Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದರ್ಶನ್ ಜೊತೆಗೆ 10 ವರ್ಷದ ಸಂಬಂಧ ಎಂದ ಪವಿತ್ರ ಗೌಡ: ಖಾಸಗಿ ಫೋಟೋಗಳನ್ನು ಹರಿಬಿಡಲು ಇನ್‌ಸೆಕ್ಯೂರಿಟಿ ಕಾರಣವಾಯಿತೇ?
ತೂಗುದೀಪ ದರ್ಶನ್ ಅವರನ್ನು ಅವರ ಫ್ಯಾನ್ಸ್ ಎಂದು ಕರೆಯುವುದು ಡಿಬಾಸ್. ಅವರನ್ನು ಒಮ್ಮೆ ಭೇಟಿಯಾದರೆ ಸಾಕು ಎಂದು ಕಾಯುವ ಲಕ್ಷಾಂತ ಅಭಿಮಾನಿಗಳಿದ್ದರೆ, ನಮ್ಮ ಡಿಬಾಸ್ ಅವರ ಕುಟುಂಬ ಖುಷಿಯಾಗಿರಬೇಕೆಂಬುವುದೇ ಅವರ ಫ್ಯಾನ್ಸ್ ಆಸೆ, ಆದರೆ ದರ್ಶನ್ ಅವರ ವೈಯಕ್ತಿಕ ಬದುಕಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿ ಯಾರನ್ನು ಬೆಂಬಲಿಸಬೇಕೆಂದು ತಿಳಿಯದಾಗಿದ್ದರೆ ಅವರ ಅಭಿಮಾನಿಗಳು.
ಸುಂದರ ಕುಟುಂಬಕ್ಕೆ ಹುಳಿ ಹಿಂಡಿದರೇ ನಟಿ ಪವಿತ್ರ ಗೌಡ
ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಕುಟುಂಬ ಖುಷಿಯಾಗಿರಬೇಕೆಂದು ಅವರ ಅಭಿಮಾನಿಗಳು ಬಯಸುತ್ತಾರೆ, ಇವರಿಬ್ಬರಿಗೆ ಒಬ್ಬ ಮಗ ವಿನೀಶ್. ಆದರೆ ಈ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಆಗಾಗ ಸುದ್ದಿಯಾಗುತ್ತಿದೆ. ಈ ಹಿಂದೆ ದರ್ಶನ್ ಹಾಗೂ ಅವರ ಪತ್ನಿ ನಡುವಿನ ಗಲಾಟೆ ದ ದೊಡ್ಡ ಸದ್ದು ಮಾಡಿತ್ತು. ಆಗ ಕೇಳಿ ಬಂದ ಹೆಸರೇ ಪವಿತ್ರಗೌಡ.. ಅದಾಗಿ ಕೆಲವು ವರ್ಷಗಳವರೆಗೆ ಈಕೆಯ ಹೆಸರು ದರ್ಶನ್ ಜೊತೆಗೆ ತಳುಕು ಹಾಕಿರಲಿಲ್ಲ, ದರ್ಶನ್ ಅವರ ಪತ್ನಿ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ದರ್ಶನ್ ಅವರನ್ನು ಗೌರವಿಸುವಂತೆಯೇ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಅತ್ತಿಗೆ ಎಂದೇ ಕರೆದು ಅಷ್ಟೇ ಪ್ರೀತಿಯನ್ನು ನೀಡುತ್ತಿದ್ದಾರೆ ಡಿಬಾಸ್ ಅಭಿಮಾನಿಗಳು.
10 ವರ್ಷದ ಸಂಬಂಧ ಎಂದ ಪವಿತ್ರಗೌಡ
ಪವಿತ್ರಗೌಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಖಾಸಗಿ ಫೋಟೋಗಳನ್ನು ಶೇರ್ ಮಾಡಿ 10 ವರ್ಷದ ಸಂಬಂಧ ಎಂದು ಹೇಳಿದ್ದಾರೆ, ಅಲ್ಲದೆ ದರ್ಶನ್ ಅವರ ಜೊತೆಗಿನ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಹೊರಬರುತ್ತಿದ್ದಂತೆ ವಿಜಯಲಕ್ಷ್ಮಿ ಅವರಿಗೆ ಸಿಡಿಲು ಬಡಿದಂತಾಗಿದೆ. ದರ್ಶನ್ ಅವರ ಜೊತೆಗೆ ಅವರ ಸಂಗಾತಿಯಂತೆ ಬಿಂಬಿಸುವ ಫೋಟೋಗಳವು. ದರ್ಶನ್ ಹಾಗೂ ಪವಿತ್ರ ಕತ್ತಿನಲ್ಲಿ ಮಾಲೆ ಧರಿಸಿ ಯಾವುದೋ ಪೂಜೆ ಮಾಡುತ್ತಿರುವ ಫೋಟೋ (ಸಾಮಾನ್ಯವಾಗಿ ಪೂಜೆ, ಮನೆ ಗೃಹ ಪ್ರವೇಶದಲ್ಲಿ ದಂಪತಿ ಹೀಗೆ ಕುತ್ತಿಗೆಗೆ ಹಾರ ಹಾಕಿ ಕೂತಿರುತ್ತಾರೆ), ಇಬ್ಬರು ಟ್ರಿಪ್ ಹೋಗಿರುವ ಫೋಟೋಗಳು ಹೀಗೆ ಹಲವಾರು ಫೋಟೋಗಳನ್ನು ಕಂಬೈನ್ ಮಾಡಿ ಹಾಕುವ ಮೂಲಕ ನಮ್ಮಿಬ್ಬರ ನಡುವೆ ಸಂಬಂಧ ಇದೆ ಎಂಬ ರೂಮರ್ ಅದು ರೂಮರ್ ಅಲ್ಲ ಸತ್ಯ ಎಂದು ಹೇಳಲು ಹೊರಟಿದ್ದಾರೆ ಪವಿತ್ರ ಗೌಡ.
ವಿಜಯ್‌ಲಕ್ಷ್ಮಿ ಹಾಕಿರುವ ಫೋಟೋ ಸಹಿಸದೆ ಹಾಕಿದರೇ?
ವಿಜಯಲಕ್ಷ್ಮಿಯವರು ದರ್ಶನ್ ಹಾಗೂ ಮಗನ ಜೊತೆಗೆ ಖುಷಿಯಾಗಿರುವ ಫೋಟೋವು ಶೇರ್ ಮಾಡಿದ್ದರು, ಅದನ್ನು ನೋಡಿ ಡಿಬಾಸ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದರು, ಏಕೆಂದರೆ ಅಂಥದ್ದೊಂದು ಫೋಟೋವನ್ನು ತುಂಬಾ ವರ್ಷಗಳಿಂದ ನಿರೀಕ್ಷೆ ಮಾಡಿದ್ದರು, ಅಂಥ ಫೋಟೋ ಹಾಕಿದಾಗ ಅಭಿಮಾನಿಗಳಿಗೆ ತುಂಬಾನೇ ಖುಷಿಯಾಗಿತ್ತು. ಆದರೆ ಆ ಫೋಟೋ ನೋಡಿ ಪವಿತ್ರಾ ಗೌಡ ಹೊಟ್ಟೆಕಿಚ್ಚು ಪಟ್ಟು ಅವರು ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದರೇ? ಎಂಬ ಸಂಶಯ ಮೂಡುತ್ತದೆ, ಏಕೆಂದರೆ ವಿಜಯಲಕ್ಷ್ಮಿ ದರ್ಶನ್ ತಮ್ಮ ಕುಟುಂಬ ಫೋಟೋ ಶೇರ್ ಮಾಡಿದ 2 ಗಂಟೆಯಲ್ಲಿ ಪವಿತ್ರಗೌಡ ದರ್ಶನ್ ಜೊತೆಗಿನ ಕಾಸಗಿ ಫೋಟೋ ಶೇರ್ ಮಾಡಿದ್ದರು.
ವಿಜಯಲಕ್ಷ್ಮಿ ಕೌಂಟರ್
ಪವಿತ್ರ ಗೌಡ ಫೋಟೋ ಹೊರ ಬರುತ್ತಿದ್ದಂತೆ ವಿಜಯಲಕ್ಷ್ಮಿ ಪವಿತ್ರಗೌಡ ಹಾಗೂ ಅವರ ಮಾಜಿ ಗಂಡನ ಫೋಟೋ ಹಾಕಿ, ಖುಷಿ ಗೌಡ ಸಂಜಯ್ ಸಿಂಗ್ ಹಾಗೂ ಪವಿತ್ರ ಗೌಡರ ಮಗಳು ಎಂದು ಬರೆದಿದ್ದಾರೆ. ಅವರು ಈ ರೀತಿ ಬರೆಯುವುದಕ್ಕೆ ಕಾರಣವಿದೆ, ಇತ್ತೀಚೆಗೆ ಪವಿತ್ರ ಗೌಡರ ಮಗಳ ಹುಟ್ಟುಹಬ್ಬದಲ್ಲಿ ದರ್ಶನ್ ಭಾಗವಹಿಸಿ ಆ ಮಗಳ ಜೊತೆ ಖುಷಿಯಾಗಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು, ಆವಾಗ ಸಾಮಾಜಿಕ ತಾಣದಲ್ಲಿ ಇದು ಡಿಬಾಸ್ ಮಗಳೇ? ಎಂಬ ಟಾಕ್ ಬಂದಿತ್ತು, ಅದಕ್ಕೆ ಉತ್ತರ ಎಂಬಂತೆ ವಿಜಯಲಕ್ಷ್ಮಿ ಈ ಪೋಸ್ಟ್ ಮಾಡಿರಬಹುದು.

ಒಟ್ಟಿನಲ್ಲಿ ಜಡೆ ಜಗಳದಲ್ಲಿ ದರ್ಶನ್ ಮರ್ಯಾದೆ ?
ಇದೀಗ ಮತ್ತೆ ದರ್ಶನ್ ವೈಯಕ್ತಿಕ ಬದುಕಿನಲ್ಲಿ ದೊಡ್ಡ ಸುನಾಮಿಯೇ ಎದ್ದಿದೆ. ಅದು ಹೊರ ಜಗತ್ತಿಗೆ ಗೊತ್ತಾಗಿರುವುದು ತುಂಬಾ ಮುಜುಗರದ ಸಂಗತಿ. ಪವಿತ್ರ ಗೌಡ ಮಾಡಿದ ಕೆಲಸದಿಂದ ದರ್ಶನ್ ಅವರ ಇಮೇಜ್‌ಗೆ ಧಕ್ಕೆಯಾಗಿದೆ. ಹೆಂಡತಿ ಇರುವಾಗ ಮತ್ತೊಬ್ಬ ಮಹಿಳೆ ಬಂದು ರಾಜಾರೋಷವಾಗಿ ನನಗೆ ದರ್ಶನ್ ಜೊತೆ 10 ವರ್ಷದ ಸಂಬಂಧವಿದೆ ಎಂದು ಹೇಳಿದರೆ ಈ ಸಮಾಜ ಖಂಡಿತ ಅದನ್ನು ಒಪ್ಪಿಕೊಳ್ಳಲ್ಲ. ದರ್ಶನ್ ಅವರನ್ನು ತುಂಬಾ ಇಷ್ಟ ಪಡುವ ಫ್ಯಾನ್ಸ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಖುಷಿಯಾಗಿರಬೇಕೆಂದೇ ಬಯಸುತ್ತಿರುವುದು.
ಅಭದ್ರತೆ ಕಾಡುತ್ತಿದೆಯೇ ಪವಿತ್ರಗೌಡಗೆ?
ತಾನು ಸೈಲೆಂಟ್ ಆಗಿದ್ದರೆ ನನಗೆ ನಷ್ಟ ಎಂಬ ಅಭದ್ರತೆ ಕಾಡುತ್ತಿದೆಯೇ? ಏಕೆಂದರೆ ಅವರು ಇತ್ತೀಚೆಗೆ ಫೋಟೋಗಳನ್ನು ಹಾಕುವ ಮೂಲಕ ದರ್ಶನ್‌ಗೆ ನಾನೆಂದರೆ ಇಷ್ಟ ತುಂಬಾ ಬೇಕಾದವಳು ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅನಿಸುವುದು. ಅವರು ಈ ಫೋಟೋಗಳನ್ನು ಹಾಕುವಾಗ ಒಂದು ದಶಕದ ಈ ಗೆಳೆತನ ಎಂದು ಹೇಳಬಹುದಿತ್ತು, ಆದರೆ ಅವರು ಸ್ಪಷ್ಟವಾಗಿ ಈ ಸಂಬಂಧಕ್ಕೆ ಒಂದು ದಶಕ ಎಂದು ಹೇಳಿದ್ದಾರೆ.... ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರು ಕಾದಾಡುತ್ತಿದ್ದರೆ ದರ್ಶನ್ ಮಾತ್ರ ಮೌನವಾಗಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ...



Click it and Unblock the Notifications
