Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
Year Ender 2022: ಈ ವರ್ಷ ತುಂಬಾನೇ ಗಮನ ಸೆಳೆದ 6 ಬಗೆಯ ಡೇಟಿಂಗ್ ಐಡಿಯಾಗಳಿವು
ಡೇಟಿಂಗ್ ವಿಷಯದಲ್ಲೂ ಹೊಸ-ಹೊಸ ಟ್ರೆಂಡ್‌ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ, ಅದರಲ್ಲೂ ಆನ್‌ಲೈನ್ ಡೇಟಿಂಗ್‌ನಲ್ಲಿ ಸಾಫ್ಟ್ ಲಾಂಚ್ಡ್, ಬ್ರೆಡ್‌ಕ್ರಂಬೆಡ್ ಇವೆಲ್ಲಾ 2022ರಲ್ಲಿ ಸಕತ್ ಟಾಪ್ ಗಮನ ಸೆಳೆದ ಡೇಟಿಂಗ್ ಐಡಿಯಾಗಳಾಗಿವೆ.

ಈ ಡೇಟಿಂಗ್‌ಗಳಲ್ಲಿ ಕೆಲವೊಂದು ಅಪಾಯಕಾರಿ ಕೂಡ ಹೌದು, 2022ರಲ್ಲಿ ಯಾವೆಲ್ಲಾ ಡೇಟಿಂಗ್ ಐಡಿಯಾಗಳು ಸದ್ದು ಮಾಡಿತು, ಯಾವ ಡೇಟಿಂಗ್ ಬಗ್ಗೆ ಹುಷಾರಾಗಿರಬೇಕು ಎಂದು ನೋಡೋಣ ಬನ್ನಿ:

ಸಾಫ್ಟ್ ಲಾಂಚಿಂಗ್
ಸಾಮಾನ್ಯವಾಗಿ ವೆಬ್‌ಸೈಟ್ ಲಾಂಚ್ ಮಾಡುವಾಗ ಇಂಥ ಪದ ಬಳಸುತ್ತೇವೆ, ಸಂಬಂಧದಲ್ಲಿ ಈ ಪದವನ್ನು ಹೊಸದಾಗಿ ಡೇಟಿಂಗ್ ಮಾಡುವಾಗ ಬಳಸಲಾಗುವುದು. ಒಂದು ಹೊಸ ಸಂಬಂಧದಲ್ಲಿದ್ದೀರಾ ಅಥವಾ ಎಂಗೇಜ್ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೊರ ಜಗತ್ತಿಗೆ ತೋರಿಸಲು ಈ ಟ್ರೆಂಡ್ ತುಂಬಾನೇ ಜನಪ್ರಿಯವಾಗಿದೆ, ಇದರಲ್ಲಿ ಏನಪ್ಪಾ ಅಂದರೆ ಇಬ್ಬರು ಕೈ-ಕೈ ಹಿಡಿದ ಫೋಟೋ ಅಥವಾ ಉಂಗುರ ಬದಲಾಯಿಸುವ ಫೋಟೋ ಹಾಕುವುದು, ಆದರೆ ಎಲ್ಲಿಯೂ ತಾನು ಯಾರ ಜೊತೆ ಸಂಬಂಧದಲ್ಲಿದ್ದೇನೆ ಎಂಬುವುದರ ಬಗ್ಗೆ ಮಾಹಿತಿ ಇರಲ್ಲ, ಅವರ ಮುಖ ಕೂಡ ತೋರಿಸಲ್ಲ, ತಮ್ಮ ಫಾಲೋವರ್ಸ್, ಫ್ರೆಂಡ್ಸ್ ಕುತೂಹಲ ಕೆರಳಿಸುವಂತಿರಬೇಕು, ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಬಹಿರಂಗಪಡಿಸಬೇಕು ಎಂಬ ಉದ್ದೇಶದಿಂದ ಇಂಥ ಫೋಟೋ ಹಾಕಲಾಗುವುದು. ಈ ರೀತಿಯ ಡೇಟಿಂಗ್ ತುಂಬಾನೇ ಟ್ರೆಂಡ್ ಆಗಿದೆ

ಜೋಂಬೆ ಇಂಗ್
ಈ ಮೊದಲು ಗೋಸ್ಟಿಂಗ್ ಡೇಟಿಂಗ್ ಬಗ್ಗೆ ಕೇಳಿರುತ್ತೀರಾ, ಅದರ ಮತ್ತೊಂದು ರೂಪವೇ ಜೋಂಬೆ ಇಂಗ್. ಇದರಲ್ಲಿ ಡೇಟಿಂಗ್ ಮಾಡುವ ವ್ಯಕ್ತಿ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡಲ್ಲ, ಒಂದು ಫೋಟೋ ಕೂಡ ಹಾಕಲ್ಲ, ಬೇರೆ ಯಾರದೋ ಕವರ್ ಫೋಟೋ ಹಾಕಿ, ಚಾಟ್ ಮಾಡುತ್ತಿರುತ್ತಾನೆ/ಳೆ. ಈ ಬಗೆಯ ಡೇಟಿಂಗ್ ಬಗ್ಗೆ ತುಂಬಾ ಎಚ್ಚರ! ಏಕೆಂದರೆ ಮೋಸ ಹೋಗುವ ಸಾಧ್ಯತೆ ತುಂಬಾನೇ ಹೆಚ್ಚು, ಇಂಥವರ ಜೊತೆ ಚಾಟ್ ಮಾಡದಿರುವುದೇ ಜಾಣತನ.

ವೋಕ್‌ಫಿಶಿಂಗ್
ಇದು ಕೂಡ ಅಪಾಯಕಾರಿಯಾದ ಡೇಟಿಂಗ್ ಐಡಿಯಾ. ಏಕೆಂದರೆ ಇದರಲ್ಲೂ ಅಷ್ಟೇ ವ್ಯಕ್ತಿ ತನ್ನ ಗುರುತು ಮರೆಮಾಚಿರುತ್ತಾನೆ/ಳೆ. ಅವರು ಏನು ತೋರ್ಪಡಿಸುತ್ತಾರೋ ಅವರು ಹಾಗೆ ಇರಲ್ಲ, ಪ್ರಸ್ತುತ ಸೋಷಿಯಲ್ ಸಮಸ್ಯೆ ಗೊತ್ತಿರುವಂತೆ ಮಾತನಾಡುತ್ತಾರೆ. ಸುಳ್ಳು ಹೇಳುವ ಮೂಲಕ ಇಂಪ್ರೆಸ್ ಮಾಡಲು ನೋಡುತ್ತಾರೆ, ಇಂಥವರನ್ನು ನಂಬಿದರೆ ಮೋಸ ಹೋಗುವುದರಲ್ಲಿ ನೋ ಡೌಟ್.

ಬ್ರೆಡ್‌ಕ್ರಬಿಂಗ್
ಈ ವ್ಯಕ್ತಿಗಳು ತುಂಬಾನೇ ಭಿನ್ನ, ಯಾವಾಗಲೊಮ್ಮೆ ತುಂಬಾ ಚಾಟ್ ಮಾಡ್ತಾರೆ, ನಂತರ ಅವರ ಸ್ವಲ್ಪ ದಿನ ಅವರ ಅಡ್ರೆಸ್ ಇರಲಿಲ್ಲ, ಯಾವ ಕಾಂಟ್ಯಾಕ್ಟ್ ಇಲ್ಲ, ಕಾಲ್ ಮಾಡಿದರೂ ಪಿಕ್ ಮಾಡಲ್ಲ. ಸ್ವಲ್ಪ ದಿನಗಳು ಕಳೆದ ಮೇಲೆ ಮತ್ತೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ, ಏನು ಹಾಗೇ ಇಲ್ಲ ಎಂಬಂತೆ ಫ್ಲರ್ಟ್ ಮಾಡ್ತಾರೆ, ಆದರೆ ಸೀರಿಯಸ್ ಸಂಬಂಧಕ್ಕೆ ರೆಡಿ ಇರಲ್ಲ. ನೀವು ಸೀರಿಯಸ್ ಸಂಬಂಧ ನೋಡುವುದಾದರೆ ಇಂಥ ವ್ಯಕ್ತಿಗಳಿಂದ ದೂರವಿರಿ, ಇಲ್ಲದಿದ್ದರೆ ನೀವು ಅವರನ್ನು ಆಸೆಪಟ್ಟು, ಅವರು ಸಿಗದೆ ನೋವು ಅನುಭವಿಸಬೇಕು.

Hey-ter ಎಂದು ಚಾಟ್ ಪ್ರಾರಂಭಿಸುವುದಾದರೆ
ಹೇ, ದೇರ್ ಎಂದೆಲ್ಲಾ ಚಾಟ್ ಪ್ರಾರಂಭಿಸಿದರೆ ಅಂಥವರ ಜೊತೆ ಮಾತು ಪ್ರಾರಂಭ ಮಾಡದೇ ಇದ್ದರೆ ಒಳ್ಳೆಯದು. ಈ ರೀತಿ ಮಾತು ಪ್ರಾರಂಭಿಸುವವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಕಾರ್ನೊನೆಸ್ಟಿ
ಕೊರೊನಾವೈರಸ್ ಬಂದ ಮೇಲೆ ಈ ಟ್ರೆಂಡ್ ಶುರುವಾಗಿದೆ. ಲಾಕ್‌ಡೌನ್ ಬಳಿಕ ತುಂಬಾ ಜನ ಕೂಡ ಬದಲಾಗಿದ್ದಾರೆ, ಇದರಲ್ಲಿ ವ್ಯಕ್ತಿಗಳು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ತಾವ್ಯಾರು, ತಮ್ಮ ಕೆಲಸವೇನು, ತಮ್ಮ ಇಷ್ಟ-ಕಷ್ಟ ಎಲ್ಲವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಇಂಥವರನ್ನು ನಂಬಬಹುದು.
ಇನ್ನು ಸಂಬಂಧದಲ್ಲಿ ನಂಬಿಕೆ, ಪ್ರಾಮಾಣಿಕತೆ, ನಿಯತ್ತು ತುಂಬಾನೇ ಮುಖ್ಯ. ಸುಳ್ಳು ಹೇಳಿ ಸಂಬಂಧ ಮಾಡಿ ನಂತರ ಯಾವತ್ತಾದರೂ ಆ ಸುಳ್ಳು ಗೊತ್ತಾದರೆ ನಿಮ್ಮಿಬ್ಬರ ಸಂಬಂಧದಲ್ಲಿ ಅಂತರ ಬರಬಹುದು. ಅದೇ ಮೊದಲೇ ಸತ್ಯವನ್ನು ಹೇಳಿದರೆ ಯಾವುದೇ ತೊಂದರೆ ಇರಲ್ಲ, ಅವರು ನಿಮ್ಮನ್ನು ನೀವಾಗಿ ಸ್ವೀಕರಿಸುವುದರಿಂದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು.



Click it and Unblock the Notifications
