Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
2019 ಏಪ್ರಿಲ್‌ನಲ್ಲಿ ಯಾವ ರಾಶಿಯರಿಗೆ ಹೆಚ್ಚು ಪ್ರೀತಿ ಸಿಗಲಿದೆ?
ಏಪ್ರಿಲ್ ತಿಂಗಳು ಆರಂಭವಾಗಿದ್ದು ಈ ಮಾಸದಲ್ಲಿ ಯಾವ ರಾಶಿಯವರ ಪ್ರೀತಿಯ ಜೀವನ ಹೆಚ್ಚು ಸುಖಕರವಾಗಿರುತ್ತದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗೂ ಇರಬಹುದು. ಪ್ರತಿ ಮಾಸವೂ ಬೇರೆ ಬೇರೆ ರೀತಿಯ ಅದೃಷ್ಟಗಳನ್ನು ತರುವುದರಿಂದ ಈ ತಿಂಗಳಲ್ಲಿ ಅತಿ ಹೆಚ್ಚು 'ಪ್ರೀತಿ'ಯ ಅದೃಷ್ಟವಂತರು ಯಾರು ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ನಿಮ್ಮ ರಾಶಿ ಯಾವುದೆಂದು ನೋಡಿಕೊಂಡು ನಿಮ್ಮ ಅದೃಷ್ಟ ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಮೇಷ ರಾಶಿ
ಪ್ರೀತಿ ಹಾಗೂ ಸಮೃದ್ಧಿಯ ಸಂಕೇತವಾದ ಶುಕ್ರನ ಆಶೀರ್ವಾದ ನಿಮ್ಮ ಮೇಲಿದೆ. ಆದರೆ ಶುಕ್ರನು ಮೇಷ ರಾಶಿಗೆ ಏಪ್ರಿಲ್ 20ರ ನಂತರ ಪ್ರವೇಶವಾಗುವುದರಿಂದ ಮೇಷ ರಾಶಿಯವರು ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು. ನಿಮ್ಮ ಸಂಗಾತಿಯ ಎದುರು ಪ್ರೀತಿಯ ನಿವೇದನೆ ಮಾಡಿಕೊಳ್ಳುವವರಿದ್ದರೆ ಅಥವಾ ಸಂಗಾತಿಯಿಂದ ಇನ್ನಷ್ಟು ಪ್ರೀತಿ ಸಿಗುವಂತಾಗಬೇಕಾದರೆ ತುಸು ತಾಳ್ಮೆ ಇರಲಿ. ಒಳ್ಳೆಯ ಕಾಲ ಕೂಡಿ ಬರಲಿದೆ.

ವೃಷಭ ರಾಶಿ
ಪ್ರೀತಿಯ ಸಂಕೇತ ಶುಕ್ರನ ದಯಾದೃಷ್ಟಿ ಈ ಬಾರಿ ನಿಮ್ಮ ಮೇಲಿದ್ದು, ನಿಮ್ಮ ಸಾಮಾಜಿಕ ಹಾಗೂ ಭಾವನಾತ್ಮಕ ಜೀವನದಲ್ಲಿ ಏಳಿಗೆ ಕಾಣುವ ಯೋಗ ಬರಲಿದೆ. ನಿಮ್ಮ ಕಲ್ಪನೆಗಳು ಗರಿಬಿಚ್ಚಿ ಹಾರಲಿದ್ದು, ಭವಿಷ್ಯದ ಜೀವನದೆಡೆ ಹೊಸ ಭರವಸೆಯ ಬೆಳಕು ಕಾಣಲಿದೆ. ಆದರೆ ಈ ಸಂದರ್ಭದಲ್ಲಿ ವೃಷಭ ರಾಶಿಯವರು ವೈಯಕ್ತಿಕ ಅಥವಾ ಭಾವನಾತ್ಮಕವಾಗಿ ಕೆಲ ಪರೀಕ್ಷೆಗಳನ್ನು ದಾಟಬೇಕಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯವರ ಅದೃಷ್ಟ ಸಾಮಾನ್ಯವಾಗಿ ಉತ್ತಮವಾಗಿಯೇ ಇರುತ್ತದೆ. ಆದರೆ ಈ ತಿಂಗಳ ಆರಂಭದಲ್ಲಿ ಮಾತ್ರ ಪ್ರೀತಿಗೆ ಸಂಬಂಧಿಸಿದಂತೆ ಕೆಲವು ಪರೀಕ್ಷೆಗಳಿಗೆ ಒಡ್ಡಿಕೊಳ್ಳುವ ಸಂದರ್ಭ ಬರಬಹುದು. ಆದರೆ ಯಾವುದಕ್ಕೂ ತಾಳ್ಮೆ ಇರಲಿ. ತಿಂಗಳಾಂತ್ಯಕ್ಕೆ ಎಲ್ಲ ಕಷ್ಟಗಳೂ ನಿವಾರಣೆಯಾಗಿ ಪ್ರೀತಿಯಲ್ಲಿ ಅದೃಷ್ಟ ನಿಮ್ಮದಾಗಬಹುದು. ಆದರೆ ನಿಮ್ಮ ಆತ್ಮಶಕ್ತಿ ಹಾಗೂ ಮಾತನಾಡುವ ಕಲೆಯಿಂದ ನೀವು ಎಲ್ಲ ಕಷ್ಟಗಳನ್ನು ಸುಲಭವಾಗಿ ದಾಟುವಿರಿ.

ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಹುಟ್ಟಿದವರಿಗೆ ಏಪ್ರಿಲ್ ತಿಂಗಳು ಅದೃಷ್ಟವನ್ನೇ ತರಲಿದೆ. ಈ ರಾಶಿಯವರ ಪ್ರೀತಿಯನ್ನು ಪಡೆಯಲು ಬಹಳಷ್ಟು ಜನ ಹಂಬಲಿಸಲಿದ್ದಾರೆ. ಈಗಿರುವ ಪ್ರೀತಿಯ ಸಂಬಂಧವನ್ನು ನೀವು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿರುವಿರಿ. ಶುಕ್ರನ ದೆಸೆಯಿಂದ ನಿಮ್ಮ ಭಾವನಾತ್ಮಕ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲಿವೆ.

ಸಿಂಹ ರಾಶಿ
ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರೀತಿಯ ಜೀವನದ ಮೇಲೆ ಗುರು ಗ್ರಹದ ಪ್ರಭಾವ ಸಾಕಷ್ಟಿದೆ. ಪ್ರೀತಿಯ ಜೀವನ ಸೇರಿದಂತೆ ಜೀವನದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ದಾಟುವಿರಿ. ಈಗ ಏಪ್ರಿಲ್ ತಿಂಗಳಿನಿಂದ ಶುಕ್ರನೂ ನಿಮ್ಮ ಬೆಂಬಲಕ್ಕಿರುವುದರಿಂದ ನಿಮ್ಮ ಇಡೀ ವ್ಯಕ್ತಿತ್ವಕ್ಕೆ ಹೊಸ ಹೊಳಪು ಬರಲಿದ್ದು ಜನ ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ನಿಮ್ಮ ಗ್ರಹಗತಿಯ ನಕ್ಷತ್ರಗಳು ನಿಮ್ಮನ್ನು ಅಪೂರ್ವವಾದ ಭಾವನಾತ್ಮಕ ಲೋಕಕ್ಕೆ ಕರೆದೊಯ್ಯಲಿದ್ದು ಅದರ ಪ್ರತಿಕ್ಷಣವನ್ನೂ ನೀವು ಆನಂದಿಸಲಿರುವಿರಿ.

ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ಕುಟುಂಬದ ಎಲ್ಲ ಸದಸ್ಯರ ಭರವಸೆಯ ಬೆಳಕಾಗಲಿದ್ದು, ಇವರು ತಮ್ಮ ಸಂಗಾತಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ನಿಮ್ಮ ಪ್ರೀತಿಪಾತ್ರರ ಜೀವನ ಸುಧಾರಣೆಗೆ ಕಟಿಬದ್ಧರಾಗಿ ನೀವು ಕೆಲಸ ಮಾಡಲಿರುವಿರಿ. ಆದರೆ ಪ್ರೀತಿಯ ಜೀವನದಲ್ಲಿ ಏನಾದರೂ ಸಮಸ್ಯೆ ಕಾಣಿಸಿದಲ್ಲಿ ಪರಿಣಿತರ ಸಲಹೆ ಪಡೆಯಲು ಮಾತ್ರ ಮರೆಯದಿರಿ. ನೀವು ಉತ್ತಮ ಕೇಳುಗರಾದಲ್ಲಿ ಸಾಕಷ್ಟು ಸಮಸ್ಯೆಗಳು ತನ್ನಿಂತಾನೇ ಪರಿಹಾರವಾಗಲಿವೆ.

ತುಲಾ ರಾಶಿ
ನಿಮ್ಮ ಪ್ರೀತಿಯ ಜೀವನದಲ್ಲಿ ಕ್ರಿಯಾಶೀಲರಾಗುವ ಸಂದರ್ಭ ನಿಮಗೆ ಬಂದೊದಗಿದೆ. ನಿಮ್ಮ ಗ್ರಹಗತಿಗಳ ಕಾರಣದಿಂದ ಜೀವನದಲ್ಲಿ ಅಪೂರ್ವ ನೆಮ್ಮದಿ ಪಸರಿಸಲಿದೆ. ಶುಕ್ರನ ದೆಸೆಯಿಂದ ಇನ್ನೊಬ್ಬರ ಜೀವನದಲ್ಲಿ ಭರವಸೆ ಮೂಡಿಸಲಿರುವ ನಿಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ.

ವೃಶ್ಚಿಕ ರಾಶಿ
ತಮ್ಮ ಕ್ರಿಯಾಶೀಲ ಹಾಗೂ ಸಂವೇದನಾಶೀಲ ವ್ಯಕ್ತಿತ್ವಕ್ಕೆ ವೃಶ್ಚಿಕ ರಾಶಿಯವರು ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಶುಕ್ರನ ಕೃಪಾಕಟಾಕ್ಷದಿಂದ ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧ ಹೊಂದಲಿದ್ದು, ಸಂಗಾತಿಯಿಂದ ಬೇಕಾದುದನ್ನು ಪಡೆಯಲು ಸಫಲರಾಗಲಿದ್ದಾರೆ. ಅಲ್ಲದೆ ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಂಡು ಪ್ರೀತಿಯ ಜೀವನವನ್ನು ಮತ್ತೊಂದು ಎತ್ತರಕ್ಕೆ ಒಯ್ಯಲು ಸಹ ಇದು ಸುಸಂದರ್ಭವಾಗಿದೆ.

ಧನು ರಾಶಿ
ಈ ತಿಂಗಳು ಪ್ರಯಾಣದ ಅದೃಷ್ಟ ನಿಮ್ಮ ಗ್ರಹಗತಿಯಲ್ಲಿದ್ದು ಹಾಗೆಯೇ ದಾರಿಯಲ್ಲಿ ಯಾರೋ ಸಿಗಬಹುದು. ಆದರೆ ಈಗಾಗಲೇ ನೀವು ಆತ್ಮೀಯ ಸಂಗಾತಿಯನ್ನು ಹೊಂದಿದ್ದಲ್ಲಿ ಅವರಿಂದ ಬಯಸಿದೆಲ್ಲವೂ ಸಿಗಬಹುದು ಎಂಬ ಭಾವನೆ ಬೇಡ.

ಮಕರ ರಾಶಿ
ಸೂಕ್ಷ್ಮ ಮತಿಯವರಾದ ಮಕರ ರಾಶಿಯವರು ಈ ಸಂದರ್ಭದಲ್ಲಿ ತಮ್ಮ ಸಂಗಾತಿ ಏನು ಬಯಸುತ್ತಾನೆ/ ಬಯಸುತ್ತಾಳೆ ಎಂಬುದರ ಬಗ್ಗೆ ಪರಿಣಿತರಿಂದ ಸಲಹೆ ಪಡೆಯುವುದು ಸೂಕ್ತ. ಏಪ್ರಿಲ್ ತಿಂಗಳಲ್ಲಿ ಶುಕ್ರನ ಅನುಗ್ರಹ ನಿಮ್ಮ ಮೇಲಿದ್ದು, ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳ ಕಾರಣದಿಂದ ಸಂಬಂಧಗಳು ಹಾಳಾಗಲು ಬಿಡುವುದು ಜಾಣತನವಲ್ಲ.

ಕುಂಭ ರಾಶಿ
ಮೇಲ್ನೋಟಕ್ಕೆ ನಿಮ್ಮ ಜೀವನದಲ್ಲಿ ಎಲ್ಲವೂ ಸರಿಯಾಗಿರುವಂತೆ ಕಂಡರೂ ಒಳಗೊಳಗೇ ಯಾವುದೋ ಸಮಸ್ಯೆಯಿಂದ ಪ್ರೀತಿಯ ಜೀವನದ ಮಧುರತೆ ಹಾಗೂ ನೆಮ್ಮದಿಗೆ ಭಂಗ ಬರಬಹುದು. ನಿಮ್ಮ ಪ್ರೀತಿಯ ಸಂಗಾತಿಗೆ ರಕ್ಷಣೆ ನೀಡಿ, ಅವರ ಮೇಲೊಂದು ಕಣ್ಣಿರಲಿ. ಯಾವುದೂ ಅತಿಯಾಗದಂತೆ ಜಾಗೃತಿ ವಹಿಸಿ.

ಮೀನ ರಾಶಿ
ಯಾವಾಗಲೂ ಕಲ್ಪನಾ ಲೋಕದಲ್ಲಿ ವಿಹರಿಸುವ ಮೀನ ರಾಶಿಯವರು ಏಪ್ರಿಲ್ ತಿಂಗಳಲ್ಲಿ ವಾಸ್ತವಕ್ಕೆ ಕಣ್ಣು ತೆರೆಯಬೇಕಾಗುತ್ತದೆ. ಏಪ್ರಿಲ್ 20ರವರೆಗೆ ಶುಕ್ರನ ಕೃಪಾಕಟಾಕ್ಷ ನಿಮ್ಮ ಮೇಲಿದ್ದು ಈ ಅವಧಿಯಲ್ಲಿ ನಿಮ್ಮ ಪ್ರೀತಿಯ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಬಹುದು. ಈ ಹಂತದಲ್ಲಿ ಕೆಲವೊಮ್ಮೆ ನಿಮ್ಮ ಮೇಲೆ ನಿಮಗೇ ಸಂಶಯ ಬರಬಹುದು. ಇನ್ನು ಕೆಲ ಬಾರಿ ಕುಟುಂಬದಲ್ಲಿ ಸಂಬಂಧಗಳ ಸಮಸ್ಯೆ ಎದುರಾಗಬಹುದು ಅಥವಾ ನಿಮ್ಮ ಮಾತನ್ನು ಬೇರೆಯವರು ಕೇಳುವಂತಾಗಲು ಸಾಹಸ ಪಡಬೇಕಾಗಬಹುದು.



Click it and Unblock the Notifications











