Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿರಿಯರಲ್ಲಿ ಖಿನ್ನತೆ ದೂರಮಾಡಲು ಟಿಪ್ಸ್
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ ಎಲ್ಲಾ ವಯೋಮಾನದ ಸುಮಾರು 350 ಮಿಲಿಯನ್ ಮಂದಿಯನ್ನು ಖಿನ್ನತೆ ಸಮಸ್ಯೆ ಕಾಡುತ್ತಿದೆ. ಖಿನ್ನತೆಯಿಂದ ಹೊರಬರುವುದು ಬಹಳ ಕಷ್ಟ. ಅದರಲ್ಲೂ ಮುಖ್ಯವಾಗಿ ನಿಮ್ಮ ಕುಟುಂಬದಲ್ಲಿ ಹಿರಿಯರು ಯಾರಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತ ಅವರನ್ನು ಖಿನ್ನತೆಯಿಂದ ವಿಮುಖರನ್ನಾಗಿಸುವುದು ಅಷ್ಟು ಸುಲಭದ ಕೆಲಸವಲ್ಲ.

ನಾವಿಲ್ಲಿ ಹಿರಿಯರು ಖಿನ್ನತೆಯಿಂದ ಬಳಲುತ್ತಿದ್ದರೆ ಹೇಗೆ ಅದರಿಂದ ಹೊರಬರಬಹುದು ಎಂಬ ಬಗ್ಗೆ ಕೆಲವು ಪ್ರಯೋಜನಕಾರಿ ಸಲಹೆಗಳನ್ನು ನೀಡುತ್ತಿದ್ದೇವೆ. ಪ್ರಮುಖವಾಗಿ ಈ ಸಲಹೆಗಳು ನಿಮಗೆ ಬಹಳ ಉಪಕಾರಿಯಾಗಿರುತ್ತದೆ.

ನಿದ್ದೆಯ ಸಮಸ್ಯೆಗೆ ಚಿಕಿತ್ಸೆ
ಹೆಚ್ಚಿನ ಹಿರಿಯರು ಅದರಲ್ಲೂ ಮುಖ್ಯವಾಗಿ ಏಕಾಂಗಿಯಾಗಿ ವಾಸಿಸುತ್ತಿರುವವರು ನಿದ್ದೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಮತ್ತು ಇದು ಖಿನ್ನತೆಯನ್ನುಂಟು ಮಾಡುತ್ತದೆ. ಹಿರಿಯರು ಖಿನ್ನತೆಯಿಂದ ಬಳಲುವುದನ್ನು ತಪ್ಪಿಸುವುದಕ್ಕಾಗಿ ಮುಖ್ಯವಾಗಿ ಅವರಿಗೆ ನಿಯಮಿತವಾಗಿ ನಿದ್ರಿಸುವಂತೆ ಮಾಡಬೇಕು. ಹಗಲಿನಲ್ಲಿ ನಿದ್ರಿಸಿ, ರಾತ್ರಿಯ ವೇಳೆ ಎಚ್ಚರವಿರುವುದನ್ನು ತಪ್ಪಿಸಬೇಕು.
ಒಂದು ವೇಳೆ ವ್ಯಕ್ತಿಯು ಸನ್ಡೌನಿಂಗ್ (ಹಗಲುನಿದ್ದೆ) ಅಥವಾ ನಿದ್ದೆಯ ಇತರೆ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ ಅವರು ಬೇರೆಬೇರೆ ಚಟುವಟಿಕೆಗಳಲ್ಲಿ ತಲ್ಲೀನರಾಗುವಂತೆ ಮಾಡಬೇಕು ಮತ್ತು ಅಗತ್ಯ ಚಿಕಿತ್ಸೆಯ ಮೂಲಕ ನಿದ್ದೆಯ ಸಮಸ್ಯೆಯನ್ನು ದೂರ ಮಾಡಿದರೆ ಖಿನ್ನತೆಯಿಂದಲೂ ಕೂಡ ದೂರವಾಗಲು ಸಾಧ್ಯ.

ಉತ್ತೇಜಿಸಿ
ಜೀವನದ ಉದ್ದೇಶವನ್ನು ಕಳೆದುಕೊಂಡಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಖಿನ್ನತೆ ಸಮಸ್ಯೆ ಇರುತ್ತದೆ. ಏಕಾಂಗಿತನ ಮತ್ತು ಸಂಸಾರದಲ್ಲಿ ಖುಷಿಯಾಗಿ ಇರುವುದಕ್ಕಾಗಿ ತೋಟಗಾರಿಕೆ ಅಥವಾ ಕರಕುಶಲ ವಸ್ತುಗಳ ತಯಾರಿಕೆಯಂತಹ ಕೆಲಸದಲ್ಲಿ ಭಾಗಿಯಾಗಲು ಹೇಳಿ.
ಯೋಗ, ಕಾರ್ಡ್ ಆಡುವುದು ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಬ್ಯುಸಿಯಾಗಿದ್ದರೆ ಜೀವನಕ್ಕೊಂದು ಅವರಿಗೆ ಅರ್ಥ ಸಿಕ್ಕಂತಾಗುತ್ತದೆ ಮತ್ತು ಆ ಮೂಲಕ ನಾನು ಜೀವನದಲ್ಲಿ ಬದುಕಿರುವುದು ಯಾವುದೋ ಉದ್ದೇಶಕ್ಕೆ ಎಂಬ ಭಾವನೆ ಮೂಡುತ್ತದೆ. ಆ ಮೂಲಕ ಖಿನ್ನತೆಯಿಂದ ಹೊರಬರುವುದಕ್ಕೆ ಸಾಧ್ಯವಾಗುತ್ತದೆ.

ಸಾಮಾಜಿಕ ಸಂವಹನ ಪ್ರೋತ್ಸಾಹಿಸಿ
ತಮ್ಮಷ್ಟಕ್ಕೇ ತಾವೇ ಖಿನ್ನತೆಗೆ ಒಳಗಾಗಲು ನಿಮ್ಮವರನ್ನು ಬಿಡಬೇಡಿ. ಸ್ನೇಹಿತರು, ಕುಟುಂಬ ಸದಸ್ಯರನ್ನು ಭೇಟಿ ಯಾಗಲು ಅವರನ್ನು ಪ್ರೋತ್ಸಾಹಿಸಿ. ಗುಂಪಿನೊಂದಿಗೆ ಔಟಿಂಗ್ ಹೋಗುವುದು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ.
ಸಕ್ರಿಯವಾಗಿ ಸಾಮಾಜಿಕ ಜೀವನದಲ್ಲಿ ತೊಡಗಿಕೊಳ್ಳುವುದರಿಂದಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಿದೆ ಎಂಬುದನ್ನು ಅಧ್ಯಯನವೇ ಬಹಿರಂಗ ಪಡಿಸಿದೆ. ಇದು ಮುಖ್ಯವಾಗಿ ಹಿರಿಯರಲ್ಲಿ ಒಂಟಿತನ ಮತ್ತು ಖಿನ್ನತೆಯನ್ನು ದೂರ ಮಾಡುವುದಕ್ಕೆ ಸಹಕಾರಿಯಾಗಿದೆ.

ದೈಹಿಕವಾಗಿ ಸಕ್ರಿಯರಾಗಿರಿ
ವಯಸ್ಸಾದವರಿಗೆ ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಅವರ ಜೀವರಕ್ಷಕವಾಗುತ್ತದೆ ಎಂಬುದನ್ನು ಸಂಶೋಧನೆಯೇ ಹೇಳಿದೆ. ನಿಧಾನಗತಿಯ ವ್ಯಾಯಾಮಗಳು ಉದಾಹರಣೆಗೆ ನಡೆದಾಡುವುದು, ಮೆಟ್ಟಿಲು ಹತ್ತುವುದು ಮತ್ತು ವಯಸ್ಸಿಗೆ ತಕ್ಕ ಕೆಲವು ವ್ಯಾಯಾಮಗಳು ಹಿರಿಯರಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ.
ಗುಂಪಿನೊಂದಿಗೆ ಕ್ಲಾಸ್ ನಲ್ಲಿ ವಾಯ್ಯಾಯ ಮಾಡುವುದಕ್ಕೂ ಕೂಡ ಹಿರಿಯರನ್ನು ನೀವು ಪ್ರೋತ್ಸಾಹಿಸಬಹುದು. ಉದಾಹರಣೆಗೆ ಯೋಗ, ಥೈ-ಸಿ ಇತ್ಯಾದಿಗಳಿಂದಾಗಿ ಸಮಾನ ಮನಸ್ಸಿನ ಗೆಳೆಯರನ್ನು ಕೂಡ ಹೊಂದಬಹುದು.

ಆರೋಗ್ಯಯುತವಾದ ಆಹಾರ ಸೇವನೆ
ವಯಸ್ಸಾದ ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿರುವುದು ನಿಮಗೆ ತಿಳಿದಿದ್ದರೆ ಅವರಿಗೆ ಎಂತಹ ಆಹಾರ ಸೇವನೆ ಮಾಡಬೇಕು ಎಂಬುದನ್ನು ನೀವು ಅರಿತಿರುವುದು ಒಳ್ಳೆಯದು. ಉತ್ತಮ ಆಹಾರ ಸೇವನೆಯಿಂದ ಕೂಡ ಖಿನ್ನತೆಯಿಂದ ಹೊರಬರಲು ಸಾಧ್ಯ.
ಫೈಬರ್ ಅಧಿಕವಾಗಿರುವ ಆಹಾರಗಳು ಉದಾಹರಣೆಗೆ ಹಣ್ಣುಗಳು ಮತ್ತು ತರಕಾರಿಗಳು ಹಿರಿಯರಿಗೆ ಬಹಳ ಮುಖ್ಯ. ಕಾಳುಗಳು ಕೂಡ ಉತ್ತಮ ಪ್ರೋಟೀನ್ ನ್ನು ಒದಗಿಸುತ್ತದೆ. ಲಘುವಾಗಿ ಬೇಯಿಸಿದ ತರಕಾರಿಗಳು. ಕಡಿಮೆ ಸಕ್ಕರೆ ಅಂಶ,ಪಿಷ್ಟ ಮತ್ತು ಅನಾರೋಗ್ಯಕಾರಿ ಕೊಬ್ಬಿನಾಂಶವು ಆಹಾರದಲ್ಲಿ ಇಲ್ಲದೇ ಇದ್ದರೆ ಬಹಳ ಒಳ್ಳೆಯದು.



Click it and Unblock the Notifications