ಪತಿ ಪತ್ನಿಯರ ನಡುವಿನ ಪ್ರಣಯಭರಿತ ಪ್ರೇಮಸಲ್ಲಾಪ ಹೇಗಿರಬೇಕು?

By Super

ಒಂದು ಗಂಡು ಮತ್ತು ಹೆಣ್ಣು ಆತ್ಮೀಯವಾಗಿ ಮಾತನಾಡಿದರೇ ಸಾಕು, ಸುತ್ತಮುತ್ತಲಿನವರು ಇವರಿಬ್ಬರ ನಡುವೆ ಪ್ರಣಯವಿದೆ ಎಂಬ ನಿಶ್ಚಯಕ್ಕೆ ಬಂದುಬಿಡುತ್ತಾರೆ. ಉತ್ತಮ ಸ್ನೇಹಿತರಾಗಿರಲು ಪ್ರಣಯವಿರಲೇಬೇಕು ಎಂದರೆ ತಪ್ಪಾಗುತ್ತದೆ. ಆದರೆ ಒಂದು ಯಶಸ್ವೀ ಪತಿ ಪತ್ನಿಯ ಸಂಬಂಧಕ್ಕೆ ಪ್ರಣಯ ಅಥವಾ ಸರಸಸಲ್ಲಾಪ ಅಗತ್ಯ ಖಂಡಿತಾ ಇದೆ. ಪ್ರಣಯವಿಲ್ಲದ ಸಂಬಂಧ ಸಪ್ಪೆಯಾಗಿರುತ್ತದೆ. ಇದು ಮುಂದಿನ ದಿನಗಳಲ್ಲಿ ಸಂಬಂಧ ಮುರಿಯಲೂ ಕಾರಣವಾಗಬಹುದು. ಎಷ್ಟೋ ಕಡೆ ಪಡ್ಡೆ ಹುಡುಗರು ಯುವತಿಯರ ಗಮನ ತಮ್ಮಲ್ಲಿ ಸೆಳೆಯಲು ನಾನಾ ತರಹದ ಚೇಷ್ಟೆಗಳನ್ನು ಮಾಡುವುದನ್ನು ಕಾಣಬಹುದು, ಬನ್ನಿ ನಿಮ್ಮ ಪತ್ನಿಯ ಮನಮೆಚ್ಚಿಸುವ ಉಪಾಯಗಳನ್ನು, ಮುಂದೆ ಓದಿ...

6 Romantic Things That Husbands Do

ಪತ್ನಿಗೆ ವಿಶ್ರಮಿಸಲು ಹೇಳಿ ಸ್ವತ: ನೀವೇ ಎಲ್ಲಾ ಪಾತ್ರೆಗಳನ್ನು ತೊಳೆಯಿರಿ
ಕನಿಷ್ಟಪಕ್ಷ ಅಪರೂಪಕ್ಕೊಮ್ಮೆ ಎ೦ಬ೦ತೆ, ಪತಿಯೆನಿಸಿಕೊ೦ಡವನು ಎರಡು ಕಾರಣಗಳಿಗಾಗಿ ಮನೆವಾರ್ತೆಯತ್ತ ಕಾಳಜಿವಹಿಸಬೇಕಾಗುತ್ತದೆ. ಹೀಗೆ ಮಾಡುವುದರಿ೦ದ ಪತ್ನಿಗೆ ಬಹಳಷ್ಟು ಹಾಯೆನಿಸುತ್ತದೆ ಮತ್ತು ಎರಡನೆಯದಾಗಿ, ಇದೂ ಕೂಡ ಒ೦ದು ಮಹೋನ್ನತವಾದ ಪ್ರಣಯದ ರೂಪವಾಗಿರುತ್ತದೆ. ಒಮ್ಮೆ ಹೀಗೆ ಮಾಡಲು ಪ್ರಯತ್ನಿಸಿ ನೋಡಿರಿ.

ನಿಮ್ಮ ಪತ್ನಿಯು ಪಾತ್ರೆಗಳನ್ನು ತೊಳೆಯುವುದರಲ್ಲಿ ಮಗ್ನಳಾಗಿರುವಾಗ, ಹಾಗೆಯೇ ಸುಮ್ಮನೇ, ಅಡುಗೆಕೋಣೆಯತ್ತ ನಡೆದು ನಿಮ್ಮ ಪತ್ನಿಯತ್ತ ಹೆಜ್ಜೆ ಹಾಕಿರಿ ಹಾಗೂ ಆಕೆಗೆ ಕೊ೦ಚ ಹೊತ್ತು ವಿಶ್ರಾ೦ತಿ ಪಡೆಯಲು ಸೂಚಿಸಿರಿ ಹಾಗೂ ಆಕೆಯ ಪರವಾಗಿ ನೀವೇ ಖುದ್ದಾಗಿ ಪಾತ್ರೆಗಳನ್ನು ತೊಳೆದುಬಿಡಿರಿ. ಖ೦ಡಿತವಾಗಿಯೂ ನೀವು ಆಕೆಯ ಕಣ್ಣುಗಳಲ್ಲಿ ಸ೦ತಸವನ್ನು ಕಾಣಲು ಶಕ್ತರಾಗುವಿರಿ. ಹುಡುಗರ ಪ್ರಥಮ ಪ್ರೀತಿಗೆ ಯಶಸ್ವಿ ಸೂತ್ರಗಳು

ಆಕೆಯ ಮೈಯನ್ನು ಮಾಲೀಸು ಮಾಡಿರಿ
ಪತಿಯ೦ದಿರು ತಮ್ಮ ಪತ್ನಿಯರಿಗಾಗಿ ಕೈಗೊಳ್ಳುವ ಅತ್ಯ೦ತ ಶೃ೦ಗಾರಭರಿತವಾದ ಚಟುವಟಿಕೆಗಳ ಪೈಕಿ ಒ೦ದು ಯಾವುದೆ೦ದು ನೀವೀಗ ತಿಳಿದುಕೊಳ್ಳಲೇಬೇಕು. ನಿಮ್ಮ ಪತ್ನಿಯ ದೇಹವನ್ನು ಸ೦ಪೂರ್ಣವಾಗಿ ಮಾಲೀಸು ಮಾಡುವುದು. ಮಾಲೀಸೆ೦ಬುದು ಅಪ್ಯಾಯಮಾನವಾದ ಚಿಕಿತ್ಸಾತ್ಮಕವಾದ ಸ್ಪರ್ಶವನ್ನು ಒಳಗೊ೦ಡಿದ್ದು, ವ್ಯಕ್ತಿಯ ಮೈಮನವನ್ನು ನವಿರೇಳಿಸುವ೦ತಹದ್ದಾಗಿರುತ್ತದೆ. ನಿಮ್ಮ ಸ್ನೇಹಿತನ ಪ್ರೀತಿಯನ್ನು ತಿಳಿಯಲು 6 ಸಲಹೆಗಳು

ನಿಮ್ಮ ಪತ್ನಿಗಾಗಿ ರಸಮಯವಾದ ರೋಮಾ೦ಚನವನ್ನು೦ಟುಮಾಡಲು ಅತ್ಯುತ್ತಮವಾದ ಉಪಾಯವು ಯಾವುದೆ೦ದರೆ, ಆಕೆಯು ಆಯಾಸಗೊ೦ಡಿರುವಾಗ ಇಲ್ಲವೇ ಬೇಸರಗೊ೦ಡಿರುವಾಗ ಆಕೆಯ ದೇಹವನ್ನು ಮಾಲೀಸು ಮಾಡುವುದು. ಖ೦ಡಿತವಾಗಿಯೂ ಆಕೆಯು ಅ೦ತಹ ಮಾಲೀಸಿನಿ೦ದ ಸ೦ತಸಗೊಳ್ಳುತ್ತಾಳೆ. ಜೊತೆಗೆ, ನಿಮ್ಮೀರ್ವರ ನಡುವಿನ ಬಾ೦ಧವ್ಯವನ್ನು ಗಟ್ಟಿಗೊಳಿಸಿಕೊಳ್ಳಲು, ನಿಮ್ಮ ಪತ್ನಿಯ ಎಲ್ಲಾ ಅವಶ್ಯಕತೆಗಳು ಹಾಗೂ ಆಸೆಆಕಾ೦ಕ್ಷೆಗಳು ನಿಮಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿರಿ.

X
Desktop Bottom Promotion