Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಚ್ಚರ: ದಾಂಪತ್ಯ ಬಿರುಕಿಗೆ ಸ್ನೇಹಿತರೇ ಕಾರಣವಾಗಬಲ್ಲರು!
ಕೆಲವೊಮ್ಮೆ ಆತ್ಮೀಯ ಸ್ನೇಹಿತರು ಕೂಡ ಶತ್ರುಗಳಾಗಿಬಿಡುತ್ತಾರೆ. ಅದರಲ್ಲೂ ಪ್ರೀತಿಯ ವಿಷಯ ಬಂದಾಗ ಎಚ್ಚರಿಕೆಯಿಂದ ಇರುವುದು ಒಳಿತು. ನೀವು ಹೊಂದಿರುವ ಸುಂದರವಾದ ಸಂಬಂಧವನ್ನು ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ತೊರೆದುಬಿಡಬೇಕು ಎಂದೆನಿಸಿದರೆ ಮೊದಲು ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಯಬೇಕು. ನಿಮ್ಮ ಸ್ನೇಹಿತರು ಸಂಬಂಧದ ಬಿರುಕಿಗೆ ಮುಖ್ಯ ಕಾರಣವೇ ಎಂಬುದನ್ನು ಗಮನಿಸಬೇಕು. ನಿಮ್ಮ ಬೆಸ್ಟ್ ಫ್ರೆಂಡ್ ಕೆಟ್ಟ ಸ್ನೇಹಿತರಾಗಬಹುದು ಎಂಬುದಕ್ಕೆ ಈ ಕೆಳಗೆ ಐದು ಮಾಹಿತಿ ನೀಡಲಾಗಿದೆ.
1.ನಿಮ್ಮ ಆಪ್ತ ಸ್ನೇಹಿತರು ನಿಮ್ಮ ಪ್ರೇಯಸಿ ಅಥವಾ ಪ್ರಿಯಕರನ ಬಗ್ಗೆ ತಪ್ಪು ಕಲ್ಪನೆ ಮೂಡಿಸುವಂತೆ ಮಾಡಬಹುದು. ನಿಮ್ಮ ಆಯ್ಕೆ ಸೂಕ್ತವಾದುದಲ್ಲ ಎಂಬ ಭಾವನೆ ತರಿಸಿಬಿದಬಹುದು. ಈ ರೀತಿ ಪದೇ ಪದೇ ಅವರಿಂದ ಕೇಳಿಸಿಕೊಂಡಾಗ ನೀವು ನಿಮ್ಮ ಆಯ್ಕೆ ಸರಿಯಾಗಿಲ್ಲ ಎಂಬ ಭಾವನೆ ಹೊಂದುವುದರ ಮೂಲಕ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿಬಿಡಬಹುದು. ಆದರೆ ಅದಕ್ಕೂ ಮೊದಲು ಕೂಲಂಕುಶವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

2. ನಿಮ್ಮ ಸ್ನೇಹಿತೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ಹೌದು ನೀವು ನಿಮ್ಮ ಗೆಳೆಯನೊಂದಿಗೆ ಇರುವಾಗ ನಿಮ್ಮ ಸ್ನೇಹಿತೆ ನಿಮ್ಮನ್ನು ಅಗೌರವಪೂರಕವಾಗಿ ಕಾಣಬಹುದು. ನಿಜವಾದ ಸ್ನೇಹಿತರಾದರೆ ನಿಮ್ಮ ಮತ್ತು ನಿಮ್ಮ ಗೆಳೆಯನ ನಡುವೆ ಸುಂದರ ಭಾವವನ್ನು ತರಬೇಕೇ ಹೊರತು ಬಿರುಕು ತರಲು ಪ್ರಯತ್ನಿಸಬಾರದು. ನಿಮ್ಮ ಸ್ನೇಹಿತೆ ನಿಮ್ಮ ಗೆಳೆಯನ ಎದುರು ನಿಮ್ಮನ್ನು ಕೀಳಾಗಿ ಕಾಣಲು ಪ್ರಯತ್ನಿಸಿದರೆ ಅವರು ಬಹುಶಃ ನಿಮ್ಮ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದೇ ಅರ್ಥ.
3. ನಿಮ್ಮ ಹಳೆ ಪ್ರೇಮಿಯ ಬಗ್ಗೆ ಮಾತನಾಡುತ್ತಾರೆಯೇ? ನೀವು ಮತ್ತು ನಿಮ್ಮ ಗೆಳೆಯ ಒಟ್ಟಿಗೆ ಇರುವಾಗ ನಿಮ್ಮ ಸ್ನೇಹಿತೆ ಬಂದು ನಿಮ್ಮ ಹಳೆಯ ಪ್ರೇಮಿಯ ಬಗ್ಗೆ ಪದೇ ಪದೇ ಮಾತನಾಡಲು ಪ್ರಯತ್ನಿಸುತ್ತಾರೆಯೇ? ಹಾಗಿದ್ದಲ್ಲಿ ಎಚ್ಚರವಹಿಸಬೇಕು.
4. ನಿಮ್ಮ ಸ್ನೇಹಿತರು ನಿಮ್ಮ ಪ್ರೇಮಿಯನ್ನು ಅಗೌರವಪೂರ್ವಕವಾಗಿ ಕಾಣುತ್ತಾರೆಯೇ? ನೀವೆಲ್ಲರೂ ಒಟ್ಟಿಗೆ ಇರುವಾಗ ನಿಮ್ಮ ಸ್ನೇಹಿತರು ನಿಮ್ಮ ಪ್ರೇಮಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದೆನಿಸಿದರೆ ಅದು ನಿಮ್ಮ ಬಗ್ಗೆ ಅಸೂಯೆಗೆ ಇರಬಹುದು.
5. ನಿಮ್ಮ ಪ್ರೇಮಿಯೊಂದಿಗೆ ನಿಮ್ಮ ಸ್ನೇಹಿತೆ ಫ್ಲರ್ಟ್ ಮಾಡುತ್ತಾಳೆಯೇ? ಹಾಗಿದ್ದಲ್ಲಿ ಅಂತಹ ಸ್ನೇಹಿತರಿಂದ ದೂರವಿರುವುದು ಸೂಕ್ತ.ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತ ನಿಮ್ಮ ಪ್ರೇಮಿಯೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಾರೆ ಅಥವಾ ಫ್ಲರ್ಟ್ ಮಾಡುತ್ತಾರೆ ಎಂದರೆ ನೀವು ಎಚ್ಚರಿಕೆಯಿಂದಿರಬೇಕು. ನಿಮ್ಮಿಬ್ಬರ ನಡುವೆ ಬಿರುಕು ತರಬೇಕು ಎಂಬ ಭಾವನೆ ಅವರದ್ದಿರಬಹುದು.



Click it and Unblock the Notifications
