Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪ್ರಿಯಕರನಿಗೆ ಪ್ರೀತಿಯಲ್ಲಿ ಆಸಕ್ತಿ ಇಲ್ವಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಪ್ರೀತಿ ಎಂದರೆ ಅದೊಂದು ಸುಂದರ ಅನುಭವ. ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತು ಕಾಣೋದಿಲ್ಲ ಅಂತಾರೆ ಆದ್ರೆ ದಿನಕಳೆದಂತೆ ಪ್ರೇಮಿಗಳು ಪ್ರೀತಿಯಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ಪ್ರೀತಿಯ ಮೇಲೆ, ಪ್ರೀತಿಸಿದವರ ಮೇಲೆ ಮೊದಲಿದ್ದ ಆಸಕ್ತಿ ಇರೋದಿಲ್ಲ.

ಅಷ್ಟಕ್ಕು ನಿಮ್ಮ ಪ್ರಿಯಕರ ಮೊದಲಿನಂತೆಯೇ ಪ್ರೀತಿಯಲ್ಲಿ ಆಸಕ್ತಿ ತೋರಬೇಕೆಂದರೆ ಏನು ಮಾಡಬೇಕು? ಕಳೆದುಕೊಂಡ ಆಸಕ್ತಿಗೆ ಮತ್ತೆ ಮರು ಜೀವ ಕೊಡೋದು ಹೇಗೆ? ಇಲ್ಲಿದೆ ಟಿಪ್ಸ್.
1. ಪ್ರತಿವಾರ ಡೇಟ್‌ಗೆ ಹೋಗಿ: ಕೆಲವು ಸಂಬಂಧಗಳಲ್ಲಿ ದಿನ ಕಳೆದಂತೆ ಆರಂಭದಲ್ಲಿದ್ದ ಆಸಕ್ತಿ ಇರೋದಿಲ್ಲ. ಅದ್ರಲ್ಲೂ ಹುಡುಗರು ಬೇಗನೆ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತಿ ವಾರದಲ್ಲಿ ಒಂದು ದಿನ ನಿಮ್ಮ ಪ್ರಿಯಕರನ ಜೊತೆಗೆ ಡೇಟ್‌ಗೆ ಹೋಗಿ. ಆತನ ಜೊತೆಗೆ ಸಮಯ ಕಳೆಯಿರಿ. ಆತನಿಗೆ ಹಳೆಯ ನೆನಪುಗಳು ಮರುಕಳಿಸುತ್ತದೆ. ಹಾಗೂ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತದೆ.
2. ನಿಮಗಾಗಿ ಹೆಚ್ಚಿನ ಸಮಯ ಕಳೆಯಿರಿ: ನಿಮ್ಮ ಪ್ರಿಯಕರನಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆ ಆಗಿದೆ ಎಂದು ನೊಂದುಕೊಳ್ಳಬೇಡಿ. ಈ ವಿಚಾರದ ಬಗ್ಗೆ ನೀವು ಚಿಂತಿಸುತ್ತಿದ್ದರೆ ಏನು ಲಾಭವಿಲ್ಲ. ಬದಲಾಗಿ ನೀವು ಇಡೀ ದಿನ ನಿಮ್ಮ ಬಗ್ಗೆ ಯೋಚಿಸಿ. ಏನಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಯಾವುದಾದರೂ ಕೆಲಸದ ಮೇಲೆ ವಿಶೇಷ ಆಸಕ್ತಿ ತೋರಿ, ಬೇಜಾರಾದಾಗ ಸ್ನೇಹಿತೆಯರ ಜೊತೆಗೆ ಹೊರಗಡೆ ಹೋಗಿ. ನೀವು ನಿಮ್ಮ ಪ್ರಪಂಚದಲ್ಲಿದ್ದಾಗ ನೋವು ನಿಮ್ಮನ್ನು ಕಾಡೋದಿಲ್ಲ. ಬದಲಾಗಿ ನೀವು ದೂರ ಇದ್ದಷ್ಟು ನಿಮ್ಮ ಪ್ರಿಕರನೇ ನಿಮ್ಮ ಮೇಲೆ ಆಸಕ್ತಿ ತೋರುತ್ತಾನೆ.
3. ನೀವು ಮೊದಲ ದಿನ ಕಳೆದ ಸ್ಥಳಕ್ಕೆ ಭೇಟಿ ನೀಡಿ: ಪ್ರೀತಿ ಶುರುವಾದ ಹೊಸತರಲ್ಲಿ ಎಲ್ಲರೂ ಒಂದು ಸ್ಪೇಷಲ್ ಜಾಗಕ್ಕೆ ಡೇಟ್‌ಗೆ ಖಂಡಿತ ಹೋಗಿರ್ತೀರಿ. ಈಗ ಮತ್ತೆ ಅದೇ ಜಾಗಕ್ಕೆ ನಿಮ್ಮ ಪ್ರಿಯಕರನನ್ನು ಕರೆದುಕೊಂಡು ಹೋಗಿ. ಆಗ ಅವರು ಎಲ್ಲವನ್ನೂ ಮತ್ತೆ ನೆನಪು ಮಾಡಿಕೊಳ್ಳುತ್ತಾರೆ. ಅವರು ಹೇಗೆ ಪ್ರೀತಿಯಲ್ಲಿ ಬಿದ್ದರೂ ಅನ್ನೋದನ್ನ ನೆನಪಿಸಿಕೊಳ್ಳುತ್ತಾರೆ. ನಿಮ್ಮ ಪ್ರೀತಿಯ ಆ ಸುಂದರ ಕ್ಷಣಗಳು ಅವರಿಗೆ ಮತ್ತೆ ನೆನಪಾಗುತ್ತದೆ.
4. ಮುಕ್ತವಾಗಿ ಮಾತನಾಡಿ: ನಿಮ್ಮ ಪ್ರಿಯಕರ ಈಗ ಪ್ರೀತಿಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿರಬಹುದು. ಹಾಗಂತ ನೀವು ಕೊರಗುತ್ತಾ ಕೂರುವುದು ಸರಿಯಲ್ಲ. ಅವರ ಬಳಿ ಮುಕ್ತವಾಗಿ ಮಾತನಾಡಿ. ನೀವು ಆಡುವ ಒಂದೊಂದು ಮಾತುಗಳು ಅವರ ಮನಸ್ಸಿಗೆ ನಾಟುವಂತಿರಲಿ. ಅವರ ನಡವಳಿಕೆಯಿಂದ ನೀವೆಷ್ಟು ನೊಂದುಕೊಂಡಿದ್ದೀರಿ ಅನ್ನೋದನ್ನ ತಿಳಿಸಿ. ಅವರು ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳಿ. ಇಬ್ಬರೂ ಕೂತು ಮಾತನಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
5. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ: ಸಂಬಂಧ ಉಳಿಯಬೇಕೆಂದರೆ ಅಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಅರ್ಥೈಸಿ ಜೀವನ ನಡೆಸಿದಾಗ ಮಾತ್ರ ಸುಖವಾಗಿರೋದಕ್ಕೆ ಸಾಧ್ಯ. ನಿಮ್ಮ ಪ್ರಿಯಕರನ ಈ ನಡವಳಿಕೆಗೆ ಕಾರಣವೇನು? ಅವರು ನಿಮ್ಮಿಂದ ಮತ್ತೇನನ್ನೂ ಬಯಸುತ್ತಿದ್ದಾರೆ? ಎಂದು ತಿಳಿದುಕೊಳ್ಳಿ. ಆಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತದೆ.
6. ಪ್ರಿಯಕರನನ್ನು ಪ್ರಶಂಶಿಸಿ: ಕೇವಲ ಮಹಿಳೆಯರು ಮಾತ್ರ ಕಾಂಪ್ಲಿಮೆಂಟ್‌ಗಳನ್ನು ಇಷ್ಟ ಪಡೋದಿಲ್ಲ. ಪುರುಷರಿಗೂ ಕಾಂಪ್ಲಿಮೆಂಟ್ ಇಷ್ಟವಾಗುತ್ತದೆ. ಅವರು ಹೊಸ ಬಟ್ಟೆ ಧರಿಸಿದಾಗ ಕಾಂಪ್ಲಿಮೆಂಟ್ ನೀಡಿ. ಅಥವಾ ನಿಮಗೆ ಮನೆ ಕೆಲಸದಲ್ಲಿ ಸಹಾಯ ಮಾಡಿದಾಗ, ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡಿದಾಗ ಅದನ್ನು ಪ್ರಶಂಶಿಸಿ. ನೀವು ಹೀಗೆ ಮಾಡಿದರೆ ಅವರು ಇಷ್ಟ ಪಡುತ್ತಾರೆ. ಹಾಗೂ ಪ್ರೀತಿಯಲ್ಲಿ ಆಸಕ್ತಿ ತೋರುತ್ತಾರೆ.
7. ಲೈಂಗಿಕ ಆಸಕ್ತಿ ಹೆಚ್ಚಿಸಿ: ಕೆಲವೊಂದು ಸಾರಿ ಪುರುಷರು ಲೈಂಗಿಕ ಆಸಕ್ತಿ ಕಳೆದುಕೊಂಡಾಗಲೂ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೀಗಾಗಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಅವಕಾಶ ಕೊಡಬೇಡಿ. ಅವರಿಗೆ ಇಷ್ಟ ಆಗೋ ಹಾಗೇ ಹೊಸತೇನಾದರೂ ಪ್ರಯತ್ನಿಸಿ.
8. ಆತನ ಹಳೆಯ ಸಂಗಾತಿಯ ಬಗ್ಗೆ ನೆನಪಿಸಬೇಡಿ: ಹಳೆಯ ಸಂಗಾತಿಯ ಬಗ್ಗೆ ಮಾತನಾಡುವುದು ಹುಡುಗರಿಗೆ ಇಷ್ಟವಾಗೋದಿಲ್ಲ. ಕೆಲವೊಂದು ಸಲ ಜೋರಾಗಿ ಜಗಳಗಳು ನಡೆದಾಗ ಹುಡುಗಿಯರು ಹುಡುಗನ ಹಳೆಯ ಪ್ರೀತಿ ಹಾಗೂ ಹಳೆಯ ಹುಡುಗಿಯ ವಿಚಾರವನ್ನು ಕೆದಕುತ್ತಾರೆ. ಹೀಗೆ ಮಾಡೋದಕ್ಕೆ ಹೋಗಬೇಡಿ. ಇದು ಪುರುಷರಿಗೆ ಖಂಡಿತ ಇಷ್ಟ ಆಗೋದಿಲ್ಲ. ಹಳೆಯ ನೋವನ್ನು ಮರೆಯೋದಕ್ಕೆ ನಿಮ್ಮ ಜೊತೆ ಬಂದಿರುತ್ತಾರೆ. ಹೀಗಾಗಿ ನೀವು ಹಳೆಯದನ್ನು ನೆನಪಿಸಿ ನೋವು ಮಾಡೋದು ಸರಿಯಲ್ಲ. ಇದು ಕೂಡ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣ ಆಗಬಹುದು.
ಪ್ರೀತಿಯಲ್ಲಿ ಕೆಲವೊಂದು ಸಾರಿ ಹೀಗೆಲ್ಲಾ ಆಗೋದು ಸಹಜ. ಆದರೆ ಪ್ರೀತಿ ಕೊನೆವರೆಗೆ ಉಳಿಯಬೇಕಾದರೆ ಇಬ್ಬರಲ್ಲಿ ಒಬ್ಬರು ತ್ಯಾಗ ಮಾಡಲೇಬೇಕಾಗುತ್ತದೆ.



Click it and Unblock the Notifications














