Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರೀತಿ ಕುರುಡು ನಿಜ, ಆದರೆ ಫ್ಲರ್ಟಿಂಗ್ ಕುರುಡಲ್ಲ!
"ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆ ಆಡಿದೆ ತೂಗಿ" ಈ ಕಣ್ಣುಗಳೇ ಹಾಗೆ. ಸೆಳೆಯುತ್ತವೆ, ಕೆಣಕುತ್ತವೆ, ಮುನಿಸಿಕೊಳ್ಳುತ್ತವೆ, ಕಣ್ಣಿರು ಸುರಿಸುತ್ತವೆ, ಕಿಡಿಕಾರುತ್ತವೆ, ಕೊಲ್ಲುತ್ತವೆ, ಕಾಡುತ್ತವೆ ಅಬ್ಬಾ ಬಿಡಿ ಸಾಕು ಬೇಕೆನಿಸಿದ್ದೆಲ್ಲ ಮಾಡುತ್ತವೆ. ಇದು ಹೆಂಗಸರು ಮತ್ತು ಗಂಡಸರು ಎಂಬ ಬೇಧ ಭಾವವಿಲ್ಲದೆ ಎಲ್ಲರಿಗು ಅನ್ವಯಿಸುತ್ತದೆ. ಅದರಲ್ಲೂ ಪ್ರೇಮಿಗಳಿಗಂತು " ಕಣ್ಣಲ್ಲೇ ಜ್ಯೋತಿ ತಂದವನು ನೀನೇ..." ಎಂದು ಹಾಡು ಶುರುವಾಗುವ ಹಾಗೆ ಮಾಡುತ್ತದೆ ಈ ಕಣ್ಣುಗಳು.
ಆದರೆ ಇಲ್ಲಿ ನಾವು ಹೇಳಲು ಹೊರಟಿರುವುದು ಕಣ್ಣಿನಲ್ಲೇ ಫ್ಲರ್ಟ್ (ಚೆಲ್ಲಾಟ) ಮಾಡುವವರ ಬಗ್ಗೆ. ಎಷ್ಟು ಜನಕ್ಕೆ ಇದು ತಿಳಿದಿಲ್ಲ! ಎಷ್ಟು ಜನ ಪ್ರಯತ್ನಿಸಿಲ್ಲ! ಗೊತ್ತಿಲ್ಲದಿರುವವರು ಮುಂದೆ ಓದಿ. "ಪ್ರೇಮ ಕುರುಡು" ನಿಜ, ಆದರೆ ಫ್ಲರ್ಟ್ ಮಾಡುವುದು ಕುರುಡಲ್ಲ. ನಾವೆಲ್ಲರು ಕಣ್ಣಿನಲ್ಲಿಯೇ ಮೊದಲು ಕಾಳು ಹಾಕಿ, ಮನಸೂರೆ ಮಾಡಿಕೊಳ್ಳಲು ಬಯಸುವ ಜನ. ನೀವು ಸಹ ನಿಮ್ಮ ಯೌವನದಲ್ಲಿ ಇದನ್ನು ಒಮ್ಮೆಯಾದರು ಪ್ರಯತ್ನಿಸಿರುತ್ತೀರಿ.

ಬಹಳಷ್ಟು ಜನ ಪ್ರೀತಿಗೆ ಮೊದಲು ಇದೇ ಆಯುಧವನ್ನು ಮೊದಲು ಪರೀಕ್ಷಾರ್ಥವಾಗಿ ಪ್ರಯೋಗಿಸುತ್ತಾರೆ. ಕಣ್ಣಿನ ಕ್ಷಿಪಣಿಗಳು ಯಶಸ್ವಿಯಾಗಿ ಗುರಿತಲುಪಿದ ನಂತರ, ಪ್ರೇಮದ ಸ್ವರ್ಗಾರೋಹಣ! ಪರ್ವ ಆರಂಭವಾಗುತ್ತದೆ. ಇಲ್ಲವಾದಲ್ಲಿ ಅಲ್ಲಿ ಒಂದು ಯುದ್ಧವೇ ಆರಂಭವಾಗುತ್ತದೆ. ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಅದರಲ್ಲೂ ಮಹಿಳೆಯರು ನೆರೆ ಹೊರೆಯಲ್ಲಿ, ಕಚೇರಿ, ಕಾಲೇಜು ಮುಂತಾದೆಡೆಗಳಲ್ಲಿ, ಇಂತಹ ಕ್ಷಿಪಣಿ ದಾಳಿಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಪ್ರೀತಿ ಕುರುಡಾದರೆ ಬಾಳು ಕುರುಡಾಗುವುದು!
ಇದೇ ಸಮಯದಲ್ಲಿ ಬೇತಾಳನ ಸಂತಾನಗಳಂತೆ ಬಿಡದೆ ಬೆನ್ನತ್ತುವ ಬೇಡದ ಬೆಂಬಲಿಗರ ಕಾಟಬೇರೆ! ಇಂತಹ ಬೆಂಬಲಿಗರು ತಮ್ಮ ಕಣ್ಣುಗಳನ್ನೆ ಹೆಂಗಳೆಯರ ಮೇಲೆ ಬೀರುತ್ತ ಫ್ಲರ್ಟ್ ಮಾಡುತ್ತಿರುತ್ತಾರೆ. ಅವರ ಮಾತು, ಹಾವ ಭಾವ ಯಾವುದಾದರು ಸರಿ, ಕಣು ಮಾತ್ರ ಏನೋ ಬಯಸುತ್ತ ಇರುತ್ತದೆ. ಆಗ ನೀವು ತಡ ಮಾಡದೆ ಒಂದು ಕ್ರಿಪ್ರ ಕಾರ್ಯಾಚರಣೆಗೆ ಮನಸ್ಸು ಮಾಡಬೇಕಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿ ನಿಮಗೆ ಮುಜುಗರವಾಗುವಂತೆ ದೃಷ್ಟಿ ಬೀರುತ್ತಿದ್ದಾನೆ ಎಂದರೆ, ಅವನೆಡೆ ದೃಷ್ಟಿಯನ್ನು ಹರಿಸಬೇಡಿ. ಆದರೆ ನೀವೇ ಮನಸಾರೆ ಮೆಚ್ಚಿದ ವ್ಯಕ್ತಿ ನಿಮ್ಮನ್ನು ನೋಡುತ್ತಿದ್ದರೆ, ನಿಮ್ಮ ಮುಂದಿನ ನಡೆಯನ್ನು ತೆಗೆದುಕೊಳ್ಳಲು ಯಾವುದೇ ಅಡ್ಡಿಯಿರುವುದಿಲ್ಲ. ಅದನ್ನು ಹೇಗೆ ಕಂಡು ಹಿಡಿಯುವುದು ಎಂಬ ಪ್ರಶ್ನೆಯೇ ಮುಂದೆ ಓದಿ...
ಅವನು ಹಾಗೆ ಸುಮ್ಮನೆ ನೋಡುತ್ತಾನೆ
ನೀವು ಕೆಲಸ ಮಾಡುವ ಸ್ಥಳದಲ್ಲಿರುವ ಒಬ್ಬ ಪುರುಷ ಸಹೋದ್ಯೋಗಿ ನಿಮ್ಮನ್ನು ಇಷ್ಟಪಟ್ಟಿದ್ದಲ್ಲಿ, ನಿಮ್ಮನ್ನು ಕಣ್ಣಿನಲ್ಲೆ ಮೊದಲು ಹಿಂಬಾಲಿಸುತ್ತಾನೆ. ನೇರವಾಗಿ ನಿಮ್ಮನ್ನು ನೋಡುವ ಮೊದಲು ಅವನು ಅತ್ತಿತ್ತ ನೋಡಿ, ಸುತ್ತಿ ಬಳಸಿ ನಿಮ್ಮನ್ನು ನೋಡುತ್ತಾನೆ. ಮೊದಲು ಸಾಮಾನ್ಯವಾಗಿ ನೋಡಲು ಆರಂಭಿಸುತ್ತಾನೆ. ನೀವು ಕಾಫಿ ಮಷಿನ್ ಬಳಿ ಇರುವಾಗ ದೂರದಿಂದ ನಿಮ್ಮನ್ನು ನೋಡುತ್ತಾನೆ. ಈ ನೋಟವು ಕೆಲವು ಸೆಕೆಂಡ್‍ಗಳ ಕಾಲ ಮಾತ್ರ ಇರುತ್ತದೆ. ಅವನು ನಿಮ್ಮನ್ನು ನೋಡುತ್ತಿದ್ದಾನೆ ಎಂದು ನಿಮಗೆ ಗೊತ್ತಾಗಬೇಕು ಅಲ್ಲಿಯವರೆಗು ಅವನು ನಿಮ್ಮನ್ನು ನೋಡುತ್ತಲೆ ಇರುತ್ತಾನೆ.
ಅವನು ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾನೆ
ಕ್ಷಣ ಮಾತ್ರದಲ್ಲಿ ನಿಮ್ಮನ್ನು ನೋಡುತ್ತಿರುವ ಗಂಡಸಿನ ಕಡೆಗೆ ನೀವು ನೋಡಿದರೆ, ಅವನು ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾನೆ. ಇದು ನೇರವಾಗಿ ಕಣ್ಣಿನಿಂದ ಮಾಡುವ ಫ್ಲರ್ಟಿಂಗ್ ಆಗಿರುತ್ತದೆ. ಅವನು ನೀವು ನೋಡಲಿ ಎಂದೇ ಹೀಗೆ ಮಾಡುತ್ತಾನೆ. ನೀವೆಂದರೆ ಆತನಿಗೆ ಇಷ್ಟ ಅದು ನಿಮಗೆ ಗೊತ್ತಾಗಬೇಕು, ಇಲ್ಲವಾದಲ್ಲಿ ಅವನು ಮಾಡಿದ ಪ್ರಯತ್ನಗಳೆಲ್ಲವು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಅದಕ್ಕಾಗಿಯೇ ಅವನು ನೇರವಾಗಿ ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾನೆ.
ಅವನು ಇದ್ದಕ್ಕಿದ್ದಂತೆ ಬೇರೆಲ್ಲೋ ನೋಡುತ್ತಾನೆ
ಕ್ಷಣ ಮಾತ್ರ ಆತ ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ ಮೇಲೆ, ಆತ ಇದ್ದಕ್ಕಿದ್ದಂತೆ ಬೇರೆಲ್ಲೋ ನೋಡುತ್ತಾನೆ. ಇದು ಆತ ಉದ್ದೇಶ ಪೂರ್ವಕವಾಗಿ ಮಾಡುತ್ತಾನೆ. ಹಾಗೆಂದು ಆತ ನಿಮ್ಮನ್ನು ಬೀದಿ ಕಾಮಣ್ಣನ ತರಹ ದುರುಗುಟ್ಟಿಕೊಂಡು ನೋಡುವುದಿಲ್ಲ. ನಿಮ್ಮ ದೃಷ್ಟಿಯಲ್ಲಿ ಆತ ಕೆಟ್ಟವನಾಗಲು ಇಷ್ಟಪಡುವುದಿಲ್ಲ. ಹಾಗಾಗಿ ನಿಮ್ಮನ್ನು ನೋಡಿ ಸಂತೋಷಗೊಂಡು, ನಿಮಗೆ ತಿಳಿದ ತಕ್ಷಣ ತನ್ನ ದೃಷ್ಟಿಯನ್ನು ಬೇರೆಡೆಗೆ ಹರಿಸುತ್ತಾನೆ. ಆದರೆ ಇಷ್ಟು ಸಮಯಕ್ಕಾಗಲೇ ಅವನು ನಿಮ್ಮ ದೇಹಭಾಷೆಯನ್ನು ಗಮನಿಸಿ, ನೀವು ಆಸಕ್ತಿದಾಯಕವಾಗಿರುವಿರೇ, ಎಂದು ಪರೀಕ್ಷಿಸಿರುತ್ತಾನೆ.
ತನ್ನ ಕಣ್ಣುಗಳಿಂದಲೆ ಆತ ತನ್ನ ಆಸಕ್ತಿಯನ್ನು ನಿಮಗೆ ಪರಿಚಯ ಮಾಡಿಸುತ್ತಾನೆ
ಇದು ಒಂದು ಚಮತ್ಕಾರ. ಆತ ತನ್ನ ದೇಹ ಭಾಷೆಯಿಂದಲೆ ನೀವೆಂದರೆ ಅವನಿಗೆ ಇಷ್ಟವೆಂಬುದನ್ನು ಪರಿಚಯ ಮಾಡಿಕೊಡುತ್ತಾನೆ. ಇದಕ್ಕಾಗಿ ಆಗಾಗ ಅವನು ನಿಮ್ಮನ್ನು ನೋಡುತ್ತಾನೆ. ಸಾಧ್ಯವಾದರೆ ಕೆಲ ನಿಮಿಷಗಳ ಕಾಲ ಅವನು ನಿಮ್ಮನ್ನು ನೋಡುತ್ತಾನೆ. ಬಿಟ್ಟ ಕಣ್ಣು ಬಿಟ್ಟಂತೆ, ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ಸಹ ನೋಡಬಹುದು.
ಅವನು ನಗುತ್ತಾನೆ
ಇದೆಲ್ಲ ಮುಗಿದ ಮೇಲೆ, ನೀವು ಅವನನ್ನು ಗಮನಿಸಿದ್ದೀರಾ ಎಂದು ಅರಿವಾದ ಮೇಲೆ ಆತ ನಿಮ್ಮನ್ನು ನೋಡಿ ನಗುತ್ತಾನೆ. ಕಣ್ಣಿನಲ್ಲೆ ನಿಮ್ಮೊಂದಿಗೆ ಫ್ಲರ್ಟ್ ಮಾಡಿ ಮಾಡಿ ಸಾಕಾದ ನಂತರ ಆತ ಹೀಗೆ ಮಾಡುತ್ತಾನೆ. ಮೊದಲಿಗೆ, ಆತ ಒಂದು ಸಣ್ಣ "ಮಿಲಿ ಮೀಟರಿನಷ್ಟು ನಗುವನ್ನು" ನೀಡುತ್ತಾನೆ. ಆದರೆ ಮುಂದೆ ಅದು "ಸೆಂಟಿ ಮೀಟರಿನಷ್ಟು" ಸುಧಾರಿಸುತ್ತದೆ. ಕೊನೆಗೆ ತುಟಿಗಳನ್ನು ಅಗಲಿಸಿಕೊಂಡು, ಹಲ್ಲುಗಳು ಸಹ ಕಾಣುವಂತೆ ದೊಡ್ಡ ನಗುವನ್ನು ನಿಮಗಾಗಿ ನೀಡುತ್ತಾನೆ. ಹೀಗೆ ಅವನು ನಿಮ್ಮೊಂದಿಗೆ ಬೆರೆಯಲು ಇಷ್ಟಪಡುತ್ತಾನೆ. ಹೀಗೆ ಮುಂದುವರಿದರೆ, ಆತ ನಿಮಗೆ ತನ್ನ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ಸಹ ಮುಂದೆ ಇಟ್ಟು, ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬಹುದು. ಈ ಮೇಲಿನ ಎಲ್ಲಾ ಲಕ್ಷಣಗಳು ಕಣ್ಣಲ್ಲೇ ಫ್ಲರ್ಟ್ ಮಾಡುವವರಲ್ಲಿ ನಾವು ಕಾಣಬಹುದು.



Click it and Unblock the Notifications


