Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಈ ನಡವಳಿಕೆ ಇದ್ದರೆ ಖಂಡಿತ ಬ್ರೇಕ್ ಅಪ್ ಆದ ಮೇಲೂ ಹುಡುಗ ನಿಮ್ಮನ್ನು ಮರೆತಿಲ್ಲ ಎಂದರ್ಥ!
ಪ್ರೀತಿಯಲ್ಲಿ ಬೀಳೋದು ತುಂಬಾನೇ ಸುಲಭ. ಅದೇ ರೀತಿ ಆ ಪ್ರೀತಿಯನ್ನು ಮುರಿದುಕೊಳ್ಳೋದು ಕೂಡ ಅಷ್ಟೇ ಸುಲಭ. ಆದ್ರೆ ಒಂದು ಸಣ್ಣ ಮನಸ್ಥಾಪದ ಕಾರಣಕ್ಕೆ ಕ್ಷಣ ಮಾತ್ರದಲ್ಲೇ ಅದೆಷ್ಟೋ ವರ್ಷಗಳ ಪ್ರೀತಿಗೆ ಎಳ್ಳು ನೀರು ಬಿಡುವವರಿದ್ದಾರೆ.
ಕೆಲವೊಂದು ಸಲ ಹುಡುಗಿಯರು ಪ್ರೀತಿಸಿದವರನ್ನು ಮರೆತು ಜೀವನದಲ್ಲಿ ಮುಂದೆ ಸಾಗುತ್ತಾರೆ. ಆದ್ರೆ ಹುಡುಗರಿಗೆ ಪ್ರೀತಿಸಿದ ಹುಡುಗಿಯನ್ನು ಅಷ್ಟು ಸುಲಭವಾಗಿ ಮರೆಯೋದಕ್ಕೆ ಆಗೋದಿಲ್ಲ. ಆ ಹುಡುಗಿ ಮತ್ತೆ ತನ್ನ ಜೀವನದಲ್ಲಿ ಬರಲಿ ಅಂತ ಪರಿತಪಿಸ್ಥಾರೆ.

ಅಷ್ಟಕ್ಕು ನೀವು ಬ್ರೇಕ್‌ಅಪ್ ಮಾಡಿಕೊಂಡ ನಂತರವು ಆ ಹುಡುಗ ನಿಮ್ಮನ್ನು ಮರೆತಿಲ್ಲ ಅನ್ನೋದನ್ನ ತಿಳಿದುಕೊಳ್ಳೋದು ಹೇಗೆ? ಹುಡುಗನ ನಡವಳಿಕೆಗಳು ಹೀಗಿದ್ದರೆ ಈಗಲೂ ಆತ ನಿಮ್ಮ ಪ್ರೀತಿಸುತ್ತಿದ್ದಾನೆ ಎಂದರ್ಥ.
1. ಮೆಸೇಜ್ ಅಥವಾ ಕಾಲ್ ಮಾಡುತ್ತಿರುತ್ತಾರೆ
ಬ್ರೇಕ್‌ಅಪ್ ಆದ ಮೇಲೂ ಕೆಲ ಹುಡುಗರಿಗೆ ಹಳೆಯ ಪ್ರೀತಿಯನ್ನು ಮರೆಯೋದಿಕ್ಕೆ ಆಗೋದಿಲ್ಲ. ಹೀಗಾಗಿ ಪ್ರತಿ ದಿನ ಪ್ರತಿ ಕ್ಷಣ ಅವರ ನೆನಪಲ್ಲೇ ಕಳೆಯುತ್ತಾರೆ. ಅವರ ಜೊತೆಗೆ ಸಂಪರ್ಕದಲ್ಲಿರಬೇಕೆಂದು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಕಾಲ್, ಮೆಸೇಜ್ ಮಾಡಿ ಪ್ರೀತಿಸಿದ ಹುಡುಗಿಯ ಕ್ಷೇಮ ಸಮಾಚಾರ ವಿಚಾರಿಸುತ್ತಾರೆ.
2. ಸೋಷಿಯಲ್ ಮೀಡಿಯಾದಲ್ಲೂ ಸಂಪರ್ಕದಲ್ಲಿರುತ್ತಾರೆ
ಪ್ರೀತಿ ಮುರಿದ ನಂತರವೂ ಆ ಹುಡುಗನಿಗೆ ನಿಮ್ಮ ಮೇಲೆ ಭಾವನೆಗಳಿದ್ದರೆ ಆತ ನಿಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಫಾಲೋ ಮಾಡುತ್ತಾನೆ. ನಿಮ್ಮ ಜೀವನದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಾನೆ. ನೀವೇನಾದರೂ ಎಲ್ಲವನ್ನೂ ಮರೆತು ಹೊಸ ಜೀವನಕ್ಕೆ ಒಗ್ಗಿಕೊಂಡಿದ್ದೀರಾ ಅನ್ನೋದ್ರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾನೆ.
3. ನೀವು ಕೊಟ್ಟ ಎಲ್ಲಾ ಉಡುಗೊರೆಗಳನ್ನು ಇಟ್ಟುಕೊಳ್ಳುತ್ತಾರೆ
ಬ್ರೇಕ್‌ಅಪ್ ಆದ ನಂತರವು ನೀವು ಕೊಟ್ಟ ಎಲ್ಲಾ ಉಡುಗೊರೆಗಳನ್ನು ಅವರು ತಮ್ಮ ಜೊತೆಗೆ ಇಟ್ಟುಕೊಂಡಿರುತ್ತಾರೆ. ನೀವು ಕೊಟ್ಟ ವಸ್ತುಗಳಲ್ಲಿ ಅವರು ನಿಮ್ಮನ್ನು ಕಾಣುತ್ತಾರೆ. ಆ ಉಡುಗೊರೆಗಳನ್ನು ನೋಡಿದಾಗಲೆಲ್ಲಾ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ.
4. ನಿಮ್ಮ ಸ್ನೇಹಿತರ ಜೊತೆಗೆ ಸಂಪರ್ಕದಲ್ಲಿರುತ್ತಾರೆ
ಬ್ರೇಕ್‌ಅಪ್ ಆದ ಮೇಲೆ ನೀವೇನಾದರೂ ಅವರ ಜೊತೆಗೆ ಸಂಪರ್ಕದಲ್ಲಿ ಇಲ್ಲ ಅಂತಾದರೆ ಅವರು ನಿಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಚಡಪಡಿಸುತ್ತಾರೆ. ಹೀಗಾಗಿ ನಿಮ್ಮ ಸ್ನೇಹಿತರ ಸಂಪರ್ಕಕ್ಕೆ ಬಂದು ಅವರ ಬಳಿ ನಿಮ್ಮ ಯೋಗಕ್ಷೇಮ ಹಾಗೂ ನಿಮ್ಮ ಜೀವನದ ಬಗ್ಗೆ ವಿಚಾರಿಸುತ್ತಾರೆ.
5. ನೀವು ಬರುವ ದಾರಿಯನ್ನೇ ಕಾಯುತ್ತಾರೆ
ಪ್ರೀತಿಸಿದ ಹುಡುಗಿಯನ್ನು ಮರೆಯೋದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಅವರು ನಿಮ್ಮನ್ನು ನೋಡೋದಕ್ಕೆ ಇಷ್ಟ ಪಡುತ್ತಾರೆ. ನೀವು ಎಲ್ಲಿ ಹೋಗುತ್ತೀರೋ ಅಲೆಲ್ಲಾ ಅವರು ನಿಮ್ಮನ್ನು ಹಿಂಬಾಲಿಸುತ್ತಾರೆ. ನಿಮ್ಮ ಕೆಲಸದ ಸ್ಥಳ, ಜಿಮ್, ಮನೆಯ ಹತ್ತಿರ ಹೀಗೆ ಒಂದೆರಡು ಬಾರಿ ಅವರು ನಿಮಗೆ ಸಿಕ್ಕರೆ ಕಾಕತಾಳಿಯ ಎನ್ನಬಹುದು. ಆದರೆ ಪ್ರತೀಸಾರಿ ನೀವು ಹೋಗುವ ಜಾಗದಲ್ಲೆಲ್ಲಾ ಇದ್ದರೆ ಖಂಡಿತ ಅವರು ನಿಮ್ಮ ದಾರಿಯನ್ನೇ ಕಾಯುತ್ತಿದ್ದಾರೆ ಎಂದರ್ಥ.
6. ಕೆಟ್ಟ ಚಟಗಳಿಗೆ ದಾಸರಾಗಿ ಬಿಡುತ್ತಾರೆ
ಕೆಲ ಹುಡುಗರಿಗೆ ಏನೇ ಮಾಡಿದರೂ ಬ್ರೇಕ್ ಅಪ್ ನಂತರವು ತಮ್ಮ ಹುಡುಗಿಯನ್ನು ಮರೆಯೋದಕ್ಕೆ ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಖಿನ್ನತೆಗೆ ಒಳಗಾಗುತ್ತಾರೆ. ಜೀವನದಲ್ಲಿ ಕುಗ್ಗಿ ಹೋಗುತ್ತಾರೆ. ಕೆಲವೊಂದು ಸಾರಿ ಮಾದಕ ವಸ್ತುಗಳಿಗೆ ದಾಸರಾಗಿ ಬಿಡುತ್ತಾರೆ. ಅವರ ಮುಖ ನೋಡಿದ ತಕ್ಷಣ ನಿಮಗೆ ಗೊತ್ತಾಗುತ್ತದೆ. ಅವರು ಇನ್ನೂ ನಿಮ್ಮ ನೆನಪಿನಲ್ಲೇ ಇದ್ದಾರೆಂದು.
7. ನಿಮ್ಮ ಬಳಿ ಕ್ಷಮೆ ಕೇಳುತ್ತಾರೆ
ಬೇಕ್‌ಅಪ್ ಆದ ಮೇಲೆ ಪ್ರೀತಿಸಿದ ಹುಡುಗಿಯನ್ನು ಮರೆಯಲಾಗದ ಹುಡುಗರು ಮತ್ತೆ ಅದೇ ಹುಡುಗಿಯನ್ನು ಸೇರುವ ಮನಸ್ಸು ಮಾಡುತ್ತಾರೆ. ಹೀಗಾಗಿ ಎಷ್ಟೇ ದೊಡ್ಡ ಜಗಳಗಳೇ ನಡೆದಿರಲಿ ಅದೆಲ್ಲದರ ಹೊಣೆಯನ್ನು ತಮ್ಮ ಮೇಲೆ ಹಾಕಿಕೊಳ್ಳುತ್ತಾರೆ. ನಿಮ್ಮ ಬಳಿ ಕ್ಷಮೆ ಯಾಚಿಸುತ್ತಾರೆ. ಪದೇ ಪದೇ ಮಿಸ್ ಯೂ ಅಂತ ಹೇಳುತ್ತಾರೆ.
8. ನಿಮಗಾಗಿ ಲಭ್ಯವಿರುತ್ತಾರೆ
ನಿಮ್ಮ ಹಳೆಯ ಪ್ರೀತಿ ಬ್ರೇಕ್‌ಅಪ್ ಆದ ಮೇಲೂ ಕೂಡ ಹಳೆಯ ಹುಡುಗ ನಿಮಗಾಗಿ ಎಲ್ಲಾ ಸಮಯದಲ್ಲೂ ಲಭ್ಯವಿರುತ್ತಾನೆ. ನೋವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ, ಸಲಹೆ ಪಡೆಯುವಾಗ, ಸಹಾಯ ಬೇಕಾದಾಗ ಆ ಹುಡುಗ ನಿಮಗಾಗಿ ಲಭ್ಯವಿರುತ್ತಾನೆ. ನೀವಿಬ್ಬರೂ ಪ್ರೀತಿಸುತ್ತಿದ್ದಾಗ ಎಷ್ಟು ಕಾಳಜಿ ಮಾಡುತ್ತಿದ್ದ ಅಷ್ಟೇ ಕಾಳಜಿಯನ್ನೂ ಈಗಲೂ ಮಾಡುತ್ತಾನೆ. ಇಷ್ಟೆಲ್ಲಾ ಗುಣಗಳು ಇದ್ದರೆ ಖಂಡಿತ ಅವನು ನಿಮ್ಮನ್ನು ಮರೆತ್ತಿಲ್ಲ ಎಂದರ್ಥ.
ಕೆಲವೊಂದು ಸಾರಿ ಸಣ್ಣ-ಪುಟ್ಟ ಕಾರಣಗಳಿಗಾಗಿ ಪ್ರೀತಿಸಿದವರಿಂದ ನಾವು ದೂರವಾಗಿರ್ತೀವಿ. ಆದರೆ ಮತ್ತೆ ಆ ಪ್ರೀತಿಯಲ್ಲಿ ಒಂದಾಗೋದು ಕಷ್ಟ. ಹೀಗಾಗಿ ಜೀವನದಲ್ಲಿ ಏನೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಯೋಚಿಸುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications


