Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಪ್ರೇಯಸಿ ಹೀಗಿದ್ದರೆ ಅವರೊಂದಿಗೆ ನಿಮ್ಮ ಸಂಬಂಧ ದೀರ್ಘ ಕಾಲ ಉಳಿಯುವುದಿಲ್ಲ
ಸಂಬಂಧಗಳಲ್ಲಿ ಸಣ್ಣ ಸಮಸ್ಯೆಯೂ ದೊಡ್ಡದಾಗಿ ಕಾಣುತ್ತದೆ, ಜಗಳಗಳು ಕಾರಣವಾಗುತ್ತದೆ. ಆದರೆ ಸಮಸ್ಯೆಗಳೇ ಇರುವ ವ್ಯಕ್ತಿಯ ಜತೆಗಿನ ಸಂಬಂಧ ದೀರ್ಘ ಕಾಲ ಇರಲು ಸಾಧ್ಯವೇ ಇಲ್ಲ.

ಪ್ರೇಮದಲ್ಲಿ ಸಣ್ಣ ಸಮಸ್ಯೆಗಳನ್ನು ಕಡೆಗಣಿಸುವುದು ಸರಿಯೇ, ಆದರೆ ಅದು ಹೆಚ್ಚಾಗಲು ಪ್ರಾರಂಭಿಸಿದಾಗ ಚಿಂತೆ ಹೆಚ್ಚಾಗುತ್ತದೆ ಅಲ್ಲದೆ, ನಿಮಗೆ ಇದಕ್ಕಿಂತ ಉತ್ತಮ ಪಾಲುದಾರ ಸಿಗಲು ನೀವು ಅರ್ಹರು ಎಂದು ನೀವು ಯೋಚಿಸಲು ಪ್ರಾರಂಭಿಸುತ್ತೀರಿ. ನಾವಿಂದು ಈ ಲೇಖನದಲ್ಲಿ ಒಬ್ಬ ಕೆಟ್ಟ ಗೆಳತಿ ಅಥವಾ ಪ್ರೇಯಸಿಯ ಗುಣಲಕ್ಷ ಹೇಗಿರುತ್ತದೆ ಎಂದು ತಿಳಿಸಲಿದ್ದೇವೆ. ನಿಮ್ಮ ಗೆಳತಿಯೂ ಹೀಗೆ ಇದ್ದರೆ ಇದರ ಬಗ್ಗೆ ನೀವು ಯೋಚಿಸಲೇಬೇಕು:

1. ಅವರ ನಿರ್ಧಾರಗಳನ್ನು ನಿಯಂತ್ರಿಸುವುದು
ಸಂಬಂಧದಲ್ಲಿ ಒಬ್ಬನ್ನೊಬ್ಬರು ನಿಯಂತ್ರಿಸುವುದನ್ನು ಯಾರೂ ಇಷ್ಟಪಡುವುದಿಲ್ಲ. ನೀವು ಯಾವಾಗಲೂ ಕೆಲಸಗಳನ್ನು ನಿಮ್ಮ ರೀತಿಯಲ್ಲಿಯೇ ಮಾಡಲು ಬಯಸಿದರೆ ನಿಮ್ಮ ಸಂಬಂಧವು ಶೀಘ್ರದಲ್ಲೇ ಅಂತ್ಯಗೊಳ್ಳಬಹುದು. ನಿಮ್ಮ ಸಂಗಾತಿಯ ಕಾರ್ಯಗಳನ್ನು ನೀವು ಯಾವಾಗಲೂ ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ನೀವು ಹಾಗೆ ಮಾಡಿದರೆ, ಅದು ಅವನ ಉಸಿರುಗಟ್ಟಿಸಬಹುದು ಇದರಿಂದ ನಿಮ್ಮ ಅತ್ಯಮೂಲ್ಯ ಸಂಬಂಧ ನಾಶವಾಗಬಹುದು.

2. ವೈಯಕ್ತಿಕ ಮಿತಿ ನೀಡುವುದನ್ನು ಎಂದಿಗೂ ನಂಬುವುದಿಲ್ಲ
ನೀವು, ನಿಮ್ಮ ಹುಡುಗನೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಬಯಸುವುದು ಒಳ್ಳೆಯದು ಆದರೆ ಅವನ ವೈಯಕ್ತಿಕ ಮಿತಿಯನ್ನು ನೀಡಲು ನಿರಾಕರಿಸುವುದು ಬಹಳ ತಪ್ಪು. ನಮಗೆಲ್ಲರಿಗೂ ವಿಶ್ರಾಂತಿ ಪಡೆಯಲು ಮತ್ತು ಕೆಲವು 'ವೈಯಕ್ತಿಕ ಸಮಯ' ಕಳೆಯಲು ವೈಯಕ್ತಿಕ ಮಿತಿ ಅಗತ್ಯ. ಅವನ ವೈಯಕ್ತಿಕ ಮಿತಿಯನ್ನು ಅವನಿಗೆ ನೀಡದಿರುವುದು, ಅವನ ವಯಕ್ತಿಕ ಜೀವನವನ್ನು ನೀವು ಅಷ್ಟೇನೂ ಗೌರವಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ. ಇದು ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

3. ನೀವು ಆಗಾಗ್ಗೆ ಅವನನ್ನು ಅನುಮಾನಿಸುತ್ತೀರಿ
ನಂಬಿಕೆ ಎನ್ನುವುದು ಯಾವುದೇ ಸಂಬಂಧದ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ. ಹೆಚ್ಚು ಅನುಮಾನಾಸ್ಪದ ಭಾವನೆ, ಅವನು ತನ್ನ ಯಾವುದೇ ಮಹಿಳಾ ಸಹೋದ್ಯೋಗಿಯೊಂದಿಗೆ ಸಂವಹನ ನಡೆಸುವ ಸಮಯ ನೀವು ಕದ್ದಾಲಿಸಿದರೆ ಅದು ನಿಮ್ಮಲ್ಲಿ ವಿಶ್ವಾಸಾರ್ಹ ಸಮಸ್ಯೆಗಳಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ನಿಮಗೆ ಅವಕಾಶ ಸಿಕ್ಕಾಗ ಅವನ ಫೋನ್ ಪರಿಶೀಲಿಸುವುದು, ಅವನು ಇತರ ಜನರೊಂದಿಗೆ ಸಂವಹನ ನಡೆಸುವಾಗ ಕದ್ದಾಲಿಕೆ ಮಾಡುವುದು, ನಿಮ್ಮ ಈ ಗುಣಗಳು ನಿಮ್ಮನ್ನು ಕೆಟ್ಟ ಗೆಳತಿಯನ್ನಾಗಿ ಮಾಡಬಹುದು. ಯಾವುದೇ ಕಾರಣಗಳಿಲ್ಲದೇ ನಿಮ್ಮ ಸಂಗಾತಿಯನ್ನು ಅನುಮಾನಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ ಮತ್ತು ಇದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದು.

4. ನೀವು ಅವನು ಬದಲಾಗಬೇಕೆಂದು ನಿರೀಕ್ಷಿಸುತ್ತೀರಿ
ನೀವೇ ಉತ್ತಮ ವ್ಯಕ್ತಿಯಾಗುವ ಬದಲು, ನೀವು ಯಾವಾಗಲೂ ನಿಮ್ಮ ಸಂಗಾತಿಯ ಬಗ್ಗೆ ಬೆರಳು ಮಾಡಿ ತೋರಿಸುತ್ತೀರಿ. ನಿಮ್ಮ ಗೆಳೆಯ / ಗಂಡನ ನಡವಳಿಕೆಯನ್ನು ಬದಲಾಯಿಸಿಕೊಳ್ಳುವಂತೆ ನಿರಂತರವಾಗಿ ಕೇಳುವುದು ನಿಮ್ಮ ಸಂಬಂಧವನ್ನೇ ಮುರಿಯಬಹುದು.

5. ನಿಮ್ಮ ಸಂಗಾತಿಗೆ ಮೋಸ ಮಾಡುವುದು
ಈ ವಿಷಯ, ನೀವು ಕೆಟ್ಟ ಗೆಳತಿಯಾಗಿರಬಹುದು ಎಂದು ಹೇಳುವ ದೊಡ್ಡ ಚಿಹ್ನೆಯಾಗಿದೆ. ನಿಮ್ಮ ಸಂಗಾತಿಗೆ ನೀವು ಮೋಸ ಮಾಡಿದ್ದರೆ ಮತ್ತು ಹಾಗೆ ಮಾಡಿದ್ದಕ್ಕಾಗಿ ತಪ್ಪಿತಸ್ಥರೆಂದು ಭಾವಿಸದಿದ್ದರೆ, ನೀವು ನಿಷ್ಠಾವಂತ ವ್ಯಕ್ತಿಯಲ್ಲ ಎನಿಸಿಕೊಳ್ಳುತ್ತದೆ. ಮೋಸ ಮಾಡುವುದು ಎಂದರೆ ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆಯವರೊಂದಿಗೆ ದೈಹಿಕವಾಗಿ ತೊಡಗಿಸಿಕೊಳ್ಳುವುದು ಮಾತ್ರವಲ್ಲ, ಅಸಭ್ಯ ಮೆಸೇಜ್ ಗಳನ್ನು ಕಳುಹಿಸುವುದು ಮತ್ತು ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆಯವರೊಂದಿಗೆ ಸ್ನೇಹಶೀಲರಾಗಿರುವುದು ಕೂಡ ಮೋಸಮಾಡುವುದು ಎನಿಸಿಕೊಳ್ಳುತ್ತದೆ. ನೀವು ಈ ರೀತಿ ಬಹಳ ಸಮಯದಿಂದಲೂ ಮಾಡುತ್ತಿದ್ದರೆ, ನೀವು ಉತ್ತಮ ಗೆಳತಿಯಾಗಿರಲು ಸಾಧ್ಯವೇ ಇಲ್ಲ.

6. ಅಪರೂಪಕ್ಕೆ ನಿಮ್ಮ ತಪ್ಪುಗಳಿಗಾಗಿ ಕ್ಷಮೆಯಾಚಿಸುತ್ತೀರಿ
ನಿಮ್ಮ ತಪ್ಪುಗಳಿಗೆ ಕ್ಷಮೆ ಕೋರುವುದನ್ನು ನೀವು ದ್ವೇಷಿಸುತ್ತೀರಾ ಅಥವಾ ಅದು ನಿಮ್ಮ ತಪ್ಪು ಆಗಿದ್ದರೂ ಕ್ಷಮೆಯಾಚಿಸುವುದು ಕಷ್ಟವೇ? ನಿಮ್ಮದೇ ತಪ್ಪಿದ್ದರೂ ಕೂಡ ನಿಮ್ಮ ಸಂಗಾತಿಯೇ ಕ್ಷಮೆಯಾಚಿಸಬೇಕೆಂದು ನೀವು ನಿರೀಕ್ಷಿಸುತ್ತೀರಾ? ಹಾಗಾದರೆ ಇಲ್ಲಿ ಕೇಳಿ, ನಿಮ್ಮ ಸ್ವಂತ ಅಹಂಕಾರಕ್ಕೆ ನೀವು ಬಲಿಯಾಗುವ ಸಾಧ್ಯತೆಗಳಿವೆ. ನಿಮ್ಮ ತಪ್ಪುಗಳಿಗೆ ಕ್ಷಮೆಯಾಚಿಸುವುದು ನಿಮ್ಮನ್ನು ಎಂದಿಗೂ ಕೀಳಾಗಿ ಮಾಡುವುದಿಲ್ಲ.

7. ನೀವು ತುಂಬಾ ಬೇಡಿಕೆಯಿಡುತ್ತೀರಿ
ಭಾವನಾತ್ಮಕವಾಗಿ ಸ್ಥಿರ ಮತ್ತು ಸ್ವತಂತ್ರವಾಗಿರುವ ಜನರು ಇತರರಿಗೆ ಸಾಕಷ್ಟು ಆಕರ್ಷಕವಾಗಿ ಕಾಣುತ್ತಾರೆ. ಸಂಬಂಧದಲ್ಲಿ ಒಬ್ಬ ವ್ಯಕ್ತಿಯು ಮಾತ್ರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಇನ್ನೊಬ್ಬರು ಇದರಿಂದ ಯಾವುದೇ ಸಮಸ್ಯೆಯೇ ಇಲ್ಲ ಎಂಬಂತೆ ಇದ್ದರೆ ಆ ಸಂಬಂಧ ಎಂದಿಗೂ ಉಳಿಯುವುದಿಲ್ಲ. ಆದ್ದರಿಂದ, ಎಂದಿಗೂ ನಿಮ್ಮ ಮುಗಿಯದ ಬೇಡಿಕೆಗಳಿಗಾಗಿ ನೀವು ಯಾವಾಗಲೂ ನಿಮ್ಮ ಗೆಳೆಯನ ಮೇಲೆ ಅವಲಂಬಿತರಾಗಿದ್ದರೆ, ಇದು ಸಕಾರಾತ್ಮಕ ಸಂಕೇತವಲ್ಲ.

8. ನೀವು ಅವರ ಆಯ್ಕೆಗಳನ್ನು ನಿರಂತರವಾಗಿ ಟೀಕಿಸುತ್ತೀರಿ
ನೀವು ಮತ್ತು ನಿಮ್ಮ ಸಂಗಾತಿ ಒಂದೇ ರೀತಿಯ ಆಯ್ಕೆಗಳನ್ನು ಹೊಂದಿರದೇ ಇರುವ ಸಾಧ್ಯತೆಗಳಿವೆ. ಸಾಕಷ್ಟು ಸಲ ನೀವು ಅವರ ಆಯ್ಕೆಗಳನ್ನು ಒಪ್ಪುವುದಿಲ್ಲ ಮತ್ತು ಕೆಲವೊಮ್ಮೆ ಕಿರಿಕಿರಿ ಅನುಭವಿಸಬಹುದು. ಆದರೆ ನೀವು ಅವರ ಆಯ್ಕೆಗಳು ಮತ್ತು ಆದ್ಯತೆಗಳನ್ನು ಟೀಕಿಸಬಹುದು ಎಂದಲ್ಲ. ಹಾಗೆ ಮಾಡುವುದರಿಂದ ನಿಮ್ಮ ಸಂಗಾತಿಗೆ ಅವರ ಮೇಲೆಯೇ ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಮತ್ತು ಅವನು ಕೀಳರಿಮೆ ಅನುಭವಿಸಬಹುದು.



Click it and Unblock the Notifications









