Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮುರಿದು ಹೋದ ಸಂಬಂಧವನ್ನು ಸರಿಪಡಿಸಲು ಸರಳ ಸಲಹೆಗಳು
ನಿಮ್ಮ ಬಾಯ್ ಫ್ರೆಂಡ್‌ನ ಜೊತೆ ಕಳೆದುಹೋದ ಸಂಬಂಧವನ್ನು ಹೇಗೆ ಸರಿಪಡಿಸಬಹುದು ಎಂದು ಆಶ್ಚರ್ಯಪಡುತ್ತಿದ್ದೀರಾ? ಬಾಯ್ ಫ್ರೆಂಡ್ ಜೊತೆ ಸ್ನೇಹ ಒಡೆಯುವುದು ಮತ್ತೆ ಸರಿಪಡಿಸಿಕೊಳ್ಳುವುದು ಯುವಜನಾಂಗದ ಒಂದು ಭಾಗವಾಗಿದೆ. ಇದ್ದಕ್ಕಿದ್ದಂತೆ ಸ್ನೇಹ ಒಡೆದುಹೋದರೆ ನೀವೇನೂ ಭಯಪಡಬೇಕಾಗಿಲ್ಲ. ವಾಸ್ತವವಾಗಿ, ನಿಮ್ಮ ಸಂಬಂಧಗಳು ಮತ್ತು ನಿಮ್ಮ ಅಗತ್ಯಗಳು ನಿಮಗೆ ಸ್ಪಷ್ಟವಾಗಿದ್ದರೆ ಎಲ್ಲಾ ವಿಷಯಗಳನ್ನು ನಿಮ್ಮ ಕಡೆಗೆ ವಾಲಿಸಿಕೊಳ್ಳಬಹುದು.
ನೀವು ಅವನನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕೆಂದಿದ್ದರೆ ಅದು ಒಂದು ವಿಭಿನ್ನ ಕಥೆಯಾಗುತ್ತದೆ. ಆದರೆ ನೀವು ಆತನು ನಿಮಗೆ ಬೇಕೆಂಬುದು ನಿಚ್ಚಳವಾಗಿದ್ದರೆ ನೀವು ಕೆಲವು ಕ್ರಮಗಳನ್ನು ಬಹಳ ಬೇಗ ತೆಗೆದುಕೊಳ್ಳಬೇಕು ಮತ್ತು ಸಂಬಂಧವನ್ನು ಸರಿಪಡಿಸುವ ಆಯ್ಕೆಯನ್ನು ಆರಿಸಿಕೊಂಡು ಆಗಬಹುದಾದ ಒಡಕನ್ನು ಆದಷ್ಟು ಬೇಗ ನಿಯಂತ್ರಿಸಬೇಕು. ಒಂದು ಸಂಬಂಧದ ಆರಂಭದ ಹಂತದಲ್ಲಿ ಎರಡೂ ಸಂಗಾತಿಗಳು ಪರಸ್ಪರ ಹೊಂದಾಣಿಕೆ ಇರುವಲ್ಲಿ ಒಲವು ತೋರಿಸುವುದು ಸಹಜ. ಆದರೆ ಕಾಲ ಕಳೆದಂತೆ ಇಬ್ಬರೂ ಸಂಗಾತಿಗಳು ತಮ್ಮ ನಡೆವಳಿಕೆಗಳನ್ನು ಅಥವ ಸಂಗತಿಗಳನ್ನು ಪರಸ್ಪರವಾಗಿ ಒಪ್ಪಿಕೊಂಡಿರುವುದಾಗಿ ಊಹಿಸಿಕೊಂಡಾಗ ಸಾಮಾನ್ಯವಾಗಿ ಒಡಕುಗಳು ಕಾಣಿಸತೊಡಗುತ್ತದೆ.
ನೀವು ನಿಚ್ಚಳವಾಗಿ ನಿಮ್ಮ ಸಂಬಂಧಗಳಿಗೆ ಕಾಳಜಿಯಿದ್ದರೆ ಆಗ ಕೆಲವು ನಿರ್ದಿಷ್ಟ ಕ್ಷೇತ್ರಗಳ ಕಡೆಗೆ ಗಮನ ಕೊಡಬೇಕು ಮತ್ತು ಅವುಗಳು ಬಹಳ ಸಮಯ ಮುಂದುವರೆಯದ ಹಾಗೆ ಖಾತ್ರಿಪಡಿಸಿಕೊಳ್ಳಬೇಕು. ಆದರೆ ಹಾಗೆ ಮಾಡುವುದಕ್ಕಿಂತಾ ಮೊದಲು ನೀವು ನಿಮ್ಮ ಬಾಯ್ಫ್ರೆಂ ಡಿನ ಜೊತೆ ವರ್ತನೆಯನ್ನು ಸರಿಪಡಿಸಿಕೊಳ್ಳಲೇಬೇಕು. ನೀವು ನಿಜವಾಗಿಯೂ ಅವನನ್ನು ಆಳವಾಗಿ ಪ್ರೀತಿಸುತ್ತಿದ್ದರೆ, ಈ ಪ್ರಕ್ರಿಯೆಯು ಬಹಳ ಸುಲಭವಾಗುತ್ತದೆ. ಹುಡುಗರ ಪ್ರಥಮ ಪ್ರೀತಿಗೆ ಯಶಸ್ವಿ ಸೂತ್ರಗಳು

ಸಂಪರ್ಕ ಮಾಡುವುದಕ್ಕೆ ಮುಂದಾಗುವುದು
ಬಾಯ್ ಫ್ರೆಂಡ್‌ನ ಜೊತೆ ಸ್ನೇಹ ಒಡೆದುಹೋದನಂತರ ಕೆಲವು ಸಮಯ ಸಂಪರ್ಕ ಮಾಡುವುದನ್ನು ನಿಲ್ಲಿಸುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆದರೂ ಕೆಲವು ಸಮಯದ ನಂತರ ಸಂಪರ್ಕವನ್ನು ಪುನಃ ಸ್ಥಾಪಿಸಿವುದು ಮುಖ್ಯ. ನೀವಿಬ್ಬರೂ ಬಹಳ ಕಾಲ ಸಂಪರ್ಕವಿಲ್ಲದೆ ಸುಮ್ಮನಿದ್ದುಬಿಟ್ಟರೆ, ನೀವೇ ಸಂಪರ್ಕ ಮಾಡಲು ಒಂದು ಹೆಜ್ಜೆ ಮುಂದೆ ಇಡಿ. ಮೊಬೈಲ್ ಮೂಲಕ ಎಸ್.ಎಮ್.ಎಸ್. ಮಾಡಿ ಅಥವ ಫೋನು ಮಾಡಿ 'ಹಾಯ್' ಎನ್ನಿ. ನಿಮ್ಮ ಅಹಂ ಅನ್ನು ಪಕ್ಕದಲ್ಲಿಟ್ಟು ಅವನನ್ನು ಏನೂ ಆಗಿಲ್ಲದಂತೆ ಪ್ರಾಸಂಗಿಕವಾಗಿ ಫೋನಿನಲ್ಲಿ ಕರೆದು ಮಾತಾಡಿದರೆ ಎಲ್ಲಾ ಪರಿಸ್ಥಿತಿಗಳು ಉತ್ತಮಗೊಳ್ಳುತ್ತದೆ. ಹೇಗೆ ಸಂಬಂಧವನ್ನು ಸರಿಪಡಿಸಿಕೊಳ್ಳಬೇಕೆಂಬ ಬಗ್ಗೆ ಸುಮ್ಮನೆ ಕಾಲ ವ್ಯರ್ಥಮಾಡದೆ ನಿಮ್ಮ ಹೊಣೆಗಾರಿಕೆಯ ಹೆಜ್ಜೆಯನ್ನು ಬೇಗ ಮುಂದಿಡಿ.
ಕ್ಷಮೆ ಕೇಳಿ
ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ಮತ್ತು ಅದು ನಮ್ಮಗಳ ಸ್ವಭಾವದಲ್ಲಿ ಒಂದು ಭಾಗವಾಗಿದೆ. ನಿಮ್ಮ ಬಾಯ್ ಫ್ರೆಂಡ್ ನಿಮ್ಮೊಡನೆ ನಿಮಗೆ ಕಿರಿಕಿರಿಯಾಗುವಂತೆ ನಡೆದುಕೊಂಡಿದ್ದರೆ, ಅವನ್ನು ಕ್ಷಮಿಸುವುದು ನಿಮ್ಮ ದೊಡ್ಡ ಗುಣ ಮತ್ತು ಅವನ ತಪ್ಪುಗಳನ್ನು ಮರೆಯುವುದು ಕೂಡ. ನೀವು ಹಾಗೆಯೇ ಏನಾದರೂ ತಪ್ಪು ಮಾಡಿದ್ದರೆ ಸರಳವಾಗಿ ಕ್ಷಮೆ ಕೇಳಿ. ಹಾಗೆ ಮಾಡಲು ಹಿಂಜರಿಯದಿರಿ. ಒಂದು ಬಾರಿ ಹಾಗೆ ಕ್ಷಮೆ ಕೇಳಿದರೆ ನಿಮ್ಮ ಮನಸ್ಸು ಹಗುರವಾಗುತ್ತದೆ.
ಘರ್ಷಣೆಗಳು
ನೀವು ನಿಮ್ಮ ಸಂಬಂಧವನ್ನು ಸರಿಪಡಿಸುತ್ತಿರುವಾಗ ವಿವಾದಾತ್ಮಕವಾಗಿ ಏನೂ ಹೇಳಬೇಡಿ. ವಾದಗಳನ್ನು ಮಾಡಿ ಸಿಕ್ಕಿಹಾಕಿಕೊಳ್ಳಬೇಡಿ, ಏಕೆಂದರೆ ಆ ವಾದಗಳು ಸಂಬಂಧಕ್ಕೆ ಒಂದು ತರಹ ವಿಷಕಾರಿಯಾಗಬಹುದು. ಜೊತೆಯನ್ನು ಸರಿಪಡಿಸುವ ಮುಖ್ಯ ಉದ್ದೇಶ ಸಂಬಂಧಗಳನ್ನು ಪುನರ್ನಿರ್ಮಿಸುವುದು. ಆದ್ದರಿಂದ ಅಂತಹ ಸಮಯದಲ್ಲಿ ಆಗಿಹೋದ ಹಳೆಯ ಕೆಟ್ಟ ಘಟನೆಗಳನ್ನು ಮುಂದೆ ತರಬೇಡಿ.
ಅವನನ್ನು ಆಲಂಗಿಸುವುದು
ಒಂದು ಸಲದ ಆಲಿಂಗನ ಸಾವಿರ ಗಾಯಗಳನ್ನು ವಾಸಿಮಾಡಬಹುದು. ಹೌದು, ನಿಮ್ಮ ಬಾಯ್ ಫ್ರೆಂಡ್ ನಿಮ್ಮ ಆಲಿಂಗನಗಳನ್ನು ಇಷ್ಟಪಡುತ್ತಾನೆ. ವಾಸ್ತವವಾಗಿ ಹೀಗೆ ಮಾಡುವುದು ಬಾಯ್ ಫ್ರೆಂಡ್‌ನ ಜೊತೆ ಸರಿಮಾಡಿಕೊಳ್ಳುವುದು ಒಂದು ಅತ್ಯುತ್ತಮ ಸಲಹೆಯೊಂದಾಗಿದೆ. ಹಿಂದೂ ಧರ್ಮದಲ್ಲಿರುವ ಅಷ್ಟ ವಿಧದ ವಿವಾಹ ಪದ್ಧತಿಗಳು
ಜೊತೆಯಲ್ಲಿ ಹೊರಗಡೆ ಸುತ್ತಾಡಿಬರಲು ಅವನನ್ನು ಕೇಳಿ
ನಿಮ್ಮ ಬಾಯ್ ಫ್ರೆಂಡ್‌ನ ಜೊತೆ ಸಂತೋಷದಲ್ಲಿ ಕಾಲ ಕಳೆಯುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಜೊತೆಯನ್ನು ಸರಿಮಾಡಿಕೊಳ್ಳುತ್ತಿದ್ದಾಗ. ಅವನ ಜೊತೆ ಸರಿಪಡಿಸಿಕೊಳ್ಳುವ ಕಾರ್ಯ ಮುಗಿದಾಗ ಒಂದು ರೋಮಾಂಚಕಾರಿ ಪ್ರವಾಸವನ್ನೋ ಅಥವ ಒಂದು ಸಮುದ್ರತೀರದ ಪ್ರದೇಶಕ್ಕೋ ಯೋಜನೆ ಮಾಡಿ. ರೋಮಾಂಚಕಾರಿಯ ಅನ್ಯೋನ್ಯತೆಯು ಬಂಧನಗಳನ್ನು ಬಲಪಡಿಸುವ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈಗ ನೀವು ನಿಮ್ಮ ಬಾಯ್ ಫ್ರೆಂಡ್‌ನ ಜೊತೆ ನಿಮ್ಮ ಸಂಬಂಧವನ್ನು ಹೇಗೆ ಸರಿಪಡಿಸಬಹುದೆಂದು ಅರ್ಥವಾಯಿತೇ? ಸರಿ ಹಾಗಾದರೆ, ನಿಮ್ಮ ಸಂಬಂಧವನ್ನು ಇಂದಿನಿಂದ ಎಚ್ಚರಿಕೆಯಿಂದ ನಿರ್ವಹಿಸಿ. ಒಂದು ಸಲ ಸರಿಪಡಿಸಿದ ಒಡೆದುಹೋದ ಸಂಬಂಧ ನಿಮ್ಮ ಬಂಧವನ್ನು ಮತ್ತೂ ಬಲಪಡಿಸುತ್ತದೆಯೆಂದು ಭಾವಿಸಲಾಗಿದೆ. 'ಮನಸ್ಸಿದ್ದರೆ ಮಾರ್ಗ'. ನಿಮ್ಮಿಂದ ದೂರ ಸರಿದವನ ಬಳಿ ನೀವು ಮತ್ತೆ ಸೇರಬೇಕೆಂದಿದ್ದರೆ ನಿಮಗೆ ಅದು ಹೇಗೆ ಸಾಧ್ಯವೆಂದು ತಿಳಿದಿರಬೇಕು.



Click it and Unblock the Notifications



