Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮದುವೆಯಾಗದೆ ಇರುವ ಮಹಿಳೆಯರು ಹೆಚ್ಚು ಸಂತೋಷವಾಗಿರುತ್ತಾರಂತೆ!
ನವಯುಗದ ನಾರಿಯರು ಇಂದಿನ ದಿನಗಳಲ್ಲಿ ಹೆಚ್ಚಾಗಿ ತಮ್ಮ ವೃತ್ತಿಯ ಕಡೆ ಗಮನಹರಿಸಲು ಬಯಸುವರು. ಹೀಗಾಗಿ ಅವರು ತಮ್ಮ ಮದುವೆಯನ್ನು ವಿಳಂಬಗೊಳಿಸುವರು. ಇನ್ನು ಕೆಲವರು ಮದುವೆಯಾಗದೆ ಹಾಗೆ ಇರುವರು. ಇಲ್ಲಿ ಮುಖ್ಯವಾಗಿರುವಂತಹ ಅಂಶವೆಂದರೆ ಮದುವೆ ಹಾಗೂ ಮದುವೆ ಬಳಿಕ ಮಕ್ಕಳನ್ನು ಪಡೆಯದೆ ಇರುವಂತಹ ಮಹಿಳೆಯರು ತುಂಬಾ ಸಂತೋಷವಾಗಿರುತ್ತಾರೆ ಎಂದು ವರದಿಗಳು ಹೇಳಿವೆ. ಮದುವೆಯಾಗಿರುವಂತಹ ಮಹಿಳೆಯರಿಗಿಂತ ಹೆಚ್ಚು ಒಂಟಿ ಮಹಿಳೆಯರು ಸಂತೋಷವಾಗಿರುವರು ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅಧ್ಯಯನ
ಅಮೆರಿಕನ್ ಟೈಮ್ ಯೂಸ್ ಸರ್ವೇ(ಎಟಿಯುಎಸ್) ನಡೆಸಿರುವಂತಹ ಸಮೀಕ್ಷೆಯಲ್ಲಿ ಸಂತೋಷ ಮತ್ತು ದುಃಖದ ಮಟ್ಟವನ್ನು ಮದುವೆಯಾದ, ಮದುವೆಯಾಗದ, ವಿಚ್ಛೇದಿತ, ಮತ್ತು ವಿಚ್ಛೇದಿತ ಒಂಟಿ ಮಹಿಳೆಯರಲ್ಲಿ ಪರೀಕ್ಷೆ ಮಾಡಿ ನೋಡಲಾಯಿತು.
ಕಂಡುಕೊಂಡ ವಿಚಾರ
ಆಸಕ್ತಿದಾಯಕ ವಿಚಾರವೆಂದರೆ ಮದುವೆಯಾಗಿರುವಂತಹ ಮಹಿಳೆಯರಲ್ಲಿ ಅವರ ಸಂಗಾತಿ ಎದುರು ಇಂತಹ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ಅವರು ತುಂಬಾ ಸಂತೋಷವಾಗಿ ಇರುತ್ತಾರೆ ಎಂದು ಹೇಳುವರು. ಮದುವೆಯಾಗಿರುವ ಜನರಿಗಿಂತ ಮದುವೆಯಾಗದೆ ಇರುವಂತಹ ಜನರಲ್ಲಿ ಸಂಕಷ್ಟಗಳು ತುಂಬಾ ಕಡಿಮೆ ಎನ್ನಬಹುದು.
ತಜ್ಞರು ಏನು ಹೇಳುತ್ತಾರೆ...
ಲಂಡನ್ ನ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪ್ರಾಧ್ಯಾಪಕರಾಗಿರುವ ಪೌಲ್ ಡಾಲನ್ ಹೇಳುವ ಪ್ರಕಾರ, ಪುರುಷರಿಗೆ ಮದುವೆ ಬಳಿಕ ಲಾಭವಾಗುತ್ತದೆ ಮತ್ತು ಮಹಿಳೆಯರು ಮದುವೆಗಿಂತ ಮೊದಲು ತುಂಬಾ ಸಂತೋಷವಾಗಿ ಇರುವರು.
ಪುರುಷರಿಗೆ ಮದುವೆಯಿಂದ ಲಾಭ
ಪುರುಷರು ಮದುವೆಯ ಬಳಿಕ ತುಂಬಾ ಶಾಂತರಾಗುವರು, ಕಡಿಮೆ ಅಪಾಯ ಎದುರಿಸುವರು, ಹೆಚ್ಚು ಆದಾಯ ಪಡೆಯುವರು ಮತ್ತು ದೀರ್ಘಕಾಲ ಬದುಕುವರು ಎಂದು ಡಾಲನ್ ಅವರು ತಮ್ಮ ಅಧ್ಯಯನ ವರದಿಯಲ್ಲಿ ಹೇಳಿರುವರು.
ಮಹಿಳೆಯರು ಬಗ್ಗೆ ಏನು?
ಮಹಿಳೆಯರ ಬಗ್ಗೆ ಹೇಳುವುದಾದರೆ ಮದುವೆಯಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮತ್ತು ಮದುವೆಯಾಗದೆ ಇದ್ದರೆ ಅಥವಾ ಮಕ್ಕಳನ್ನು ಪಡೆಯದೆ ಇದ್ದರೆ ಆಗ ಅವರು ತುಂಬಾ ಸಂತೋಷ ಹಾಗೂ ಆರೋಗ್ಯವಾಗಿ ಇರುವರು.
ಅಧ್ಯಯನಗಳು ಏನು ಸಲಹೆ ನೀಡುತ್ತದೆ..
ಮಾರುಕಟ್ಟೆ ಗುಪ್ತಚರ ಕಂಪೆನಿಯೊಂದು ನಡೆಸಿರುವಂತಹ ಅಧ್ಯಯನದ ಪ್ರಕಾರ ಮದುವೆಯಾಗದೆ ಇರುವಂತಹ ಮಹಿಳೆಯರು ತುಂಬಾ ಸಂತೋಷವಾಗಿ ಇರುವರು. ಇದನ್ನು ಶೇ.61ರಷ್ಟು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಶೇ.75ರಷ್ಟು ಮಂದಿ ಜನರು ತಮ್ಮ ಸಂಗಾತಿ ಬಗ್ಗೆ ಯೋಚನೆ ಕೂಡ ಮಾಡಿಲ್ಲ.
ಇದು ಏನನ್ನು ಸೂಚಿಸುತ್ತದೆ...
ಸಮಯವು ಬದಲಾಗುತ್ತಿದೆ ಮತ್ತು ಮದುವೆ ಹಾಗೂ ಮಕ್ಕಳನ್ನು ಪಡೆಯುವುದು ಮಾತ್ರ ಇಂದಿನ ಮಹಿಳೆಯರ ಪ್ರಾಮುಖ್ಯತೆಯಲ್ಲ ಎನ್ನುವುದನ್ನು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಮಹಿಳೆಯು ತಾನು ಯಾರೊಂದಿಗೆ, ಯಾವಾಗ ಮತ್ತು ಯಾವ ವಯಸ್ಸಿನಲ್ಲಿ ಮದುವೆಯಾಗಬೇಕು ಎಂದು ನಿರ್ಧರಿಸುವಲು ಮತ್ತು ಮದುವೆಯಾಗದೆ ಇರಲು ನಿರ್ಧರಿಸಬಹುದು. ಇದು ಅವರವರ ನಿರ್ಧಾರವಾಗಿರುವುದು.



Click it and Unblock the Notifications


