Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಹುಡುಗಿಯರ ಸಮಸ್ಯೆಯನ್ನೂ ಕೂಡ ಅರ್ಥ ಮಾಡಿಕೊಳ್ಳಿ ಸ್ವಾಮಿ!
ಹೆಣ್ಣಾಗಿ ಹುಟ್ಟುವುದು ವರವೋ, ಶಾಪವೋ? ಬಹುಶಃ ಬಹುತೇಕ ಎಲ್ಲಾ ಮಹಿಳೆಯರಿಗು ಈ ಪ್ರಶ್ನೆ ಎದುರಾಗಿರುತ್ತದೆ. ತಾಯಿಯಾಗುವ ಸಂಭ್ರಮ ಬಂದಾಗ ಹೆಣ್ಣಾಗಿ ಹುಟ್ಟಿದ್ದಕ್ಕೆ ಸಂತಸಪಡುವ ಹೆಂಗಸರು, ವೈಯುಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಎದುರಾದಾಗ, ಗಂಡಸರು ಎಷ್ಟು ಅದೃಷ್ಟಶಾಲಿಗಳಲ್ಲವೆ ಎಂದು ಚಿಂತಿಸಲಾರಂಭಿಸುತ್ತಾರೆ. ಹುಡುಗಿಯರು ಋತುಚಕ್ರದ ಸಮಸ್ಯೆಯಿಂದ ಬಳಲುತ್ತಾರೆ, ಆದರೆ ಹುಡುಗರಿಗೆ ಋತುಚಕ್ರದ ಸಮಸ್ಯೆಯೆಂದರೆ ಏನು ಎಂಬುದು ಸಹ ತಿಳಿಯದು.
ಹುಡುಗಿಯರು ಈ ವಿಚಾರವಾಗಿ ಹೆಚ್ಚಿಗೆ ಮಾತನಾಡುವುದಿಲ್ಲ ಮತ್ತು ಇತರರ ಬಳಿ ಸಹ ಹೇಳಿಕೊಳ್ಳುವುದಿಲ್ಲ. ಕೆಲವೊಮ್ಮೆ ಹುಡುಗರು ಕೆಲವೊಂದು ಸಂಗತಿಗಳನ್ನು ಹುಡುಗಿಯರು ಇಷ್ಟಪಡುತ್ತಾರೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಹುಡುಗಿಯರು ಅದನ್ನು ಇಷ್ಟಪಟ್ಟಿರುವುದಿಲ್ಲ. ಮುಟ್ಟಿನ ಅವಧಿಯ ನೋವು ಮತ್ತು ಮುಜುಗರಗಳನ್ನು ಹುಡುಗರು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಕೇವಲ ಇದೊಂದೆ ಅಲ್ಲ, ಬಹುತೇಕ ವಿಷಯಗಳನ್ನು ಹುಡುಗಿಯರು ವೈಯುಕ್ತಿಕ ಎಂದು ಭಾವಿಸುತ್ತಾರೆ, ಆದರೆ ಗಂಡಸರು ಅದಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತಾರೆ. ಈ ಅಂಕಣದಲ್ಲಿ, ಹುಡುಗರು ಅರ್ಥ ಮಾಡಿಕೊಳ್ಳಲಾಗದ ಕೆಲವೊಂದು ಸಮಸ್ಯೆಗಳನ್ನು ವಿವರಿಸಿದ್ದೇವೆ. ಪ್ರೀತಿ, ವಾತ್ಸಲ್ಯವೇ ಅನ್ಯೋನ್ಯ ಸಂಬಂಧಕ್ಕೆ ರಹದಾರಿ

ಮುಟ್ಟನ್ನು ಮುಚ್ಚಿಟ್ಟುಕೊಳ್ಳುವುದು
ಮುಟ್ಟು ಹುಡುಗಿಯರು ಎದುರಿಸುವ ಅತ್ಯಂತ ಕೆಟ್ಟ ಸಮಸ್ಯೆಗಳಲ್ಲಿ ಒಂದು. ಅವರ ಬಟ್ಟೆಯ ಮೇಲೆ ಕಲೆಗಳು ಆಗದಂತೆ ಅವರು ನೋಡಿಕೊಳ್ಳಬೇಕು. ಅವರ ಬ್ಯಾಗ್‌ನಲ್ಲಿ ಯಾವಾಗಲು ಒಂದು ನ್ಯಾಪ್‍ಕಿನ್ ಇರಬೇಕು. ಯಾವಾಗ ಹುಡುಗರು ಈ ಬ್ಯಾಗನ್ನು ತೆರೆದು ನೋಡಲು ಪ್ರಯತ್ನಿಸುವರೋ, ಆಗ ಅವರಿಗೆ ಮುಜುಗರವಾಗುತ್ತದೆ. ಇಂತಹ ವಿಚಾರಗಳನ್ನು ಹುಡುಗರು ಅರ್ಥ ಮಾಡಿಕೊಳ್ಳುವುದಿಲ್ಲ.
ಎದೆಹಾಲು ಕುಡಿಸುವುದು
ಆಗ ತಾನೆ ತಾಯಿಯಾದ ಯುವತಿಯರು ಮಗುವಿಗೆ ಹಾಲು ಕುಡಿಸುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಏಕೆಂದರೆ ಆಕೆಯ ಸುತ್ತ ಅನೇಕ ಚಟುವಟಿಕೆಗಳು ನಡೆಯುತ್ತ ಇರುತ್ತವೆ, ಆದರೆ ಅದರ ನಡುವೆ ತನ್ನ ಮಗುವಿಗೆ ಹಾಲು ಕುಡಿಸುವ ಹೊಸ ಪರಿಸ್ಥಿತಿಯು ಆಕೆಯನ್ನು ಸಂದಿಗ್ಧತೆಗೆ ದೂಡುತ್ತದೆ. ಆಗ ಹುಡುಗರು ಆ ಯುವತಿ, ತನ್ನ ತಾಯಿ ಪಾತ್ರವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಗೊಣಗುತ್ತಾರೆ. ಆದರೆ ಆಕೆಯು ಒಂದು ಹೆಣ್ಣಲ್ಲವೇ?, ಆಕೆಗು ಸ್ವಲ್ಪ ಕಷ್ಟಗಳು ಇರುತ್ತವೆ ಇದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ.
ಔಟ್‌ಫಿಟ್
ಔಟ್‌ಫಿಟ್ ಹುಡುಗಿಯರು ಎದುರಿಸುವ ಮತ್ತೊಂದು ಸಮಸ್ಯೆ, ಇದನ್ನು ಹುಡುಗರು ಅರ್ಥ ಮಾಡಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಹುಡುಗಿಯರು ತಮಗಿಷ್ಟವಾದ ಔಟ್‌ಫಿಟ್ ಅಥವಾ ಬಟ್ಟೆ ಬರೆಗಳನ್ನು ಧರಿಸಿಕೊಂಡು ಆರಾಮವಾಗಿ ಇರುತ್ತಾರೆ. ಆದರೆ, ಹುಡುಗರಿಗೆ ತಮ್ಮ ಹುಡುಗಿ ಇಂತಹದೆ ಬಟ್ಟೆಯಲ್ಲಿ ತನಗೆ ಕಾಣಬೇಕು ಎಂಬ ಹಂಬಲವಿರುತ್ತದೆ. ಆಗ ನೋಡಿ ಅವರಿಗೆ ಫಜೀತಿಯುಂಟಾಗುತ್ತದೆ. ಹೇಗೋ ಆ ಬಟ್ಟೆಯನ್ನು ಧರಿಸಿದರೂ, ಅದು ಅವರಿಗೆ ಸರಿಹೊಂದದೆ, ಅವರಿಗೆ ಅಸೌಖ್ಯವನ್ನು ತರುತ್ತದೆ. ಇದು ಹುಡುಗರಿಗೆ ಅರ್ಥವಾಗುವುದಿಲ್ಲ. ಅಷ್ಟಕ್ಕೂ ಸುಖಿ ಸಂಸಾರದ ಹಿಂದಿರುವ ಯಶಸ್ಸಿನ ಗುಟ್ಟೇನು?
ಜೀನ್ಸ್ ಸೈಜ್
ನಾವೆಲ್ಲ ಸಾಮಾನ್ಯವಾಗಿ ನೋಡಿರುವಂತೆ, ಹುಡುಗರಿಗೆ ಅವರ ಸೊಂಟದ ಅಳತೆಯಷ್ಟೇ ಜೀನ್ಸ್ ದೊರೆಯುತ್ತದೆ. ಆದರೆ ಹುಡುಗಿಯರು, ಉತ್ಪಾದಕರು ನೀಡಿದ ಸೈಜನ್ನು ಧರಿಸುತ್ತಾರೆ. ಇದರ ಹಿಂದೆ ನಾನಾ ಪಡಿಪಾಟಲು ಇರುತ್ತದೆ. ಅದು ಹುಡುಗರಿಗೆ ಅರ್ಥವಾಗುವುದಿಲ್ಲ ಬಿಡಿ.
ಒತ್ತಡ
ಹುಡುಗಿಯರು ಒಂದೇ ಸಮಯದಲ್ಲಿ ಹಲವಾರು ಕೆಲಸಗಳನು ಮಾಡುತ್ತಾರೆ. ಅವರು ಅಧಿಕ ಒತ್ತಡವನ್ನು ನಿಭಾಯಿಸುತ್ತಾರೆ. ಆದರೆ ಇದು ಹುಡುಗರಿಗೆ ಅರ್ಥವಾಗುವುದಿಲ್ಲ. ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?
ವೈಯುಕ್ತಿಕ ಸಮಯ
ನೀವು ದಂಪತಿಗಳಾಗಿದ್ದರು, ಒಂದು ಹುಡುಗಿಗೆ ತನ್ನದೆ ಆದ ವೈಯುಕ್ತಿಕ ಸಮಯದ ಅವಶ್ಯಕತೆ ಇರುತ್ತದೆ. ಆಕೆಗೆ ತನ್ನದೆ ಆದ ಅಭಿರುಚಿಗಳು ಇರುತ್ತವೆ. ಅದನ್ನು ಹುಡುಗರು ಅರ್ಥ ಮಾಡಿಕೊಳ್ಳಬೇಕು.



Click it and Unblock the Notifications



