Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಪ್ರೀತಿಸಿದ ಹುಡುಗಿಯ ಶವಕ್ಕೆ ತಾಳಿ ಕಟ್ಟಿದ ಅಸ್ಸಾಂ ಯುವಕ: ಮನಮಿಡಿಯುವ ಲವ್ ಸ್ಟೋರಿ
ಕೆಲವೊಂದು ಘಟನೆ ನೋಡುವಾಗ ಛೇ, ವಿಧಿಯೇ ನೀನೆಷ್ಟು ಕ್ರೂರಿ ಎಂದನಿಸುವುದು. ಅಂಥದ್ದೇ ಮನಕಲುಕುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಆ ಪ್ರೇಮಿ ತನ್ನ ಗೆಳತಿಯ ಕೊನೆಯಾಸೆ ನೆರವೇರಿಸಲು ಆಕೆಯ ಪಾರ್ಥೀವ ಶರೀರಕ್ಕೆ ತಾಳಿ ಕಟ್ಟಿ, ಆಕೆಗೆ ಮುತ್ತೈದೆ ಬೀಳ್ಗೊಡೆಗೆ ನೀಡಿರುವ ಘಟನೆ ಮನಕಲುಕುವಂತಿದೆ. '
ಪ್ರೀತಿಯೆಂದರೆ ಬರೀ ಆಕರ್ಷಣೆಯಲ್ಲ, ನಿಜವಾದ ಪ್ರೀತಿಗೆ ಸಾವಿಲ್ಲ, ಸಾವಿನಿಂದಲೂ ಪ್ರೀತಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎಂಬುವುದಕ್ಕೆ ಉದಾಹರಣೆ ಈ ಜೋಡಿ...

ಇದನ್ನು ಅಸ್ಸಾಂನಲ್ಲಿ ನಡೆದಿರುವ ಸುಂದರ ಪ್ರೇಮ ಕಾವ್ಯ ಅಂತ ಹೇಳುವುದೋ, ವಿಧಿಯ ಕ್ರೂರ ಆಟ ಅನ್ನುವುದೋ ಗೊತ್ತಾಗಲ್ಲ.. ಹೇ ದೇವ.... ಈ ಜೋಡಿಯನ್ನು ಬೇರೆ ಮಾಡಿ ನಿನಗೇನು ಸಿಕ್ತು? ಎಂದು ಕೇಳುವಿರಿ.
ಮೊಯಿರ್‌ಗಾಂವ್ ಆತನ ಹೆಸರು ಬಿಟುಪಾನ್ ತಮುಲಿ, ಆಕೆ ಕೊಸುವಾದ ಪ್ರಾರ್ಥನಾ ಬೋರಾ. ಇಬ್ಬರು ತುಂಬಾನೇ ಪ್ರೀತಿಸುತ್ತಿದ್ದರು, ಇವರ ಪ್ರೀತಿ ವಿಷಯ ಮನೆಯವರಿಗೂ ತಿಳಿದಿತ್ತು. ಇಬ್ಬರು ಮದುವೆಯಾಗಲೂ ಕೂಡ ತೀರ್ಮಾನ ಕೂಡ ಮಾಡಿದ್ದರು. ಆದರೆ ವಿಧಿ ಅವರ ಬದುಕಿನಲ್ಲಿ ಬೇರೆಯದ್ದೇ ತೀರ್ಮಾನಿಸಿತ್ತು. ಇದ್ದಕ್ಕಿದ್ದಂತೆ ಪ್ರಾರ್ಥನಾಗೆ ಅನಾರೋಗ್ಯ ಉಂಟಾಯ್ತು. ಗುವಾಹಟಿಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಆಕೆಯ ಅಂತ್ಯಕ್ರಿಯೆಗೆ ಬಂದ ಪ್ರೇಮಿ ಬಿಟುಪಾನ್ ಆಕೆಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ, ಅದನ್ನು ಕೇಳಿದವರಿಗೆ ಆಶ್ಚರ್ಯವಾಗುತ್ತೆ. ಆತ ಆಕೆ ನನ್ನನ್ನು ಮದುವೆಯಾಗಬೇಕೆಂದು ಬಯಸಿದ್ದಳು, ಅವಳ ಕೊನೆಯಾಸೆ ಈಡೇರದೆ ನಾನು ಕಳುಹಿಸಲ್ಲ ಅಂತ ಹಠ ಹಿಡಿಯುತ್ತಾನೆ. ಈ ಪ್ರೇಮಿಯ ನೋವು ನೋಡಿ ಮನೆಯವರೂ ಒಪ್ಪಿಗೆ ಸೂಚಿಸುತ್ತಾರೆ, ಆತ ಆಕೆಯ ದೇಹಕ್ಕೆ ತಾಳಿ ಕಟ್ಟಿದ್ದಾನೆ. ಅವಳ ಹಣೆಗೆ ಸಿಂಧೂರ ಇಟ್ಟು ಮುತ್ತೈದೆಯಂತೆ ಕಳುಹಿಸಿಕೊಟ್ಟಿದ್ದಾನೆ.
ಅಷ್ಟು ಮಾತ್ರವಲ್ಲ ಎಂದೆಂದಿಗೂ ಆಕೆಯೇ ನನ್ನ ಹೆಂಡತಿ, ನಾನು ಬೇರೆ ಮದುವೆಯಾಗುವುದಿಲ್ಲ ಎಂದಿದ್ದಾನೆ..... ಅವನಂಥ ಪ್ರೇಮಿ ಪಡೆದ ಅವಳೇ ಅದೃಷ್ಟವಂತಳು....



Click it and Unblock the Notifications

