Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆಗೆ ಮೊದಲು ಹಣದ ಕುರಿತು ಈ ಮಾತುಕತೆ ಮಾಡುವುದು ತುಂಬಾನೇ ಅವಶ್ಯಕ ನೋಡಿ
ಒಂದು ಸಂಬಂಧ ಪ್ರಾರಂಭಿಸುವ ಮುನ್ನ ಒಬ್ಬರಿಗೊಬ್ಬರು ಆರ್ಥಿಕ ವಿಷಯಗಳ ಬಗ್ಗೆ ಮಾತನಾಡುವುದು ಅವಶ್ಯಕವೇ? ಎಂದು ಕೇಳುವುದಾದರೆ ಅನೇಕರಲ್ಲಿ ಗೊಂದಲವಿದೆ.

ಕೆಲವರು ಸಂಗಾತಿಯಾಗುವವರ ಬಳಿ ಹಣದ ಬಗ್ಗೆ ಮಾತುಕತೆಯಾಡುವುದು ಸರಿಯಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ನಾನು ಎಷ್ಟು ದುಡಿಯುತ್ತಿದ್ದೇನೆ, ನನ್ನ ಭವಿಷ್ಯದ ಪ್ಲ್ಯಾನ್‌ಗಳೇನು ಎಂಬುವುದನ್ನು ಮೊದಲೇ ಹಂಚಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ.
ಆದರೆ ನಮ್ಮನ್ನು ಕೇಳುವುದಾದರೆ ಮದುವೆಗೆ ಮೊದಲು ಹಣದ ಬಗ್ಗೆ ಇಬ್ಬರು ಮಾತನಾಡುವುದು ಒಳ್ಳೆಯದು ಎಂದು ಹೇಳುತ್ತೇವೆ. ಈ ಬಗ್ಗೆ ಓಪನ್ ಟಾಪ್ ನಮ್ಮ ಸಂಗಾತಿಯಾಗುವವರ ಬಗ್ಗೆ ಮತ್ತಷ್ಟು ತಿಳಿದು ಸಹಾಯ ಮಾಡುತ್ತದೆ. ಅದರಲ್ಲೂ ಮದುವೆಗೆ ಮೊದಲು ಹಣದ ಬಗ್ಗೆ ಈ ಬಗ್ಗೆಯ ಮಾತುಕತೆ ಒಳ್ಳೆಯದೇ ನೋಡಿ:
ಆದಾಯ ಎಷ್ಟಿದೆ ಎಂದು ತಿಳಿಸುವುದು
ಇಬ್ಬರು ತಮ್ಮ ಆದಾಯ ಎಷ್ಟು ಎಂದು ತಿಳಿಸುವುದು ಒಳ್ಳೆಯದು. ಈ ರೀತಿ ಹೇಳುವಾಗ ನಿಮ್ಮ ಕುಟುಂಬದ ಆಸ್ತಿ ಇವುಗಳ ಬಗ್ಗೆ ಹೇಳಬೇಡಿ. ನೀವು ಏನು ದುಡಿಯುತ್ತಿದ್ದೀರಾ ಅಷ್ಟು ಮಾತ್ರ ಹೇಳಿ.
ಪತಿಗೆ ಮದುವೆಯಾದ ಮೇಲೆ ಪತ್ನಿ ದುಡಿಯುವುದು ಒಳ್ಳೆಯದು ಅಥವಾ ನಾನು ಮಾತ್ರ ದುಡಿದರೆ ಸಾಕು ಎಂಬ ಭಾವನೆ ಇದ್ದರೆ ಮೊದಲಿಗೇ ಹೇಳುವುದು ಒಳ್ಳೆಯದು. ನಿಮಗೆ ಪತ್ನಿ ಕೆಲಸ ಮಾಡುವುದು ಬೇಡ ಎಂಬ ಭಾವನೆ ಇದ್ದು ಅವರಿಗೆ ನಾನು ಕೆಲಸಕ್ಕೆ ಹೋಗಿ ಆರ್ಥಿಕವಾಗಿ ಸ್ವತಂತ್ರಳಾಗಿರುತ್ತೇನೆ ಎಂಬ ಭಾವನೆ ಇದ್ದರೆ ಮುಂದೆ ಇದೇ ವಿಷಯಕ್ಕೆ ಮನಸ್ತಾಪ ಬರಬಹುದು. ಆದ್ದರಿಂದ ಈ ವಿಷಯಗಳನ್ನು ಮದುವೆಗೆ ಮೊದಲೇ ಚರ್ಚಿಸುವುದು ಒಳ್ಳೆಯದು.
ನಮ್ಮ ಭವಿಷ್ಯ ಪ್ಲ್ಯಾನ್ ಏನು?
ಮುಂದೆ ಏನು ಆಗುತ್ತದೆ ಎಂಬುವುದು ಯಾರಿಗೂ ಗೊತ್ತಿಲ್ಲ, ಆದರೆ ನಮ್ಮಲ್ಲಿ ಗುರಿಯೆಂಬುವುದು ಇರಬೇಕಾಗುತ್ತದೆ, ಗುರಿಯಿಲ್ಲದಿದ್ದರೆ ಅಂಥವರು ಬದುಕನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಬಹುದು. ಎಷ್ಟೋ ಕುಟುಂಬಗಳಲ್ಲಿ ಗಂಡ ದುಡಿದು ತರುತ್ತಿಲ್ಲ ಎಂಬುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಆದ್ದರಿಂದ ಈ ಕುರಿತು ಮೊದಲೇ ಮಾತನಾಡುವುದು ಒಳ್ಳೆಯದು.
ವರದಕ್ಷಿಣೆ ಬಯಸುತ್ತಿದ್ದಾರೆಯೇ?
ಹುಡುಗನ ಮನೆಯವರು ಆರ್ಥಿಕವಾಗಿ ತುಂಬಾ ಬೇಡಿಕೆ ಇಡುತ್ತಿದ್ದಾರೆಯೇ ಅಂಥವರನ್ನು ಮದುವೆಯಾಗದಿರುವುದು ಒಳ್ಳೆಯದು, ಏಕೆಂದರೆ ಮದುವೆಯಾಗಿ ಸ್ವಲ್ಪ ದಿನಗಳಲ್ಲಿ ವರದಕ್ಷಿಣೆ ಕಾಟ ಕೊಡಬಹುದು. ಆದ್ದರಿಂದ ಯಾವುದೇ ಆರ್ಥಿಕ ಬೇಡಿಗಳಿಗೆ ಬಗ್ಗದಿದ್ದರೆ ಒಳ್ಳೆಯದು. ಗಂಡ ನಮ್ಮನ್ನು ಹೇಗೆ ಸಾಕುತ್ತೇನೆ ಎಂದು ನೋಡಬೇಕೆ ಹೊರತು ನಮ್ಮಿಂದ ಹಣ ಪಡೆದು ನಮ್ಮನ್ನು ಸಾಕುವಂತಿರಬಾರದು, ಈ ಬಗ್ಗೆ ಎಚ್ಚರವಹಿಸಿ.
ಹೆಣ್ಣು ಹೆತ್ತವರು ಹುಡುಗನ ಮನೆಯವರು ಕೇಳಿದಷ್ಟು ಹಣ, ಒಡವೆ ಕೊಟ್ಟು ಮದುವೆ ಮಾಡುತ್ತಾರೆ, ನಮ್ಮ ಹುಡುಗಿ ಚೆನ್ನಾಗಿರಲಿ ತಮ್ಮ ಶಕ್ತಿ ಮೀರಿ ಕೊಟ್ಟು ಮದುವೆ ಮಾಡುತ್ತಾರೆ, ಆದರೆ ಹೀಗೆ ಮಾಡುವುದರಿಂದ ನಮ್ಮ ಮಗಳ ಭವಿಷ್ಯ ನಾವೇ ಹಾಳು ಮಾಡುತ್ತಿದ್ದೇವೆ ಎಂಬುವುದನ್ನು ಪೋಷಕರು ಅರಿಯಬೇಕಾಗಿದೆ.
ಏನಾದರೂ ಸಾಲವಿದೆಯೇ?
ಮದಿವೆಗೆ ಮೊದಲು ಏನಾದರೂ ಸಾಲವಿದೆಯೇ? ಅವುಗಳ ಬಗ್ಗೆ ಮೊದಲೇ ಮಾತುಕತೆ ನಡೆಸಿ, ನಮ್ಮ ಆರ್ಥಿಕ ಪ್ಲ್ಯಾನ್ ಏನು? ಮುಂದೆ ಹೇಗೆ ಬದುಕಬಹುದು ಈ ರೀತಿಯೆಲ್ಲಾ ಪ್ಲ್ಯಾನ್ ಮಾಡಿದರೆ ಒಳ್ಳೆಯದು.



Click it and Unblock the Notifications

