ನಿಮ್ಮ ಸಂಗಾತಿ ಕೆಲವೊಮ್ಮೆ ಮಾನಸಿಕ ಅಸ್ವಸ್ಥರಾಗಿ ವರ್ತಿಸುತ್ತಾರೆಯೇ?

ನಿಮ್ಮ ಸಂಗಾತಿ ಹೆಚ್ಚು ಉದ್ರಿಕ್ತರಾಗಿರುತ್ತಾರೆ ಎಂದು ನೀವು ಎಂದಾದರೂ ಭಾವಿಸಿದ್ದೀರಾ? ನೀವು ಕೆಲವೊಮ್ಮೆ ಹೆಚ್ಚು ಕೋಪಗೊಂಡು ನಿಮ್ಮ ಸಂಗಾತಿಯನ್ನು ಹುಚ್ಚ ಎಂದು ಕರೆದ ಕ್ಷಣವನ್ನು ನಾವಿಲ್ಲಿ ಹೇಳುತ್ತಿಲ್ಲ. ನಿಮ್ಮ ಸಂಗಾತಿ ಕೆಲವೊಮ್ಮೆ ಮಾನಸಿಕ ಅಸ್ವಸ್ಥರಾಗಿರುತ್ತಾರೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಕೆಲವೊಮ್ಮೆ ನೀವು ಡೇಟಿಂಗ್ ಮಾಡುತ್ತಿರುವುದು ಮಾನಸಿಕ ಅಸ್ವಸ್ಥರೊಂದಿಗೆ ಆಗಿರಬಹುದು. ನಿಮ್ಮ ಗೆಳೆಯ ಅಥವಾ ಗೆಳತಿ ಮಾನಸಿಕ ಅಸ್ವಸ್ಥ ಎಂಬುದನ್ನು ಕೆಲವು ಲಕ್ಷಣಗಳಿಂದ ಅರಿತುಕೊಳ್ಳಬಹುದು.

ಇದನ್ನು ಮೊದಲೇ ಅರಿತುಕೊಳ್ಳುವುದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಶಾಂತಿಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿ ನಿಜವಾಗಿಯೂ ಮಾನಸಿಕವಾಗಿ ಸೈಕೋ (ಮಾನಸಿಕ ಅಸ್ವಸ್ಥ) ಆಗಿದ್ದರೆ ನಿಮ್ಮ ಜೀವನಕ್ಕೆ ತೊಂದರೆ. ಇದನ್ನು ಮೊದಲೇ ಅರಿತುಕೊಂಡು ಅವರಿಂದ ದೂರವಿರುವುದು ಎಷ್ಟೋ ಒಳ್ಳೆಯದು.

ನೀವು ಹೀಗೆ ಬಿಂದಾಸ್ ಆಗಿರುವ ಸಂಗಾತಿಯೊಂದಿಗೆ ಸ್ನೇಹವನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಹೆಚ್ಚು ಅಸ್ವಸ್ಥರಾಗಿರುವ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎಂದಾದಲ್ಲಿ ಕೆಲವೊಂದು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ಇದನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಕೆಳಗಿನ ವಿಧಾನಗಳ ಮೂಲಕ ತಿಳಿದುಕೊಳ್ಳಿ.

ಆದರ್ಶ ಸಂಗಾತಿಯ 15 ಲಕ್ಷಣಗಳು

ಪ್ರಾರಂಭದಲ್ಲಿ ಹೆಚ್ಚುವರಿ ಆಕರ್ಷಣೆ

ಪ್ರಾರಂಭದಲ್ಲಿ ಹೆಚ್ಚುವರಿ ಆಕರ್ಷಣೆ

ಪ್ರಾರಂಭದಲ್ಲಿ, ನಿಮ್ಮನ್ನು ಅವರು ಹೆಚ್ಚು ಪ್ರೀತಿಸುತ್ತಾರೆ, ಹೆಚ್ಚು ಕಾಳಜಿ ತೋರಿಸುತ್ತಾರೆ. ನಿಮಗೆ ಯಾವಾಗಲೂ ಬೇಕಾದ ವ್ಯಕ್ತಿಯಂತೆ ಅವರು ನಡೆದುಕೊಳ್ಳುತ್ತಾರೆ. ಇದು ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳುವ ಅವರ ದಾಳವಾಗಿದೆ ಎಂಬುದನ್ನು ಗಮನಿಸಿಕೊಳ್ಳಿ.

ಮೋಜನ್ನು ಅನುಭವಿಸುವವರು

ಮೋಜನ್ನು ಅನುಭವಿಸುವವರು

ಬಿಂದಾಸ್ ಆಗಿರುವ ಜನರು ಯಾವಾಗಲೂ ಕ್ರೇಜಿಯಾಗಿರುತ್ತಾರೆ ಎಂದೇನಲ್ಲ. ತಮ್ಮ ಹಾಸ್ಯದ ಲೇಪನದಿಂದ ಮನೆಯಲ್ಲಿ ಮೋಜನ್ನು ಉಂಟುಮಾಡುವವರು ಅವರಾಗಿರುತ್ತಾರೆ.

ಅನಿರ್ದಿಷ್ಟ ಅಂತರ

ಅನಿರ್ದಿಷ್ಟ ಅಂತರ

ಇಂತಹ ಜನರ ಜೀವನದಲ್ಲಿ ಕೆಲವೊಂದು ಅನಿರ್ದಿಷ್ಟ ಅಂತರಗಳಿರುತ್ತವೆ. ವಿದ್ಯಾಭ್ಯಾಸ, ವೃತ್ತಿ ಹೀಗೆ ಪ್ರತಿಯೊಂದರಲ್ಲೂ ನಿರ್ದಿಷ್ಟತೆಯನ್ನು ಅವರು ಹೊಂದಿರುವುದಿಲ್ಲ. ಇದಕ್ಕೆ ಅವರು ಕೆಲವೊಂದು ಕಾರಣಗಳನ್ನು ಹೇಳುತ್ತಿರುತ್ತಾರೆ. ಆದರೆ ಇದೆಲ್ಲಾ ನಿಜವಾಗಿರುವುದಿಲ್ಲ.

ಪ್ರಶ್ನೆಗಳಿಗೆ ನೇರವಾದ ಉತ್ತರಗಳಿರುವುದಿಲ್ಲ

ಪ್ರಶ್ನೆಗಳಿಗೆ ನೇರವಾದ ಉತ್ತರಗಳಿರುವುದಿಲ್ಲ

ಕೆಲವೊಂದು ಪ್ರಶ್ನೆಗಳಿಗೆ ಅವರಿಂದ ನೇರವಾದ ಉತ್ತರಗಳಿರುವುದಿಲ್ಲ. ನಿಮ್ಮ ಪಾಲಕರು ಎಲ್ಲಿ ನೆಲೆಸುತ್ತಾರೆ ಎಂದು ಕೇಳಿದಾಗ ಅವರು ಬೇರೆ ಬೇರೆ ಉತ್ತರಗಳನ್ನು ನೀಡಬಹುದು ಅಥವಾ ನಿಮ್ಮ ಮೇಲೆ ವಿನಾಕಾರಣ ರೇಗಬಹುದು.

ನಿಮ್ಮನ್ನು ಕ್ರೇಜಿಗೊಳಿಸುತ್ತಾರೆ

ನಿಮ್ಮನ್ನು ಕ್ರೇಜಿಗೊಳಿಸುತ್ತಾರೆ

ಸಾಮಾನ್ಯವಾಗಿ ಸದಾ ಬಿಂದಾಸ್ ಆಗಿರುವ ಜನರು ತಮ್ಮ ಸುತ್ತಲಿನ ವಾತಾವರಣವನ್ನು ತಮ್ಮಂತೆ ಸೃಷ್ಟಿಕೊಳ್ಳುತ್ತಾರೆ. ಇದು ನಿಮ್ಮ ಗಮನಕ್ಕೆ ನಿಧಾನವಾಗಿ ಬರಲಾರಂಭಿಸುತ್ತದೆ.

ಸುಳ್ಳಿನ ಸರಮಾಲೆ

ಸುಳ್ಳಿನ ಸರಮಾಲೆ

ಇಂತಹ ಸ್ವಭಾವ ಉಳ್ಳವರು ಸಲೀಸಾಗಿ ಸುಳ್ಳನ್ನು ಹೇಳುತ್ತಾರೆ. ಇವರ ಮಾತುಗಳು ಕೃತಕತೆಯಿಂದ ಕೂಡಿರುತ್ತದೆ ಇದು ನಿಮ್ಮ ಗಮನಕ್ಕೆ ಬರಲೇಬೇಕು.

ಸಾರ್ವಜನಿಕವಾಗಿ ಕೋಪಗೊಳ್ಳುವುದು

ಸಾರ್ವಜನಿಕವಾಗಿ ಕೋಪಗೊಳ್ಳುವುದು

ಮಾನಸಿಕ ಅಸ್ವಸ್ಥರಾಗಿರುವ ಜನರು ಸಾರ್ವಜನಿಕವಾಗಿ ತಮ್ಮ ಕೋಪವನ್ನು ಪ್ರದರ್ಶಿಸುತ್ತಾರೆ, ಜನನಿಬಿಡ ಪ್ರದೇಶ ಎಂಬುದನ್ನು ಕೂಡ ಅವರು ನೋಡುವುದಿಲ್ಲ.

ನಿಮ್ಮ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ

ನಿಮ್ಮ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ

ನೀವು ನಿಮ್ಮ ಸಂಗಾತಿಯ ಕರೆಯನ್ನು ಸ್ವೀಕರಿಸದೇ ಇದ್ದಲ್ಲಿ ನೀವು ಮೋಸಗಾರರಾಗಿರುತ್ತೀರಿ, ಸ್ವಲ್ಪ ತಡವಾಗಿ ಬಂದರೂ ನಿಮ್ಮ ಬಾಸ್‌ನೊಂದಿಗೆ ನಿಮಗೆ ಸಂಬಂಧವಿದೆ ಎಂದು ಕಲ್ಪಿಸುತ್ತಾರೆ, ಹೀಗೆ ನಿಮ್ಮ ಪ್ರತಿಯೊಂದು ಚಲನವಲನವನ್ನು ಸಂಶಯದ ದೃಷ್ಟಿಯಲ್ಲಿ ನೋಡುತ್ತಾರೆ.

ಆತ್ಮಹತ್ಯೆಯಂತಹ ಬೆದರಿಕೆಗಳು

ಆತ್ಮಹತ್ಯೆಯಂತಹ ಬೆದರಿಕೆಗಳು

ನಿಮಗೆ ಪದೇ ಪದೇ ಆತ್ಮಹತ್ಯೆಯ ಬೆದರಿಕೆಗಳನ್ನು ಅವರು ಹಾಕುತ್ತಿರುತ್ತಾರೆ. ಸಂಬಂಧದಲ್ಲಿ ಅವರು ಈ ರೀತಿಯ ನಾಟಕಗಳನ್ನು ಆಗಾಗ್ಗೆ ಸೃಷ್ಟಿಸುತ್ತಾರೆ.

ಸುಳ್ಳು ಕಥೆಗಳು

ಸುಳ್ಳು ಕಥೆಗಳು

ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ರೀತಿಯಲ್ಲಿ ಅವರು ಒಮ್ಮೊಮ್ಮೆ ಮಾತನಾಡುತ್ತಾರೆ. ತಮ್ಮ ತಂದೆ ತಾಯಿಗಳ ಬಗೆಗೆ ಸುಳ್ಳನ್ನೇ ಹೇಳುತ್ತಿರುತ್ತಾರೆ. ತಮ್ಮ ದುಃಖದ ಕಥೆಯನ್ನೇ ನಿಮ್ಮ ಮುಂದೆ ಬಿಚ್ಚಿಡುತ್ತಾರೆ.

ಪ್ರಾಣಿಗಳು ಮಕ್ಕಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು

ಪ್ರಾಣಿಗಳು ಮಕ್ಕಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು

ನಿಮ್ಮ ಸಂಗಾತಿ ಪ್ರಾಣಿಗಳು, ಮಕ್ಕಳು ಮತ್ತು ಕೆಲವೊಬ್ಬರ ಜೊತೆ ಕ್ರೂರವಾಗಿ ನಡೆದುಕೊಳ್ಳುವುದನ್ನು ಗಮನಿಸಿ ನಿಮಗೆ ಆಶ್ಚರ್ಯವಾಗಬಹುದು. ಈ ರೀತಿಯ ಸ್ವಭಾವವನ್ನು ಹೊಂದಿರುವವರು ಹೀಗೆ ಕ್ರೂರವಾಗಿ ನಡೆದುಕೊಳ್ಳುತ್ತಿರುತ್ತಾರೆ.

ಕೃತಕತೆ

ಕೃತಕತೆ

ಅವರು ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೂ ನಿಮ್ಮಲ್ಲಿ ಕ್ಷಮೆ ಕೇಳಿದರೂ ಇದರಲ್ಲಿ ಯಾವುದೇ ನಿಜವಿರುವುದಿಲ್ಲ. ಕೃತಕೃತೆ ಚೆನ್ನಾಗಿ ಎದ್ದು ಕಾಣುತ್ತಿರುತ್ತದೆ.

ಸಂಗಾತಿಯ ಬಗೆಗೆ ನಿಮ್ಮ ಮನೆಯವರು ಮತ್ತು ಸ್ನೇಹಿತರ ನೋಟ

ಸಂಗಾತಿಯ ಬಗೆಗೆ ನಿಮ್ಮ ಮನೆಯವರು ಮತ್ತು ಸ್ನೇಹಿತರ ನೋಟ

ನಿಮ್ಮಕ್ಕಿಂತಲೂ ಹೆಚ್ಚಾಗಿ ನಿಮ್ಮ ಮನೆಯವರು ಅಥವಾ ಸ್ನೇಹಿತರು ನಿಮ್ಮ ಸಂಗಾತಿಯ ಈ ವಿಚಿತ್ರ ನಡವಳಿಕೆಯನ್ನು ಗಮನಿಸಲು ಸಮರ್ಥರಾಗಿರುತ್ತಾರೆ. ಅವರು ನಿಮ್ಮಲ್ಲಿ ಖಂಡಿತ ಈ ಬಗ್ಗೆ ಚರ್ಚಿಸುತ್ತಾರೆ ಮತ್ತು ನಿಮ್ಮಲ್ಲಿ ಅವರ ನಡವಳಿಕೆ ಅಷ್ಟು ಸರಿಯಾಗಿಲ್ಲ ಎಂಬುದನ್ನು ಅವರು ಚೆನ್ನಾಗಿ ಗುರುತಿಸುತ್ತಾರೆ.

ಒತ್ತಡಕ್ಕೆ ಕಾರಣರಾಗಿರುತ್ತಾರೆ

ಒತ್ತಡಕ್ಕೆ ಕಾರಣರಾಗಿರುತ್ತಾರೆ

ನಿಮ್ಮನ್ನು ಸಂತೋಷವಾಗಿ ಇರಿಸಬೇಕಾದವರು ನಿಮ್ಮ ಒತ್ತಡಕ್ಕೆ ಕಾರಣರಾಗಿರುತ್ತಾರೆ. ನಿಮ್ಮ ತಲೆನೋವಿಗೆ ಅವರ ನಡವಳಿಕೆಯೇ ಕಾರಣವಾಗಿರುತ್ತದೆ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವ ಮನಸ್ಸು ಅವರಿಗೆ ಇರುವುದಿಲ್ಲ.

X
Desktop Bottom Promotion