Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪತಿಯಲ್ಲಿ ಈ ಗುಣಗಳಿದ್ದರೆ ಅವರು ನಿಮ್ಮಲ್ಲಿ ಜೀವಾನೆ ಇಟ್ಟಿದ್ದಾರೆ ಎಂದರ್ಥ!
ದಾಂಪತ್ಯದ ಬಂಧಕ್ಕೆ ಭಾರತೀಯ ಸಂಪ್ರದಾಯದಲ್ಲಿ ಪ್ರಮುಖವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಮದುವೆಯ ಸಮಯದಲ್ಲಿ ಸಪ್ತಪದಿ ತುಳಿಯುವ ಮೂಲಕ ಏಳೇಳು ಜನ್ಮದಲ್ಲೂ ಜೊತೆಯಾಗಿರುತ್ತೇವೆ ಎಂದು ಪ್ರಮಾಣ ಮಾಡಲಾಗುತ್ತದೆ.
ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿಯ ನಡುವಿನ ಭಾಂದವ್ಯವನ್ನು ನೋಡುವಾಗ ತುಂಬಾನೇ ಖುಷಿಯಾಗುತ್ತದೆ. ಅವರಿಬ್ಬರ ನಡುವಿನ ಅನ್ಯೋನ್ಯಯತೆಯನ್ನು ಕಂಡು ನಿಜಕ್ಕೂ ಈ ರೀತಿಯೂ ಬದುಕಬಹುದಾ? ಎಂದೆನಿಸಿ ಬಿಡುತ್ತದೆ. ಅದ್ರಲ್ಲೂ ಕೆಲವೊಂದು ಮನೆಗಳಲ್ಲಿ ಗಂಡಸರು ತಮ್ಮ ಹೆಂಡತಿಯನ್ನು ತುಂಬಾನೇ ನೆಚ್ಚಿಕೊಂಡಿರುತ್ತಾರೆ. ಆಕೆಯನ್ನು ಬಿಟ್ಟು ಬದುಕೋದಕ್ಕೆ ಸಾಧ್ಯವಿಲ್ಲ ಅನ್ನೋ ರೀತಿಯಲ್ಲಿ ಪತ್ನಿಯನ್ನು ಪ್ರೀತಿಸುತ್ತಾರೆ.

ಹಾಗಾದ್ರೆ ಪತಿ ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಾರೆ ಅನ್ನೋದು ಗೊತ್ತಾಗೋದು ಹೇಗೆ? ನಿಮ್ಮನ್ನು ಬಿಟ್ಟು ನಿಮ್ಮ ಪತಿ ಬದುಕೋದೇ ಇಲ್ಲ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ? ನಿಮ್ಮ ಪತಿಯಲ್ಲಿ ಈ ಗುಣಗಳಿದ್ದರೆ ಖಂಡಿತ ಅವರು ನಿಮ್ಮನ್ನು ತುಂಬಾನೇ ಪ್ರೀತಿ ಮಾಡುತ್ತಾರೆ ಎಂದರ್ಥ.
1. ನಿಮ್ಮ ಜೊತೆಗೆ ಮಾತನಾಡಲು ಇಷ್ಟ ಪಡುತ್ತಾರೆ
ಮನೆಯಲ್ಲಿರಬೇಕಾದರೆ ಪ್ರತಿ ಬಾರಿ ನಿಮ್ಮ ಜೊತೆಗೆ ಮಾತನಾಡುತ್ತಾ ಇರುತ್ತಾರೆ. ಇನ್ನೂ ಮನೆಯಿಂದ ಹೊರಗಡೆ ಆಫಿಸ್‌ಗೆ ಹೋದಾಗ ಅಥವಾ ದೂರದ ಪ್ರಯಾಣ ಮಾಡಿದ ಸಂದರ್ಭದಲ್ಲೂ ನಿಮಗೆ ಕಾಲ್ ಅಥವಾ ಮೆಸೇಜ್ ಮಾಡಿ ನಿಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಾರೆ. ಪ್ರತಿಯೊಂದು ಘಟನೆಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಾರೆ.
2. ನಿಮ್ಮನ್ನು ಬಿಟ್ಟು ಮಲಗೋದಿಲ್ಲ
ಅನೇಕ ಗಂಡಸರು ಕೆಲಸ ಮುಗಿಸಿ ಬಂದ ಮೇಲೆ ಮನೆ ಕೆಲಸದಲ್ಲಿ ತನ್ನ ಹೆಂಡತಿಗೆ ಸಹಾಯ ಮಾಡುತ್ತಾರೆ. ಇನ್ನೂ ಮಲಗುವ ಸಮಯದಲ್ಲಿ ನಿದ್ದೆ ಬರುತ್ತಿದ್ದರೂ ಕೂಡ ಹೆಂಡತಿ ಮನೆ ಕೆಲ ಮುಗಿಸಿ ಬರೋವರೆಗೂ ಕಾಯುತ್ತಾರೆ. ಇಲ್ಲವಾದರೆ ಅವರೇ ಹೋಗಿ ಪತ್ನಿಗೆ ಸಹಾಯ ಮಾಡುತ್ತಾರೆ. ಆಕೆ ಮಲಗಲು ಬಂದ ಮೇಲೆಯೇ ಅವರು ನಿದ್ದೆ ಮಾಡುತ್ತಾರೆ.
3. ನಿಮ್ಮ ಪ್ರತಿ ಕೆಲಸವನ್ನು ಪ್ರಶಂಶಿಸುತ್ತಾರೆ
ಪತಿ ಏನಾದರೂ ನಿಮ್ಮನ್ನು ತುಂಬಾನೇ ಇಷ್ಟ ಪಡುವವರಾದರೆ ನಿಮ್ಮ ಪ್ರತಿ ಕೆಲಸದಲ್ಲೂ ಪ್ರೋತ್ಸಾಹ ನೀಡುತ್ತಾರೆ. ನೀವು ಮಾಡಿರೋ ಸಣ್ಣ ಪುಟ್ಟ ಕೆಲಸಗಳನ್ನು ಗುರುತಿಸುತ್ತಾರೆ. ನಿಮಗೆ ಧನ್ಯವಾದ ತಿಳಿಸುತ್ತಾರೆ. ನಿಮಗೆ ಪದೇ ಪದೇ "ಈ ಲವ್ ಯೂ" ಹೇಳಿ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆ.
4. ನಿಮ್ಮ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತಾರೆ
ಮದುವೆಯಾದ ಕೆಲ ದಿನಗಳ ನಂತರ ಪ್ರೀತಿ ಕಡಿಮೆ ಆಗುತ್ತೆ ಅಂತಾರಲ್ಲ. ಆದರೆ ಕೆಲವು ಗಂಡಸರು ಹಾಗಲ್ಲ. ಮದುವೆಯಾದ ನಂತರವು ಪತ್ನಿಯನ್ನು ತುಂಬಾನೇ ಪ್ರೀತಿಸುತ್ತಾರೆ. ಯಾವಾಗಲೂ ನಿಮ್ಮ ಜೊತೆಗೆ ಇರೋದಕ್ಕೆ ಇಷ್ಟ ಪಡುತ್ತಾರೆ. ಮನೆಯಲ್ಲಿದ್ದಾಗಲೆಲ್ಲಾ ಹೆಚ್ಚಾಗಿ ನಿಮ್ಮ ಪಕ್ಕದಲ್ಲೇ ಇರುತ್ತಾರೆ. ಈ ರೀತಿ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆ.
5. ನಿಮ್ಮ ಬಳಿ ಎಲ್ಲಾ ರಹಸ್ಯಗಳನ್ನು ಹೇಳುತ್ತಾರೆ
ನಿಮ್ಮ ಗಂಡನಿಗೆ ನಿಮ್ಮ ಮೇಲೆ ನಿಷ್ಕಲ್ಮಷ ಪ್ರೀತಿಯಿದ್ದರೆ, ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಿದ್ದರೆ ಅವರು ನಿಮ್ಮ ಬಳಿ ಯಾವುದೇ ವಿಚಾರವನ್ನು ಮುಚ್ಚಿಡೋದಿಲ್ಲ. ಎಲ್ಲಾ ರಹಸ್ಯಗಳನ್ನು ನಿಮ್ಮ ಬಳಿ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಅವರ ಜೀವನದಲ್ಲಿ ನಡೆಯೋ ಪ್ರತಿಯೊಂದು ವಿಚಾರಗಳನ್ನು ನಿಮ್ಮೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ.
6. ನಿಮ್ಮ ಜೊತೆಗೆ ಎಂಜಾಯ್ ಮಾಡುತ್ತಾರೆ
ಗಂಡ-ಹೆಂಡತಿಯೆಂದರೆ ಹೀಗೆ ಇರಬೇಕು ಅನ್ನೋ ಪದ್ಧತಿ ಇಲ್ಲ. ಹೆಚ್ಚಿನ ದಂಪತಿಗಳು ಸ್ನೇಹಿತರ ಹಾಗೇ ಜೀವನ ನಡೆಸುತ್ತಾರೆ. ನಿಮ್ಮನ್ನು ತುಂಬಾನೇ ಇಷ್ಟ ಪಡೋ ಗಂಡನಾಗಿದ್ದರೆ ಆತ ನಿಮ್ಮ ಜೊತೆಗೆ ಎಲ್ಲಾ ಸಂತೋಷದ ಕ್ಷಣಗಳನ್ನು ಕಳೆಯಲು ಇಷ್ಟ ಪಡುತ್ತಾನೆ. ಹೊರಗಡೆ ಹೋಗೋದು ಎಂಜಾಯ್ ಮಾಡೋದು. ಅಥವಾ ಮನೆಯಲ್ಲಿ ನಿಮಗೆ ಇಷ್ಟವಾದ ಚಟುವಟಿಕೆಗಳನ್ನು ಮಾಡಿ ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ.
7. ನಿಮ್ಮ ಬಗ್ಗೆ ಚಿಂತಿಸುತ್ತಾರೆ
ನೀವೆಲ್ಲಾದರೂ ಒಬ್ಬರೇ ಹೊರಗಡೆ ಶಾಪಿಂಗ್ ಹೋದರೆ ನೀವು ಬರೋವರೆಗೂ ನಿಮ್ಮ ದಾರಿಯನ್ನೇ ಕಾಯುತ್ತಿರುತ್ತಾರೆ. ಆ ಸಮಯದಲ್ಲಿ ಅವರೇನಾದರೂ ಆಫೀಸ್‌ಗೆ ಹೋಗಿದ್ದರೆ ಮೆಸೇಜ್ ಅಥವಾ ಕಾಲ್ ಮಾಡಿ ನೀವು ಮನೆಗೆ ತಲುಪಿದ್ದೀರಾ ಅಂತ ವಿಚಾರಿಸುತ್ತಾರೆ. ನಿಮಗೆ ಹುಷಾರಿಲ್ಲದ ಸಂದರ್ಭದಲ್ಲಿ ನಿಮ್ಮ ಕಾಳಜಿ ಮಾಡುತ್ತಾರೆ. ತಾಯಿಯಂತೆ ಆರೈಕೆ ಮಾಡುತ್ತಾರೆ.
ಇಷ್ಟೆಲ್ಲಾ ಗುಣಗಳು ನಿಮ್ಮ ಪತಿಯಲ್ಲಿದ್ದರೆ ಅವರು ನಿಮ್ಮನ್ನು ತುಂಬಾನೇ ಪ್ರೀತಿಸುತ್ತಾರೆ ಎಂದರ್ಥ. ಪತ್ನಿಯ ಸುಖ-ದುಃಖ, ಕಷ್ಟ-ಸುಖ, ನೋವು-ನಲಿವುಗಳನ್ನು ಅರ್ಥ ಮಾಡಿಕೊಳ್ಳುವವನೇ ನಿಜವಾದ ಪತಿ.



Click it and Unblock the Notifications



