For Quick Alerts
ALLOW NOTIFICATIONS  
For Daily Alerts

ಇದು ಚುಂಬನದ ವಿಷಯ, ಸ್ವಲ್ಪ ಇಂಟರೆಸ್ಟಿಂಗ್!

By Deepu
|

ಪ್ರೀತಿ ವ್ಯಕ್ತಪಡಿಸಲು ನೀಡುವಂತಹ ಚುಂಬನ ಅದು ತುಂಬಾ ವಿಶೇಷವಾದದ್ದು. ಯಾಕೆಂದರೆ ಸಂಗಾತಿಗಳು ಮಾತ್ರ ಚುಂಬಿಸುವುದಲ್ಲ. ಮಗನ ಹಣೆಗೆ ತಾಯಿಯು ಮುತ್ತನ್ನಿಡುತ್ತಾಳೆ. ಮಗಳ ಸಾಧನೆಗೆ ಮೆಚ್ಚಿ ತಂದೆ ಗಲ್ಲಕ್ಕೆ ಮುತ್ತಿಕ್ಕುತ್ತಾನೆ. ಇನ್ನು ಪಾರ್ಕ್, ನಿರ್ಜನ ಪ್ರದೇಶಗಳಲ್ಲಿ ನೀಡುವಂತಹ ಚುಂಬನಗಳು ಬೇರೆಯೇ ರೀತಿಯದ್ದಾಗಿದೆ. ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ಆದರೆ ಮನುಷ್ಯರು ಕೇವಲ ಪ್ರೀತಿ ತೋರಿಸಲು ಮಾತ್ರ ಚುಂಬಿಸುತ್ತಾರೆಯಾ? ಎನ್ನುವ ಪ್ರಶ್ನೆ ಬರುತ್ತದೆ. ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡ ತಮ್ಮ ಮಿಲನಕ್ಕೆ ಹಾಗೂ ಲೈಂಗಿಕ ಕ್ರಿಯೆಗೆ ಆಹ್ವಾನಿಸಲು ಚುಂಬಿಸುತ್ತವೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಮನುಷ್ಯರಲ್ಲಿ ಹಾರ್ಮೋನು ಚುಂಬನಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ಆದರೆ ಚುಂಬನಕ್ಕೆ ಕೆಲವೊಂದು ಕಾರಣಗಳು ಇವೆ. ಅದನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ...

ವಾಸ್ತವ #1

ವಾಸ್ತವ #1

ಚುಂಬನದಲ್ಲಿ ಹಲವಾರು ವಿಧಾನಗಳಿವೆ. ಕೆಲವೊಂದು ಸಂಪ್ರದಾಯಗಳಲ್ಲಿ ಪರಸ್ಪರ ಭೇಟಿಯಾದಾಗ ಚುಂಬಿಸುತ್ತಾರೆ. ಆದರೆ ಮಿಲನಕ್ಕೆ ಸಂಬಂಧಿಸಿದಂತೆ ಪರಸ್ಪರರ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸುವುದು ಚುಂಬನವಾಗಿದೆ.

ವಾಸ್ತವ #2

ವಾಸ್ತವ #2

ಚುಂಬನವು ವೈಯಕ್ತಿವಾಗಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಮತ್ತು ಸಾಮಾಜಿಕ ಮಟ್ಟದಲ್ಲೂ ಇದು ಸಾಮಾಜಿಕ ಸಂಬಂಧವನ್ನು ಬಲಪಡಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.

ವಾಸ್ತವ #3

ವಾಸ್ತವ #3

ಸಂಗಾತಿಗಳಲ್ಲಿ ಚುಂಬನವು ಸಂದೇಶವನ್ನು ರವಾನಿಸುತ್ತದೆ. ನೀವು ಡೇಟಿಂಗ್ ಮಾಡುತ್ತಿದ್ದರೆ ಚುಂಬನವು ರಾಸಾಯನಿಕವಾದ ಸಂದೇಶವನ್ನು ಮೆದುಳಿಗೆ ಕಳುಹಿಸುತ್ತದೆ. ಇದರಿಂದ ಸಂಬಂಧದ ಬಗ್ಗೆ ನೀವು ನಿರ್ಧಾರ ತೆಗೆದುಕೊಳ್ಳಬಹುದು.

ವಾಸ್ತವ #4

ವಾಸ್ತವ #4

ಚುಂಬನವು ಇಬ್ಬರು ವ್ಯಕ್ತಿಗಳನ್ನು ಹತ್ತಿರಕ್ಕೆ ತರುತ್ತದೆ ಮತ್ತು ವ್ಯಕ್ತಿಯ ಇತರ ಕೆಲವೊಂದು ಅಂಶಗಳನ್ನು ಸ್ವೀಕರಿಸುತ್ತದೆ.

ವಾಸ್ತವ #5

ವಾಸ್ತವ #5

ಮೊದಲ ಸಲ ಯಾವುದೇ ಪುರುಷನು ಮಹಿಳೆಯನ್ನು ಚುಂಬಿಸಿದಾಗ ಆಕೆಯ ಸುಪ್ತಮನಸ್ಸು ಪ್ರತಿರಕ್ಷಣೆ ಹಾಗೂ ದೈಹಿಕ ಹೊಂದಾಣಿಕೆಯನ್ನು ಸ್ವೀಕರಿಸುತ್ತದೆ.

ವಾಸ್ತವ #6

ವಾಸ್ತವ #6

ಪುರುಷರು ಚುಂಬಿಸದೆ ಕೂಡ ಪ್ರೀತಿಸಬಲ್ಲರು. ಆದರೆ ಶೇ.98ರಷ್ಟು ಮಹಿಳೆಯರು ಚುಂಬನವಿಲ್ಲದೆ ರೋಮ್ಯಾನ್ಸ್ ನ್ನು ಊಹಿಸಲು ಸಾಧ್ಯವಿಲ್ಲ.

ವಾಸ್ತವ #7

ವಾಸ್ತವ #7

ಸಂಗಾತಿಗಳು ಪರಸ್ಪರ ಚುಂಬಿಸಿದಾಗ ಕಾರ್ಟಿಸಾಲ್ ಮಟ್ಟವು ಕುಗ್ಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಚುಂಬನವು ಒತ್ತಡವನ್ನು ಕಡಿಮೆ ಮಾಡಿ ದೇಹಕ್ಕೆ ಆರಾಮವನ್ನು ನೀಡುವುದು.

ಚುಂಬಿಸಿದಾಗ ಕೇವಲ ಪ್ರೀತಿ ವ್ಯಕ್ತವಾಗುವುದು ಮಾತ್ರವಲ್ಲ...

ಚುಂಬಿಸಿದಾಗ ಕೇವಲ ಪ್ರೀತಿ ವ್ಯಕ್ತವಾಗುವುದು ಮಾತ್ರವಲ್ಲ...

ಚುಂಬಿಸಿದಾಗ ಕೇವಲ ಪ್ರೀತಿ ವ್ಯಕ್ತವಾಗುವುದು ಮಾತ್ರವಲ್ಲದೆ ಇನ್ನು ಹಲವಾರು ರೀತಿಯ ಕಾರಣಗಳು ಇದೆ ಎಂದು ಈ ಲೇಖನವನ್ನು ಓದಿದ ಬಳಿಕ ನಿಮಗೆ ತಿಳಿಯುದಿದೆಯಲ್ಲಾ? ಇನ್ನು ಚುಂಬಿಸಲು ತಡವೇಕೇ?

English summary

Why Humans Show Affection By Kissing

There are so many reasons why humans kiss in order to display affection. In fact, some studies claim that even animals do kiss in their own way in order to show affection. In animals, kissing could be an act to touch and assess a potential mate. It is also used as a feeding method in birds.
Story first published: Wednesday, October 5, 2016, 20:24 [IST]
X
Desktop Bottom Promotion