Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬಿಟ್ಟ ಸ್ಥಳ ತುಂಬಿ... ಆಟದ ಮೂಲಕ ತಾನು ಗರ್ಭಿಣಿ ಎಂದು ಪುಟಾಣಿಗಳಿಗೆ ತಿಳಿಸಿದ ಟೀಚರ್: ಕ್ಯೂಟ್ ವೀಡಿಯೋ ಸಕತ್ ವೈರಲ್
ಚಿಕ್ಕ ಮಕ್ಕಳಿಗೆ ಶಿಕ್ಷಕರೇ ಎರಡನೇ ಪೋಷಕರಾಗಿರುತ್ತಾರೆ. ಅದರಲ್ಲೂ 2ನೇ ಕ್ಲಾಸ್‌ಗಿಂತ ಕೆಳಗಿರುವ ಮಕ್ಕಳು ತಮ್ಮ ಕ್ಲಾಸ್ ಟೀಚರ್‌ಗೆ ತುಂಬಾನೇ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಆ ಶಿಕ್ಷಕರ ಪುಟ್ಟ ಮಕ್ಕಳ ಸಂಬಂಧ ತಾಯಿ ಮಕ್ಕಳಂತೆ ಇರುತ್ತದೆ.
ಅದರಲ್ಲೂ ಮಕ್ಕಳು ಕೆಲವೊಂದು ಟೀಚರ್‌ಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಆ ಟೀಚರ್ ಬದಲಿಗೆ ಬೇರೆ ಟೀಚರ್ ಬಂದರೆ ಅವರಿಗೆ ಅದನ್ನು accept ಮಾಡುವುದೇ ಕಷ್ಟವಾಗುತ್ತೆ. ಅದನ್ನರಿತ ಶಿಕ್ಷಕಿಯೊಬ್ಬರು ಇನ್ನು ಕೆಲವು ದಿನಗಳಷ್ಟೇ ತಾನು ಶಾಲೆಗೆ ಬರುವುದು ಎಂದು ಆ ಪುಟ್ಟ ಮಕ್ಕಳಿಗೆ ತಿಳಿಸಿರುವ ರೀತಿ ತುಂಬಾನೇ ವೈರಲ್ ಆಗಿದೆ.

ಶಿಕ್ಷಕಿ ತಾನು ಗರ್ಭಿಣಿ ಎಂಬುವುದನ್ನು ಫಿಲ್ ಇನ್ ಬ್ಲ್ಯಾಂಕ್‌ನಲ್ಲಿ (ಬಿಟ್ಟ ಸ್ಥಳ ತುಂಬಿ) ಆಟ ಆಡುತ್ತಾ ತಿಳಿಸಿರುವುದು ತುಂಬಾನೇ ಕ್ಯೂಟ್ ಆಗಿದೆ. ಅಲ್ಲದೆ ಮಕ್ಕಳು ತಮ್ಮ ಮಿಸ್‌ನ ಹೊಟ್ಟೆಯಲ್ಲಿ ಮಗುವಿದೆ ಎಂದು ತಿಳಿದು ಖುಷಿಪಟ್ಟ ರೀತಿ ಇವೆಲ್ಲಾ ತುಂಬಾನೇ ಕ್ಯೂಟ್ ಆಗಿರುವುದರಿಂದ ಈ ವೀಡಿಯೋ ವೈರಲ್ ಆಗಿದೆ.
ಶಿಕ್ಷಕಿ ಕ್ಲಾಸ್‌ಗೆ ಬಂದು ನಾನು ನಿಮಗೊಂದು ಸೀಕ್ರೆಟ್ ಹೇಳುತ್ತಿದ್ದೇನೆ ಎಂದು ಹೇಳುತ್ತಾರೆ. ಮಕ್ಕಳಿಗೆ ತುಂಬಾನೇ ಕುತೂಹಲವಾಗುತ್ತದೆ. ಟೀಚರ್ ಬೋರ್ಡ್‌ನಲ್ಲಿ ಬಿಟ್ಟ ಸ್ಥಳ ತುಂಬಿ ರೀತಿಯಲ್ಲಿ ಬರೆಯುತ್ತಾರೆ. ಮಕ್ಕಳು ಸ್ಪೆಲ್ಲಿಂಗ್ ಹೇಳುತ್ತಾರೆ. ಆವಾಗ ಅವರಿಗೆ ನಮ್ಮ ಟೀಚರ್ ಹೊಟ್ಟೆಯಲ್ಲಿ ಮಗುವಿದೆ ಎಂದು ಗೊತ್ತಾಗಿ ತುಂಬಾನೇ ಖುಷಿ ಪಡುತ್ತಾರೆ. ಟೀಚರ್ ನಿಮ್ಮ ಹೊಟ್ಟೆಯಲ್ಲಿ ಮಗು ಇದೆಯಾ ಎಂದು ತುಂಬಾ ಕುತೂಹಲದಿಂದ ಕೇಳುತ್ತಾರೆ, ಮತ್ತೊಬ್ಬ ಹುಡುಗ ಓಹೋ ನೀವು ಆಸ್ಪತ್ರೆಗೆ ಹೋಗುವುದಕ್ಕೆ ಆಗಾಗ ರಜೆ ಹಾಕಿದ್ದಾ? ಎಂದು ಮುದ್ದಾಗಿ ಕೇಳುತ್ತಾನೆ.
ಶಿಕ್ಷಕಿ ಮಾಡಿದ್ದು ತುಂಬಾ ಉತ್ತಮವಾದ ಕಾರ್ಯ
ಅವರು ತಾವು ಗರ್ಭಿಣಿಯೆಂದು ಆ ಪುಟಾಣಿಗಳಿಗೆ ಹೇಳದೇ ಇರಬಹುದಿತ್ತು. ಆದರೆ ಅವರಿಗೆ ಗೊತ್ತಿದೆ ಮುಂದೆ ನಾನು ಮೆಟರ್ನಿಟಿ ರಜೆಯಲ್ಲಿ ಹೋದಾಗ ಮಕ್ಕಳು ನನ್ನನ್ನು ಮಿಸ್ ಮಾಡುತ್ತಾರೆ, ಬೇರೆ ಟೀಚರ್ ಬಂದಾಗ ಕಷ್ಟವಾಗಬಹುದು, ಅದೇ ಮೊದಲೇ ಮಕ್ಕಳಿಗೆ ಹೇಳಿದರೆ ಅವರು ಬದಲಾವಣೆಗೆ ಹೊಂದಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಹೇಳಿದ್ದಾರೆ.
ಮುಖಕ್ಕೆ ಬೆಕ್ಕಿನಂತೆ ಮೇಕಪ್ ಮಾಡಿ ಬಂದು ಟೀಚರ್ ತುಂಬಾ ಚೆನ್ನಾಗಿ ಮಕ್ಕಳ ಜೊತೆ ಮಾತನಾಡುತ್ತಿರುವ ವೀಡಿಯೋ ನೋಡಿದವರು ಪ್ರತಿಯೊಬ್ಬ ಟೀಚರ್ ಮಕ್ಕಳ ಜೊತೆ ಹೀಗಿದ್ದರೆ ಮಕ್ಕಳಿಗೆ ಮನೆಗಿಂತ ಸ್ಕೂಲೇ ಇಷ್ಟವಾಗುವುದು ಎಂದು ಹೇಳಿದ್ದಾರೆ. ಈ ವೀಡಿಯೋ ನೋಡಿ ನಿಮಗೇನಿಸಿತ್ತು?



Click it and Unblock the Notifications
