Latest Updates
-
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಬ್ರೇಕಪ್ ನಂತರ ಸೋಶಿಯಲ್ ಮೀಡಿಯಾ: ನಿಮ್ಮ ಗೌಪ್ಯತೆ ಮತ್ತು ಕಾನೂನು ರಕ್ಷಣೆಗೆ ಈ ಟಿಪ್ಸ್ ಪಾಲಿಸಿ -
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ!
ಹೆಂಗಸರ ಮನದಾಳವನ್ನು ಅರಿಯಲು ಸಲಹೆಗಳು
ಹೆಂಗಸರನ್ನು ಅರ್ಥ ಮಾಡಿಕೊಳ್ಳಲು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಂದಲೂ ಸಹ ಸಾಧ್ಯವಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ನೀವು ಎಷ್ಟು ವರ್ಷದಿಂದ ಆಕೆಯನ್ನು ನೋಡಿದ್ದೀರಿ, ನಿಮ್ಮ ಮತ್ತು ಆಕೆಯ ಸಂಬಂಧ ಎಷ್ಟು ಕಾಲದಿಂದ ಚಾಲ್ತಿಯಲ್ಲಿದೆ ಎಂಬುದು ಇಲ್ಲಿ ಮುಖ್ಯವಲ್ಲ. ಅದೇ ಎಷ್ಟೇ ಹಳೆಯದಾದರು ಆಕೆಯು ನಿಮಗೆ ಕೆಲವು ಅಂಶಗಳಲ್ಲಿ ನಿಗೂಢವಾಗಿಯೇ ಉಳಿಯುತ್ತಾಳೆ.
ಒಬ್ಬ ಹೆಂಗಸನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಜೀವಿತಾವಧಿಯೇ ಬೇಕಾಗುವುದು. ಆಕೆಯನ್ನು ಅರ್ಥ ಮಾಡಿಕೊಳ್ಳಲು ಹಲವಾರು ಮಾರ್ಗಗಳು ಇವೆ. ಆಕೆಯೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳಲು ಸಹ ಹಲವು ಮಾರ್ಗಗಳಿವೆ.
ಹೆಣ್ಣನ್ನು ಅರ್ಥಮಾಡಿಕೊಳ್ಳಲು ಮೊದಲು ಆಕೆಯೊಂದಿಗೆ ನೀವು ಹೆಚ್ಚು ಹೆಚ್ಚು ಸಂವಹನ ನಡೆಸಬೇಕು. ಹೆಣ್ಣಿನ ಜೊತೆಗೆ ಯಾವಾಗಲು ಕೊಡು ಮತ್ತು ಕೊಳ್ಳುವಿಕೆಯ ಭಾವವನ್ನು ಇಟ್ಟುಕೊಳ್ಳಬೇಕು. ಆಕೆಯನ್ನು ಅರ್ಥ ಮಾಡಿಕೊಳ್ಳಲು ಮೊದಲು ನೀವು ಆಕೆಯೊಂದಿಗೆ ನೇರವಂತಿಕೆಯಿಂದ ನಡೆದುಕೊಳ್ಳಿ. ಆಗಲೇ ಆಕೆಯು ನಿಮಗೆ ಅರ್ಥವಾಗಬಹುದು. ನೀವು ಆಕೆಯ ಕುರಿತಾದ ನಿಮ್ಮ ಪ್ರೀತಿ ಮತ್ತು ಬದ್ಧತೆಯನು ಆಕೆಯ ಮುಂದೆ ಪ್ರದರ್ಶಿಸಿದರೆ ಆಗ ಆಕೆಯು ನಿಮ್ಮನ್ನು ನಂಬಿ ತನ್ನ ನಿಜ ಸ್ವರೂಪವನ್ನು ತೋರ್ಪಡಿಸಬಹುದು.
ಆಕೆಯ ಮನಸ್ಸನ್ನು ಗೆಲ್ಲಲು ಮತ್ತು ಆಕೆಯನ್ನು ಅರ್ಥಮಾಡಿಕೊಳ್ಳಲು ನೀವು ಎಷ್ಟು ಬಾರಿ ಪ್ರಯತ್ನಿಸಿದಿರಿ ಮತ್ತು ಎಷ್ಟು ಬಾರಿ ಸೋತಿರಿ ಎಂಬುದು ಮುಖ್ಯವಲ್ಲ, ನಿಮಗೆ ಎಷ್ಟು ತಾಳ್ಮೆ ಇದೆಯೆಂಬುದೆ ಮುಖ್ಯ. ಹೆಣ್ಣನ್ನು ರಾತ್ರೋ ರಾತ್ರಿ ಅಥವಾ ಒಂದೇ ವರ್ಷದಲ್ಲಿ ಅರ್ಥಮಾಡಿಕೊಳ್ಳಲು ಅಸಾಧ್ಯ ಎಂಬುದನ್ನು ಅರಿಯಿರಿ.
ಒಂದು ಹೆಣ್ಣನ್ನು ಪರಿಚಯ ಮಾಡಿಕೊಂಡು ಒಂದು ದಶಕದ ನಂತರ ಏನಾದರು ಹೊಸ ವಿಚಾರ ಆಕೆಯ ಕುರಿತಾಗಿ ಅರಿತಾಗ ಅಚ್ಚರಿಗೊಳಗಾಗ ಬೇಡಿ. ಅವು ಸಹಜವಾಗಿ ನಡೆಯುತ್ತಿರುತ್ತವೆ. ಆದರೂ ಆಕೆಯ ಕುರಿತಾಗಿ ಕಾಳಜಿ ವ್ಯಕ್ತಪಡಿಸಿ, ಆಕೆಯನ್ನು ಮತ್ತಷ್ಟು ಪ್ರೀತಿಸಿ. ಆಕೆಯೊಂದಿಗೆ ಮುಕ್ತ ಮನಸ್ಸಿನಿಂದ ಬೆರೆಯಿರಿ. ಯಾವುದೇ ಕಾರಣಕ್ಕು ಆಕೆಯು ಮತ್ತೆ ಮುನಿಸಿಕೊಳ್ಳುವಂತಹ ಸನ್ನಿವೇಶವನ್ನು ಕಲ್ಪಿಸಬೇಡಿ. ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ ಓದಿಕೊಳ್ಳಿ

ತಾಳ್ಮೆ
ನಿಮ್ಮಾಕೆಯನ್ನು ಅರ್ಥಮಾಡಿಕೊಳ್ಳಲು ಸಮಯಬೇಕು ಮಾರಾಯ್ರೆ. ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ತಾಳ್ಮೆ ತುಂಬಾ ಮುಖ್ಯ. ಆಕೆಯನ್ನು ಅರ್ಥ ಮಾಡಿಕೊಳ್ಳಲು ದಿನಗಳನ್ನು , ವಾರಗಳನ್ನು ಮತ್ತು ತಿಂಗಳುಗಳನ್ನು ಲೆಕ್ಕ ಹಾಕಬೇಡಿ. ಬೀಜ ಬಿತ್ತಿ, ಬೆಳೆ ಯಾವಾಗ ಬರುತ್ತದೋ ಕಾಯಿರಿ, ಒಂದಲ್ಲ ಒಂದು ದಿನ ಬರುತ್ತೆ ಆ ಕಾಲ.

ಸಂವಹನ
ಹೆಂಗಸರಿಗೆ ಮಾತು ಎಂದರೆ ಇಷ್ಟ. ಹೆಣ್ಣನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆಕೆಯೊಂದಿಗೆ ಹೆಚ್ಚು ಮಾತನಾಡಬೇಕು. ಇದೇ ಆಕೆಯ ಗುಟ್ಟು, ಮಾತನಾಡಿ ಆಕೆಯ ಗುಟ್ಟುಗಳೆಲ್ಲ ರಟ್ಟಾಗುತ್ತ ಸಾಗುತ್ತವೆ!

ವಿಭಿನ್ನತೆ
ಹೆಂಗಸರು ಒಬ್ಬರಿಂದ ಒಬ್ಬರಿಗೆ ವಿಭಿನ್ನತೆಯನ್ನು ಹೊಂದಿರುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಕೆಲವರು ತುಂಬಾ ಸಂಕೋಚ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ತುಂಬಾ ವಿಶಾಲ ಮನೋಭಾವದವರಾಗಿರಬಹುದು. ಏನೇ ಇರಲಿ ಇಲ್ಲಿ ಪ್ರತಿಯೊಬ್ಬರು ವಿಭಿನ್ನ ಎಂಬುದನ್ನು ಮರೆಯಬೇಡಿ. ಆದರೆ ಎಚ್ಚರವಿರಲಿ ಆಕೆಯನ್ನು ಯಾವುದೇ ಕಾರಣಕ್ಕು ಇನ್ನೊಬ್ಬಾಕೆಯೊಂದಿಗೆ ಹೋಲಿಸಲು ಹೋಗಬೇಡಿ. ಆಕೆಯನ್ನು ಆಕೆಯಿರುವಂತೆಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಒಂದು ಪ್ರಶ್ನೆ ಕೇಳಿ
ಹೆಂಗಸರು ಮಾತನಾಡಲು ಹೆಚ್ಚು ಇಷ್ಟಪಡುತ್ತಾರೆ. ಆಕೆಯೊಂದಿಗೆ ಮಾತನಾಡಲು ಒಂದು ಪ್ರಶ್ನೆ ಕೇಳಿ ಸಾಕು, ಮಾತು ಅದಷ್ಟಕ್ಕೆ ಅದೇ ಮುಂದುವರಿಯುತ್ತದೆ. ಸಮಂಜಸತೆಯಿಂದ ಕೂಡಿದ ಪ್ರಶ್ನೆಗಳ ಮೂಲಕ ಆಕೆಯನ್ನು ಮಾತಿಗೆಳೆಯುವ ಪ್ರಯತ್ನ ಮಾಡಿ.

ಆಕೆಯ ಗತ
ಆಕೆಯನ್ನು ಅರ್ಥ ಮಾಡಿಕೊಳ್ಳಲು ಆಕೆಯ ಗತಕಾಲದ ಕುರಿತಾಗಿ ತಿಳಿಯಿರಿ. ಆಕೆಯ ಇತಿಹಾಸವು ಇಂದಿನ ವರ್ತಮಾನವನ್ನು ತಿಳಿಸುತ್ತದೆ. ಆಗಾಗಿ ಆಕೆಯ ಹಿಂದಿನ ಕಥೆಯನ್ನು ತಿಳಿಯಿರಿ.



Click it and Unblock the Notifications