For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಗಾತಿ ಹೀಗೆ ನಡೆದುಕೊಳ್ಳುತ್ತಿದ್ದರೆ ಅವರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರ್ಥ

|

ದಾಂಪತ್ಯ ಜೀವನವೆಂದರೆ ಅಲ್ಲಿ ಹೆಣ್ಣು-ಗಂಡು ಇಬ್ಬರೂ ಮುಖ್ಯವಾಗಿರುತ್ತೆ, ಗಂಡೇ ಗ್ರೇಟ್‌ ಎಂದು ಹೇಳಲು ಸಾಧ್ಯವಿಲ್ಲ, ಇಬ್ಬರು ಸಾಮರಸ್ಯ ಜೀವನ ಸಾಗಿಸಿದರೆ ಮಾತ್ರ ದಾಂಪತ್ಯ ಸುಂದರವಾಗುವುದು.

Relationship Tips

ಕೆಲವೊಂದು ಸಂಬಂಧದಲ್ಲಿ ಹಾಗೇ ಇರುವುದಿಲ್ಲ, ಇಬ್ಬರನ್ನು ಯೂಸ್‌ ಮಾಡುತ್ತಿರುತ್ತಾರೆ, ಅದು ಹೆಣ್ಣಾಗಲಿ ಅಥವಾ ಗಂಡಾಗಲಿ ಅವರನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುತ್ತಾರೆ. ಅವರು ಆ ಮನೆಯಲ್ಲಿರಬೇಕು, ಎಲ್ಲಾ ಕೆಲಸಗಳನ್ನು ಮಾಡಲು ಅವರು ಬೇಕು, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾಗಿರುವುದಿಲ್ಲ.

ಸಂಬಂಧದಲ್ಲಿ ನಮ್ಮ ಬಳಸಿಕೊಳ್ಳುತ್ತಿದ್ದಾರೆ ಎಂಬುವುದನ್ನು ಕೆಲವೊಂದು ಲಕ್ಷಣಗಳ ಮೂಲಕ ಹೇಳಬಹುದು.

ಈ ಲಕ್ಷಣಗಳು ಸಂಬಂಧದಲ್ಲಿ ಕಂಡು ಬಂದರೆ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ಜೀವನವನ್ನು ಸದಾ ದುಃಖದಲ್ಲಿಯೇ ಕಳೆಯಬೇಕಾಗುತ್ತದೆ:

 ನೀವು ಏನೇ ಒಳ್ಳೆಯದು ಮಾಡಿದರೂ ಸಂಗಾತಿಯ ಬಾಯಿಯಿಂದ ಮೆಚ್ಚುಗೆ ನುಡಿಯಿಲ್ಲ

ನೀವು ಏನೇ ಒಳ್ಳೆಯದು ಮಾಡಿದರೂ ಸಂಗಾತಿಯ ಬಾಯಿಯಿಂದ ಮೆಚ್ಚುಗೆ ನುಡಿಯಿಲ್ಲ

ನೀವು ನಿಮ್ಮ ಸಂಗಾತಿಯ ಬೇಕು-ಬೇಡಗಳನ್ನು ತಿಳಿಕೊಂಡು ಅದರಂತೆ ವರ್ತಿಸುತ್ತಿರುತ್ತೀರ. ಅವರಿಗೆ ಹೇಗೆ ಇಷ್ಟವೋ ಹಾಗೆ ನಡೆದುಕೊಳ್ಳಲು ಪ್ರಯತ್ನಿಸುತ್ತಿರಾ.... ನಿಮ್ಮ ಪ್ರತಿಯೊಂದು ಕಾರ್ಯವನ್ನು ಅವರ ಇಷ್ಟವನ್ನು ಗಮನದಲ್ಲಿ ಒಟ್ಟುಕೊಂಡೇ ಮಾಡುತ್ತೀರ, ಆದರೆ ಅತ್ತ ಕಡೆ ಒಂದು ಮೆಚ್ಚುಗೆಯ ನುಡಿ ಬರಲ್ಲ, ಒಂದು ಚಿಕ್ಕ ತಪ್ಪಾದರೆ ನಿಮ್ಮಿಂದ ಮಹಾಪರಾಧವಾದಂತೆ ಕಿರುಚಾಡುತ್ತಾರೆ ಎಂದಾದರೆ ನಿಮ್ಮ ಬಗ್ಗೆ ಅವರಿಗೆ ಗೌರವ, ಪ್ರೀತಿಯಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.

ಏನೇ ತಪ್ಪಾದರೂ ನಿಮ್ಮಿಂದಲೇ ಆಯ್ತು ಎಂದು ಹೇಳುವುದು

ಏನೇ ತಪ್ಪಾದರೂ ನಿಮ್ಮಿಂದಲೇ ಆಯ್ತು ಎಂದು ಹೇಳುವುದು

ಯಾರು ತಪ್ಪು ಮಾಡಲ್ಲ ಹೇಳಿ, ಪ್ರತಿಯೊಬ್ಬರೂ ಮಾಡುತ್ತಾರೆ, ಆದರೆ ಏನೇ ತಪ್ಪಾದರೂ ನಿಮ್ಮಿಂದಲೇ ಆಗಿದ್ದು ಎಂದು ನಿಮ್ಮ ಮೇಲೆ ಗೂಬೆ ಕೂರಿಸುವ ಗುಣ ನಿಮ್ಮ ಸಂಗಾತಿಯಲ್ಲಿದೆಯೇ? ಒಂದೋ ನೀವು ಅವರಿಗೆ ಅವರು ಮಾಡುತ್ತಿರುವುದು ತಪ್ಪು ಎಂದು ತಿಳಿಹೇಳಿ ಅಥವಾ ನಿಮ್ಮದ್ದಲ್ಲದ ತಪ್ಪನ್ನು ಒಪ್ಪಿಕೊಳ್ಳಲು ಹೋಗಬೇಡಿ. ಎಲ್ಲಾವನ್ನು ನೀವು ಒಪ್ಪಿಕೊಳ್ಳುವುದರಿಂದ ನಿಮ್ಮನ್ನು ಬೈಯ್ಯುವ ಚಾಳಿ ಅವರು ಮುಂದುವರೆಸಿಕೊಂಡು ಹೋಗುತ್ತಾರೆ.

ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಂದ ದೂರ ಇಡುತ್ತಿದ್ದಾರೆ ಎಂದಾದರೆ

ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಂದ ದೂರ ಇಡುತ್ತಿದ್ದಾರೆ ಎಂದಾದರೆ

ಅವರಿಗೆ ನೀವು ನಿಮ್ಮ ಕುಟುಂಬದವರ ಜೊತೆ ಇರುವುದು ಇಷ್ಟವಾಗಲ್ಲ, ನಿಮ್ಮ ಫ್ರೆಂಡ್‌ ಸರ್ಕಲ್ ಕಂಡ್ರೆ ಆಗಲ್ಲ. ಸದಾ ಅವನ, ಅವನ ಮನೆಯ ಕೆಲಸಗಳನ್ನು ಮಾತ್ರ ಮಾಡುತ್ತಾ ನೀವು ನಿಮ್ಮ ಜೀವನ ಕಳೆಯಬೇಕು ಎಂದು ಬಯಸುತ್ತಿದ್ದರೆ ನಿಮ್ಮನ್ನು ಯೂಸ್‌ ಮಾಡುತ್ತಿದ್ದಾನೆ ಎಂದು ಹೇಳಬಹುದು. ನಿಮ್ಮ ಭಾವನೆಗಳಿಗೆ ಗೌರವ ಕೊಡುವುದಾದರೆ ಖಂಡಿತ ಈ ರೀತಿ ನಡೆದುಕೊಳ್ಳಲ್ಲ.

ನಿಮ್ಮ ಅಭಿಪ್ರಾಯ ಹೇಳಲು ನೀವು ಬಯಪಡುವುದಾದರೆ

ನಿಮ್ಮ ಅಭಿಪ್ರಾಯ ಹೇಳಲು ನೀವು ಬಯಪಡುವುದಾದರೆ

ಕೆಲವೊಂದು ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಹೇಳಬೇಕೆಂದು ಅನಿಸುತ್ತಿರುತ್ತಿರುತ್ತದೆ, ಆದರೆ ನಾನೇದರೂ ಹೇಳಿದರೆ ಎಲ್ಲಿ ಜೋರು ಜಗಳವಾಗುತ್ತೋ ಎಂಬ ಭಯದಲ್ಲಿ ನೀವು ಸುಮ್ಮನಾಗುತ್ತಿದ್ದರೆ ನೀವು ಎಂಥ ಸಂಬಂಧದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ ಎಂದು ಯೋಚಿಸುವುದು ಒಳ್ಳೆಯದು.

ಆರ್ಥಿಕವಾಗಿ ಸ್ವತಂತ್ರಳಲ್ಲ

ಆರ್ಥಿಕವಾಗಿ ಸ್ವತಂತ್ರಳಲ್ಲ

ಹೆಚ್ಚಿನ ಗೃಹಿಣಿಯರು ಯೂಸ್ಡ್‌ ರಿಲೇಷನ್‌ಶಿಪ್‌ನಲ್ಲಿ ಇರಲು ಕಾರಣ ಅವರು ಆರ್ಥಿಕವಾಗಿ ಸ್ವತಂತ್ರರಾಗಿರಲ್ಲ. ಗಂಡ ನನ್ನ ಬಿಟ್ಟರೆ ನನಗೆ ಯಾರು ಗತಿ, ಮಕ್ಕಳನ್ನು ಸಾಕುವುದು ಹೇಗೆ? ನಾನು ಬದುಕುವುದು ಹೇಗೆ ಎಂಬ ಭಯದಲ್ಲಿಯೇ ತನ್ನ ಗೌರವಿಸಿದ, ತನಗೆ ಹಿಂಸೆ ನೀಡುವ ಪತಿ ಜೊತೆ ಇರುತ್ತಾಳೆ. ಆದ್ದರಿಂದ ಹೆಣ್ಣಿಗೆ ಆರ್ಥಿಕ ಸ್ವತಂತ್ರ ಎಂಬುವುದು ಒಂದು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ದೃಷ್ಟಿಯಿಂದ ತುಂಬಾನೇ ಮುಖ್ಯವಾಗುತ್ತೆ.

 ಸಂಬಂಧ ಉಳಿಸಲು ನೀವಷ್ಟೇ ಪ್ರಯತ್ನ ಮಾಡುತ್ತಿದ್ದಾರೆ

ಸಂಬಂಧ ಉಳಿಸಲು ನೀವಷ್ಟೇ ಪ್ರಯತ್ನ ಮಾಡುತ್ತಿದ್ದಾರೆ

ಅವರು ನೀವು ಅವರ ಜೊತೆಗೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬಂತೆ ವರ್ತಿಸುತ್ತಿದ್ದು, ನೀವು ಮಾತ್ರ ನನಗೆ ಅವರೇ ಬೇಕು ಎಂದು ಬದುಕುತ್ತಿದ್ದರೆ ಅಂಥ ಸಂಬಂಧದಲ್ಲಿ ನಿಜವಾಗಲೂ ನಿಮಗೆ ಖುಷಿ ಸಿಗಲು ಸಾಧ್ಯವೇ? ಸುಮ್ಮನೆ ಕನಸಿನ ಗೋಪುರ ಕಟ್ಟಿ ನನ್ನ ಬದುಕು ನಾಳೆ ಸರಿಹೋಗಬಹುದು ಎಂದು ದಿನ ದೂಡುತ್ತಿರುತ್ತಾರೆ, ಆದರೆ ಆ ನಾಳೆ ಎಂಬುವುದು ಬರುವುದೇ ಇಲ್ಲ..

 ಸಂಗಾತಿಯಿಂದ ರಹಸ್ಯಗಳನ್ನು ಮುಚ್ಚಿಡಲಾರಂಭಿಸುತ್ತೀರಿ

ಸಂಗಾತಿಯಿಂದ ರಹಸ್ಯಗಳನ್ನು ಮುಚ್ಚಿಡಲಾರಂಭಿಸುತ್ತೀರಿ

ನಿಮ್ಮ ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಲ್ಲ, ಅವರು ಮಾತು ಅಂತ ಆಡಿದರೆ ಅದು ಜೋರು ಮಾಡಲು ಅಥವಾ ಯಾವುದಾದರೂ ಕೆಲಸಗಳನ್ನು ಸೂಚಿಸಲು ಆಗಿರುತ್ತದೆ ಎಂದಾರೆ ನೀವು ಕ್ರಮೇಣ ಹಲವಾರು ವಿಷಯಗಳನ್ನು ಅವರಿಂದ ಮುಚ್ಚಿಡಲಾರಂಭಿಸುತ್ತೀರಿ. ನಿಮ್ಮ ಸ್ನೇಹಿತರ ಬೆರೆಯುವುದು ಅವರಿಗೆ ಇಷ್ಟವಿರಲ್ಲ, ನಿಮ್ಮ ಸ್ನೇಹಿತರು ಕರೆ ಮಾಡಿದರೆ ಅದರ ಬಗ್ಗೆ ಹೇಳಲ್ಲ, ಹೀಗೆ ಅವರಿಗೆ ಭಯಪಟ್ಟು ನೀವು ಸಾಕಷ್ಟು ವಿಷಯಗಳನ್ನು ಅವರಿಂದ ಮುಚ್ಚಿಡಲು ಪ್ರಾರಂಭಿಸಿದರೆ ನಿಮ್ಮದು ಆರೋಗ್ಯಕರ ಸಂಬಂಧವಲ್ಲ ಎಂದು ಹೇಳಬಹುದು.

ಅವರ ಅಗ್ಯತಗಳನ್ನು ಪೂರೈಸುವ ಕೆಲಸಗಾರರು ನೀವು ಎಂಬಂತೆ ಸಂಗಾತಿಯ ವರ್ತನೆಯಿದ್ದರೆ

ಅವರ ಅಗ್ಯತಗಳನ್ನು ಪೂರೈಸುವ ಕೆಲಸಗಾರರು ನೀವು ಎಂಬಂತೆ ಸಂಗಾತಿಯ ವರ್ತನೆಯಿದ್ದರೆ

ಅವರಿಗೆ ಬೇಜಾದಂತೆ ಅಡುಗೆ ಮಾಡಿ ಹಾಕುವುದು, ಅವರ ಬಟ್ಟೆ ಬರೆಗಳನ್ನು ಸ್ವಚ್ಛವಾಗಿಡುವುದು, ಅವರ ಎಲ್ಲಾ ಕೆಲಸಗಳನ್ನು ಮಾಡುವ ಕೆಲಸದ ಆಳಿನಂತೆ ವರ್ತಿಸುತ್ತಿದ್ದರೆ ನೀವು ಯೂಸ್ಡ್‌ ರಿಲೇಷನ್‌ಶಿಪ್‌ನಲ್ಲಿದ್ದೀರ ಎಂದು ಹೇಳಬಹುದು.

ಈ ರೀತಿಯ ಸಂಬಂಧದಲ್ಲಿದ್ದರೆ ನಾನು ಯಾವುದಕ್ಕೂ ಪ್ರಯೋಜನವಿಲ್ಲ, ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಭಾವನೆ ಮೂಡಿ ಖಿನ್ನತೆಗೆ ಜಾರುವಿರಿ. ಆದ್ದರಿಂದ ನಿಮಗೆ ಗೌರವ, ಪ್ರೀತಿ ಸಿಗದ ಸಂಬಂಧದಲ್ಲಿ ಬಾಳುವುದಕ್ಕಿಂತ ಅದರಿಂದ ಹೊರಬಂದು ಇನ್ನುಳಿದ ಜೀವನದ ಚೆಂದವಾಗಿ ರೂಪಿಸಿಕೊಳ್ಳಿ. ಇಲ್ಲಿ ನಿಮ್ಮ ಸಂಸಾರ ಒಡೆಯುವ ಮಾತನಾಡುತ್ತಿಲ್ಲ, ಆದರೆ ಯೂಸ್ಡ್‌ ಸಂಬಂಧದಲ್ಲಿ ಸಂಸಾರ ಒಡೆದಿರುತ್ತದೆ, ತೋರಿಕೆಯ ಸಂಬಂಧದಲ್ಲಿ ಇರುತ್ತೀರ ಅಷ್ಟೇ....

English summary

Signs You’re Being Used in a Relationship in Kannada

Relationship Tips: If you are seeing these signs you are being used in relationship, read on..
Story first published: Wednesday, January 4, 2023, 14:02 [IST]
X
Desktop Bottom Promotion