Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಈ ಏಳು ರೀತಿಯ ಪುರುಷರು ನಿಮ್ಮನ್ನು ಎಂದಿಗೂ ಮದುವೆಯಾಗುವುದಿಲ್ಲ !
ನೀವೊಬ್ಬ ಪರಿಪೂರ್ಣ ಹುಡುಗನನ್ನು ಹುಡುಕುತ್ತಿದ್ದರೆ ಬಹುಷಃ ನೀವು ಒಂದೆರಡು ಹುಡುಗರ ಜೊತೆ ಒಡನಾಡಬೇಕಾಗುತ್ತದೆ. ಏಕೆಂದರೆ ಕೆಲವು ರೀತಿಯ ಹುಡುಗರು ಖಂಡಿತ ನೀವು ಎಷ್ಟೇ ಹಂಬಲಿಸಿದರೂ ಮದುವೆ ಆಗಲಾರರು ಎಂಬುದು ನಿಮಗೆ ತಿಳಿದಿರಲೇಬೇಕು.
ಕೆಲವರು ಕೊನೆಯಲ್ಲಿ ಬದಲಾಗಬಹುದು ಮತ್ತು ಕೆಲವು ಪುರುಷರು ಹಾಗೆಯೇ ಇರಬಹುದು.ಆದರೆ ನೀವು ಅಂತವರಿಗೋಸ್ಕರ ಕಾಯುತ್ತಾ ಕೂರುವುದು ಸರಿಯಲ್ಲ.ನಿಮ್ಮನ್ನು ಮದುವೆ ಮಾಡಿಕೊಳ್ಳಲು ತಯಾರಿಲ್ಲದ ಇಂತಹ ಹುಡುಗರನ್ನು ನೀವು ಖಂಡಿತ ನಿರ್ಲಕ್ಷಿಸಲೇಬೇಕು. ನೀವು ಇಂತವರೊಂದಿಗೆ ಮದುವೆ ಆಗುವ ಕನಸು ಹೊತ್ತು ತಿರುಗುತ್ತಿದ್ದರೆ ಅದರಿಂದ ಸಮಯ ವ್ಯರ್ಥವಷ್ಟೇ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೆಂಗಸು ಕೇಳುವ 6 ಚಾಲಾಕಿನ ಪ್ರಶ್ನೆಗಳು

ಇನ್ನೂ ಗಂಭೀರ ಸಂಬಂಧಕ್ಕೆ ಸಿದ್ಧರಿಲ್ಲ:-
ಇದು ಸಾಮಾನ್ಯವಾಗಿ ಪುರುಷರು ಹೇಳುವ ವಿಷಯ.ಅವರು ನಿಮ್ಮೊಂದಿಗೆ ಡೇಟ್ ಮಾಡಲು ಸದಾ ಸಿದ್ಧ,ಆದರೆ ಮದುವೆಯ ವಿಷಯ ಬಂದಾಗ,ನಾನಿನ್ನೂ ಸಂಬಂಧಕ್ಕೆ ಸಿದ್ಧನಿಲ್ಲ ಎಂದು ನಿಮ್ಮಿಂದ ಎದ್ದು ಹೋಗಿಬಿಡುತ್ತಾರೆ.ಬಹುಶಃ ಅವನು ಯಾವಾಗಲೂ ತಯಾರಿರಲಿಲ್ಲ ಎಂಬುದನ್ನು ನೀವು ಅರಿತುಕೊಳ್ಳಬೇಕು.ಇಂತಹವರಿಗೆ ನೀವು ಅವರನ್ನು ಬದಲಾಯಿಸಲು ಮತ್ತು ನೀವು ಆತನಿಗೆ ಪರ್ಫೆಕ್ಟ್ ಎಂದು ತೋರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.ನೀವು ಆತನನ್ನು ಬದಲಾಯಿಸಲು ಪ್ರಯತ್ನಿಸಿದರೆ ಅದು ನಿಮ್ಮ ಸಮಯ ವ್ಯರ್ಥವಾದಂತೆ.

ಹಳೆ ಗೆಳತಿ ಇದ್ದರೆ :-
ನೀವು ಪರ್ಫೆಕ್ಟ್ ಆಗಿರುವ ಹುಡುಗ ಬೇಕೆಂದು ಬಯಸುತ್ತಿದ್ದರೆ ಇಂತವರನ್ನು ದಯವಿಟ್ಟು ಆರಿಸಿಕೊಳ್ಳಬೇಡಿ.ಎಕ್ಸ್ ಗೆಳತಿಯ ಭೇಟಿ ಮಾಡುತ್ತಿದ್ದು ನಿಮ್ಮ ಜೊತೆ ಅದನ್ನು ಒಪ್ಪಲು ತಯಾರಿಲ್ಲದವರು ನಿಮಗೆ ಎಂದೂ ಪರ್ಫೆಕ್ಟ್ ಅಲ್ಲ.ಯಾವಾಗಲೂ ಹಳೆ ಗೆಳತಿ ಬಗ್ಗೆ ಮಾತನಾಡುತ್ತಿದ್ದು ಅವಳ ಆಸಕ್ತಿ,ಹವ್ಯಾಸ,ಇಬ್ಬರೂ ಜೊತೆಗೂಡಿ ಕಳೆದ ಕ್ಷಣಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರೆ ಅಂತವರು ನಿಮಗೆ ಸರಿಯಲ್ಲ.ಅಂತಹ ವ್ಯಕ್ತಿತ್ವದವರು ಹಳೆಯದನ್ನು ಮರೆಯಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ ಜೊತೆಗೆ ಮದುವೆಗೆ ಖಂಡಿತ ತಯಾರಿರುವುದಿಲ್ಲ.

ವೃತ್ತಿಜೀವನದ ಬಗ್ಗೆ ಅಧಿಕ ಆಸಕ್ತಿ:-
ಇಂತವರು ಸದಾ ತಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ಮತ್ತು ವೃತ್ತಿಜೀವನದ ಬಗ್ಗೆ ಆಸಕ್ತಿಯಲ್ಲಿ ಇರುತ್ತಾರೆ.ನಿಮಗೋಸ್ಕರ ಆತನಲ್ಲಿ ಸಮಯವಿರುವುದಿಲ್ಲ ಮತ್ತು ಆತ ಸದಾ ಕೆಲಸ ಮೊದಲು ಎನ್ನುತ್ತಾನೆ.ಸಂಬಂಧ ತಜ್ಞ ಸಮಂತ ಡೆನಿಯಲ್ ಹೇಳುವ ಪ್ರಕಾರ 'ಪುರುಷರು ಸೆಟಲ್ ಆಗುವ ಮೊದಲು ವೃತ್ತಿಜೀವನದ ಬಗ್ಗೆ ಸಂಪೂರ್ಣ ಸೆಟಲ್ ಆಗಿರಬೇಕು ಮತ್ತು ಮುಂದೆ ಏನಾಗಬೇಕು ಎಂಬುದರ ಬಗ್ಗೆ ಸಂಪೂರ್ಣ ತಿಳಿದಿರಬೇಕು'ಎಂಬುದನ್ನು ಒಪ್ಪಲಸಾಧ್ಯ.

ಬೇರೊಂದು ಒಳ್ಳೆಯ ಡೀಲ್ ಗೆ ಕಾಯುತ್ತಿರುತ್ತಾರೆ:-
ಇಂಥ ವ್ಯಕ್ತಿತ್ವದವರು ನಿಮ್ಮೊಂದಿಗೆ ಯಾವಾಗಲೂ ಸಂತೋಷವಾಗಿರುತ್ತಾರೆ.ಆದರೆ ಯಾವುದೇ ರೀತಿಯ ಸಂಬಂಧ ಬೆಸೆದುಕೊಳ್ಳಲು ತಯಾರಿರುವುದಿಲ್ಲ.ಬೇರೊಂದು ಒಳ್ಳೆಯ ಅವಕಾಶ ದೊರಕಬಹುದು ಎಂದು ಕಾಯುತ್ತಿರುತ್ತಾರೆ.ನೀವು ಅವರಿಗೆ ಪರ್ಫೆಕ್ಟ್ ಎಂದು ತಿಳಿಯದವರೊಂದಿಗೆ ನೀವು ಸಂಬಂಧ ಬೆಸೆಯುವ ಕನಸು ಕಾಣುವುದರಲ್ಲಿ ಯಾವುದೇ ಅರ್ಥವಿಲ್ಲ.

ಮಕ್ಕಳ ವಯಸ್ಸಿನವರೊಂದಿಗೆ ಹ್ಯಾಂಗ್ ಔಟ್ ಆಗಿರುವುದು:-
ಇಂತವರು ೫೦ ರ ಆಸುಪಾಸಿನಲ್ಲಿರುವವರು.ತನ್ನ ಉಳಿದ ಗೆಳಯರೆಲ್ಲ ಮದುವೆಯಾಗಿ ಮಗು ಪಡೆದುಕೊಂಡಿರುತ್ತಾರೆ.ಇವರು ಮಾತ್ರ ತನ್ನ ಮಕ್ಕಳ ವಯಸ್ಸಿನವರು ಅಂದರೆ ಸುಮಾರು ೧೮ -೨೦ ರ ಆಸುಪಾಸಿನ ಯುವತಿಯರೊಂದಿಗೆ ಹ್ಯಾಂಗ್ ಔಟ್ ಆಗಲು ಇಚ್ಚಿಸುತ್ತಾರೆ.ಆದರೆ ಆ ಹುಡುಗಿಯರೂ ಕೂಡ ಈತನಲ್ಲಿರುವ ಹಣವನ್ನು ನೋಡಿ ಮರುಳಾಗಿರುತ್ತಾರೆ .

ನನಗೆ ಸರಿಯಾದ ಹುಡುಗಿ ಸಿಗಲಿಲ್ಲ:-
ಹೀಗೆ ಹೇಳುವವರು ಸಾಮಾನ್ಯವಾಗಿ ೫೦ ದಾಟಿದವರು.ನನಗೆ ಸರಿಯಾದ ಹುಡುಗಿ ಸಿಗದ ಕಾರಣ ನಾನು ಮದುವೆಯಾಗಿಲ್ಲ ಎನ್ನುತ್ತಾರೆ.ನೀವು ನಿಮಗೆ ಪ್ರಶ್ನೆ ಕೇಳಿಕೊಳ್ಳಿ ಆತನಿಗೆ ನೂರಾರು ಜನರಲ್ಲಿ ಸರಿಯಾದ ಹುಡುಗಿ ಸಿಗದಿದ್ದಲ್ಲಿ ನೀವೇಕೆ ಸರಿಯಾದ ಜೋಡಿ ಎನಿಸುತ್ತಿದೆ?ಇಂತವರು ಸರಿಯಾದ ಸಂಬಂಧ ಬೆಸೆಯುತ್ತಾರೆ ಎನ್ನಿಸುವುದಿಲ್ಲ.

ಮಕ್ಕಳನ್ನು ಮಾತ್ರ ಕಾಳಜಿ ಮಾಡಲು ತಯಾರಿರುತ್ತಾರೆ:-
ನಿಮ್ಮ ಪ್ರೀತಿ ಗಳಿಸಿದ್ದಾರೆ,ನಿಮ್ಮ ಮಗುವಿಗೆ ಉತ್ತಮ ತಂದೆಯಾಗಲು ತಯಾರಿದ್ದಾರೆ ಎಂದಿಟ್ಟುಕೊಳ್ಳಿ.ನೀವೂ ಕೂಡ ಆತನ ತ್ಯಾಗವನ್ನು ಮೆಚ್ಚಿದ್ದೀರಿ ಮತ್ತು ಹೊಗಳುತ್ತೀರಿ. ಮಕ್ಕಳ ಜವಾಬ್ದಾರಿ ಹೊರಳು ತಯಾರಿರುವುದು ತಪ್ಪಲ್ಲ,ಆದರೆ ಅವರು ನಿಮಗೂ ಕೂಡ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆಯೇ ಎಂಬುದನ್ನು ಮೊದಲು ಯೋಚಿಸಿ ಖಚಿತಪಡಿಸಿಕೊಳ್ಳಿ.
ಈ ಮೇಲೆ ಹೇಳಿದ ಕಾರಣಗಳೆಲ್ಲ ಮದುವೆಯಾಗಲು ತಯಾರಿಲ್ಲದ ಪುರುಷರು ನೀಡುವ ಮನ್ನಣೆಗಳು.ಇಂತವರು ಎಂದಿಗೂ ಮದುವೆಯಾಗಲು ಇಚ್ಚಿಸುವುದಿಲ್ಲ ಕೇವಲ ಡೇಟ್ ಮಾಡಲು ಮಾತ್ರ ಆಸಕ್ತಿ ಹೊಂದಿರುತ್ತಾರೆ.ನಿಮಗೂ ಕೂಡ ಇಂತಹ ಪುರುಷರ ಇನ್ನಷ್ಟು ಉದಾಹರಣೆಗಳು ತಿಳಿದಿದ್ದಲ್ಲಿ ನಮಗೆ ತಿಳಿಸಿ.



Click it and Unblock the Notifications











