Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!
ಪ್ರತಿಯೊಬ್ಬರಲ್ಲೂ ತಮ್ಮದೇ ಆದ ವೈಯಕ್ತಿಕ ಗುಟ್ಟುಗಳಿರುತ್ತವೆ. ವಿವಾಹದ ಬಳಿಕ ನಮ್ಮ ಜೀವನಸಂಗಾತಿಗಳಲ್ಲಿ ಎಲ್ಲಾ ಗುಟ್ಟುಗಳನ್ನು ಹಂಚಿಕೊಂಡರೂ ಕೆಲವು ಗುಟ್ಟುಗಳ ಬಗ್ಗೆ ಚಕಾರವೆತ್ತದೇ ಇರುವುದು ಸುಖ ದಾಂಪತ್ಯಕ್ಕೆ ಅನಿವಾರ್ಯವಾಗಿದೆ. ಕೆಲವೊಂದು ಗುಟ್ಟುಗಳು ಕೊಂಚ ಕಹಿಯಾಗಿದ್ದರೂ ವಿವಾಹಕ್ಕೂ ಮುನ್ನವೇ ತಿಳಿಸಿ ಸ್ಪಷ್ಟಪಡಿಸಿಕೊಳ್ಳುವುದು ಉತ್ತಮ.
ಏಕೆಂದರೆ ಭವಿಷ್ಯದಲ್ಲಿ ಎಂದಾದರೊಮ್ಮೆ ಈ ಗುಟ್ಟು ಥಟ್ಟನೇ ಹೊರಬಂದು ಅಥವಾ ಮೂರನೆಯ ವ್ಯಕ್ತಿಯ ಮೂಲಕ ತಿಳಿಯಲ್ಪಟ್ಟು ಸುಖದಾಂಪತ್ಯದಲ್ಲಿ ಹುಳಿ ಹಿಂಡುವ ಸಾಧ್ಯತೆ ಇದೆ. ಅದರಲ್ಲೂ ಮಹಿಳೆಯರು ಸಂಬಂಧಗಳನ್ನು ಕುರಿತು ಕಾಳಜಿ ವಹಿಸುವಲ್ಲಿ ಪುರುಷರಿಗಿಂತಲೂ ಹೆಚ್ಚು ವ್ಯಾಕುಲತೆ ತೋರುತ್ತಾರೆ. ಆದರೆ ಕೆಲವು ಗುಟ್ಟು ಮತ್ತು ವೈಯಕ್ತಿಕ ವಿಷಯಗಳನ್ನು ಗುಟ್ಟಾಗಿಯೇ ಇಟ್ಟುಕೊಳ್ಳುವುದು ಉತ್ತಮ. ಈ ಗುಟ್ಟುಗಳು ಯಾವುವು ಎಂದು ಕುತೂಹಲ ಮೂಡಿತೇ? ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನುನೀಟಲಾಗಿದೆ ಮುಂದೆ ಓದಿ...

ಕ್ಷಣಿಕ ಪ್ರೇಮದ ಬಗ್ಗೆ
ಸಾಮಾನ್ಯವಾಗಿ ಮಹಿಳೆಯರು ತಮ್ಮ ಹದಿಹರೆಯದಲ್ಲಿ ಆದ ನಡವಳಿಕೆಯ ಬಗ್ಗೆಯೇ ಅವರನ್ನು ಅಳೆಯಲಾಗುತ್ತದೆ ಎಂಬ ನಂಬಿಕೆ ಹೊಂದಿರುತ್ತಾರೆ. ಆದ್ದರಿಂದ ವಯಸ್ಸಿನ ಆಕರ್ಷಣೆಗೆ ಮಣಿದು ನಡೆದ ಕ್ಷಣಿಕ ಪ್ರೇಮವ್ಯವಹಾರಗಳನ್ನು ಎಂದಿಗೂ ವಿವಾಹದ ಬಳಿಕ ಪತಿಯರಲ್ಲಿ ಹೇಳಿಕೊಳ್ಳಬಾರದು. ಏಕೆಂದರೆ ಇದು ಅವರಲ್ಲಿ ಮತ್ಸರದ ಭಾವನೆಯನ್ನುಂಟುಮಾಡಬಹುದು. ಅಲ್ಲದೇ ಇಂತಹ ವ್ಯವಹಾರ ವಿವಾಹದ ಬಳಿಕವೂ ನಡೆದರೆ ಎಂಬ ಅನುಮಾನ ಅವರಲ್ಲಿ ಉಂಟುಮಾಡಬಹುದು. ಆದ್ದರಿಂದ ಒಂದು ವೇಳೆ ಈ ಕ್ಷಣಿಕ ಪ್ರೇಮವ್ಯವಹಾರ ಮುಂದೆಂದಾದರೂ ತೊಂದರೆ ತಂದೊಡ್ಡುವ ಅಪಾಯವಿದ್ದರೆ ಸೂಚ್ಯವಾಗಿ ವಿವಾಹಕ್ಕೂಮುನ್ನವೇ ತಿಳಿಸಿದರೆ ಉತ್ತಮ. ಇದು ಸಾಧ್ಯವಿಲ್ಲದಿದ್ದಲ್ಲಿ ಜೀವನಪೂರ್ತಿ ಇದನ್ನು ಹೊಟ್ಟೆಯಲ್ಲಿ ಅಡಗಿಸಿಟ್ಟುಕೊಳ್ಳುವುದು ಉತ್ತಮ ಮತ್ತು ಅನಿವಾರ್ಯ.
ಮಹಿಳಾ ಗಾಸಿಪ್ ಬಗ್ಗೆ
ಸಾಮಾನ್ಯವಾಗಿ ಮಹಿಳೆಯರೇ ಗುಂಪಾಗುವ ಪಾರ್ಟಿಗಳಲ್ಲಿ ವಿಷಯಗಳು ಇತರ ಮಹಿಳೆಯರ ಪ್ರೇಮ ವ್ಯವಹಾರದ ಸುತ್ತವೇ ಸುತ್ತುತ್ತಿರುತ್ತವೆ. ಇದು ಕಿವಿಯಿಂದ ಕಿವಿಗೆ ಹರಡುವ ವೇಳೆ ತನ್ನೊಂದಿಗೆ ಉಪ್ಪು ಖಾರ ಹುಳಿ ಸೇರುತ್ತಾ ಹತ್ತನೆಯ ಕಿವಿಗೆ ತಲುಪುವವರೆಗೆ ವಿಷಯದ ಮುಖ್ಯ ಭಾಗವೇ ಬದಲಾಗಿರುತ್ತದೆ. ಇದನ್ನೇ ಗಾಸಿಪ್ ಎಂದು ಕರೆಯುತ್ತಾರೆ. ಆದ್ದರಿಂದ ಗಾಸಿಪ್ ನಲ್ಲಿ ಕೇಳಿದ ವಿಷಯಗಳನ್ನು ಜೀವನಸಂಗಾತಿಯೊಡನೆ ವಿಮರ್ಷಿಸದಿರುವುದೇ ವಾಸಿ.
ನಿಮ್ಮ ಮೇಕಪ್ ಕಿಟ್ ಬಗ್ಗೆ
ಪುರುಷರಿಗೆ ಮಹಿಳೆಯರು ಸೌಂದರ್ಯವತಿಯರಾಗಿ ಕಾಣುವುದು ಮುಖ್ಯವೇ ಹೊರತು ಇದಕ್ಕಾಗಿ ಹೇಗೆ ಅಲಂಕರಿಸಿಕೊಂಡರು ಎಂಬ ಮಾಹಿತಿಯಲ್ಲ. ಮೊಡವೆಗಳನ್ನು ಮರೆಮಾಚುವ, ಸೌಂದರ್ಯವನ್ನು ಪ್ರಖರಗೊಳಿಸುವ ಮೊದಲಾದ ಇತರರಿಗೆ ತಿಳಿದಿರದ ಹತ್ತು ಹಲವಾರು ಗುಟ್ಟುಗಳು ನಿಮ್ಮಲ್ಲಿದ್ದರೂ ಪುರುಷರು ಇದನ್ನು ಕೇಳಬಯಸುವುದಿಲ್ಲ. ಆದ್ದರಿಂದ ಈ ಗುಟ್ಟುಗಳನ್ನು ಗುಟ್ಟಾಗಿಯೇ ಇಡಿ.
ವಿವಾಹಪೂರ್ವದ ಸಂಬಂಧದ ಬಗ್ಗೆ
ಒಂದು ವೇಳೆ ಈ ವಿವಾಹಕ್ಕೂ ಮುನ್ನ ಬೇರೊಂದು ಸಂಬಂಧ ಕುದುರುವುದಿದ್ದು ಕಾರಣಾಂತರಗಳಿಂದ ಇದು ರದ್ದಾಗಿದ್ದರೆ ಹಿಂದಿನ ವಿಷಯಗಳನ್ನು ಕೆದಕದಿರುವುವೇ ವಾಸಿ. ವಿವಾಹಕ್ಕೂ ಮುನ್ನ ಈ ಬಗ್ಗೆ ಸೂಚ್ಯವಾಗಿ ತಿಳಿಸಿದರೆ ಉತ್ತಮ. ಆದರೆ ವಿವಾಹದ ಬಳಿಕ ಈ ಬಗ್ಗೆ ಚಕಾರವೆತ್ತದಿರುವುದೇ ಉತ್ತಮ.
ನಿಮ್ಮ ಪತಿಯ ಮನೆಯವರ ಬಗ್ಗೆ ಇರುವ ಗುಟ್ಟುಗಳು



Click it and Unblock the Notifications


