Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
11 ವರ್ಷ ರಹಸ್ಯ ಸಂಸಾರ: ಕೇರಳ ಜೋಡಿಯ ಇಂಟೆರೆಸ್ಟಿಂಗ್ ಪ್ರೇಮ್ ಕಹಾನಿ
ಪ್ರಪಂಚದಲ್ಲಿ ಎಂತೆಂಥ ಲವ್ ಸ್ಟೋರಿ ಇರುತ್ತೆ ಎನ್ನುವುದಕ್ಕೆ ಈ ಜೋಡಿ ಉದಾಹರಣೆ. ಇವರ ಪ್ರೇಮ ಕತೆ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ. ಪ್ರೀತಿಗೆ ಕಣ್ಣಿಲ್ಲ ಅಂತಾರೆ ಅದೇ ರೀತಿ ಸಜಿತಾ ಮತ್ತು ರೆಹಮಾನ್ ಜಾತಿ, ಮತ ನೋಡಿ ಪ್ರೀತಿಸಿಲ್ಲ, ಬದಲಿಗೆ ಪ್ರೀತಿಯನ್ನಷ್ಟೇ ಬಯಸಿ ಪ್ರೀತಿಸಿದರು. ಒಬ್ಬರನ್ನೊಬ್ಬರು ಬಿಟ್ಟಿರಲಾರಂಥ ಪ್ರೀತಿ, ಆದರೆ ಮನೆಯವರನ್ನು ಒಪ್ಪಿಸಿ ಮದುವೆಯಾಗುವುದು ಕನಸ್ಸಿನ ಮಾತಾಗಿತ್ತು. ಏಕೆಂದರೆ ಇವರಿಬ್ಬರು ಬೇರೆ-ಬೇರೆ ಧರ್ಮಕ್ಕೆ ಸೇರಿದವರು. ಮನೆಯವರಿಗೆ ಹೇಳಿದರೆ ಖಂಡಿತ ಒಪ್ಪಲ್ಲ ಎಂಬುವುದು ಗೊತ್ತಿತ್ತು.
ಇನ್ನು ದೂರ ಹೋಗಿ ಬದುಕು ಕಟ್ಟಿಕೊಳ್ಳೋಣ ಅಂದ್ರೆ ಕೈಯಲ್ಲಿ ಹಣವೂ ಇಲ್ಲ, ಹಾಗಾಗಿ ಈ ಹುಡುಗಿಯನ್ನು ತನ್ನ ಮನೆಗೇ ತಂದು ಯಾರ ಕಣ್ಣಿಗೂ ಕಾಣದಂತೆ ಇಡಲು ಯೋಚಿಸುತ್ತಾನೆ.

ಅಂತರ್ ಧರ್ಮದಲ್ಲಿ ಮೂಡಿದ ಪ್ರೇಮ ಸಂಬಂಧ
2010ರಲ್ಲಿ ಸಜಿತಾ ತನ್ನ ಮನೆ ಬಿಟ್ಟು ರೆಹಮಾನ್ ಜೊತೆಗೆ ಬರುತ್ತಾಳೆ. ಆಕೆಯ ಮನೆಯಲ್ಲಿ ಆಕೆಗೋಸ್ಕರ ಸಾಕಷ್ಟು ಹುಡುಕಾಡುತ್ತಾರೆ, ಆದರೆ ಎಲ್ಲಿಯೂ ಕಾಣ ಸಿಗದಿದ್ದಾಗ ಯಾರ ಜೊತೆಯೋ ಓಡಿ ಹೋಗಿದ್ದಾಳೆ ಎಂದು ಭಾವಿಸುತ್ತಾರೆ.
ಇತ್ತ ರೆಹಮಾನ್ ಆಕೆಯನ್ನು ತನ್ನ ಮನೆಗೆ ರಹಸ್ಯವಾಗಿ ಕರೆದುಕೊಂಡು ತನ್ನ ಕೋಣೆಯಲ್ಲಿರಿಸುತ್ತಾನೆ. ಅಲ್ಲಿಂದ 11 ವರ್ಷ ಅವಳು ಅದೇ ಕೋಣೆಯಲ್ಲಿ ಅವನ ಜೊತೆ ಕಳೆದಿದ್ದಾಳೆ. ಆದರೆ ಮನೆಯವರಿಗೆ ವಿಷಯನೇ ಗೊತ್ತಾಗಿಲ್ಲ. ರಾತ್ರಿ ಎಲ್ಲರು ಮಲಗಿದ ಮೇಲೆ ಅಥವಾ ಮನೆಯವರೆಲ್ಲಾ ಕೆಲಸಕ್ಕೆ ಹೋದ ಮೇಲೆ ಹೊರ ಬಂದು ಸ್ನಾನ ಇತ್ಯಾದಿಗಳನ್ನು ಮುಗಿಸಿ ಕೋಣೆಗೆ ಹಿಂತಿರುಗುತ್ತಿದ್ದಳು. ಆಕೆಯ ಬಟ್ಟೆಗಳನ್ನು ಕೋಣೆಯೊಳಗೇ ಒಣಗಿಸುತ್ತಿದ್ದಳು. ಆಕೆಗೆ ಕೋಣೆಯೊಳಗೆ ಒಂದು ಟಿವಿ ಕೂಡ ಇರಿಸಿದ್ದ.

11 ವರ್ಷ ರಹಸ್ಯ ಸಂಸಾರ
ಆದರೆ 11 ವರ್ಷ ಆ ಮನೆಯಲ್ಲಿ ಯಾರಿಗೂ ಒಂದಿಷ್ಟೂ ಸುಳಿವು ನೀಡದಂತೆ ಈ ಜೋಡಿ ಬದುಕಿತ್ತು. ರೆಹಮಾನ್ ಮೊದಲೇ ಸಿಡುಕಿನ ಸ್ವಭಾವ, ಅಲ್ಲದೆ ತನ್ನ ಕೋಣೆಗೆ ಯಾರನ್ನೂ ಬರಲು ಬಿಡುತ್ತಿರಲಿಲ್ಲ, ಇದರಿಂದ ಅಪ್ಪ-ಅಮ್ಮ, ಅಣ್ಣ ಆ ಕೋಣೆ ಕಡೆಗೆ ಹೋಗುತ್ತಿರಲಿಲ್ಲ. ಊಟವನ್ನು ತನ್ನ ಕೋಣೆಗೇ ಕೊಂಡೊಯ್ಯುದ್ದು ತಿನ್ನುತ್ತಿದ್ದ.
ಸಜಿತಾ ಬಳಿಯೂ ಯಾವ ಕಾರಣಕ್ಕೂ ಹೊರಗಡೆ ಬರಬಾರದೆಂದು ತಾಕೀತು ಮಾಡಿದ್ದ, ಇದರಿಂದಾಗಿ ಆಕೆಯೂ ಕಾಣಿಸಿಕೊಂಡಿರಲಿಲ್ಲ, ತನ್ನ ಮನೆ ರೆಹಮಾನ್ ಮನೆಯ ಸಮೀಪವೇ ಇರುವುದರಿಂದ ಒಂದೆರಡು ಬಾರಿ ತಾಯಿಯನ್ನು ಕಿಟಕಿಯಿಂದ ನೋಡಿದ್ದಾಳೆ ಆದರೆ ಮಾತನಾಡಿಸಲು ಧೈರ್ಯ ಮಾಡಿರಲಿಲ್ಲ.

ಈ ಪ್ರೇಮ ಸಂಬಂಧದ ರಹಸ್ಯ ಹೊರ ಬಂದಿದ್ದೇ ಇನ್ನೂ ಸ್ವಾರಸ್ಯಕರ
ರೆಹಮಾನ್‌ಗೆ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದರು. ಆಗ ಆತ ಮದುವೆಗೆ ಒಪ್ಪದೆ ಸಜಿತಾಳೊಂದಿಗೆ ಮನೆ ಬಿಟ್ಟು ಹೋಗಿದ್ದ. ಆಗ ಆತನನ್ನು ಹುಡುಕಿ ಕೊಡುವಂತೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಆಗ ತನ ಪಕ್ಕದ ಊರಿನಲ್ಲಿ ಯುವತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿರುವುದು ತಿಳಿಯಿತು..

ಕೋರ್ಟ್ ಎದುರಿಗೆ ಹಾಜರು ಪಡಿಸಿದಾಗ ಬಯಲಾಯಿತು ಸತ್ಯಾಂಶ
ಕೋರ್ಟ್ ಎದುರು ಈ ಜೋಡಿಯನ್ನು ಹಾಜರು ಪಡಿಸಿದಾಗ 11 ವರ್ಷದಿಂದ ನಾವಿಬ್ಬರು ರಹಸ್ಯವಾಗಿ ಆತನ ಮನೆಯಲ್ಲಿ ಸಂಸಾರ ನಡೆಸಿದ ವಿಷಯ ತಿಳಿಸಿ ತಮ್ಮಿಬ್ಬರನ್ನು ಬೇರೆ ಮಾಡದಂತೆ ಮನವಿ ಮಾಡಿದಳು.
ಇವರಿಬ್ಬರ ಪ್ರಿತಿಯ ಆಳ ನೋಡಿ ಈ ಜೋಡಿಯನ್ನು ಬೇರೆಯಾಗುವಂತೆ ಹೇಳಲು ಪೋಷಕರಿಗೆ ತಾನೆ ಹೇಗೆ ಬಂದೀತು ಅಲ್ವಾ?



Click it and Unblock the Notifications
