Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಮಾಜಿ ಪ್ರೇಯಸಿ ನಿಮ್ಮ ಜೀವನಕ್ಕೆ ಮರಳುತ್ತಾಳೆ ಎನ್ನುವುದಕ್ಕೆ ಕೆಲವು ಸುಳಿವುಗಳು!
ಜೀವನದಲ್ಲಿ ಪ್ರೀತಿಯ ಜೀವನ ಎನ್ನುವುದು ಹೆಚ್ಚಿನವರು ಅನುಭವಿಸಿಕೊಂಡು ಬಂದಿರುವರು. ಇದರಲ್ಲಿ ಮುಖ್ಯವಾಗಿ ಯಾವುದೋ ಸಮಾರಂಭ, ಕಾಲೇಜು ಅಥವಾ ಕಚೇರಿಯಲ್ಲಿ ಕಣ್ಣುಗಳು ಬೆರೆತುಕೊಂಡು ಪ್ರೀತಿ ಮೂಡಬಹುದು. ಇದರಲ್ಲಿ ಕೆಲವು ಮುಂದೆ ಸಂಬಂಧವಾಗಿ ಪರಿವರ್ತನೆ ಆಗಬಹುದು. ಇನ್ನು ಕೆಲವು ಅಲ್ಲೇ ಮುದುಡಿಹೋಗಬಹುದು. ಸಂಬಂಧಗಳು ದೂರ ಆಗುವುದಕ್ಕೆ ಕಾರಣ ಯಾರೇ ಆಗಿರಬಹುದು. ಇದು ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿದ ಬಳಿಕ ಒಂದು ನಿರ್ಧಾರಕ್ಕೆ ಬರುವರು. ಆದರೆ ಕೆಲವೊಂದು ನಮಗೆ ಯಾವುದೇ ವಸ್ತು ಅಥವಾ ವ್ಯಕ್ತಿಯ ಮಹತ್ವ ತಿಳಿಯುವುದು ಅದು ನಮ್ಮಿಂದ ದೂರವಾದ ಮೇಲೆ ಮಾತ್ರ.

ಅದೇ ಹುಡುಗಿಯರು ಕೂಡ ತಮ್ಮ ಪ್ರಿಯತಮನಿಂದ ದೂರವಾದ ಬಳಿಕ ಆತನ ಮಹತ್ವ ತಿಳಿಯುವರು. ಇದರಿಂದ ಪಶ್ವಾತ್ತಾಪ ಪಟ್ಟುಕೊಂಡು ಮತ್ತೆ ಹಿಂತಿರುಗಿ ಬರಲು ಪ್ರಯತ್ನಿಸುವರು. ಮಾಜಿ ಪ್ರೇಯಸಿಯು ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದರೆ ಮತ್ತು ನಿಮ್ಮೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾಳೆಯಾ? ಇದು ಕೇವಲ ಸ್ನೇಹವೇ ಅಥವಾ ಇನ್ನು ಆಕೆಯಲ್ಲಿ ನಿಮ್ಮ ಬಗ್ಗೆ ಪ್ರೀತಿ ಉಳಿದುಕೊಂಡಿದೆಯಾ? ನಿಮ್ಮ ಮಾಜಿ ಪ್ರೇಯಸಿ ಮರಳಿ ನಿಮ್ಮ ಜೀವನದಲ್ಲಿ ಬರುತ್ತಾಳೆ ಎನ್ನುವುದಕ್ಕೆ ಆರು ಸಂಕೇತಗಳು ಇಲ್ಲಿವೆ. ಇದನ್ನು ನೀವು ತಿಳಿಯಿರಿ.

ಸಾಮಾಜಿಕ ಜಾಲತಾಣ
ಆಕೆ ಇನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಫಾಲೋ ಮಾಡುತ್ತಿರುವಳು ಮತ್ತು ನಿಮ್ಮ ಆನ್ ಲೈನ್ ಚಟುವಟಿಕೆ ಮೇಲೆ ಗಮನವಿಟ್ಟಿರುವಳು. ಆಕೆ ಈಗಲೂ ನಿಮ್ಮಿಬ್ಬರ ಮಧ್ಯೆ ಏನೂ ನಡೆದಿಲ್ಲ ಎನ್ನುವಂತೆ ಕೆಲವೊಂದು ಪೋಸ್ಟ್ ಗಳಿಗೆ ಲೈಕ್ ಅಥವಾ ಕಮೆಂಟ್ ಮಾಡುವಳು. ಆಕೆ ನಿಮ್ಮನ್ನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿಲ್ಲ ಮತ್ತು ನಿಮ್ಮೊಂದಿಗೆ ಸಂಪರ್ಕದಲ್ಲಿ ಇರುವುದು ಆಕೆಯ ತಲೆಯಲ್ಲಿ ಏನೋ ಓಡುತ್ತಿದೆ ಎಂದು ಹೇಳಬಹುದಾಗಿದೆ.

ಸಂಪರ್ಕ ಸಾಧಿಸಲು ಏನಾದರೂ ಕಾರಣ ಹುಡುಕುವಳು
ನೀವು ಹೇಗಿದ್ದೀರಿ ಎಂದು ಕೇಳಲು ಆಕೆ ನಿಮಗೆ ಫೋನ್ ಮಾಡುತ್ತಾ ಇದ್ದಾಳೆಯಾ? ಅಥವಾ ಆನ್ ಲೈನ್ ನಲ್ಲಿ ಏನಾದರೂ ಖರೀದಿ ಮಾಡಲು ಅಥವಾ ಸ್ನೇಹಿತರನ್ನು ಕೇಳಲು ಆಕೆ ನಿಮಗೆ ಕರೆ ಮಾಡಿರುವಳೇ? ಆಕೆ ನಿಮ್ಮ ಯಾವುದೇ ಕಾರಣಕ್ಕಾದರೂ ಬಂದು ಭೇಟಿ ಆಗುವುದು ಅಥವಾ ಕರೆ ಮಾಡುತ್ತಲಿದ್ದರೆ, ಆಗ ಆಕೆ ನಿಮ್ಮ ಜೀವನದಲ್ಲಿ ಕ್ರಿಯಾತ್ಮಕವಾಗಿ ಇರಲು ಬಯಸುತ್ತಿದ್ದಾಳೆ ಎಂದು ಹೇಳಬಹುದು. ಆಕೆಗೆ ನಿಮ್ಮಿಂದ ದೂರವಾಗಿ ತುಂಬಾ ಬೇಸರ ಉಂಟಾಗಿರಬಹುದು.

ನೀವು ಏನು ಮಾತನಾಡುತ್ತೀರಿ
ಆಕೆಯೊಂದಿಗೆ ನೀವು ಮಾತನಾಡಿರುವಂತದ್ದನ್ನು ವಿಶ್ಲೇಷಿಸಿ ನೋಡಿ. ನೀವಿಬ್ಬರು ಮತ್ತೆ ಹಿಂದಿನ ನೆನಪುಗಳನ್ನು ಮರುಕಳಿಸುತ್ತಿದ್ದೀರಾ ಮತ್ತು ಅಲ್ಲಿ ತುಂಬಾ ಸಂತೋಷವಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೀರಾ? ಆ ಪರಿಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ನಿಭಾಯಿಸಬಹುದಿತ್ತು ಮತ್ತು ಬ್ರೇಕ್ ಅಪ್ ತಡೆಯಬಹುದಿತ್ತು ಎಂದು ನೀವಿಬ್ಬರು ಚರ್ಚೆ ಮಾಡುತ್ತಿದ್ದೀರಾ ಅಥವಾ ಆಕೆ ಈಗಲೂ ನಿಮ್ಮನ್ನು ಪ್ರಶಂಸೆ ಮಾಡಿ, ಶ್ರೇಷ್ಠ ಬಾಯ್ ಫ್ರೆಂಡ್ ಎಂದು ಹೇಳುತ್ತಿದ್ದಾಳೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎನ್ನುವುದು ನಿಮ್ಮ ಉತ್ತರವಾದರೆ, ಆಗ ಆಕೆಗೆ ಈಗಲೂ ನಿಮ್ಮ ಮೇಲೆ ಆಸಕ್ತಿ ಇದೆ ಎಂದು ಹೇಳಬಹುದು.

ಬ್ರೇಕ್ ಅಪ್ ಗೆ ಕಾರಣಗಳು
ಇದು ತುಂಬಾ ಸ್ಪಷ್ಟವಾಗಿ ಇರುವುದು. ಕ್ಷುಲ್ಲಕ ಕಾರಣಕ್ಕಾಗಿ ನೀವಿಬ್ಬರು ದೂರವಾಗಿದ್ದೀರಿ ಎಂದು ಆಕೆಗೆ ಕೂಡ ತಿಳಿದಿರುವುದು ಮತ್ತು ಇದು ನಿಮಗೆ ಕೂಡ ಅನುಭವ ಆಗಿದೆಯಾ? ಈಗಲೂ ಇದನ್ನು ಸರಿಪಡಿಸಬಹುದು ಎಂದು ಅವಳು ಹೇಳುತ್ತಿದ್ದಾಳೆಯಾ ಮತ್ತು ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಲು ಬಯಸುತ್ತಿದ್ದಾಳೆಯಾ. ಹಾಗಾದರೆ ಆಕೆ ಖಂಡಿತವಾಗಿಯೂ ಮತ್ತೆ ನಿಮ್ಮ ಜೀವನದಲ್ಲಿ ಮರಳಲು ಬಯಸಿದ್ದಾಳೆ.

ಆಕೆ ಬೇರೆಯವರ ಜತೆಗೆ ಡೇಟಿಂಗ್ ಇಷ್ಟಪಡಲ್ಲ
ಇದು ತುಂಬಾ ಬಲವಾದ ಸುಳಿವು ಆಗಿದೆ. ಆಕೆ ನಿಮ್ಮೊಂದಿಗೆ ಸಂಪರ್ಕದಲ್ಲಿ ಇರಲು ಪ್ರಯತ್ನಿಸುವುದು ಮಾತ್ರವಲ್ಲದೆ, ಬೇರೆ ಯಾರ ಜತೆಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಸೂಚನೆ ನೀಡಿರಬಹುದು. ನಿಮ್ಮ ಜೀವನದಲ್ಲಿ ಮರಳಿ ಬರಲು ಆಕೆ ಎಲ್ಲಾ ರೀತಿಯ ಸಾಧಕಬಾಧಕಗಳನ್ನು ಅಳೆದು ತೂಗಿ ನೋಡುತ್ತಿರಬಹುದು. ತನ್ನ ಆಪ್ತ ಸ್ನೇಹಿತರಲ್ಲೂ ಇದಕ್ಕೆ ಸಲಹೆ ಕೇಳಿರಬಹುದು.

ನಿಮ್ಮ ಪ್ರೀತಿಯ ಜೀವನದ ಬಗ್ಗೆ ಕೇಳಬಹುದು
ನಿಮ್ಮ ಬಗ್ಗೆ ಆಕೆಗೆ ಈಗಲೂ ಪ್ರೀತಿ ಇರಬಹುದು ಮತ್ತು ಬೇರೆಯವರ ಜತೆಗೆ ನೀವು ಡೇಟಿಂಗ್ ಮಾಡುತ್ತಿದ್ದರೆ ಆಗ ಆಕೆಗೆ ತುಂಬಾ ಬೇಸರವಾಗಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ಏನು ನಡೆಯುತ್ತದೆ ಎಂದು ತಿಳಿಯಲು ಆಕೆ ತುಂಬಾ ಪ್ರಯತ್ನಿಸುತ್ತಿರಬಹುದು. ನಿಮ್ಮೊಂದಿಗೆ ಯಾರು ಇರುತ್ತಾರೆ ಮತ್ತು ಡೇಟಿಂಗ್ ಆ್ಯಪ್ ನಲ್ಲಿ ಅಕೌಂಟ್ ಇದೆಯಾ ಎಂದು ಆಕೆ ನೋಡಬಹುದು. ನಿಮ್ಮನ್ನು ಬಿಡಲು ಆಕೆಗೆ ಮನಸ್ಸಿಲ್ಲ ಎನ್ನುವುದು ಇದರ ಅರ್ಥವಾಗಿದೆ.

ಅದಾಗ್ಯೂ…
ಮಾಜಿ ಪ್ರೇಯಸಿಯು ನಿಮ್ಮ ಜೀವನದಲ್ಲಿ ಮರಳಿ ಬರಬೇಕು ಎಂದು ಇಚ್ಛಿಸಿದ್ದರೆ ಆಗ ನೀವು ತಕ್ಷಣವೇ ನಿರ್ಧಾರ ಮಾಡಬಾರದು. ನೀವು ಸಾಕಷ್ಟು ಸಮಯ ತೆಗೆದುಕೊಳ್ಳಿ ಮತ್ತು ಆಕೆಯ ಜತೆಗೆ ಮುಂದುವರಿಯುವುದು ಅಗತ್ಯವಿದೆಯಾ ಮತ್ತು ಸಂಬಂಧ ಒಳ್ಳೆಯದಾ ಎಂದು ಯೋಚಿಸಿ. ಆಕೆ ಯೊಂದಿಗೆ ನೀವು ಮಾತನಾಡುವ ಮೊದಲು ನಿಮ್ಮಲ್ಲಿ ಈ ಬಗ್ಗೆ ಒಂದು ಸ್ಪಷ್ಟವಾದ ನಿಲುವು ಇರಲಿ ಮತ್ತು ಸರಿಯಾದ ಕಾರಣವಿದ್ದರೆ ಮಾತ್ರ ಆಗ ನೀವು ಈ ಸಂಬಂಧದಲ್ಲಿ ಮರಳಿ ಮುಂದುವರಿಯಬಹುದು.



Click it and Unblock the Notifications











