Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಮ್ಮಂದಿರ ದಿನ 2023: ಮಗಳ ಈ ಮೆಸೇಜ್‌ಗಳು ಅಮ್ಮನಿಗೆ ತುಂಬಾನೇ ಸ್ಪೆಷಲ್ ಆಗಿರುತ್ತೆ
ಅಮ್ಮ ಎಂದರೆ ಎಲ್ಲರ ಪಾಲಿಗೆ ತುಂಬಾನೇ ವಿಶೇಷವಾದ ವ್ಯಕ್ತಿ, ಅವಳಿಗೆ ಸರಿ ಸಮಾನ ಆ ದೇವರು, ಆ ದೇವರಿಗೂ ಮಿಗಿಲಾದ ವ್ಯಕ್ತಿಯೆಂದರೆ ಅಮ್ಮ. ಆ ಅಮ್ಮನಿಗಾಗಿಯೇ ಒಂದು ವಿಶೇಷವಾದ ದಿನವಿದೆ. ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನ ಆಚರಿಸಲಾಗುವುದು. ಈ ದಿನ ನಮ್ಮೆಲ್ಲರ ಮುದ್ದು ಅಮ್ಮನ ದಿನ. ಅವಳಿಗೆ ಈ ದಿನ ತುಂಬಾ ಸ್ಪೆಷಲ್ ಆಗಿರಬೇಕೆಂದು ನೀವು ಬಯಸುತ್ತಿರಬಹುದು ಅಲ್ವಾ? ಹೆಣ್ಣು ಮಕ್ಕಳಿಗೆ ಅಪ್ಪ ಇಷ್ಟ, ಗಂಡು ಮಕ್ಕಳಿಗೆ ಅಮ್ಮ ಇಷ್ಟ ಎಂದು ಹೇಳುತ್ತಾರೆ ಅದು ಸರಿಯೇ ಆದರೂ ಹೆಣ್ಣು ಮಕ್ಕಳಿಗೆ ಅಮ್ಮನ ಮೇಲಿನ ಪ್ರೀತಿಗೆ ಏನೂ ಕಮ್ಮಿ ಇರಲ್ಲ.
ಇನ್ನು ಹೆಣ್ಣು ಅಮ್ಮನನ್ನು ತುಂಬಾ ಪ್ರೀತಿಸಲು ಪ್ರಾರಂಭಿಸುವುದು ತನ್ನ ಮದುವೆಯಾದ ಮೇಲೆ. ಆಗ ಅವಳಿಗೆ ಒಂದು ಮನೆ ನಿಭಾಯಿಸುವುದು, ಮಕ್ಕಳನ್ನು ಹೊತ್ತು-ಹೆತ್ತು ಸಾಕಾಗುವುದು ಎಷ್ಟು ಕಷ್ಟವೆಂಬುವುದು ಅನುಭವಕ್ಕೆ ಬಂದಿರುತ್ತದೆ. ಆಗ ಅವಳಿಗೆ ಅಮ್ಮಾ ಎಷ್ಟೊಂದು ಕಷ್ಟ ಪಡುತ್ತಿದ್ದಳು ಎಂಬುವುದು ಅರಿವಿಗೆ ಬಂದಿರುತ್ತದೆ, ಇನ್ನು ಬಾಣಂತನ, ಮಗುವಿನ ಆರೈಕೆ ಬಂದಾಗ ಅಮ್ಮ ಜೊತೆಗಿದ್ದರೆ ಆನೆ ಬಲ. ಈಗಂತೂ ಹೆಣ್ಮಕ್ಕಳು ಹೊರಗಡೆ ಹೋಗಿ ದುಡಿಯುತ್ತಿದ್ದಾರೆ, ಎಷ್ಟೋ ಅಮ್ಮಂದಿರು ಮೊಮ್ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಅತ್ತೆ ನೋಡಿಕೊಳ್ಳುತ್ತಾರೆ, ಅತ್ತೆ ಯಾವಾಗ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಾರೋ ಆಗ ಅವಳಿಗೂ ಅತ್ತೆ ಎಂಬ ಭಾವನೆ ಮರೆಯಾಗಿ ಅಮ್ಮನ ಸ್ಥಾನ ಮೂಡಿರುತ್ತದೆ.
ಹೆತ್ತ ಅಮ್ಮನಿಗೆ, ಅಮ್ಮನಾದ ಅತ್ತೆಗೆ ಅಮ್ಮಂದಿರ ದಿನವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು ಅವರಿಗೆ ಇಂಥದ್ದೊಂದು ಮೆಸೇಜ್ ಕಳುಹಿಸಿ ನೋಡಿ, ಆ ದಿನ ನಿಜವಾಗಲೂ ಅವರದ್ದೇ ದಿನವಾಗಿರುತ್ತೆ:

ಅಮ್ಮಂದಿರ ದಿನದ ಕೋಟ್ಸ್ 1
ಬೇರೆಯವರಿಗೆ ನೀನೊಬ್ಬ ವ್ಯಕ್ತಿಯಷ್ಟೇ ಆಗಿರಬಹುದು, ಆದರೆ ನನಗೆ ನೀನೇ ಪ್ರಪಂಚ... ಐ ಲವ್ ಯು ಅಮ್ಮಾ
ಅಮ್ಮಂದಿರ ದಿನದ ಶುಭಾಶಯಗಳು

ಅಮ್ಮಂದಿರ ದಿನದ ಕೋಟ್ಸ್ 2
ಇಷ್ಟೆಲ್ಲಾ ಕೆಲಸ, ಜವಾಬ್ದಾರಿ ಹೇಗಮ್ಮಾ ಇಷ್ಟೊಂದು ನಾಜೂಕಾಗಿ ನಿಭಾಯಿಸ್ತೀಯಾ? ನಿನ್ನ ವಯಸ್ಸಿನಲ್ಲಿ ನನಗೆ ನಿನ್ನಂತೆ ಮಾಡಲು ಸಾಧ್ಯವೇ? ನನಗೆ ಡೌಟ್ ಇದೆ... ನೀನೇ ನಾನು ನನ್ನ ಶಕ್ತಿ ... ನನ್ನ ಮುದ್ದು ಅಮ್ಮನಿಗೆ ಅಮ್ಮಂದಿರ ದಿನ ಶುಭಾಶಯಗಳು

ಅಮ್ಮಂದಿರ ದಿನದ ಕೋಟ್ಸ್ 3
ಹೆಣ್ಣಾಗಿ ಹುಟ್ಟಿರುವುದು ನನ್ನ ಸೌಭಾಗ್ಯ, ಏಕೆಂದರೆ ನನಗೂ ನಿನ್ನಂತೆ ವಾತ್ಸಲ್ಯ ಮೂರ್ತಿಯಾದ ತಾಯಿಯಾಗಬಹುದಲ್ವಾ? ಅಮ್ಮಂದಿರ ದಿನದ ಶುಭಾಶಯಗಳು

ಅಮ್ಮಂದಿರ ದಿನದ ಕೋಟ್ಸ್ 4
ನಾನಿವತ್ತು ಸ್ಟ್ರಾಂಗ್ ಆಗಿದ್ದೇನೆ ಎಂದರೆ ನಿನ್ನ ನೋಡಿ ನಾ ಕಲಿತಿದ್ದು ಅಮ್ಮಾ... ನನ್ನ ಸೂಪರ್ ಮಾಮ್‌ಗೆ ಅಮ್ಮಂದಿರ ದಿನದ ಶುಭಾಶಯಗಳು

ಅಮ್ಮಂದಿರ ದಿನದ ಕೋಟ್ಸ್ 5
ನಾನು ಇವತ್ತು ಒಬ್ಬ ತಾಯಿ, ಉದ್ಯೋಗಿ, ಗೃಹಿಣಿ ನನ್ನ ಎಲ್ಲಾ ಕಾರ್ಯ ಇಷ್ಟು ಅಚ್ಚು- ಕಟ್ಟಾಗಿ ಮಾಡಲು ಸಾಧ್ಯವಾಗುತ್ತಿರುವುದು ನಿನ್ನ ಬೆಂಬಲದಿಂದ ಮಾತ್ರ... ನನ್ನ ಎಲ್ಲಾ ಆಗಿರುವ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು

ಅಮ್ಮಂದಿರ ದಿನದ ಕೋಟ್ಸ್ 6
ಈ ಪ್ರಪಂಚದಲ್ಲಿ ಒಂದಿಷ್ಟೂ ಸಂದೇಹ ಪಡದೆ ನಂಬಬಹುದಾದ ವ್ಯಕ್ತಿಯೆಂದರೆ ನೀನು... ನೀನು ಮಾತ್ರ ಅಮ್ಮಾ... ನಿನ್ನ ಪಡೆದ ನಾನು ಅದೃಷ್ಟವಂತೆ

ಅಮ್ಮಂದಿರ ದಿನದ ಕೋಟ್ಸ್ 7
ನನಗೆ ಖುಷಿಯಾದಾಗ ನಿನ್ನಷ್ಟು ಖುಷಿ ಪಡುವವರು ಇಲ್ಲ
ನನಗೆ ಕೋಪ, ಅಸಹನೆ ಉಂಟಾದಾಗ ಸುಮ್ಮನೆ ರೇಗಿದಾಗ ಸಹಿಸುವವಳು ನೀನೊಬ್ಬಳೇ
ನನಗೆ ನೋವಾದಾಗ ಅದರ ನೂರಪಟ್ಟು ನೋವು ಪಡುವವಳು ನೀನೊಬ್ಬಳೇ
ಅಮ್ಮಾ ನೀ ನೀನೆ, ನಿನ್ನ ಸ್ಥಾನ ಯಾರೂ ತುಂಬಲಾರರು
ನನ್ನ ದೇವರಿಗೆ ಅಮ್ಮಂದಿರ ದಿನದ ಶುಭಾಶಯಗಳು



Click it and Unblock the Notifications
