳದಿರಿ...



Click it and Unblock the Notifications
