Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಅವರಲ್ಲಿ ಸ್ವಾರ್ಥವೇ ತುಂಬಿಕೊಂಡಿದೆ ಎಂದರ್ಥ!
ಒರ್ವ ಮನುಷ್ಯ ಎಷ್ಟೇ ಒಳ್ಳೆಯವನಾಗಿದ್ದರೂ, ಉದಾರಿಯಾಗಿದ್ದರೂ ಕೂಡ ಆತನಲ್ಲಿ ಕೊಂಚ ಸ್ವಾರ್ಥ ಇದ್ದೇ ಇರುತ್ತದೆ. ನಾನು, ನನ್ನದು, ನನಗಾಗಿ ಎನ್ನುವುದೇ ನಿಜವಾದ ಸ್ವಾರ್ಥ. ಆದರೆ ನಮ್ಮ ಸಂಗಾತಿ, ಮಕ್ಕಳು ಅಂತ ಬಂದಾಗ ನಾವು ಸ್ವಾರ್ಥ ಮನೋಭಾವ ತೋರುವುದಿಲ್ಲ. ಸಂಗಾತಿ ಹಾಗೂ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ನಾವು ಸಿದ್ಧರಿರುತ್ತೇವೆ.
ಆದರೆ ಕೆಲವೊಂದು ಸಂಬಂಧಗಳಲ್ಲಿ ಸಂಗಾತಿಯೂ ತುಂಬಾನೇ ಸ್ವಾರ್ಥಿಯಾಗಿರುತ್ತಾರೆ. ಅಷ್ಟಕ್ಕು ನಿಮ್ಮ ಸಂಗಾತಿ ಸ್ವಾರ್ಥಿಯಾಗಿದ್ದರೆಂದು ನಿಮಗೆ ಗೊತ್ತಾಗೋದು ಹೇಗೆ? ಈ ಲಕ್ಷಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಅವರು ತುಂಬಾನೇ ಸ್ವಾರ್ಥಿ ಎಂದರ್ಥ.

1. ಮನೆಯನ್ನು ನೀವೇ ಸ್ವಚ್ಛಗೊಳಿಸಲಿ ಎಂದು ಇಚ್ಛಿಸುತ್ತಾರೆ
ನೀವು ಆಫಿಸ್ ನಿಂದ ಸುಸ್ತಾಗಿ ಬಂದಿರುತ್ತೀರಿ ಎಂದುಕೊಳ್ಳಿ. ಈ ಸಮಯದಲ್ಲಿ ನಿಮ್ಮ ದೇಹ ಹಾಗೂ ಮನಸ್ಸಿಗೂ ರೆಸ್ಟ್ ಬೇಕಿರುತ್ತೆ. ಆದರೆ ಮನೆ ಹೊಕ್ಕಿದ ತಕ್ಷಣ ಅಲ್ಲಲ್ಲಿ ಬಿದ್ದಿರೋ ಬಟ್ಟೆಗಳು, ಅಡುಗೆ ಮನೆಯಲ್ಲಿ ಸಿಕ್ಕಾಪಟ್ಟೆ ಕೊಳಕಾಗಿರುತ್ತೆ, ಪಾತ್ರೆಗಳು ತೊಳೆಯದೇ ಹಾಗೆಯೇ ಬಿದ್ದಿರುತ್ತದೆ. ನಿಮ್ಮ ಸಂಗಾತಿ ಇಡೀ ದಿನ ಮನೆಯಲ್ಲಿ ಇದ್ರೂ ಕೂಡ ತಿಂದು, ಮಲಗಿದ್ದು ಬಿಟ್ರೆ ಮನೆಯ ಸ್ವಚ್ಛತೆ ಮಾಡಿರೋದಿಲ್ಲ. ಈ ಕೆಲಸವನ್ನು ನೀವೆ ಮಾಡಲಿ ಎಂದು ಅವರು ಬಯಸುತ್ತಾರೆ.
2. ನಿಮ್ಮ ಜವಾಬ್ದಾರಿಯ ಬಗ್ಗೆ ಉಪದೇಶ ನೀಡುತ್ತಾರೆ
ನಿಮ್ಮ ಸಂಗಾತಿಯ ನಿರ್ಲಕ್ಷ್ಯದ ಬಗ್ಗೆ ನೀವು ಬೆರಳು ತೋರಿಸಿ ಮಾತನಾಡಿದಾಗ ಅವರು ಅದನ್ನು ಒಪ್ಪಿಕೊಳ್ಳೋದಿಲ್ಲ. ಬದಲಾಗಿ ನಿಮ್ಮನ್ನೇ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಹಾಗೂ ನಿಮ್ಮನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾರೆ . ಅವರು ಕುಟುಂಬಕ್ಕಾಗಿ ಮಾಡಿದ ತ್ಯಾಗಗಳ ಪಟ್ಟಿಯನ್ನೇ ಬಿಚ್ಚಿಡುತ್ತಾರೆ. ಹಾಗೂ ನೀವು ಏನನ್ನೂ ಮಾಡಿಲ್ಲ ಎನ್ನುವ ರೀತಿಯಲ್ಲಿ ನಿಮ್ಮನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುತ್ತಾರೆ.
3. ನಿಮ್ಮ ಖುಷಿಗೆ ಅವರು ಆಧ್ಯತೆ ನೀಡೋದಿಲ್ಲ
ದಾಂಪತ್ಯದಲ್ಲಿ ನಾವು ಇಬ್ಬರ ಖುಷಿಗೂ ಸಮಾನ ಆಧ್ಯತೆಯನ್ನು ನೀಡಬೇಕು. ಆದರೆ ನಿಮ್ಮ ಸ್ವಾರ್ಥಿ ಸಂಗಾತಿ ಯಾವಾಗಲೂ ಅವರ ಖುಷಿಯೇ ಬಗ್ಗೆ ಮಾತ್ರ ಚಿಂತೆ ಮಾಡುತ್ತಾರೆ. ಅವರಿಗೆ ಇಷ್ಟ ಇರೋ ಜಾಗಕ್ಕೆ ನಿಮ್ಮನ್ನು ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಅದೇ ನೀವು ಯಾವಾಗಲಾದರೂ ಅಮ್ಮನ ಮನೆಗೆ ಹೋಗೋದಕ್ಕೆ ಸಿದ್ಧರಾದ್ರೆ ಅವರು ಹುಷಾರಿಲ್ಲ ಅನ್ನೋ ನೆಪವೊಡ್ಡಿ ಮನೆಯಲ್ಲೇ ಕೂರುತ್ತಾರೆ. ಜೊತೆಗೆ ನೀವು ಹೋಗೋದಕ್ಕೂ ಅವಕಾಶ ನೀಡುವುದಿಲ್ಲ.
4. ಅವರೇ ನಿಮ್ಮ ಮೊದಲ ಆಧ್ಯತೆಯಾಗಿರಬೇಕೆಂದು ಬಯಸುತ್ತಾರೆ
ನೀವು ಎಷ್ಟೇ ಬ್ಯುಸಿಯಾದ್ದರೂ ಕೂಡ ನೀವು ಮೊದಲ ಆಧ್ಯತೆಯನ್ನು ನಿಮ್ಮ ಸಂಗಾತಿಗೆ ಕೊಡಬೇಕು ಎಂದು ಅವರು ಬಯಸುತ್ತಾರೆ. ಯಾವಾಗಲೂ ನೀವು ಅವರ ಕಡೆಗೆ ಗಮನ ಹರಿಸಬೇಕು, ಅವರು ಹೇಳಿದ ಪ್ರತಿ ಮಾತನ್ನು ನೀವು ಪಾಲನೆ ಮಾಡಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ನೀವಿಬ್ಬರೂ ಆಫಿಸ್ ಗೆ ಹೋಗಬೇಕು. ನಿಮಗೆ ಈ ದಿನ ಆಫಿಸ್ ನಲ್ಲಿ ಹೆಚ್ಚು ಕೆಲಸ ಇದ್ದು, ನೀವು ಬೇಗನೆ ಆಫಿಸ್ ಗೆ ಹೋಗಬೇಕಾದ ಅನಿವಾರ್ಯತೆ ಇದ್ದರೂ ಕೂಡ ಅವರನ್ನು ಮೊದಲು ಆಫಿಸ್ ಗೆ ಡ್ರಾಪ್ ಮಾಡಿ ನಂತರ ನಿಮ್ಮನ್ನು ಆಫಿಸ್ ಗೆ ತೆರಳಲು ಹೇಳುತ್ತಾರೆ.
5. ನಿಮಗೆ ಉಳಿತಾಯ ಪಾಠ ಮಾಡುತ್ತಾರೆ, ಆದರೆ ಅವರು ಪಾಲಿಸೋದಿಲ್ಲ
ಒಂದು ಕುಟುಂಬ ಎಂದ ಮೇಲೆ ಉಳಿತಾಯ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಸಂಗಾತಿ ನಿಮಗೆ ಯಾವಾಗಲೂ ಉಳಿತಾಯದ ಪಾಠ ಮಾಡುತ್ತಾರೆ. ಸಿಕ್ಕಾಪಟ್ಟೆ ಖರ್ಚು ಮಾಡಬೇಡಿ. ಕುಟುಂಬಕ್ಕಾಗಿ ಉಳಿಸು ಅಂತೆಲ್ಲಾ ಹೇಳುತ್ತಾರೆ. ಆದರೆ ಯಾವತ್ತಿಗೂ ಅವರು ಅದನ್ನು ಪಾಲಿಸೋದೇ ಇಲ್ಲ. ಅವರ ದುಡ್ಡನ್ನು ಮನೆಗೆ ಸ್ವಲ್ಪ ಕೊಟ್ಟು ಉಳಿದುದನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಒಟ್ಟಿನಲ್ಲಿ ನೀವೇ ಕಷ್ಟ ಪಡಲಿ ಎಂದು ಅವರು ಬಯಸುತ್ತಾರೆ.
6. ನಿಮ್ಮನ್ನು ಬೆಂಬಲಿಸೋದಿಲ್ಲ, ಪ್ರಶಂಸಿಸೋದಿಲ್ಲ
ಸ್ವಾರ್ಥಿಗಳು ಯಾವತ್ತಿದ್ದರೂ ಅವರನ್ನು ಅವರು ಅತ್ಯುತ್ತಮರು ಎಂದು ಕೊಳ್ಳುತ್ತಾರೆ. ತಮ್ಮ ಸಂಗಾತಿ ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೂಡ ಅವರ ಕಣ್ಣಿಗೆ ಅದು ಕಾಣಿಸೋದಿಲ್ಲ. ನಿಮಗೆ ಪ್ರಶಂಸೆಯನ್ನೂ ಅವರು ನೀಡೋದಿಲ್ಲ. ನೀವು ಮನೆಗಾಗಿ ಮಕ್ಕಳಿಗಾಗಿ ಎಷ್ಟೇ ಕಷ್ಟ ಪಟ್ಟರೂ ಕೂಡ ಒಂದು ದಿನವೂ ಅವರು ನಿಮ್ಮ ಬಳಿ ಬಂದು ನಿಮ್ಮ ಸೇವೆಗೆ ಧನ್ಯವಾದ ಹೇಳೋದಿಲ್ಲ. ಬದಲಾಗಿ ಅದು ನಿಮ್ಮ ಕರ್ತವ್ಯ ನೀವು ಅದನ್ನು ಮಾಡಲೇಬೇಕು ಎಂಬಂತೆ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ.
ನಿಮ್ಮ ಸಂಗಾತಿಯೂ ಕೂಡ ಸ್ವಾರ್ಥಿಯಾಗಿದ್ದರೆ ಅವರಲ್ಲಿ ಈ ಎಲ್ಲಾ ಗುಣಗಳು ಇರುತ್ತದೆ. ನಿಮಗಾಗಲಿ, ಮಕ್ಕಳಿಗಾಗಲಿ ಅವರು ಯಾವುದೇ ಕಾರಣಕ್ಕೂ ಆಧ್ಯತೆ ನೀಡೋದಿಲ್ಲ.



Click it and Unblock the Notifications
