Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಕ್‌ನ ಲವ್ ಮಾಡುವ ಮುನ್ನಅಪಾಯಕಾರಿ ರಿಲೇಷನ್‌ಶಿಪ್‌ನಲ್ಲಿದ್ದ ಪಿಗ್ಗಿ! ಈ ಸಂಬಂಧ ಅಪಾಯಕಾರಿ, ಏಕೆ?
ಬಾಲಿವುಡ್‌ನಿಂದ ಹಾಲವುಡ್‌ವರೆಗೆ ಬೆಳೆದಿರುವ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ನಿಕ್ ಜೋನಸ್‌ನ ಜೊತೆ ಡೇಟಿಂಗ್ ಮಾಡುವ ಒಬ್ಬ ವ್ಯಕ್ತಿಯೊಂದಿಗೆ ಟುಮುಲ್ಟಸ್ ರಿಲೇಷನ್‌ಶಿಪ್‌ನಲ್ಲಿದ್ದೆ ಎಂಬ ಬಗ್ಗೆ ಹೇಳಿದ್ದಾರೆ.

ಟುಮುಲ್ಟಸ್ ರಿಲೇಷನ್‌ಶಿಪ್ ಎಂಬುವುದು ಒಂದು ಕೆಟ್ಟ ಸಂಬಂಧ, ಇಬ್ಬರು ಪ್ರೀತಿಯಲ್ಲಿರುತ್ತಾರೆ ಆದರೆ ಆ ಪ್ರೀತಿ ಮುಚ್ಚಿಡಬೇಕಾದ ಒತ್ತಡಗಳಿರುತ್ತದೆ. ಕೆಲವೊಮ್ಮೆ ತುಂಬಾ ಹತ್ತಿರವಾಷದೆವು ಎಂದು ಅನಿಸುತ್ತದೆ, ಆದರೆ ವಾಸ್ತವದಲ್ಲಿ ಹತ್ತಿರವಾಗಿರುವುದಿಲ್ಲ... ಇದನ್ನು ಒಂದು ರೀತಿಯಲ್ಲಿ ಬಳಸಿಕೊಳ್ಳುವ ಪ್ರೀತಿ ಎಂದರೂ ತಪ್ಪಾಗಲಾರದು. ಅಂಥ ಪ್ರೀತಿಯಲ್ಲಿ ನಾನಿದ್ದೆ ಎಂಬುವುದಾಗಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಟುಮುಲ್ಟಸ್ ಸಂಬಂಧದಲ್ಲಿದ್ದೇವೆ ಎಂದು ಸೂಚಿಸುವ ಲಕ್ಷಣಗಳೇನು ಎಂದು ನೋಡೋಣ ಬನ್ನಿ:
1. ಯಾವುದೋ ಒಂದು ವಿಷಯಕ್ಕೆ ಜಗಳ
ಯಾವುದೋ ಒಂದು ವಿಷಯಕ್ಕೆ ಇಬ್ಬರಿಗೆ ತುಂಬಾ ಜಗಳ ಆಗುತ್ತಿದೆ ಎಂದಾದರೆ ಅದು ಒಳ್ಳೆಯ ಸಂಬಂಧದ ಲಕ್ಷಣವಲ್ಲ. ನಿಮ್ಮ ಸಮಸ್ಯೆಗೆ ಇನ್ನೂ ಪರಿಹಾರ ಸಿಗುತ್ತಿಲ್ಲ, ಅದೇ ವಿಷಯಕ್ಕೆ ಪದೇ ಪದೇ ಜಗಳವಾಗುತ್ತಿದೆ ಎಂದಾದರೆ ಆ ಸಂಬಂಧದ ಬಗ್ಗೆ ಮರು ಆಲೋಚನೆ ಮಾಡುವುದು ಒಳ್ಳೆಯದು.
2. ಅವರಿಗೆ ಬೇಕಾದಂತೆ ಪರಿಸ್ಥಿತಿ ಬದಲಾಯಿಸುವುದು
ನಿಮ್ಮನ್ನ ತುಂಬಾ ಇಷ್ಟ ಅಂತಾರೆ ಹಾಗಂತ ನಿಮಗಾಗಿ ಮನೆಯವರ ವಿರೋಧ ಕಟ್ಟಿಕೊಳ್ಳಲು ಸಿದ್ಧವಿರಲ್ಲ. ಅನೈತಿಕ ಸಂಬಂಧದಲ್ಲಿರುತ್ತಾರೆ, ಆದರೆ ಅದು ಮನೆಗೆ ಗೊತ್ತಾಗಬಾರದೆಂದು ಬಯಸುವುದು ಅಲ್ಲದೆ ಸಂಗಾತಿಗೆ ವಿಚ್ಛೇಧನ ಕೊಟ್ಟು ಈ ಸಂಬಂಧದ ಸಂಬಂಧ ಮುಂದುವರೆಸಲು ಹಿಂದೇಟು ಹಾಕುವುದು. ಹಾಗಂತ ಈ ಸಂಬಂಧದಿಂದ ಹೊರ ಹೋಗಲು ಇಚ್ಛೆ ಪಡಲ್ಲ. ಇಂಥವರ ಬಗ್ಗೆ ಬಿ ಕೇರ್‌ಫುಲ್.
3. ಸಂಗಾತಿಯನ್ನು ತುಂಬಾ ಅವಲಂಬಿಸುವುದು
ಒಬ್ಬರನ್ನೊಬ್ಬರು ಅವಲಂಬಿಸುವುದು ಒಳ್ಳೆಯದು, ಆದರೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಇದೇ ಕಾರಣಕ್ಕೆ ಸಂಬಂಧದಲ್ಲಿ ಸಮಸ್ಯೆ ಹೆಚ್ಚಾಗಬಹುದು.
4. ಖುಷಿಯಾಗಿದ್ದಾಗ ಈ ಸಂಬಂಧ ಸೂಪರ್, ಚೆನ್ನಾಗಿದೆ ಅಂತ ಅನಿಸುವುದು
ಇಬ್ಬರು ಖುಷಿಯಲ್ಲಿದ್ದಾಗ ಈ ಸಂಬಂಧ ತುಂಬಾನೇ ಚೆನ್ನಾಗಿದೆ ಎಂದು ಅನಿಸುತ್ತದೆ. ಇಬ್ಬರು ತುಂಬಾನೇ ಖುಷಿಯಾಗಿರುತ್ತೀರಿ.
5. ಬೇಸರವಾದಾಗ ಈ ಸಂಬಂಧ ಮುಗಿಯಿತು ಎಂದು ಭಾವಿಸುವುದು
ಯಾವುದೋ ಒಂದು ವಿಷಯಕ್ಕೆ ಇಬ್ಬರಿಗೆ ಬೇಸರವಾದಾಗ ಈ ಸಂಬಂಧ ಮುಗಿಯಿತು ಎಂದು ಭಾವಿಸುವುದು. ನಂತರ ಮತ್ತೆ ಒಂದಾಗಿ ಖುಷಿಯಾಗಿರುವುದು. ಈ ಲವ್-ಬ್ರೇಕಪ್ ಆಗಾಗ ಆಗುತ್ತಲೇ ಇರುತ್ತದೆ.
6. ಮಾನಸಿಕವಾಗಿ ತುಂಬಾ ನೋವಾಗುವುದು
ಈ ಸಂಬಂಧದಲ್ಲಿ ಮುಂದೇನು ಎಂಬ ಆತಂಕ ಸದಾ ಕಾಡುತ್ತಿರುತ್ತದೆ, ಭವಿಷ್ಯದ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಏನೋ ಗೊಂದಲ ಸ್ಥಿತಿ. ಈ ರೀತಿಯೆಲ್ಲಾ ಇದ್ದರೆ ಇವೆಲ್ಲಾ ಸಂಬಂಧದಲ್ಲಿ ರೆಡ್‌ಫ್ಲ್ಯಾಗ್‌ಗಳಾಗಿವೆ.
7. ಒಂಟಿಯಂತೆ ಅನಿಸುವುದು
ನಾವು ಅತಿಯಾಗಿ ಪ್ರೀತಿಸುತ್ತಿರುವ ವ್ಯಕ್ತಿ ಜೊತೆಗಿದ್ದರೂ ಒಂಟಿತನ ಕಾಡಲಾರಂಭಿಸುವುದು, ಇವೆಲ್ಲ ಅನಾರೋಗ್ಯಕರ ಸಂಬಂಧದ ಲಕ್ಷಣವಾಗಿದೆ.
8. ಸುಳ್ಳಿನ ಮೇಲೆ ಕಟ್ಟಿಕೊಂಡ ಸಂಬಂಧ
ಸಂಬಂಧ ಉಳಿಸಿಕೊಳ್ಳಲು ಅತಿಯಾಗಿ ಸುಳ್ಳು ಹೇಳುತ್ತಿದ್ದರೆ ಒಂದೆಲ್ಲಾ ಒಂದು ದಿನ ಆ ಸಂಬಂಧ ಮುರಿದು ಬೀಳುವುದು ಗ್ಯಾರಂಟಿ. ಆದ್ದರಿಂದ ಇಂಥ ಲಕ್ಷಣಗಳು ರಿಲೇಷನ್‌ಶಿಪ್‌ನಲ್ಲಿ ಕಂಡು ಬಂದರೆ ಅದರಿಂದ ಹೊರಬರುವುದು ಒಳ್ಳೆಯದು.



Click it and Unblock the Notifications
