Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಜನಪ್ರಿಯ ಸೆಲೆಬ್ರಿಟಿಗಳ ಮದುವೆಗಳು
ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಕೂಡ ಅಲ್ಲಿ ಸೆಲೆಬ್ರಿಟಿಗಳ ಮದುವೆ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತದೆ. ಕೆಲವು ಸೆಲೆಬ್ರಿಟಿಗಳು ಇನ್ನಷ್ಟೇ ಮದುವೆಯಾಗಬೇಕಾಗಿದೆ. ಮತ್ತೆ ಕೆಲವರು ಈಗಾಗಲೇ ಮದುವೆಯಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ತುಂಬಾ ದುರ್ಬಲವಾಗಿರುತ್ತದೆ ಎಂದು ನಂಬಲಾಗಿದೆ.
ಕೆಲವೇ ಕೆಲವು ಮಂದಿ ಸೆಲೆಬ್ರಿಟಿಗಳು ಮಾತ್ರ ತಮ್ಮ ಜನಪ್ರಿಯ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಅದಾಗ್ಯೂ ಕೆಲವು ಮಂದಿ ಸೆಲೆಬ್ರಿಟಿ ದಂಪತಿಗಳು ಯಶಸ್ವಿ ವೈವಾಹಿಕ ಜೀವನ ನಡೆಸಿ ಎಲ್ಲರ ವಾದವನ್ನು ತಪ್ಪೆಂದು ನಿರೂಪಿಸಿದ್ದಾರೆ. ಬರಾಕ್ ಒಬಾಮಾ ಮತ್ತು ಮಿಷೆಲ್ ಒಬಾಮಾ, ಸರಾಹ ಜೆಸ್ಸಿಕಾ ಪಾರ್ಕರ್ ಮತ್ತು ಮ್ಯಾಥ್ಯೂ ಬ್ರೊಡೆರಿಕ್ ಮದುವೆ ಕಠಿಣ ಸಮಯವನ್ನು ಮೆಟ್ಟಿ ನಿಂತಿದೆ.
ಹಲವಾರು ಮಂದಿ ಸೆಲೆಬ್ರಿಟಿಗಳು ಸಂತಸದ ವೈವಾಹಿಕ ಜೀವನಕ್ಕೆ ಸಂಕೇತವಾಗಿದ್ದಾರೆ. ಉದಾಹರಣೆಗೆ ಬೆಯೊನ್ಸೆ ಮತ್ತು ಜಾಯ್ 2008ರಿಂದ ಡ್ರಂಕ್ ಇನ್ ಲವ್ ನಲ್ಲಿದ್ದಾರೆ. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಸುಂದರ ಪತ್ನಿ ಮಿಷೆಲ್ ಒಬಾಮಾ ಅವರ ಲವ್ ಸ್ಟೋರಿ ಬಗ್ಗೆ ನಮಗೆ ತಿಳಿದೇ ಇದೆ.
1992ರಲ್ಲಿ ವಿವಾಹವಾಗಿದ್ದ ಈ ಜೋಡಿ ಇದುವರೆಗೆ ಪರಸ್ಪರ ಹೊಂದಿಕೊಂಡು ಬದುಕುತ್ತಿದೆ. ಬ್ರಾಡ್ ಪಿಟ್ ಮತ್ತು ಆ್ಯಂಜಲಿನಾ ಜೊಲಿ ಇದಕ್ಕೆ ಮತ್ತೊಂದು ಉದಾಹರಣೆ. ಅವರು ಇದುವರೆಗೆ ಮದುವೆಯಾಗದಿದ್ದರೂ ಆರು ಮಕ್ಕಳೊಂದಿಗೆ ಅವರು ಯಶಸ್ವಿ ಸಂಸಾರ ನಡೆಸುತ್ತಿದ್ದಾರೆ. ಬೋಲ್ಡ್ ಸ್ಕೈ ಇಲ್ಲಿ ಹೆಚ್ಚು ಪ್ರಸಿದ್ದಿ ಪಡೆದ ಜನಪ್ರಿಯ ಸೆಲೆಬ್ರಿಟಿಗಳ ಮದುವೆ ಬಗ್ಗೆ ತಿಳಿಸಲಿದೆ. ಈ ಯಶಸ್ವಿ ಮದುವೆಯಿಂದ ಸೆಲೆಬ್ರಿಟಿಗಳನ್ನು ಅನುಸರಿಸುವವರು ಪಾಠ ಕಲಿಯಬಹುದಾಗಿದೆ.
ಪ್ರತಿಯೊಬ್ಬ ಗಂಡಸು ತನ್ನ ಹೆಂಡತಿಯಲ್ಲಿ ಅಪೇಕ್ಷಿಸುವ 15 ಗುಣಗಳು

ಬರಾಕ್ ಮತ್ತು ಮಿಷೆಲ್ ಒಬಾಮಾ (Barack and Michelle Obama)
1989ರ ಜೂನ್ ನಲ್ಲಿ ಒಬಾಮಾ ಚಿಕಾಗೋದ ಕಾನೂನು ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ವೇಳೆ ಮಿಷೆಲ್ ಅವರನ್ನು ಭೇಟಿಯಾದರು. ಅದೇ ವರ್ಷ ಬೇಸಿಗೆಯಲ್ಲಿ ಮಿಷೆಲ್ ರಾಬಿನ್ಸನ್ ಮತ್ತು ಒಬಾಮಾ ಡೇಟಿಂಗ್ ಆರಂಭಿಸಿದರು ಮತ್ತು 1991ರಲ್ಲಿ ನಿಶ್ಚಿತಾರ್ಥವಾದರು. 1992ರ ಅಕ್ಟೋಬರ್ 3ರಂದು ಅವರಿಬ್ಬರು ಮದುವೆಯಾದರು. ಅವರಿಗೆ ಈಗ ಸಾಶಾ ಮತ್ತು ಮಲಿಯಾ ಎಂಬಿಬ್ಬರು ಮಕ್ಕಳಿದ್ದಾರೆ.

ಸರಾಹ ಜೆಸ್ಸಿಕಾ ಪಾರ್ಕರ್ ಮತ್ತು ಮ್ಯಾಥ್ಯೂ ಬ್ರೊಡೆರಿಕ್ (Sarah Jessica Parker and Matthew Broderick)
ಸೆಕ್ಸ್ ಆ್ಯಂಡ್ ದ ಸಿಟಿಯ ಸ್ಟಾರ್ 1997ರಲ್ಲಿ ಮ್ಯಾಥ್ಯೂರನ್ನು ಮದುವೆಯಾದರು. ಈ ದಂಪತಿಗೆ 2002ರಲ್ಲಿ ಜನಿಸಿದ ಜೇಮ್ಸ್ ವಿಲ್ಕಿ ಬ್ರೊಡೆರಿಕ್ ಎಂಬ ಮಗನಿದ್ದಾನೆ. 2009ರಲ್ಲಿ ಸರಾಹ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾಳೆ.

ಬೆಯೊನ್ಸ್ ಮತ್ತು ಜಾಯ್ (Beyonce and Jay Z)
2008ರಲ್ಲಿ ಮದುವೆಯಾದ ರ್ಯಾಪರ್ ಮತ್ತು ಗಾಯಕಿಗೆ ಬ್ಲೂ ಐವಿ ಎಂಬ ಒಬ್ಬಳು ಮಗಳಿದ್ದಾಳೆ. ಈ ಜೋಡಿ ಪರದೆ ಮೇಲೆ, ಸ್ಟೇಜ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರೋಮ್ಯಾನ್ಸ್ ಮಾಡುವುದನ್ನು ನೀವು ನೋಡಿರಬಹುದು.

ಆಂಡ್ರೆ ಅಗಾಸ್ಸಿ ಮತ್ತು ಸ್ಟೆಫಿ ಗ್ರಾಫ್ (Andre Agassi and Steffi Graf)
1999ರಲ್ಲಿ ಫ್ರೆಂಚ್ ಓಪನ್ ಗೆದ್ದಾಗ ಅವರಿಬ್ಬರು ಕುಣಿದಾಡಿದ್ದರು. 2001ರಲ್ಲಿ ಈ ಜೋಡಿ ಮದುವೆಯಾಗಿತ್ತು. ಈ ಎಪ್ರಿಲ್ 29ರಂದು ಈ ಜೋಡಿ 13ನೇ ಮದುವೆ ವಾರ್ಷಿಕೋತ್ಸವ ಆಚರಿಸಲಿದೆ. ಮದುವೆಯ ನಾಲ್ಕು ದಿನಗಳ ಬಳಿಕ ಸ್ಟೆಫಿ ತನ್ನ ಮೊದಲ ಮಗ ಜಾಡೆನ್ ಗಿಲ್ ಗೆ ಜನ್ಮ ನೀಡಿದ್ದರು.

ಜಸ್ಟಿನ್ ಟಿಂಬೆರ್ಲಕೆ ಮತ್ತು ಜೆಸ್ಸಿಕಾ ಬೈಲ್ (Justin Timberlake and Jessica Biel)
2001ರಲ್ಲಿ ಇಬ್ಬರಿಬ್ಬರು ದೂರವಾದ ಬಳಿ 2012ರಲ್ಲಿ ಮತ್ತೆ ಮದುವೆಯಾಗಿದ್ದರು. ಇದುವರೆಗೆ ಅವರು ತುಂಬಾ ಸಂತಸದ ಜೀವನ ಸಾಗಿಸುತ್ತಿದ್ದಾರೆ.

ಮಿಚೆಲ್ ಡಗ್ಲಾಸ್ ಮತ್ತು ಕ್ಯಾಥರಿನಾ ಜೆಟಾ ಜೋನ್ಸ್ (Michael Douglas and Catherine Zeta-Jones)
ಪ್ರೀತಿಗೆ ಯಾವುದೇ ಗಡಿಯಿಲ್ಲ ಎನ್ನುವುದಕ್ಕೆ ಇವರಿಬ್ಬರ ಪ್ರಕರಣ ಸಾಕ್ಷಿಯಾಗಿದೆ. ಕ್ಯಾಥರಿನಾಕ್ಕಿಂತ ಮಿಚೆಲ್ 25 ವರ್ಷ ಹಿರಿಯವ. 2000ದಲ್ಲಿ ನಡೆದ ಕೋಟ್ಯಂತರ ರೂ. ವೆಚ್ಚದ ಮದುವೆ ಈಗಲೂ ಬಲವಾಗಿದೆ. ಇತ್ತೀಚಿನ ಸಮಯದಲ್ಲಿ ಕೆಲವೊಂದು ಏಳುಬೀಳುಗಳ ಬಳಿಕ ಮಿಚೆಲ್ ಮತ್ತು ಕ್ಯಾಥರಿನಾ ಜತೆಯಾಗಿದ್ದಾರೆ.

ಗ್ವಯ್ನೆಥ್ ಪಾಲ್ ಥ್ರೋ ಮತ್ತು ಕ್ರಿಸ್ ಮಾರ್ಟಿನ್ (Gwyneth Paltrow and Chris Martin)
ಬ್ಯಾಂಡ್ ಕೋಲ್ಡ್ ಪ್ಲೇ ಯ ಸ್ಥಾಪಕನಾಗಿರುವ ಗ್ವಯ್ನೆಥ್ 2003ರಲ್ಲಿ ಕ್ರಿಸ್ ನ್ನು ಮದುವೆಯಾದರು ಮತ್ತು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ವಿಕ್ಟೋರಿಯಾ ಮತ್ತು ಡೇವಿಡ್ ಬೇಕಮ್ (Victoria and David Beckham)
ಈ ಹಾಟ್ ಆ್ಯಂಡ್ ಬೋಲ್ಡ್ ದಂಪತಿ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಆದರೆ 1999ರಿಂದ ಅವರಿಬ್ಬರ ನಂಬಿಕೆ ಮತ್ತು ಹೊಂದಾಣಿಕೆ ಈಗಲೂ ಬಲವಾಗಿದೆ.

ರಾಜಕುಮಾರ ವಿಲಿಯಮ್ ಮತ್ತು ಕೇಟ್ ಮಿಡ್ಲೆಟನ್ (Prince William and Kate Middleton)
ರಾಜಕುಮಾರ ವಿಲಿಯಮ್ ಮತ್ತು ಕೇಟ್ ಯಶಸ್ವಿಯಾಗಿ ದಾಂಪತ್ಯ ನಡೆಸುತ್ತಿರುವ ಸೆಲೆಬ್ರಿಟಿ ದಂಪತಿ. ಸೇಂಟ್ ಆಂಡ್ರೂಸ್ ಯೂನಿವರ್ಸಿಟಿಯಲ್ಲಿ ಅವರಿಬ್ಬರು ಭೇಟಿಯಾದ ಬಳಿಕ ಎಂಟು ವರ್ಷಗಳ ಕಾಲ ಪ್ರೀತಿಸಿದ್ದರು. 2013ರಲ್ಲಿ ಕೇಟ್ ರಾಜಕುಮಾರ ಜಾರ್ಜ್ ಗೆ ಜನ್ಮ ನೀಡಿದ್ದಾಳೆ.



Click it and Unblock the Notifications











