Latest Updates
-
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ?
ಈ ಕಾರ್ಯಗಳನ್ನು ಮಾಡುತ್ತಿದ್ದರೆ, ಆತನಿಗೆ ನಿಮ್ಮೇಲಿರುವುದು ಸ್ನೇಹಕ್ಕಿಂತ ಹೆಚ್ಚು ಪ್ರೀತಿ ಎಂಬುದನ್ನು ಅರಿತುಕೊಳ್ಳಿ..
ಪ್ರೀತಿ ಅನ್ನೋ ವಿಚಾರಕ್ಕೆ ಬಂದಾಗ, ಪ್ರತಿಯೊಬ್ಬರೂ ಭಾವನೆಗಳನ್ನು ವ್ಯಕ್ತಪಡಿಸುವ ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿರುತ್ತಾರೆ. ಮಹಿಳೆಯರು ತಮ್ಮ ಭಾವನೆಗಳನ್ನು ತಮ್ಮ ಕಾರ್ಯಗಳ ಮೂಲಕ ಪುರುಷರಿಗಿಂತ ಹೆಚ್ಚು ವ್ಯಕ್ತಪಡಿಸುತ್ತಾರೆ. ಆದರೆ ಪುರುಷರು, ಪ್ರೀತಿ ಹೇಳಿಕೊಳ್ಳುವುದು ಅಥವಾ ಅದನ್ನು ವ್ಯಕ್ತಪಡಿಸುವುದು ವಿರಳ.
ಸ್ನೇಹ ಅಥವಾ ಪ್ರೀತಿಯ ವಿಚಾರದಲ್ಲಿ ಪುರುಷರು ತಮ್ಮ ಭಾವನೆಗಳನ್ನು ನೇರವಾಗಿ ಹೇಳಿಕೊಳ್ಳುವುದಿಲ್ಲ. ಕೆಲವೊಂದು ಕಾರ್ಯಗಳ ಮೂಲಕ ಅದನ್ನು ತಲುಪಿಸುತ್ತಾರೆ. ಉತ್ತಮ ಸ್ನೇಹಿತನೆಂದು ಕೊಂಡಿರುವ ನಿಮಗೆ, ಆತ ಅದಕ್ಕಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಿರುತ್ತಾನೆ, ಆದರೆ ಅದನ್ನು ಅರ್ಥಮಾಡಿಕೊಳ್ಳಬೇಕಾದುದು ನಾವೇ..
ಹಾಗಾದರೆ, ನಿಮ್ಮ ಸ್ನೇಹಿತ, ನಿಮ್ಮನ್ನು ಕೇವಲ ಫ್ರೆಂಡ್ ಆಗಿ ನೋಡುತ್ತಿಲ್ಲ, ಆತ ನಿಮ್ಮನ್ನು ಇಷ್ಟಪಡುತ್ತಿದ್ದಾನೆ, ಸ್ನೇಹ ಪ್ರೀತಿಗೆ ತಿರುಗಬಹುದಾದ ಎಲ್ಲಾ ಲಕ್ಷಣ ಹೊಂದಿದ್ದಾನೆ ಎಂಬುದನ್ನು ಅರಿತುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಆಗಾಗ ಕರೆ ಮಾಡುತ್ತಾನೆ:
ಮೆಸೇಜ್ ಕಳುಹಿಸಿ, ಸುಖ-ಕಷ್ಟ ವಿಚಾರಿಸುವ ಈ ಕಾಲದಲ್ಲಿ, ಫೋನ್ ಮಾಡಿ, ಮಾತನಾಡುವುದು ಬಹಳ ಕಡಿಮೆ, ಅದೂ ಆ ವಯಸ್ಸಿನಲ್ಲಿ. ಆದರೆ ನಿಮ್ಮ ಸ್ನೇಹಿತ ಹತ್ತಿರದಲ್ಲೇ ಇದ್ದರೂ, ಆಗಾಗ ಕರೆ ಮಾಡಿ, ನಿಮ್ಮ ದೈನಂದಿನ ಯೋಜನೆ, ದಿನ ಹೇಗಿತ್ತು? ಎಂಬಿತ್ಯಾದಿಗಳ ಬಗ್ಗೆ ವಿಚಾರಿಸುತ್ತಿದ್ದಾನೆ ಅಂದರೆ ಆತನಿಗೆ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದರ್ಥ. ಯಾವುದೇ ಕಾರಣವಿಲ್ಲದೇ, ಕೇವಲ ನಿಮ್ಮ ಬಳ ಮಾತನಾಡುವ ಉದ್ದೇಶದಿಂದಲೇ, ಆಗಾಗ ಕರೆ ಮಾಡುತ್ತಿದ್ದಾನೆ ಎಂದರೆ ಅವರಿಗೆ ನೀವು ಸ್ನೇಹಿತೆಗಿಂತ ಹೆಚ್ಚು.

ನೀವೇಗೇ ಎಂದು ತಿಳಿಯಲು ಬಯಸುತ್ತಾನೆ:
ಆತ ನಿಮ್ಮ ಅಂತರಂಗದ ಭಯ, ಸಂತೋಷ ಕೊಡುವ ಅಂಶಗಳು ಜೊತೆಗೆ ನಿಮ್ಮಲ್ಲಿ ಅಡಗಿರುವ ಕರಾಳ ರಹಸ್ಯಗಳ ಬಗ್ಗೆ ಕೇಳುತ್ತಾನೆ. ಇದು ಆತ ನಿನ್ನನ್ನು ಇಷ್ಟಪಡುತ್ತಾನೆ ಎಂಬುದರ ಸಂಕೇತವಾಗಿದೆ. ಅವನೆಂದಿಗೂ ನಿಮ್ಮನ್ನು ನೀರಸ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ, ನಿಮಗೆ ಆಸಕ್ತಿ ಇರುವ ವಿಚಾರಗಳು, ನಿಮ್ಮ ಆಲೋಚನೆಗಳ ಕುರಿತೇ ಹೆಚ್ಚೆಚ್ಚು ಮಾತನಾಡುತ್ತಾನೆ.

ನಿಮ್ಮೆಲ್ಲಾ ಆಸಕ್ತಿಗಳನ್ನು ನೆನಪಿಡುತ್ತಾನೆ:
ನಿಮಗೆ ಏನು ಇಷ್ಟ, ನಿಮ್ಮ ಆಸಕ್ತಿಗಳೇನು ಎಂಬುದನ್ನು ಎಂದಾದರೂ ಅವನಿಗೆ ಹೇಳಿದ್ದರೆ, ಅದನ್ನು ನೆನಪಿಟ್ಟುಕೊಂಡು, ಈಡೇರಿಸುವ ಪ್ರಯತ್ನ ಮಾಡುತ್ತಾನೆ ಅಥವಾ ಮಾತಿನ ನಡುವೆ ಎಂದಾದರೂ ಆ ವಿಚಾರಗಳು ಬಂದಾಗ, ಆ ಆಸಕ್ತಿಗಳನ್ನೇ ಎತ್ತಿಹಿಡಿಯುತ್ತಾನೆ. ಜೊತೆಗೆ ಆ ಆಸಕ್ತಿಗಳನ್ನು ಆತನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಇದನ್ನು ಮಾಡುವುದರಿಂದ, ಅವನು ನಿಮ್ಮ ಜೊತೆ ಹೆಚ್ಚು ಸಮಯವನ್ನು ಕಳೆಯಲು ಮತ್ತು ನಿಮ್ಮ ಎಲ್ಲಾ ಅಭಿರುಚಿಗಳಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ.

ನಿಮಗೆ ಸುರಕ್ಷಿತ ಭಾವನೆ ನೀಡುತ್ತಾನೆ:
ಹೆಣ್ಣುಮಕ್ಕಳಿಗೆ ಮನದಲ್ಲಿ ಸುರಕ್ಷಿತ ಭಾವನೆ ಹುಟ್ಟುವುದು ತುಂಬಾ ಮುಖ್ಯ. ಅದೇ ರೀತಿ, ಪುರುಷರು, ಇತರರ ನೋವಿಗೆ ಹೆಗಲಾಗಿ, ಸುರಕ್ಷಿತವಾಗಿಡುವುದು ತುಂಬಾ ವಿರಳ, ಅದು ಕೇವಲ ಅವರು ತುಂಬಾ ಇಷ್ಟಪಡುವ ವ್ಯಕ್ತಿಗೆ ನೀಡಬಯಸುತ್ತಾರೆ. ಆ ಸಾಲಿನಲ್ಲಿ ನೀವು ಇದ್ದೀರಿ ಎಂದರೆ ನಿಮ್ಮ ಅದೃಷ್ಠ. ಆತ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ, ನಿಮ್ಮ ನೆಮ್ಮದಿ-ಖುಷಿಯ ಬಗ್ಗೆ ಆಲೋಚನೆ ಮಾಡುತ್ತಾನೆ. ಈ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾನೆ. ಉದಾ: ಚಲನಚಿತ್ರದಲ್ಲಿ ಯಾವುದೇ ಭಯಾನಕ ದೃಶ್ಯವು ಬಂದಾಗ ನಿಮ್ಮನ್ನು ಮನೆಗೆ ಕರೆದೊಯ್ಯುವ ಮೂಲಕ ಅಥವಾ ಅಪ್ಪಿಕೊಳ್ಳುವ ಮೂಲಕ ನಿಮಗೆ ಭರವಸೆ ನೀಡುತ್ತಾನೆ.

ನಿಮಗೆ ಅಡ್ಡಹೆಸರುಗಳನ್ನು ನೀಡುತ್ತಾನೆ:
ಇದು ತುಂಬಾ ಸಾಮಾನ್ಯವೆಂದು ತೋರಿದರೂ, ನಿಮಗಾಗಿ ಆತ ಅಡ್ಡಹೆಸರು ಇಟ್ಟಿದ್ದರೆ, ನೀವು ಅವನಿಗೆ ಒಬ್ಬ ವಿಶೇಷ ವ್ಯಕ್ತಿ.ನಿಮ್ಮನ್ನು ಸಿಹಿ ಅಥವಾ ತಮಾಷೆಯ ಅಡ್ಡಹೆಸರುಗಳಿಂದ ಕರೆಯುವುದು, ನಿಮ್ಮ ಮೇಲಿನ ಪ್ರೀತಿ ಮತ್ತು ಕಾಳಜಿಯ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಅವನ ಪ್ರೀತಿಯನ್ನು ತೋರಿಸುವ ಮಾರ್ಗವಾಗಿದೆ.



Click it and Unblock the Notifications











