Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Singles Awareness Day 2022: ಮದುವೆಯಾಗಿಲ್ಲ, ಲವ್ ಇಲ್ಲ? ಹಾಗಾದರೆ ಈ ದಿನ ನಿಮಗೆ ಸ್ಪೆಷಲ್ ನೋಡಿ
ವ್ಯಾಲೆಂಟೈನ್ಸ್ ಡೇ ಮುಗಿಯಿತು, ಪ್ರೇಮಿಗಳು ಈ ದಿನವನ್ನು ಸಂಭ್ರಮದಿಂದ ಆಚರಿಸಿದರು, ವ್ಯಾಲೆಂಟೈನ್ಸ್ ಆದ ಮಾರನೇ ದಿನ ಸಿಂಗಲ್ ಅವೇರ್ನೆಸ್ ಡೇ ಆಚರಿಸಲಾಗುತ್ತಿದೆ. ನೀವು ಸಿಂಗಲ್ ಆಗಿದ್ದರೆ ಈ ದಿನ ನಿಮಗಾಗಿ ಮೀಸಲು ನೋಡಿ. ಈ ದಿನ ಸಿಂಗಲ್ ಆಗಿರುವವರು ಸಂಭ್ರಮಿಸಲೆಂದು ಆಚರಿಸಲಾಗುವುದು.
ಈ ದಿನಕ್ಕೆ ವ್ಯಾಲೆಂಟೈನ್ಸ್ ಡೇಗೆ ಇರುವಷ್ಟು ಪ್ರಚಾರವೇನೂ ಇಲ್ಲ, ಆದ್ದರಿಂದ ಹೆಚ್ಚಿನವರಿಗೆ ಈ ದಿನದ ಬಗ್ಗೆ ಗೊತ್ತಿರುವುದಿಲ್ಲ. ಮದುವೆಯಾಗಿಲ್ಲ, ಯಾವುದೇ ಸಂಬಂಧದಲ್ಲಿ ಇಲ್ಲ ನೆನ್ನೆ ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳು ಕೈ-ಕೈ ಹಿಡಿದು ಓಡಾಡುವುದು ನೋಡುವಾಗ ಛೇ... ನಮಗೊಂದು ಇಲ್ಲ ಎಂದು ನೀವು ಅಂದುಕೊಂಡಿದ್ದರೆ, ಇಂದು ನಿಮ್ಮದೇ ದಿನ... ನೀವು ಸಿಂಗಲ್ ಆಗಿರುವುದಕ್ಕೆ ಸಂಭ್ರಮಿಸುವ ದಿನ.

ಸಿಂಗಲ್ ಅವೇರ್ನೆಸ್ ಡೇ
ಸಿಂಗಲ್ ಅವೇರ್ನೆಸ್ ಡೇ ಯನ್ನುಆ್ಯಂಟಿ ವ್ಯಾಲೆಂಟೈನ್ಸ್ ಡೇಯಂದು ಆಚರಿಸಲಾಗುವುದು. ಯಾರಿಗೆ ಫೆಬ್ರವರಿ 14ನ್ನು ವ್ಯಾಲೆಂಟೈನ್ಸ್ ಡೇ ಆಗಿ ಆಚರಿಸಲು ಇಷ್ಟವಿಲ್ಲವೋ ಅವರಿಗಾಗಿ ಈ ದಿನ ಮೀಸಲಾಗಿದೆ.

ಈ ದಿನದಂದು ಯಾವುದೇ ರಜೆಯಿಲ್ಲ
ಕೆಲವು ದೇಶಗಳಲ್ಲಿ ವ್ಯಾಲೆಂಟೈನ್ಸ್ ಡೇಯಂದು ರಜೆಯನ್ನು ನೀಡಲಾಗುವುದು, ಆದರೆ ಫೆಬ್ರವರಿ 15ಕ್ಕೆ ಆಚರಿಸುವ Singles Awareness Dayಗೆ ಯಾವುದೇ ರಜೆಯಿಲ್ಲ.

ಸಿಂಗಲ್ ಆಗಿರುವ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡುವ ದಿನ
ಪ್ರೇಮಿಗಳ ದಿನದಂದು ಪ್ರೇಮಿಗಳು ಸಂಭ್ರಮಿಸಿದರೆ ಈ ದಿನದಂದು ಸಿಂಗಲ್ ಆಗಿರುವವರು ಸೇರಿ ಎಂಜಾಯ್ ಮಾಡುವ ದಿನ. ಇದನ್ನು ಮೊದಲಿಗೆ ಡಸ್ಟಿನ್ ಬಾರ್ನೆ ಎಂಬುವವರು 2022ರಲ್ಲಿ ಪ್ರಾರಂಭಿಸಿದರು.
ಸಿಂಗಲ್ ಆಗಿರುವ ಫ್ರೆಂಡ್ಸ್ ಸೇರಿ ಎಂಜಾಯ್ ಮಾಡಲು ಈ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಈ ದಿನ ಜನಪ್ರಿಯವಾಗುತ್ತಾ ಬಂತು. ಸೋಷಿಯಲ್ ಮೀಡಿಯಾದಲ್ಲಿ ಈ ದಿನ ಪ್ರೇಮಿಗಳ ದಿನದಷ್ಟು ಸದ್ದು ಮಾಡುತ್ತಿಲ್ಲ, ಹೆಚ್ಚಿನವರಿಗೆ ಈ ದಿನದ ಬಗ್ಗೆ ಗೊತ್ತಿಲ್ಲ.. ನೆನ್ನೆ ನಿಮ್ಮ ಫ್ರೆಂಡ್ ಪ್ರೇಮಿ ಜೊತೆ ವ್ಯಾಲೆಂಟೈನ್ಸ್ ಡೇ ಕುರಿತು ಪೋಸ್ಟ್ ಮಾಡಿದ್ದರೆ, ಇಂದು ನೀವು ಸಿಂಗಲ್ ಅಂಡ್ ಹ್ಯಾಪಿ ಕ್ಯಾಪ್ಷನ್‌ನಲ್ಲಿ ಫೋಟೋ ಹಾಕಬಹುದು ನೋಡಿ.



Click it and Unblock the Notifications
