Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ನಲ್ಲಿ ಅನೈತಿಕ ಸಂಬಂಧ ಹೆಚ್ಚಾಗಿವೆಯೇ?
ಕೊರೊನಾವೈರಸ್‌ನಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಎಲ್ಲಿಯೂ ಓಡಾಡುವಂತಿಲ್ಲ, ಮನೆಯಿಂದ ಹೊರಗಡೆ ಹೋಗುವಂತೆ ಇಲ್ಲ. ಜನರು ಹೊರಗಡೆ ಅಗ್ಯತ ವಸ್ತುಗಳನ್ನು ತರಲು ಹೋಗುವುದಾದರೆ 3 ಮಾರು ಅಂತ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.

ದೇಶದಲ್ಲಿ ಕೊರೊನಾಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿವೆ. ಜನರು ಮನೆಯೊಳಗಿಯೇ ಬಂದಿಯಾಗಿದ್ದಾರೆ. ತಮಾಷೆಯ ವಿಷಯವೆಂದರೆ ಮನೆಯಲ್ಲಿ ಕುಟುಂಬದ ಜೊತೆಗೆ ಕಳೆಯಲು ಹೆಚ್ಚಿನ ಸಮಯ ಸಿಗುತ್ತಿದ್ದರೂ, ಈ ಸಮಯದಲ್ಲಿ ಅನೈತಿಕ ಸಂಬಂಧ ಹೆಚ್ಚಾಗುತ್ತಿದೆಯಂತೆ.
ಲಾಕ್‌ಡೌನ್ ಆಗಿ ಮನೆಯಲ್ಲಿರುವವರು ತಮ್ಮ ಟೈಮ್ ಪಾಸ್‌ಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಜೊತೆಯಾಗಿ ಅಡುಗೆ ಮಾಡುವುದು, ಹಾವು-ಏಣಿ, ಲುಡ, ಕೇರಂ ಮುಂತಾದ ಮನೆಯೊಳಗಿನ ಆಟ ಆಡುತ್ತಿದ್ದಾರೆ. ಇನ್ನು ಕೆಲವರು ಸಮಯವನ್ನು ಒಳ್ಳೆಯದಾಗಿ ಕಳೆಯುವುದು ಬಿಟ್ಟು ಡೇಟಿಂಗ್ ಆ್ಯಪ್ , ಎಕ್ಸ್‌ಟ್ರಾಮೆರೈಟಲ್ ಡೇಟಿಂಗ್ ಆ್ಯಪ್ ಬಳಸುತ್ತಾ ಕಾಲ ಕಾಳೆಯುತ್ತಿದ್ದರೆ.

ಗ್ಲೀಡೆನ್ ಸ್ಟೇಟ್‌ಮೆಂಟ್
ಗ್ಲೀಡೆನ್ (Gleeden)ಈ ಸ್ಟೇಟ್‌ಮೆಂಟ್ ನೀಡಿದ್ದು ಅನೈತಿಕ ಸಂಬಂಧ ಆ್ಯಪ್‌ನ ಸಬ್‌ಸ್ಕ್ರೈಬರ್ ಶೇ.70ರಷ್ಟು ಹೆಚ್ಚಾಗಿದೆ ಎಂದಿದೆ. ಇದೀಗ ಜನರಿಗೆ ಸಂಪರ್ಕಕ್ಕೆ ಇರುವುದು ಫೋನ್, ಆನ್‌ಲೈನ್ಗಳು ಮಾತ್ರ. ಮಾಡಲು ಹೆಚ್ಚೇನು ಕೆಲಸವಿರುವುದಿಲ್ಲ, ಟೈಮ್‌ಪಾಸ್‌ಗಾಗಿ ಇಂಥ ಆ್ಯಪ್ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.
ಡೇಟಿಂಗ್ ಆ್ಯಪ್‌ಗಳಿಂದ ಸಂಸಾರ ಹಾಳಾಗದಿರಲಿ
ತಮಾಷೆಗಾಗಿಯೋ, ಟೈಮ್ ಪಾಸ್‌ಗಾಗಿಯೂ ಇಂಥ ಆ್ಯಪ್‌ಗಳ ಮೊರೆ ಹೋದವರು ಆದಷ್ಟು ಬೇಗ ಅದರಿಂದ ಹೊರ ಬಂದರೆ ಒಳ್ಳೆಯದು. ಇಲ್ಲದಿದ್ದರೆ ಸಂಗಾತಿಗೆ ಈ ವಿಷಯ ತಿಳಿದರೆ ಸಂಸಾರದಲ್ಲಿ ದೊಡ್ಡ ಕಂದಕವೇ ಉಂಟಾಗುವುದು. ಸುಮ್ಮನೆ ಪತಿ-ಪನ್ನಿ ನಡುವೆ ಕಲಹ ಉಂಟಾಗುವುದು. ಇನ್ನು ಆನ್‌ಲೈನ್‌ನಲ್ಲಿ ಈ ರೀತಿಯ ಡೇಟಿಂಗ್ ಆ್ಯಪ್‌ಗಳಿಂದಾಗಿ ಮುಂದೆ ಅನೈತಿಕ ಸಂಬಂಧದ ಸುಳಿಗೆ ಸಿಕ್ಕುವ ಸಾಧ್ಯತೆ ಇದೆ. ಇದರಿಂದ ನೆಮ್ಮದಿಯಾಗಿದ್ದ ಸಂಸಾರ ಹಾಳಾಗುವುದು.

ಹನಿಟ್ರ್ಯಾಪ್ ಮಾಡುವ ಸಾಧ್ಯತೆ ಇದೆ
ಈ ರೀತಿಯ ಡೇಟಿಂಗ್ ಆ್ಯಪ್ ಬಳಸುವುದರಿಂದ ನೀವು ಚಾಟ್ ಮಾಡುತ್ತಿರುವ ನಿಜ ಮುಖದ ಪರಿಚಯವಿರುವುದಿಲ್ಲ. ಅವರ ಮಾತಿನ ಮೋಡಿಗೆ ಬಲಿಯಾಗಿ ಅವರೊಂದಿಗೆ ಮಾತನಾಡುತ್ತಾ ಸಮಯ ಕಳೆಯುತ್ತಾ ಮುಂದೆ ಹನಿಟ್ರ್ಯಾಪ್‌ಗೆ ಒಳಗಾಗುವ ಸಾಧ್ಯತೆ ಇದೆ. ಇನ್ನು ಆನ್‌ಲೈನ್ ಸ್ನೇಹ ಎಷ್ಟೆಲ್ಲಾ ಅನಾಹುತಗಳನ್ನು ತಂದಿವೆ ಎಂಬ ಅನೇಕ ಕತೆಗಳನ್ನು ಕೇಳಿರುತ್ತೀರಿ. ಆದ್ದರಿಂದ ಎಚ್ಚೆತ್ತುಕೊಳ್ಳಿ.

ಪಾಸಿಟಿವ್ ಆಗಿ ಸಮಯ ಕಳೆಯಿರಿ
ಈ ಸಮಯದಲ್ಲಿ ಟೈಮ್‌ಪಾಸ್ ಮಾಡುವುದು ಹೇಗೆ ಎಂದು ಚಿಂತೆ ಮಾಡದೆ ಎಷ್ಟು ಖುಷಿಯಾಗಿ ಕಳೆಯಬಹುದೆಂದು ಯೋಚಿಸಿ. ಸದಾ ಕೆಲಸದ ಬ್ಯುಸಿಯಲ್ಲಿ ಮನೆಯವರಿಗೆ ಸಮಯ ಕೊಡಲು ಸಾಧ್ಯವಾಗದವರಿಗೆ ಮನೆಯವರೊಂದಿಗೆ ಸಮಯ ಕಳೆಯಲು ಇದೊಂದು ಒಳ್ಳೆಯ ಅವಕಾಶ ಎಂದು ತಿಳಿಯಿರಿ. ಅಡುಗೆ, ಕ್ರಾಫ್ಟ್ ಏನಾದರೂ ಹೊಸತನ್ನು ಕಲಿಯಿರಿ. ಈ ಸಮಯವನ್ನು ನಿಮ್ಮ ಕೆಲಸದ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಳಸಿ. ನಿಮಗೆ ಬೇಕಾದ ಮಾಹಿತಿಯನ್ನು ಕಲೆಹಾಕಿ.

ಸ್ನೇಹಿತರಿಗೆ ಕರೆ ಮಾಡಿ
ಸೋಷಿಯಲ್ ಮೀಡಿಯಾದಲ್ಲಿ ನೀವು ನೋಡಿರಬಹುದು. ಈ ಸಮಯವನ್ನು ಕೆಲವರು ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅನೇಕ ಸೋಷಿಯಲ್ ಮೀಡಿಯಾ ಚಾಲೆಂಜ್‌ಗಳು ಸ್ನೇಹಿತರಿಂದ ಬರ್ತಾ ಇದೆ. ಅದನ್ನು ಸ್ವೀಕರಿಸಿ, ತಾವೂ ಇತರರಿಗೆ ಚಾಲೆಂಜ್ ಮಾಡುವುದು, ಜೊತೆಗೆ ಓದಿದ್ದ ಸ್ನೇಹಿತರಿಗೆ ಕರೆ ಮಾಡಿ ಮಾತನಾಡುವುದು, ವಾಟ್ಸಾಪ್ ಗ್ರೂಪ್ ಮಾಡಿ ಹಳೆಯ ಸವಿ ನೆನಪನ್ನು ಹಂಚಿಕೊಳ್ಳುವುದು ಮಾಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ಖುಷಿ ಸಿಗುವುದು ಮಾತ್ರವಲ್ಲ, ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.

ಸಿನಿಮಾ ನೋಡುವುದು, ಪುಸ್ತಕ ಓದುವುದು ಮಾಡಿ
ದಂಪತಿ ಸಮಯವನ್ನು ರೊಮ್ಯಾಂಟಿಕ್ ಆಗಿ ಕಳೆಯಲು ಬಯಸುವುದಾದರೆ ಜೊತೆಗೆ ಕುಳಿತು ಸಿನಿಮಾ ನೋಡುವುದು, ಜೊತೆಯಾಗಿ ನಿಮ್ಮ-ನಿಮ್ಮ ಮೆಚ್ಚಿನ ಲೇಖಕರ ಪುಸ್ತಕ ಓದುವುದು, ಮ್ಯೂಸಿಕ್ ಕೇಳುವುದು ಮಾಡಬಹುದು. ಇದರಿಂದ ಮನಸ್ಸಿಗೆ ಖುಷಿ ಸಿಗುವುದು, ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಿಸಲು ಒಂದು ಒಳ್ಳೆಯ ಅವಕಾಶ, ಜೊತೆಗೆ ಜ್ಞಾನವೂ ಹೆಚ್ಚುವುದು.



Click it and Unblock the Notifications











