Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಿಮ್ಮ ಸಂಗಾತಿಗೆ ನೀವು ಆದ್ಯತೆಯಲ್ಲ, ಆಯ್ಕೆಯಷ್ಟೇ ಎನ್ನುತ್ತವೆ ಈ ನಡವಳಿಕೆಗಳು
ಸಂಬಂಧದಲ್ಲಿದ್ದಾಗ ನಿಮ್ಮ ಸಂಗಾತಿಗೆ ನೀವು ಆದ್ಯತೆಯಾಗಿರಬೇಕೆಂದು ಬಯಸುವುದು ಕೆಟ್ಟದ್ದಲ್ಲ. ಯಾರಾದರೂ ನಿಮಗೆ ಮುಖ್ಯವಾಗಿದ್ದರೆ, ಅವರನ್ನು ನಿಮ್ಮ ಜೀವನದಲ್ಲಿ ಇರಿಸಿಕೊಳ್ಳಲು ಮತ್ತು ಅವರನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ತೋರಿಸಲು ಎಲ್ಲವನ್ನೂ ಮಾಡುತ್ತೀರಿ. ಅದೇ ರೀತಿಯ ಕಾಳಜಿ, ಆದ್ಯತೆ ನಿಮ್ಮ ಸಂಗಾತಿಯಿಂದಲೂ ನಿರೀಕ್ಷೆ ಮಾಡುತ್ತೀರಿ. ಆದರೆ, ಅವರಿಂದ ಈ ಪ್ರೀತಿ, ಗೌರವ ಸಿಗದೇ ಇದ್ದಾಗ, ನೀವೊಂದು ಆಯ್ಕೆಯಷ್ಟೇ, ಆದ್ಯತೆಯಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅವರು ನೇರವಾಗಿ ಹೇಳದಿದ್ದರೂ, ಅವರ ನಡವಳಿಕೆಗಳಿಂದ ತಿಳಿದುಕೊಳ್ಳಬೇಕು. ಅಂತಹ ಲಕ್ಷಣಗಳೇನು ಎಂಬುದನ್ನು ಇಲ್ಲಿ ನೋಡೋಣ.
ನಿಮ್ಮ ಸಂಗಾತಿಗೆ ನೀವು ಆಯ್ಕೆ, ಆದ್ಯತೆಯಲ್ಲ ಎಂದು ಸೂಚಿಸುವ ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ:

1. ನೀವಷ್ಟೇ ಎಲ್ಲಾ ಪ್ರಯತ್ನಗಳನ್ನು ಮಾಡುವುದು:
ಹೌದು, ಇದೊಂದು ಸಾಮಾನ್ಯವಾದ ಸೂಚನೆಯಾಗಿದೆ. ಎಲ್ಲಾ ಸಮಯದಲ್ಲೂ ನೀವಷ್ಟೇ ಕರೆ ಮಾಡುವುದು, ಸಂದೇಶ ಕಳುಹಿಸುವುದು ಅಥವಾ ಡೇಟ್ ನಿಗದಿಪಡಿಸುತ್ತಿದ್ದರೆ, ನೀವು ಮಾತನಾಡಲು ಪ್ರಾರಂಭಿಸದ ಹೊರತು, ಅವರಾಗಿಯೇ ಮಾತನಾಡದಿದ್ದರೆ, ಅವರಿಗೆ ನೀವೊಂದು ಆಯ್ಕೆ, ಆದ್ಯತೆಯಾಗಿ ಉಳಿದಿಲ್ಲ ಎಂಬದನ್ನು ಅರ್ಥ ಮಾಡಿಕೊಳ್ಳಿ. ಜೊತೆಗೆ, ಮಾತನಾಡುವಾಗ, ಅವರ ಪ್ರತಿಕ್ರಿಯೆಗಿಂತ ನೀವೇ ಹೆಚ್ಚು ಮಾತನಾಡುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ, ನೀವು ನಿಮ್ಮ ಪಾಲುದಾರರ ಪ್ರಮುಖ ಆದ್ಯತೆಯಲ್ಲ ಎಂಬುದಕ್ಕೆ ಇದು ಉತ್ತಮ ಸೂಚನೆಯಾಗಿದೆ.

2. ಅವರ ಖುಷಿಗಾಗಿ ಮಾಡಿದ ಪ್ರಯತ್ನಗಳನ್ನ ಗಮನಿಸದಿರುವುದು:
ಎಲ್ಲಾ ಕಾಳಜಿ, ಪ್ರಯತ್ನ, ತ್ಯಾಗ ಮತ್ತು ಹೊಂದಾಣಿಕೆಗಳು ನಿಮ್ಮ ಸಂಗಾತಿ ಗಮನಿಸದೇ ಇದ್ದರೆ, ಸಂಬಂಧ ಉಳಿಸಿಕೊಳ್ಳಲು, ಬೆಳೆಸಲು ನೀವು ನಿಯಮಿತವಾಗಿ ಮಾಡುತ್ತಿರುವ ಪ್ರಯತ್ನಕ್ಕೆ ಬೆಲೆಕೊಡದೇ ಇರುವುದು ಸಹ ನೀವೊಂದು ಆಯ್ಕೆ ಎನ್ನುವುದನ್ನು ಒತ್ತಿ ಹೇಳುತ್ತದೆ. ಇದರ ಜೊತೆಗೆ ಅವರು ನಿಮ್ಮನ್ನು ಗೌರವಿಸದೇ ಇರುವುದು, ನಿಮ್ಮ ಕಾರ್ಯಗಳನ್ನು ಅಥವಾ ಪ್ರಯತ್ನಗಳನ್ನು ಎಂದಿಗೂ ಪ್ರಶಂಸಿಸದೇ ಇರುವುದು ಕೂಡ ಇದರದ್ದೇ ಸಂಕೇತವಾಗಿದೆ.

3.ಕೇವಲ ಭೌತಿಕ ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರೆ:
ನಿಮ್ಮ ಸಂಗಾತಿಯು ದೈಹಿಕವಾಗಿ ಮಾತ್ರ ಕಾಳಜಿವಹಿಸುತ್ತಿದ್ದರೆ ಮತ್ತು ಅದು ನಿಮ್ಮನ್ನು ಕಾಡುತ್ತಿದ್ದರೆ, ಅವರು ನೀವು ಬಯಸುವ ಸಂಬಂಧದ ಪ್ರಕಾರಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಸಂಕೇತವಾಗಿರಬಹುದು. ಅವರಿಗೆ ಕೇವಲ ನಿಮ್ಮಿಂತ ಭೌತಿಕ ಅಗತ್ಯತೆಗಳಷ್ಟೇ ಬೇಕಿದೆ ಹೊರತು, ನೀವು ಬಯಸಿದಂತಹ ಪ್ರೀತಿ, ಕಾಳಜಿಗಳ ಅಗತ್ಯ ಅವರಿಗಿಲ್ಲ ಎಂಬ ಅರ್ಥವೂ ಇರಬಹುದು.

4. ಅತೃಪ್ತಿ ಮತ್ತು ದುರುಪಯೋಗ ಅನುಭವಿಸಿದರೆ:
ನೀವು ಅವರಿಗೆ ಕೇವಲ ಆಯ್ಕೆಯಾಗಿದ್ದರೆ, ಅತೃಪ್ತಿ, ಅಭದ್ರತೆ ಮತ್ತು ದುರುಪಯೋಗವನ್ನು ಅನುಭವಿಸುವಂತೆ ಮಾಡುತ್ತಾರೆ. ನಿಮ್ಮ ಎಲ್ಲಾ ಅಭದ್ರತೆಗಳು ಅವರ ಉಪಸ್ಥಿತಿಯಲ್ಲಿ ಹೆಚ್ಚಾಗುತ್ತವೆ ಮತ್ತು ನೀವು ಖಿನ್ನತೆಗೆ ಒಳಗಾಗುತ್ತೀರಿ. ನಿಮ್ಮಿಂದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಅನಿಸಿಕೆ ನಿಮ್ಮನ್ನು ನಿರಂತರವಾಗಿ ಕಾಡುವುದು. ನಿಮ್ಮ ಸಂಗಾತಿಗಾಗಿ ನಿಮ್ಮ ಜೀವನ ಮತ್ತು ಕನಸುಗಳನ್ನು ನಿರಂತರವಾಗಿ ತ್ಯಾಗ ಮಾಡುತ್ತಿದ್ದರೆ, ಈ ಸಂಬಂಧವನ್ನು ಪುನರ್ ವಿಮರ್ಶಿಸುವ ಸಮಯ ಇದಾಗಿದೆ.



Click it and Unblock the Notifications