Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪುರುಷರೇ, ಮದುವೆಯಾಗೋದ್ರಿಂದ ಇಷ್ಟೆಲ್ಲಾ ಲಾಭಗಳಿದ್ಯಾ?
ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಶುರುವಾಗುವ ಹೊಸ ಅಧ್ಯಾಯ ಅಂತಾನೇ ಹೇಳಬಹುದು. ಪ್ರತಿಯೊಬ್ಬರಿಗೆ ಮದುವೆಯ ಬಗ್ಗೆ ಅವರದ್ದೇ ಆದ ಕನಸುಗಳು ಇರುತ್ತವೆ. ಮದುವೆಯಾದ ನಂತರ ಎಷ್ಟೋ ಜನರ ಬಾಳು ಬಂಗಾರವಾಗದ ಉದಾಹರಣೆಗಳು ಕೂಡ ಇದೆ.

ಮದುವೆಯ ಬಗ್ಗೆ ಅನೇಕರು ಕನಸುಗಳನ್ನು ಕಂಡಿದ್ರೆ ಇನ್ನೂ ಕೆಲವರಿಗೆ ಮದುವೆ ಅಂದ್ರೆ ಹೆಚ್ಚಾಗಿ ಆಸಕ್ತಿ ಇರೋದಿಲ್ಲ. ಅದ್ರಲ್ಲೂ ಹೆಚ್ಚಿನ ಪುರುಷರು ಮದುವೆಯಾಗೋದು ಬೇಡ ಎಂದು ನಿರ್ಧರಿಸಿರುತ್ತಾರೆ. ಆದ್ರೆ ನಿಮಗೊತ್ತಾ ಮದುವೆಯಾಗೋದ್ರಿಂದ ಪುರುಷರು ಅನೇಕ ಲಾಭಗಳನ್ನು ಪಡೆದುಕೊಳ್ಳುತ್ತಾರೆ. ಅಷ್ಟಕ್ಕೂ ಪುರುಷರು ಮುದುವೆಯಾಗೋದು ಯಾಕೆ ಮುಖ್ಯ? ಹಾಗೂ ಇದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಅನೋದನ್ನು ತಿಳಿಯೋಣ.
1. ಬದುಕಿನ ಒಂದು ಶುಭ ಆರಂಭವಾಗಿರುತ್ತದೆ
ನಮ್ಮ ಬದುಕಿನ ಒಂಟಿ ಜೀವನದಲ್ಲಿ ಯಾರಾದ್ರು ನಮಗಾಗಿ ಬಂದರೆ ಆ ಬದುಕು ಮತ್ತೂ ಸುಂದರ ಅನ್ನಿಸುತ್ತೆ. ಹುಡುಗರು ಬ್ಯಾಚುಲರ್ ಆಗಿದ್ದ ಬದುಕು ಬೇರೆಯದ್ದೇ ರೀತಿ ಇರುತ್ತೆ. ಹೆಚ್ಚಿನ ಜವಾಬ್ದಾರಿಗಳನ್ನು ಅವರು ತೆಗೆದುಕೊಂಡಿರೋದಿಲ್ಲ. ಅವರಷ್ಟಕ್ಕೆ ಆರಾಮಾಗಿ ಇದ್ದು ಬಿಡ್ತಾರೆ. ಆದರೆ ಮದುವೆಯಾದ ಮೇಲೆ ಆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ.
ಜವಾಬ್ದಾರಿ ಅವರ ಹೆಗಲ ಮೇಲೇರುತ್ತದೆ. ಮನೆಯಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ ಸಿಗುತ್ತೆ. ಹೀಗಾಗಿ ಆರೋಗ್ಯವಾಗಿ ಇರಬಹುದು. ಇನ್ನೂ ಹುಷಾರಿಲ್ಲದಾಗ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಜೊತೆಗಾತಿ ನಮ್ಮ ಹತ್ತಿರ ಇರುತ್ತಾರೆ.
2. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ
ಈ ಆಧುನಿಕ ಯುಗದಲ್ಲಿ ಒಬ್ಬರೇ ದುಡಿದು ಸಂಸಾರ ಸಾಗಿಸೋದು ಕಷ್ಟ. ಗಂಡ ಹಾಗೂ ಹೆಂಡತಿ ಇಬ್ಬರೂ ಕೂಡ ಕೈ ತುಂಬಾ ದುಡಿಯುತ್ತಿದ್ದರೆ ಸಂಸಾರ ಸಾಗಿಸೋದು ಕೊಂಚ ಸುಲಭವಾಗುತ್ತದೆ. ಗಂಡನಿಗೆ ಹೆಗಲಾಗಿ ಹೆಂಡತಿ ನಿಲ್ಲುತ್ತಾಳೆ. ಆರ್ಥಿಕ ಸಮಸ್ಯೆಗಳು ಬಾರದಂತೆ ನಿರ್ಭೀತಿಯಿಂದ ಜೀವನ ನಡೆಸಬಹುದು. ಇನ್ನೂ ಮಕ್ಕಳಾದ ಮೇಲೂ ಮಕ್ಕಳ ಖರ್ಚು ವೆಚ್ಚಗಳನ್ನು ಇಬ್ಬರೂ ನಿಭಾಯಿಸಿಕೊಂಡು ಹೋಗಬಹುದು. ಇನ್ನೂ ಹೆಚ್ಚಾಗಿ ದುಡಿಯುತ್ತಿರುವ ಹೆಣ್ಣು ಮಕ್ಕಳು ಗಂಡನಿಂದ ಯಾವುದೇ ನಿರೀಕ್ಷೇಯನ್ನು ಇಟ್ಟುಕೊಳ್ಳೋದಿಲ್ಲ.
3. ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ಪ್ರತಿಯೊಬ್ಬರಿಗೂ ಜೀವನದಲ್ಲಿ ಮಾನಸಿಕ ತೊಂದರೆಗಳು ಇದ್ದೇ ಇರುತ್ತದೆ. ಖಿನ್ನತೆ, ಆತಂಕ, ಕೋಪ, ಭಯ ಇತ್ಯಾದಿ. ಇಂತಹ ಸಂದರ್ಭದಲ್ಲಿ ನಮ್ಮನ್ನು ಸಮಾಧಾನ ಮಾಡುವವರು ಯಾರಾದರೂ ಬೇಕು ಅಂತ ಅನ್ನಿಸುತ್ತೆ. ನಮ್ಮ ನೋವಿನಲ್ಲಿ ನಮ್ಮ ಜೊತೆಯಾಗಿ ಸ್ವಾಂತ್ವಾನ ನೀಡುವ ಹೆಗಲನ್ನು ನಾವು ಬಯಸುತ್ತೇವೆ.
ಆದರೆ ಮದುವೆಗೂ ಮುಂಚೆ ನಮಗಾಗಿ ಯಾರು ಇರೋದಿಲ್ಲ. ಇದ್ದರೂ ಕೆಲವೊಂದು ವಿಚಾರಗಳನ್ನು ಅವರ ಬಳಿ ಹೇಳಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಆದರೆ ಮದುವೆಯಾದ ನಂತರ ಹೆಂಡತಿಯಾಗಿ ಬಂದವಳು ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಂಡು ನಮ್ಮ ಜೊತೆಯಾಗಿ ಯಾವಾಗಲೂ ಇರುತ್ತಾಳೆ. ನಾವು ಕುಗ್ಗಿ ಹೋದಾಗ ನಮಗೆ ದೈರ್ಯ ಹೇಳುತ್ತಾಳೆ.
4. ಪ್ರಾಮಾಣಿಕ ಪ್ರೀತಿ ತೋರುತ್ತಾಳೆ
ನಮ್ಮ ಪೋಷಕರನ್ನು ಬಿಟ್ಟು ನಮ್ಮ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುವವರು ಯಾರು ಇರೋದಿಲ್ಲ. ಒಂದು ವೇಳೆ ಬೇರೆಯವರು ನಮ್ಮ ಮೇಲೆ ಪ್ರೀತಿಯನ್ನು ತೋರಿದ್ರೂ ಕೂಡ ಅದು ನಿಜವಾದ ಪ್ರೀತಿ ಹೌದೋ? ಅಲ್ಲವೋ ಎನ್ನುವ ಅನುಮಾನ ಶುರುವಾಗುತ್ತದೆ. ಆದರೆ ನಮ್ಮ ಬಾಳ ಸಂಗಾತಿಯಾಗಿ ಬಂದವರು ನಮ್ಮ ಮೇಲೆ ಪ್ರಾಮಾಣಿಕವಾದ ಪ್ರೀತಿಯನ್ನೇ ತೋರುತ್ತಾರೆ. ಅವರ ಪ್ರೀತಿ ಯಾವಾಗಲೂ ಪರಿಶುದ್ಧವಾಗಿರುತ್ತದೆ. ಹಾಗೂ ನಮಗಾಗಿ ಮಾತ್ರ ಸೀಮಿತವಾಗಿರುತ್ತದೆ.
5. ಒಂದು ಸುಂದರವಾದ ಕುಟುಂಬವನ್ನು ಪಡೆಯಬಹುದು
ಮದುವೆಯಾದ ಮೇಲೆ ನಮ್ಮದೇ ಆದ ಕುಟುಂಬ ನಮಗೆ ಸಿಗುತ್ತದೆ. ಹೆಂಡತಿ ಹಾಗೂ ಮಕ್ಕಳ ಜೊತೆಗೆ ಖಷಿಯಾಗಿ ಕಾಲ ಕಳೆಯಬಹುದು. ನಮ್ಮ ಮನಸ್ಸಿನಲ್ಲಿ ಎಷ್ಟೇ ಕಷ್ಟ, ನೋವುಗಳು ಇದ್ದರೂ ಕೂಡ ಮನೆಗೆ ಬಂದು ಹೆಂಡತಿ, ಮಕ್ಕಳ ಮುಖ ನೋಡಿದಾಗ ಎಲ್ಲವನ್ನೂ ಮರೆಯುತ್ತೇವೆ. ಮಕ್ಕಳ ಅದ್ಭುತ ಪ್ರೀತಿಯನ್ನು ಸಂಪಾದಿಸುವುದಕ್ಕೆ ಸಾಧ್ಯವಾಗುತ್ತದೆ.
ಮದುವೆಯಾಗೋದ್ರಿಂದ ಪುರುಷರಿಗೆ ಇಷ್ಟೆಲ್ಲಾ ಲಾಭಗಳಿದೆ. ಹೊಸ ಬದುಕು, ಜೀವನ ನಿಮ್ಮದಾಗುತ್ತದೆ. ಹಾಗೂ ನೀವು ಯಾವಾಗಲೂ ಖುಷಿ ಖುಷಿಯಾಗಿರಲು ಸಾಧ್ಯವಾಗುತ್ತದೆ.



Click it and Unblock the Notifications
