ಹೆಣ್ಣಿನ ಮನಸ್ಸನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ!

By Arshad

ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ಅರಿಯಲಾಗದು ಎಂಬ ಸುಭಾಷಿತವೊಂದಿದೆ. ಇದು ಬಹುತೇಕ ಎಲ್ಲಾ ಜೀವಿಗಳಲ್ಲೂ ಕಾಣಬಹುದು. ದರ್ಜಿಹಕ್ಕಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ, ಗಂಡುಹಕ್ಕಿಗೆ ಹೆಣ್ಣುಹಕ್ಕಿಯ ಜೊತೆ ಬೇಕೆಂದರೆ ಅದು ಒಳ್ಳೆಯ ಗೂಡೊಂದನ್ನು ಮೊದಲು ಕಟ್ಟಬೇಕು. ಆ ಬಳಿಕ ಹೆಣ್ಣು ಹಕ್ಕಿ ಬಂದು ತನ್ನ ಮನೆ ಹೇಗಿದೆ ಎಂದು ನೋಡುತ್ತದೆ.

ಎಲ್ಲಾ ತನ್ನಿಷ್ಟದಂತಿದ್ದರೆ ಸರಿ, ಇಲ್ಲದಿದ್ದರೆ ಗೂಡು ನೇತಾಡುವ ಪ್ರಮುಖ ಬಳ್ಳಿಯನ್ನೇ ಕಿತ್ತೆಸೆದು ಇಡಿಯ ಗೂಡನ್ನೇ ಕೆಳಕ್ಕೆ ಬೀಳಿಸುತ್ತದೆ. ಪಾಪದ ಗಂಡುಹಕ್ಕಿ ಇನ್ನೊಂದು ಗೂಡನ್ನು ಕಟ್ಟತೊಡಗುತ್ತದೆ. ಒಟ್ಟಾರೆ ಹೆಣ್ಣುಹಕ್ಕಿ ತನಗೆ ಇಷ್ಟವಾಗುವ ಮನೆ ನಿರ್ಮಾಣವಾಗುವವರೆಗೂ ಕಟ್ಟಿದ್ದ ಮನೆಗಳನ್ನು ಬೀಳಿಸುತ್ತಲೇ ಇರುತ್ತದೆ. ಅದೇ ಮೊದಲಿಗೆ ಗಂಡುಹಕ್ಕಿಗೆ ಇದು ಯಾವ ರೀತಿಯ ಮನೆಯನ್ನು ಇಷ್ಟಪಡುತ್ತದೆ ಎಂದು ಗೊತ್ತಿದ್ದಿದ್ದರೆ? ಅಷ್ಟೊಂದು ಮನೆಗಳನ್ನು ಕಟ್ಟುವುದು ತಪ್ಪುತ್ತಿತ್ತಲ್ಲ! ಹೆಂಗಸರನ್ನು ಅರ್ಥ ಮಾಡಿಕೊಳ್ಳಲು 10 ಸಲಹೆಗಳು

ಇದೇ ಮಾತು ನಮಗೂ ಅನ್ವಯವಾಗುತ್ತದೆ. ಹೆಚ್ಚಿನ ಪತಿಯರಿಗೆ ತಮ್ಮ ಪತ್ನಿ ತಮ್ಮಿಂದ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ. ಕೆಲವೊಮ್ಮೆ ಅರಿವಿಲ್ಲದೇ ಏನಾದರೊಂದು ವಿಷಯ ಮರೆತುಬಿಟ್ಟರಂತೂ ದೇವರೇ ಗತಿ.

ಉದಾಹರಣೆಗೆ ಪತ್ನಿಯ ಹುಟ್ಟುಹಬ್ಬ ಅಥವಾ ಮದುವೆಯ ವಾರ್ಷಿಕೋತ್ಸವ ಮೊದಲಾದವುಗಳನ್ನು ಮರೆತುಬಿಟ್ಟರೆ ಪತ್ನಿಯರು ಉಗ್ರ ಅವತಾರ ತಾಳುವುದು ಖಂಡಿತ. ಮಹಿಳೆಯರು ತಮ್ಮ ಪತಿಯಿಂದ ಅಪೇಕ್ಷಿಸದ ಗುಣಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ... ವೈವಾಹಿಕ ಜೀವನದಲ್ಲಿ ಸರಸ ಸಲ್ಲಾಪ ಏಕೆ ಮಹತ್ವಪೂರ್ಣ?

ಮನೆಯನ್ನು ಒಪ್ಪವಾಗಿಟ್ಟುಕೊಳ್ಳದಿರುವುದು

ಮನೆಯನ್ನು ಒಪ್ಪವಾಗಿಟ್ಟುಕೊಳ್ಳದಿರುವುದು

ಸಾಮಾನ್ಯವಾಗಿ ಪುರುಷರ ತಲೆಯಲ್ಲಿ ಹಲವು ವಿಷಯಗಳ ಬಗ್ಗೆ ಆಲೋಚನೆಗಳು ನಡೆಯುತ್ತಾ ಇರುವುದರಿಂದ ಮನೆಯ ಒಪ್ಪ ಓರಣದ ಬಗ್ಗೆ ಪೂರ್ಣವಾದ ಗಮನ ನೀಡುವುದು ಕಡಿಮೆ. ವಾರಕ್ಕೊಮ್ಮೆ ತಮ್ಮ ಕೋಣೆಯನ್ನು ಸ್ವಚ್ಛಗೊಳಿಸಿ ಮನೆಯ ವಸ್ತುಗಳು ಮತ್ತು ಬಟ್ಟೆಬರೆಗಳನ್ನು ಒಪ್ಪವಾಗಿರಿಸಿಕೊಂಡರೆ ಅದು ದೊಡ್ಡ ಪುಣ್ಯ. ಹೆಚ್ಚಿನವರು ಈ ಗೋಜಿಗೇ ಹೋಗದೇ ಇದ್ದದ್ದನ್ನು ಇದ್ದ ಹಾಗೇ ಬಿಟ್ಟುಬಿಡುತ್ತಾರೆ. ಆದರೆ ಮಹಿಳೆಯರಿಗೆ ಇದು ಇಷ್ಟವಾಗುವುದಿಲ್ಲ. ಅವರಿಗೆ ಮನೆ ಎಂದಿಗೂ ಒಪ್ಪ ಓರಣವಾಗಿರಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನೆಯನ್ನು ಒಪ್ಪವಾಗಿಟ್ಟುಕೊಳ್ಳದಿರುವುದು

ಮನೆಯನ್ನು ಒಪ್ಪವಾಗಿಟ್ಟುಕೊಳ್ಳದಿರುವುದು

ಎಲ್ಲಾ ವಸ್ತುಗಳ ತಮ್ಮ ಯಥಾಸ್ಥಾನದಲ್ಲಿರಬೇಕು. ಸ್ವಚ್ಛತೆ ಎಲ್ಲೆಲ್ಲೂ ಕಾಣುವಂತಿರಬೇಕು. ಗೋಜಲು, ಜೇಡರ ಬಲೆ, ಒಗೆದ ಬಟ್ಟೆಗಳನ್ನು ಹಾಗೇ ಮುದುರಿ ಗುಡ್ಡೆ ಹಾಕಿರುವುದು, ಮನೆಯ ಪೀಠೋಪಕರಣಗಳ ಮೇಲೆ ಧೂಳು ಕುಳಿತಿರುವುದು ಮೊದಲಾದವುಗಳನ್ನು ಸಹಿಸರು. ಅವರು ಅಲಮಾರಿಯ ಒಳಗಣ ಬಟ್ಟೆಗಳನ್ನು ಸರಿಯಾಗಿ ಮಡಚಿಡುವುದು, ಮನೆಯ ಷೋಕೇಸಿನ ಒಳಗಡೆ ಇರುವ ವಸ್ತುಗಳು ಅಚ್ಚುಕಟ್ಟಾಗಿರುವುದು, ಬಾಗಿಲ, ಕಿಟಕಿ ಪರದೆ ಓರಣವಾಗಿರುವುದು, ಕಾಲೊರೆಸುವ, ಕೈಒರೆಸುವ ಬಟ್ಟೆ ಮೊದಲಾದವು ಸರಿಯಾದ ಸ್ಥಾನದಲ್ಲಿರುವುದು, ಒಟ್ಟಾರೆ ಇವೆಲ್ಲವೂ ಒಪ್ಪವಾಗಿರುವುದನ್ನು ಇಷ್ಟಪಡುತ್ತಾರೆ. ನಿಮ್ಮ ಪತ್ನಿಯನ್ನು ಮೆಚ್ಚಿಸಬೇಕೆಂದಿದ್ದರೆ ಈ ಓರಣದ ಕಡೆಗೆ ಗಮನ ಕೊಡಿ.

ಪತ್ನಿಯರ ಮಾತನ್ನು ಕಿವಿಗೊಟ್ಟು ಕೇಳದಿರುವುದು

ಪತ್ನಿಯರ ಮಾತನ್ನು ಕಿವಿಗೊಟ್ಟು ಕೇಳದಿರುವುದು

ನಿಮ್ಮ ಎದುರಿನವರನ್ನು ಗೆಲ್ಲಲು ನೀವೊಬ್ಬ ಉತ್ತಮ ಕೇಳುಗರಾಗಬೇಕು (listener) ಎಂಬ ಮಾತಿದೆ. ಅಂದರೆ ಮುಂದಿನವರಿಗೆ ಮಾತನಾಡಲು ಅವಕಾಶ ಮಾಡಿಕೊಡುವುದು. ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಮಾತನಾಡುವ ಸ್ವಭಾವ ಹೊಂದಿರುತ್ತಾರೆ. ಆದರೆ ತಮ್ಮ ಪತಿಯರು ಎದುರಿಗಿದ್ದಾಗ ತಮ್ಮ ಮಾತುಗಳನ್ನು ಅವರು ಪೂರ್ಣವಾಗಿ ಕೇಳಬೇಕೆಂದು ಅಪೇಕ್ಷಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪತ್ನಿಯರ ಮಾತನ್ನು ಕಿವಿಗೊಟ್ಟು ಕೇಳದಿರುವುದು

ಪತ್ನಿಯರ ಮಾತನ್ನು ಕಿವಿಗೊಟ್ಟು ಕೇಳದಿರುವುದು

ಉಳಿದವರೊಂದಿಗೆ ಮಾತನಾಡುವಾಗ ಎದುರಿನವರು ಸುಮ್ಮನೇ ಕೇಳುತ್ತಿದ್ದಂತೆ ಮಾಡುತ್ತಾ ಪೂರ್ಣ ಗಮನ ಕೊಡದಿದ್ದರೆ ತಲೆಬಿಸಿ ಮಾಡದ ಮಹಿಳೆಯರು ತಮ್ಮ ಪತಿಯರು ಮಾತ್ರ ಪೂರ್ಣವಾಗಿ ತಮ್ಮೆಡೆಗೆ ಗಮನ ನೀಡಬೇಕೆಂದು ಬಯಸುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ 76% ಮಹಿಳೆಯರು ತಮ್ಮ ಪತಿಯರೊಂದಿಗೆ ಗಹನವಾದ ಚರ್ಚೆ ಮಾಡುವಾಗ ತಮ್ಮ ಪತಿ ತಮ್ಮೆಡೆಗೆ ಪೂರ್ಣ ಗಮನ ನೀಡಬೇಕೆಂದು ಅಪೇಕ್ಷಿಸುತ್ತಾರೆ ಎಂದು ಮಾಹಿತಿ ನೀಡಲಾಗಿದೆ. ಒಂದು ವೇಳೆ ನಿಮ್ಮ ಪತ್ನಿಯ ಮನ ಗೆಲ್ಲಬೇಕಾದರೆ ಆಕೆ ಏನು ಹೇಳುತ್ತಿದ್ದಾರೆ ಎಂಬುದನ್ನು (ಬಾಯಿಮುಚ್ಚಿ) ಗಮನವಿಟ್ಟು ಕೇಳಿ.

ಮುನ್ನುಗ್ಗಲು ಹಿಂಜರಿಯುವವರು

ಮುನ್ನುಗ್ಗಲು ಹಿಂಜರಿಯುವವರು

ಸಾಮಾನ್ಯವಾಗಿ ಪುರುಷರಿಗೆ ತಾವಾಗಿ ಮುನ್ನುಗ್ಗುವ ಅಥವಾ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮನಸ್ಸಿರುವುದಿಲ್ಲ. ಇದಕ್ಕೆ ಬಲವಾದ ಪ್ರೇರಣೆ ಅಗತ್ಯ. ಹೆಚ್ಚಿನವರು ಇದರಿಂದ ಹಣ (ಅಥವಾ ಮನ್ನಣೆ) ಸಿಗುವುದಾದರೆ ಮಾತ್ರ ಕೊಂಚ ಪ್ರಾರಂಭಿಸುತ್ತಾರೆ. ಇಲ್ಲದಿದ್ದರೆ ಜೀವನದಲ್ಲಿ ಸಿಕ್ಕಿದ್ದು ಸಾಕಷ್ಟಾಯಿತು ಎಂದು ಸುಮ್ಮನಿದ್ದುಬಿಡುವುದೇ ಹೆಚ್ಚಿನವರ ಜಾಯಮಾನ. ಆದರೆ ಮಹಿಳೆಯರಿಗೆ ಈ ಸುಮ್ಮನಿರುವ ಪರಿ ಇಷ್ಟವಾಗುವುದಿಲ್ಲ. ಅವರ ಪ್ರಕಾರ ಪುರುಷರು ಮನೆಯ ಹೊರಗಿದ್ದು ಯಾವುದಾದರೊಂದು ಕಾರ್ಯದಲ್ಲಿ ನಿರತರಾಗಿರಲೇಬೇಕು. ಸುಮ್ಮನೇ ಮನೆಯಲ್ಲಿ ಕುಳಿತು ಕುರ್ಚಿ ಬಿಸಿಮಾಡುವ ಮತ್ತು ಕೂಳು ಖರ್ಚು ಮಾಡುವ ಪುರುಷರನ್ನವರು ಇಷ್ಟಪಡುವುದಿಲ್ಲ.

ಬಡಾಯಿ ಕೊಚ್ಚಿಕೊಳ್ಳುವವರು

ಬಡಾಯಿ ಕೊಚ್ಚಿಕೊಳ್ಳುವವರು

ಪುರುಷರಲ್ಲಿರುವ ಈ ಗುಣವನ್ನು ಮಹಿಳೆಯರು ದ್ವೇಶಿಸುತ್ತಾರೆ. ಏಕೆಂದರೆ ನಿಮ್ಮಲ್ಲಿ ಯಾವುದೇ ಗುಣವಿದ್ದರೂ ಅವರು ಬೇರೆಯವರಿಂದ ಆ ಬಗ್ಗೆ ಕೇಳಲು ಇಷ್ಟಪಡುತ್ತಾರೆಯೇ ಹೊರತು ನೀವಾಗಿ ನಿಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ಅವರು ಇಷ್ಟಪಡರು. ನಿಮ್ಮಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣ ಅಥವಾ ಇತರರಲ್ಲಿ ಇರದ ಬೇರಾವುದೋ ವಸ್ತು ಇರಬಹುದು. ಆದರೆ ಈ ಬಗ್ಗೆ ನೀವು ಹೊರಗಿನವರಲ್ಲಿ ಕೊಚ್ಚಿಕೊಂಡ ಹಾಗೆ ಪತ್ನಿಯರ ಬಳಿ ಕೊಚ್ಚಿಕೊಳ್ಳಲು ಹೋಗಬೇಡಿ. ಇದನ್ನು ಅವರು ಇಷ್ಟಪಡುವುದಿಲ್ಲ.

X
Desktop Bottom Promotion