Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಅವರು ಪ್ರಮಾಣಿಕರಾಗಿದ್ದರೆ ಎಂದರ್ಥ!
ಸಂಬಂಧ ಯಾವಾಗಲೂ ಹಾಲಿನಂತೆ ನಿಷ್ಕಲ್ಮಶವಾಗಿ ಇರಬೇಕು. ಗಂಡಾಗಲಿ ಹೆಣ್ಣಾಗಲಿ ಸಂಬಂಧದಲ್ಲಿ ಪ್ರಾಮಾಣಿಕೆಯಿಂದ ಇರುವುದು ತುಂಬಾನೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ವ್ಯಕ್ತಿಗಳು ಸಂಬಂಧವನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಒಂದು ಸಂಬಂಧ ಇದ್ದರೂ ಕೂಡ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾರೆ.
ಅಷ್ಟಕ್ಕು ನಿಮ್ಮ ಸಂಗಾತಿ ಪ್ರಮಾಣಿಕವಾಗಿದ್ದಾರೆ ಅಂತ ಗೊತ್ತಾಗೋದು ಹೇಗೆ? ಆತನ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದು ಹೇಗೆ? ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಅವರು ಪ್ರಾಮಾಣಿಕರಾಗಿದ್ದಾರೆ ಎಂದರ್ಥ.

1. ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳುತ್ತಾರೆ
ಒಂದು ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳುವುದೆಂದರೆ ತಮಾಷೆಯ ವಿಚಾರವಲ್ಲ. ಈ ಮಧ್ಯೆ ಜಗಳ, ಮನಸ್ಥಾಪ ಬಂದಿರುತ್ತದೆ. ಇದನ್ನೆಲ್ಲಾ ಸರಿಪಡಿಸಿಕೊಂಡು ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಎಲ್ಲಾ ಸಂಕಷ್ಟಗಳನ್ನು ದಾಟಿ ಇಷ್ಟು ವರ್ಷಗಳಿಂದ ಅವರು ನಿಮ್ಮ ಜೊತೆಗೆ ಇದ್ದಾರೆ ಅಂದರೆ ಖಂಡಿತ ಅವರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿದ್ದಾರೆ ಎಂದು ಹೇಳಬಹುದು.
2. ನಿಮಗೋಸ್ಕರ ತ್ಯಾಗ ಮಾಡಿರುತ್ತಾರೆ
ಪ್ರಾಮಾಣಿಕ ಪ್ರೀತಿ ಎಂದರೆ ಪ್ರೀತಿಸಿದವರ ಜೊತೆಗೆ ಕೊನೆವರೆಗೂ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ಹೀಗಾಗಿ ಅವರು ನಿಮಗಾಗಿ ಹಲವಾರು ತ್ಯಾಗಗಳನ್ನು ಮಾಡಿರುತ್ತಾರೆ. ನಿಮಗೋಸ್ಕರ ದೂರದ ಕೆಲಸ ಬಿಟ್ಟು ಬಂದಿರಬಹುದು. ಅಥವಾ ಬೇರೆ ಎಲ್ಲಾ ವಿಚಾರಗಳನ್ನು ಕಡೆಗಣಿಸಿ ನಿಮಗೆ ಪ್ರಾಮುಖ್ಯತೆ ಕೊಟ್ಟಿರಬಹುದು. ಇದಕ್ಕೆ ಪ್ರಾಮಾಣಿಕ ಪ್ರೀತಿ ಎಂದು ಹೇಳುತ್ತಾರೆ.
3. ಯಾವುದೇ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಇಟ್ಟುಕೊಂಡಿರೋದಿಲ್ಲ
ನೀವು ಸಿಕ್ಕಿದ ಮೇಲೆ ನಿಮ್ಮ ಸಂಗಾತಿ ಎಲ್ಲಾ ರೀತಿಯ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿದ್ದರೆ ಅವರು ಬೇರೆ ಹುಡುಗಿಗಾಗಿ ಹಂಬಲಿಸುತ್ತಿಲ್ಲ ಎಂದರ್ಥ. ಇನ್ನೂ ಸೋಶಿಯಲ್ ಮಿಡಿಯಾಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿಲ್ಲ. ಯಾರ ಜೊತೆಗೂ ಹೆಚ್ಚಾಗಿ ಚಾಟಿಂಗ್‌ನಲ್ಲಿ ತೊಡಗಿಲ್ಲ ಅಂದ್ರೆ ಅವರು ಪ್ರಾಮಾಣಿಕರಾಗಿದ್ದಾರೆ ಅಂದುಕೊಳ್ಳಬಹುದು.
4. ಹುಡುಗಿಯರು ಸ್ನೇಹಿತರಾಗಿದ್ದಾಗ ನಿಮ್ಮ ಸಂಗಾತಿ ನಡವಳಿಕೆ ಹೇಗಿರುತ್ತದೆ
ನಿಮ್ಮ ಸಂಗಾತಿಗೆ ತುಂಬಾ ಜನ ಹುಡುಗಿಯರು ಸ್ನೇಹಿರಿರಬಹುದು. ಹಾಗಿದ್ದರೂ ಕೂಡ ಆತ ಅವರ ಜೊತೆಗೆ ಫ್ಲರ್ಟ್ ಮಾಡೋದಿಲ್ಲ, ತನ್ನ ಮಿತಿಯನ್ನು ದಾಟಿ ಹೋಗೋದಿಲ್ಲ ಅಂತಾದರೆ ಆತ ನಿಜವಾಗಿಯೂ ನಿಮ್ಮ ಜೊತೆಗೆ ಪ್ರಾಮಾಣಿಕನಾಗಿದ್ದಾನೆ ಎಂದು ಕೊಳ್ಳಬಹುದು. ಇದು ಹುಡುಗರಿಗೆ ಕೂಡ ಅನ್ವಯವಾಗುತ್ತದೆ. ನಿಮ್ಮ ಗೆಳತಿ ಆಕೆಯ ಸ್ನೇಹಿತನ ಜೊತೆಗೆ ಹೇಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಿ.
5. ನಿಮಗೋಸ್ಕರ ಸಂಗಾತಿಯು ರಿಸ್ಕ್ ತೆಗೆದುಕೊಳ್ಳೋದಕ್ಕೆ ಸಿದ್ಧರಿದ್ದಾರಾ ?
ಒರ್ವ ವ್ಯಕ್ತಿಯು ಪ್ರೀತಿಯಲ್ಲಿ ಇರಬೇಕಾದರೆ ತನ್ನ ಸಂಗಾತಿಗಾಗಿ ಏನು ಮಾಡೋದಕ್ಕೂ ಸಿದ್ಧರಿರಬೇಕು. ಅವರ ಕಷ್ಟಕಾಲದಲ್ಲಿ ಸಹಾಯ ಮಾಡುವುದು. ಅಥವಾ ಸಂಗಾತಿಯ ಕಷ್ಟಗಳನ್ನು ತನ್ನ ಕಷ್ಟ ಎಂದು ಅರಿತು ಅವರಿಗೆ ಸಹಾಯ ಮಾಡಬೇಕು. ಯಾರ ಎದುರಿಗೂ ಸಂಗಾತಿಯನ್ನು ಬಿಟ್ಟು ಕೊಡಬಾರದು. ಒಟ್ಟಿನಲ್ಲಿ ನಿಮಗಾಗಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಸಿದ್ಧರಿದ್ದರೆ ಖಂಡಿತ ಅವರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿದ್ದಾರೆ ಎಂದರ್ಥ.
6. ಎಂತಹ ಪರಿಸ್ಥಿತಿಯಲ್ಲೂ ನಿಮಗೆ ಮೋಸ ಮಾಡದ ವ್ಯಕ್ತಿ
ಸಂಗಾತಿಯು ನಿಮ್ಮ ಜೊತೆಗಿದ್ದಾಗ ಪ್ರಾಮಾಣಿಕವಾಗಿರುವಂತೆ ಕಂಡರೂ ಕೂಡ ಅವರು ಹೊರಗಡೆ ಹೇಗೆ ಇರುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಆಫೀಸ್‌ನಲ್ಲಿ ನೋಡಲು ಚೆನ್ನಾಗಿರೋ ಹುಡುಗಿ ಸ್ನೇಹಿತೆಯಾಗಿ ಸಿಕ್ಕಾಗ ಅಥವಾ ರಾತ್ರಿಯ ಸಮಯದಲ್ಲಿ ಮಹಿಳೆಯೊಬ್ಬಳ ಜೊತೆಗಿದ್ದಾಗಲೂ ಅವರು ತಮ್ಮ ಹುಡುಗಿಯನ್ನು ನೆನೆಯುತ್ತಿದ್ದರೆ ಅವರು ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದಾರೆ ಎನ್ನಬಹುದು.
7. ಫೋನ್ ಕಾಲ್, ಮೆಸೇಜ್ ಬಂದಾಗ ಗಮನಿಸಿ
ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದರೆ ನಿಮ್ಮ ಜೊತೆಗೆ ನಾರ್ಮಲ್ ಆಗಿ ಇರುತ್ತಾರೆ. ಅವರಿಗೆ ಫೋನ್ ಕಾಲ್ ಅಥವಾ ಮೆಸೇಜ್ ಬಂದಾಗ ಅವರನ್ನು ಗಮನಿಸಿ. ಒಂದು ವೇಳೆ ಅವರು ಚಡಪಡಿಸಿದರೆ ಅಥವಾ ನಿಮಗೆ ಗೊತ್ತಿಲ್ಲದ ಹಾಗೇ ಕದ್ದು ಮುಚ್ಚಿ ಮೆಸೇಜ್ ಮಾಡೋದು, ಫೋನ್ ಕಾಲ್ ಮಾಡೋದನ್ನ ಮಾಡಿದ್ರೆ ಖಂಡಿತ ಅವರು ಇನ್ನೊಂದು ಸಂಬಂಧದಲ್ಲಿ ಇದ್ದಾರೆ ಎಂದರ್ಥ. ಆದರೆ ಯಾವುದೇ ಮುಚ್ಚು ಮರೆ ಇಲ್ಲದೇ ನಿಮ್ಮ ಜೊತೆಗಿದ್ದರೆ ಅವರು ಪ್ರಾಮಾಣಿಕರು ಎಂದು ನಂಬಬಹುದು.
8. ಯಾವುದೇ ರಹಸ್ಯಗಳನ್ನು ನಿಮ್ಮಿಂದ ಮುಚ್ಚಿಡೋದಿಲ್ಲ
ಮನುಷ್ಯ ಅಂದ ಮೇಲೆ ರಹಸ್ಯಗಳು ಇದ್ದೇ ಇರುತ್ತದೆ. ಕೆಲವೊಂದು ರಹಸ್ಯಗಳನ್ನು ಆತ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ತನ್ನ ಬಾಳ ಸಂಗಾತಿ ಆಗುವ ವ್ಯಕ್ತಿಯ ಜೊತೆಗೆ ಆತ ಈ ರಹಸ್ಯಗಳನ್ನು ಹಂಚಿಕೊಳ್ಳುತ್ತಾನೆ. ಆದರೆ ಮೋಸ ಮಾಡುವ ಉದ್ದೇಶ ಹೊಂದಿರುವ ವ್ಯಕ್ತಿ ನಿಮ್ಮಲ್ಲಿ ಯಾವುದೇ ವಿಚಾರವನ್ನೂ ಮುಕ್ತವಾಗಿ ಹಂಚಿಕೊಳ್ಳೋದಿಲ್ಲ. ನೀವು ಏನೇ ಕೇಳಿದರೂ ಸರಿಯಾಗಿ ಉತ್ತರಿಸೋದಿಲ್ಲ. ಆದರೆ ಪ್ರಾಮಾಣಿಕ ವ್ಯಕ್ತಿ ತೆರೆದ ಪುಸ್ತಕದಂತೆ ಇರುತ್ತಾನೆ.
9. ಸ್ನೇಹಿತರು ಹಾಗೂ ಸಂಬಂಧಿಕರಿಗೆ ಪ್ರೀತಿಯ ವಿಚಾರ ತಿಳಿಸುತ್ತಾನೆ
ಯಾರು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೋ ಅವರು ತಮ್ಮ ಪ್ರೀತಿಯ ಬಗ್ಗೆ ಎಲ್ಲರಲ್ಲೂ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ತನ್ನ ಸ್ನೇಹಿತರು ಹಾಗೂ ಸಂಬಂಧಿಕರೆಲ್ಲರಿಗೂ ಪ್ರೀತಿಸುವ ಹುಡುಗಿಯ ಬಗ್ಗೆ ಹೇಳಿಕೊಂಡಿರುತ್ತಾರೆ. ಆದರೆ ಮೋಸ ಮಾಡುವ ಉದ್ದೇಶ ಹೊಂದಿರುವವರು ಪ್ರೀತಿಯ ವಿಚಾರ ಗುಟ್ಟಾಗಿ ಇಡುತ್ತಾರೆ.
ಪ್ರೀತಿ ಮಾಡೋದು ಸುಲಭ. ಆದರೆ ಅದನ್ನು ಕೊನೆವರೆಗೂ ಉಳಿಸಿಕೊಳ್ಳೋದು ಕಷ್ಟ. ಹೀಗಾಗಿ ನೀವು ಪ್ರೀತಿಸಿದ ವ್ಯಕ್ತಿಗೂ ಎಂದಿಗೂ ಮೋಸ ಮಾಡುವ ಬಗ್ಗೆ ಚಿಂತಿಸಲೇಬೇಡಿ.



Click it and Unblock the Notifications














