Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ನಿಮ್ಮ ಸಂಗಾತಿ ಜನವರಿಯಲ್ಲಿ ಹುಟ್ಟಿದ್ದರೆ ಅವರಲ್ಲಿರುವ ಗುಣಗಳಿವು
ಡಿಸೆಂಬರ್ 31ಕ್ಕೆ ಆ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಹೊಸ ಕನಸುಗಳಿಂದ ಸ್ವೀಕರಿಸಲು ಸಿದ್ಧರಾಗುತ್ತೇವೆ. ಜನವರಿ ತಿಂಗಳೇ ಒಂಥರಾ ಸ್ಪೆಷಲ್, ಹೊಸ ವರ್ಷಕ್ಕೆ ಹೊಸ ರೆಸ್ಯೋಲೇಷನ್ ಕೈಗೊಂಡು ಅದನ್ನು ಈ ತಿಂಗಳಿನಲ್ಲಿ ಪಾಲಿಸಲು ಪ್ರಯತ್ನಿಸುತ್ತೇವೆ. ಅದನ್ನು ಮುಂದಿನ ತಿಂಗಳುಗಳಲ್ಲಿ ಪಾಲಿಸುತ್ತೇವೋ ಇಲ್ಲವೋ ಎಂಬುವುದು ಯಾರಿಗೂ ಗೊತ್ತಿರುವುದಿಲ್ಲ. ಒಟ್ಟಿನಲ್ಲಿ ಜನವರಿ ತಿಂಗಳು ಸಕತ್ ಜೋಶ್ ತುಂಬುವ ತಿಂಗಳು ಎಂದೇ ಹೇಳಬಹುದು.

ಈ ತಿಂಗಳಿನಲ್ಲಿ ಹುಟ್ಟಿದವರ ಗುಣಗಳು ಕೂಡ ಸ್ವಲ್ಪ ಭಿನ್ನವಾಗಿರುತ್ತದೆ. ಆದ್ದರಿಂದ ನಿಮ್ಮ ಸಂಗಾತಿ ಜನವರಿ ತಿಂಗಳಿನಲ್ಲಿ ಹುಟ್ಟಿದ್ದರೆ ಈ ಗುಣಗಳನ್ನು ಅವರಲ್ಲಿ ನಿರೀಕ್ಷಿಸಬಹುದು ನೋಡಿ:

1. ಅವರಲ್ಲಿ ನಾಯಕತ್ವ ಗುಣವಿರುತ್ತದೆ
ಜನವರಿ ತಿಂಗಳಿನಲ್ಲಿ ಹುಟ್ಟಿದವರಲ್ಲಿ ನಾಯಕತ್ವದ ಗುಣವಿರುತ್ತದೆ ಹಾಗೂ ಯಾವುದೇ ವಿಷಯದಲ್ಲಿ ಮುಂದಾಳತ್ವ ವಹಿಸಲು ಆಸಕ್ತಿ ವಹಿಸುತ್ತಾರೆ. ನಿಮ್ಮ ಸಂಗಾತಿ ನಿಮ್ಮನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ನಿಮಗನಿಸಿದ್ದರೆ ಅದಕ್ಕೆ ಬೇಸರಪಡಬೇಡಿ. ಏಕೆಂದರೆ ಅವರಿಗೆ ನಿಮ್ಮನ್ನು ಕಂಟ್ರೋಲ್ ಮಾಡಬೇಕೆಂಬ ಯಾವುದೇ ಉದ್ದೇಶವಿರುವುದಿಲ್ಲ. ಆದರೆ ಅವರು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳಿಂದ ನಿಮಗೆ ಹಾಗೆ ಅನಿಸಬಹುದು ಅಷ್ಟೇ.

2. ಇತರರನ್ನು ನಗಿಸುವ ಕಲೆ ಅವರಿಗೆ ಗೊತ್ತಿರುತ್ತದೆ
ಜನವರಿ ತಿಂಗಳಿನಲ್ಲಿ ಹುಟ್ಟಿದವರಿಗೆ ಹಾಸ್ಯ ಪ್ರಜ್ಞೆ ಅಧಿಕವಿರುತ್ತದೆ. ಅವರು ಹಾಸ್ಯ ಮಾಡುವುದು ಮಾತ್ರವಲ್ಲ, ನಿಮಗೆ ತಗು ತರಿಸುವ ರೀತಿಯಲ್ಲಿ ದೇಹದ ಭಂಗಿಗಳನ್ನು ಮಾಡಿ ನಟನೆ ಮಾಡಿ ನಗು ತರಿಸುತ್ತಾರೆ. ಕೆಲವರಿಗೆ ಅವರು ತುಂಬಾ ಒರಟು ಮನುಷ್ಯನಂತೆ ಕಾಣಿಸಬಹುದು. ಆದರೆ ಅವರನ್ನು ಅರ್ಥ ಮಾಡಿಕೊಂಡರೆ ಅವರ ಜತೆಗೆ ಮಾತನಾಡುವುದು ಖುಷಿ ನೀಡುತ್ತದೆ.

3. ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ
ಜನವರಿಯಲ್ಲಿ ಹುಟ್ಟಿದವರು ತಮ್ಮ ಗುರಿ ಮುಟ್ಟಲು ಸ್ಪಷ್ಟ ದೃಷ್ಟಿಕೋನ ಹೊಂದಿರುತ್ತಾರೆ. ಅದಕ್ಕಾಗಿ ತಾವು ತೆಗೆದುಕೊಂಡು ನಿರ್ಧಾರಗಳನ್ನು ಬದಲಾಯಿಸಲು ಯಾವುದೇ ಕಾರಣಕ್ಕೆ ಸಿದ್ಧರಾಗುವುದಿಲ್ಲ. ಅವರು ಒಂದು ನಿರ್ಧಾರ ಮಾಡಿದ್ದೇ ಆದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ, ಅದು ಈಗಾಗಲೇ ನಿಮಗೂ ಗೊತ್ತಾಗಿ ಇರಬಹುದು.

4. ಸದಾ ಹೊಸ ಆಲೋಚನೆಗಳನ್ನು ಹೊಂದಿರುತ್ತರೆ
ಜನವರಿ ತಿಂಗಳಿನಲ್ಲಿ ಹುಟ್ಟಿದವರು ಮನಸ್ಸಿನಲ್ಲಿ ಮಗುವಿನಂತೆ ಇರುತ್ತಾರೆ. ಅವರು ಪ್ರತಿಯೊಂದು ವಿಷಯವನ್ನು ಪ್ರಬುದ್ಧವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳುತ್ತಾರೆ ಆದರೆ ಅವರಲ್ಲಿ ಮಗುವಿನ ಮನಸ್ಸಿರುತ್ತದೆ. ಅವರು ಏನಾದರೂ ಆಟ ಆಡುವಾಗ ಗಮನಿಸಿ ಚಿಕ್ಕ ಮಕ್ಕಳಂತೆ ಖುಷಿ-ಖುಷಿಯಾಗಿ ಕುಣಿದಾಡಿ ಆಟ ಆಡುತ್ತಾ ಇರುತ್ತಾರೆ. ಆಗ ಅವರನ್ನು ನೋಡುವಾಗ ಎಷ್ಟೊಂದು ಸೀರಿಯಸ್ ಆಗಿರುವ ವ್ಯಕ್ತಿ ಇಲ್ಲಿ ನೋಡಿದರೆ ಮಗುವಿನಂತೆ ಆಡುತ್ತಿದ್ದಾರಲ್ಲ ಎಂದು ಅನಿಸಬಹುದು.

5. ನಿಮ್ಮನ್ನು ಲೆಕ್ಕಕ್ಕೇ ತಗೋಳಲ್ಲ
ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವಾಗ ಅಥವಾ ಏನಾದರೂ ಸಮಸ್ಯೆಯಾದಾಗ ಅದನ್ನು ಪರಿಹಾರ ಮಾಡುವುದು ಹೇಗೆ ಎಂದು ಅವರು ನಿಮ್ಮ ಕೇಳುವುದಿಲ್ಲ. ಅವರೇ ಸ್ವತಃ ನಿರ್ಧಾರ ಕೈಗೊಳ್ಳುತ್ತಾರೆ. ಇದರಿಂದ ನಿಮಗೆ ಬೇಸರ ಆಗಬಹುದು. ಆದರೆ ಅವರ ಗುಣವೇ ಹಾಗೆ ಎಂದು ಸುಮ್ಮನಾಗಿಬಿಡಿ. ಅವರು ತೆಗೆದುಕೊಳ್ಳುವಾಗ ನಿರ್ಧಾರಗಳು ಸರಿಯಾಗಿರುವುದರಿಂದ ತಲೆಕೆಡಿಸಿಕೊಳ್ಳಬೇಡಿ.

6. ಸ್ಪೂರ್ತಿಯನ್ನು ತುಂಬುತ್ತಾರೆ
ಇತರರಿಗೆ ಸ್ಪೂರ್ತಿ ತುಂಬುವ ಗುಣ ಅವರಲ್ಲಿರುತ್ತದೆ. ನಿಮಗೆ ಏನಾದರೂ ಸವಾಲು ಎದುರಾಗಿ ನನ್ನ ಕೈಯಿಂದ ಸಾಧ್ಯವೇ ಇಲ್ಲ ಎಂದು ಕೂತಾಗ ಬಂದು ಇಲ್ಲಾ ನಿನ್ನಿಂದ ಸಾಧ್ಯವಿದೆ ಹುರಿದುಂಬಿಸುವ ಗುಣ ಅವರಲ್ಲಿದೆ. ಅವರು ಸದಾ ಹುರುಪಿನಿಂದ ಓಡಾಡುತ್ತಿರುವುದರಿಂದ ಅವರನ್ನು ನೋಡಿದಾಗ ನಿಮಗೂ ಏನಾದರೂ ಮಾಡಲು ಉತ್ಸಾಹ ಬರುತ್ತದೆ.

7. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ
ಜನವರಿಯಲ್ಲಿ ಹುಟ್ಟಿದವರು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ತುಂಬಾ ಕಡಿಮೆ. ಅವರಿಗೆ ನಿಮ್ಮ ಮೇಲೆ ತುಂಬಾ ಪ್ರೀತಿಯಿದ್ದರೂ ಅದನ್ನು ತೋರ್ಪಡಿಸುವುದಿಲ್ಲ. ಅವರು ನನ್ನೊಂದಿಗೆ ಎನೂ ಹಂಚಿಕೊಳ್ಳುವುದಿಲ್ಲ ಅವನ /ಅವಳ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ ಎಂದು ನಿಮಗೆ ಬೇಸರ ಉಂಟಾಗಬಹುದು. ಆದರೆ ಅವರನ್ನುಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅವರು ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂಬುವುದು ತಿಳಿಯುತ್ತದೆ.

8. ಜನವರಿಯಲ್ಲಿ ಹುಟ್ಟಿದವರು ವಾಸ್ತವಕ್ಕೆ ಹತ್ತಿರವಾಗಿರುತ್ತಾರೆ
ಪ್ರೀತಿ ಕುರುಡು ಅಂತಾರೆ, ಆದರೆ ಇವರು ಮಾತ್ರ ಸಂಗಾತಿಯನ್ನು ಆಯ್ಕೆ ಮಾಡುವಾಗ ನೋಡಿಯೇ ಆಯ್ಕೆ ಮಾಡುತ್ತಾರೆ. ಇನ್ನು ಅವರಿಗೆ ನನಗೆ ಎಲ್ಲಾ ಗೊತ್ತಿದೆ ಎಂಬ ಭಾವನೆ ಕೂಡ ಇರುತ್ತದೆ. ನಿಮ್ಮಿಬ್ಬರ ಆಲೋಚನೆಗಳು ವಿರುದ್ಧವಾಗಿದ್ದರೆ ಅವರು ಹೇಳಿದ್ದೇ ಸರಿ ಎಂಬುವುದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಾರೆ. ಅವರು ವಾಸ್ತವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಯಾವುದೇ ನಿರ್ಧಾರಗಳನ್ನು ಎಮೋಷನಲ್ ಆಗಿ ತೆಗೆದುಕೊಳ್ಳುವುದಿಲ್ಲ.
ಆದರೆ ಅವರು ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವುದರಿಂದ ನಿಮ್ಮ ಮೆಚ್ಚುಗೆ ಪಡೆಯುತ್ತಾರೆ.



Click it and Unblock the Notifications











