Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ನಿಮ್ಮನ್ನು ತಿರಸ್ಕಾರ ಭಾವದಿಂದ ಕಾಣುತ್ತಿರೋ ಗಂಡನಿಗೆ ಈ ರೀತಿ ಬುದ್ಧಿ ಕಲಿಸಿ!
ಕೆಲವು ಗಂಡಂದಿರು ಹೆಂಡತಿಗೆ ತುಂಬಾನೇ ಮರ್ಯಾದಿ ಕೊಡುತ್ತಾರೆ. ಜೊತೆಗೆ ಅಷ್ಟೇ ಪ್ರೀತಿ ಹಾಗೂ ಕಾಳಜಿಯನ್ನೂ ಮಾಡುತ್ತಾರೆ. ಆದ್ರೆ ಇನ್ನೂ ಕೆಲವು ಗಂಡಂದಿರು ಹೆಂಡತಿಯನ್ನು ಬೇಜವಾಬ್ದಾರಿಯಿಂದ ಕಾಣುತ್ತಾರೆ. ಅವರ ಮೇಲೆ ಕಿಂಚಿತ್ತೂ ಪ್ರೀತಿ ಇರೋದಿಲ್ಲ. ಕುಟುಂಬಕ್ಕಾಗಿ ಆಕೆ ಜೀತದಾಳಿನಂತೆ ದುಡಿಯುತ್ತಿದ್ದರೂ ಕೂಡ ಅದು ಆಕೆಯ ಜವಾಬ್ದಾರಿ ಎನ್ನುವಂತೆ ಸುಮ್ಮನಿದ್ದು ಬಿಡುತ್ತಾರೆ.
ಅದ್ರಲ್ಲೂ ಕೆಲ ಗಂಡಸರಿಗೆ ಮದುವೆಯಾದ ಹೊಸತರಲ್ಲಿ ಇದ್ದ ಪ್ರೀತಿ ಆ ಮೇಲೆ ಇಲ್ಲದಾಗಿ ಬಿಡುತ್ತದೆ. ಗಂಡಂದಿರೂ ಈ ರೀತಿ ಯಾಕೆ ಮಾಡುತ್ತಾರೆ ಎಂದು ನಿಮ್ಮನ್ನೇ ನೀವು ಪ್ರಶ್ನಿಸಿರಬಹುದು. ಆದರೆ ಉತ್ತರ ಮಾತ್ರ ಸಿಕ್ಕಿರೋದಿಲ್ಲ. ಈ ರೀತಿಯ ನಡವಳಿಕೆಯನ್ನು ಖಂಡಿತ ಸಹಿಸಲೇಬಾರದು. ನಿಮ್ಮ ಗಂಡನಿಗೆ ನಿಮ್ಮ ಬೆಲೆ ಏನು ಅನ್ನೋದನ್ನು ತಿಳಿಸಿ. ಅಷ್ಟಕ್ಕು ನಿಮ್ಮ ಗಂಡನಿಗೆ ನಿಮ್ಮ ಬೆಲೆ ತಿಳಿಸೋದು ಹೇಗೆ ಎಂದು ತಿಳಿಯೋಣ.

1. ನಿಮ್ಮನ್ನು ನೀವು ಬ್ಯುಸಿಯಾಗಿ ಇಟ್ಟುಕೊಳ್ಳಿ
ಗಂಡ ನಿಮ್ಮೊಂದಿಗೆ ಬೇಜವಾಬ್ದಾರಿಯಿಂದ ನಡೆದುಕೊಂಡಾಗ ಮತ್ತು ನಿಮ್ಮನ್ನು ತಿರಸ್ಕಾರ ಭಾವದಿಂದ ಕಂಡಾಗ ನಿಮಗೆ ಬೇಜಾರಾಗೋದು ಸಹಜ. ಹಾಗಂತ ನೊಂದುಕೊಂಡು ಕೂರಬೇಡಿ. ಮನೆಯ ಕೆಲಸ ಮುಗಿಸಿ ಆದ ಮೇಲೆ ಗಂಡನ ಬಗ್ಗೆ ಯೋಚನೆ ಮಾಡೋದನ್ನು ಬಿಟ್ಟು ನಿಮ್ಮನ್ನು ನೀವು ದಿನ ಪೂರ್ತಿ ಬ್ಯುಸಿಯಾಗಿ ಇಟ್ಟುಕೊಳ್ಳೋದಕ್ಕೆ ಪ್ರಯತ್ನಿಸಿ. ಏನಾದರೂ ಕೆಲಸಗಳನ್ನು ಮಾಡುತ್ತಿರಿ. ನಿಮ್ಮ ಹವ್ಯಾಸಗಳಿದ್ದರೆ ಅದನ್ನು ಮುಂದುವರಿಸಿ.
2. ಪದೇ ಪದೇ ಕಾಲ್, ಮೆಸೇಜ್ ಮಾಡಬೇಡಿ
ಗಂಡನ ಬಗ್ಗೆ ಕಾಳಜಿ ಹೊಂದಿರುವ ನೀವು ಆತನಿಗೆ ಕಾಲ್ ಮಾಡಿ ಕ್ಷೇಮ, ಸಮಾಚಾರವನ್ನು ವಿಚಾರಿಸುತ್ತೀರಿ. ಊಟ, ತಿಂಡಿ ಬಗ್ಗೆ ಕೇಳುತ್ತೀರಿ. ಇದು ಆತನಿಗೆ ಕಿರಿಕಿರಿ ಅನ್ನಿಸಿ ಆತ ನಿಮಗೆ ಬೈಯುತ್ತಾನೆ. ಇಂತಹ ಸಂದರ್ಭದಲ್ಲಿ ನಿಮಗೂ ಕೂಡ ನಿಮ್ಮ ಗಂಡನ ಮೇಲೆ ಕಾಳಜಿ ಇಲ್ಲ ಎನ್ನುವ ರೀತಿ ನಡೆದುಕೊಳ್ಳಬೇಕು. ಆತನಿಗೆ ಮೇಸೆಜ್, ಕಾಲ್ ಮಾಡೋದನ್ನು ಸಂಪೂರ್ಣವಾಗಿ ನಿಲ್ಲಿಸಿ, ನಿಮ್ಮಷ್ಟಕ್ಕೆ ನೀವು ಇದ್ದು ಬಿಡಿ.
3. ಗಂಡನ ಎಲ್ಲಾ ಕೆಲಸಗಳನ್ನು ಮಾಡಬೇಡಿ
ಕೆಲ ಮನೆಗಳಲ್ಲಿ ಹೆಂಡತಿಯು ಗಂಡನ ಸಂಪೂರ್ಣ ಸೇವೆಯನ್ನು ಮಾಡುತ್ತಾಳೆ. ಮನೆ ಕೆಲಸವನ್ನು ಮಾಡಿಕೊಡುವುದಲ್ಲದೇ ಗಂಡನ ಪ್ರತಿಯೊಂದು ಕೆಲಸ ಆಕೆಯೇ ಮಾಡಿ ಕೊಡುತ್ತಾಳೆ. ಇದೇ ಕಾರಣಕ್ಕೆ ಕೆಲ ಗಂಡಂದಿರು ಹೆಂಡತಿಯನ್ನು ತಾತ್ಸಾರ ಭಾವದಿಂದ ಕಾಣುತ್ತಾರೆ.
ಹೀಗಾಗಿ ನೀವು ಅವರ ಎಲ್ಲಾ ಕೆಲಸಗಳನ್ನು ಮಾಡೋದಕ್ಕೆ ಹೋಗಬೇಡಿ. ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳಲಿ. ಒಂದು ವೇಳೆ ಅವರು ನಿಮ್ಮಲ್ಲಿ ಯಾಕೆ ಈ ಕೆಲಸವನ್ನು ಮಾಡಿಲ್ಲ ಎಂದು ಕೇಳಿದರೆ ಹೆಚ್ಚು ಮಾತನಾಡೋದಕ್ಕೆ ಹೋಗಬೇಡಿ. ನೀವೆ ಮಾಡಿಕೊಳ್ಳಿ ಎಂದು ಹೇಳಿ ಸುಮ್ಮನಿದ್ದು ಬಿಡಿ. ಆಗ ಅವರಿಗೆ ಹೆಂಡತಿ ಎಷ್ಟು ಶ್ರಮ ಪಡುತ್ತಾಳೆ ಅನ್ನೋದು ಗೊತ್ತಾಗುತ್ತದೆ.
4. ನಿಮ್ಮ ಸ್ನೇಹಿತರ ಜೊತೆಗೆ ಹೊರಗಡೆ ಹೋಗಿ
ನೀವು ಮೂರು ಹೊತ್ತು ಮನೆಯಲ್ಲಿ ದುಡಿಯುತ್ತಿರುತ್ತೀರಿ. ಅತ್ತ ಗಂಡನು ನಿಮ್ಮ ಬಗ್ಗೆ ಕಾಳಜಿ ಮಾಡೋದಿಲ್ಲ. ಸಹಜವಾಗಿ ನಿಮ್ಮ ಮನಸ್ಸಿಗೆ ನೋವಾಗುತ್ತದೆ. ಈ ನೋವನ್ನು ಮರೆಯೋದಕ್ಕೆ ನಿಮ್ಮ ಸ್ನೇಹಿತರ ಜೊತೆಗೆ ಹೊರಗಡೆ ಹೋಗಿ ಸುತ್ತಾಡಿ ಬನ್ನಿ. ಗಂಡ ಮನೆಗೆ ಬರುವಾಗ ನೀವು ಮನೆಯಲ್ಲಿ ಇಲ್ಲದಿದ್ದರೆ ಎಷ್ಟು ಕಷ್ಟ ಆಗುತ್ತೆ ಅನ್ನೋದು ಆತನಿಗೆ ತಿಳಿಯುತ್ತದೆ. ಜೊತೆಗೆ ಹೇಗೆ ಇಷ್ಟೊಂದು ಸಂತೋಷವಾಗಿದ್ದೀರಿ ಅನ್ನೋ ಪ್ರಶ್ನೆ ಕೂಡ ಆತನನ್ನು ಕಾಡೋದಕ್ಕೆ ಶುರುವಾಗುತ್ತದೆ.
5. ನಿಮ್ಮ ಸೌಂದರ್ಯದ ಕಡೆಗೆ ಗಮನ ಕೊಡಿ
ಮದುವೆಯಾದಾಗ ಸುಂದರವಾಗಿದ್ದ ನೀವು ಮದುವೆಯ ಬಳಿಕ ದಪ್ಪಗಾಗಿರಬಹುದು. ಹಾಗೂ ನೀವು ಕುಟುಂಬದ ಬಗ್ಗೆ ಕಾಳಜಿ ಮಾಡುತ್ತಾ ನಿಮ್ಮ ಕಾಳಜಿಯನ್ನು ಮಾಡೋದನ್ನು ನೀವು ಮರೆತಿರಬಹುದು. ಹೆಂಡತಿಯ ಸೌಂದರ್ಯ ಕಡಿಮೆ ಆದಾಗ ಗಂಡನು ಆಕೆಯ ಮೇಲೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಹೀಗಾಗಿ ನೀವು ಯೋಗ, ವ್ಯಾಯಾಮ ಮಾಡಿ ನಿಮ್ಮ ತೂಕ ಇಳಿಸಿಕೊಳ್ಳಿ. ಜೊತೆಗೆ ನಿಮ್ಮ ಮುಖ, ಕೂಲಿನ ಸೌಂದರ್ಯದ ಬಗ್ಗೆ ಗಮನ ಕೊಡಿ. ಈ ಮಾರ್ಡನ್ ಯುಗಕ್ಕೆ ತಕ್ಕ ಹಾಗೆ ಬಟ್ಟೆಗಳನ್ನು ಹಾಕಿಕೊಂಡು ನಿಮ್ಮಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಿ.
6. ಗಂಡನ ಮಾತಿಗೆ ಇಲ್ಲ ಎಂದು ಹೇಳಿ
ಇಷ್ಟು ದಿನ ಗಂಡ ಹೇಳಿದ ಮಾತನ್ನೆಲ್ಲಾ ಕೇಳಿ ಎಲ್ಲದಕ್ಕೂ ತಲೆ ಅಲುಗಾಡಿಸುತ್ತಾ, ಎಲ್ಲಾ ಕೆಲಸವನ್ನು ಮಾಡುತ್ತಿದ್ದಿರಿ. ಇನ್ನು ಮುಂದೆ ಆತನ ಮಾತುಗಳಿಗೆ ನೋ ಎಂದು ಹೇಳಿ. ನಿಮ್ಮನ್ನು ತಿರಸ್ಕಾರ ಭಾವದಿಂದ ಕಾಣುವವನಿಗೆ ನೀವು ಯಾಕೆ ಎಲ್ಲಾ ಕೆಲಸ ಮಾಡಿ ಕೊಡಬೇಕು. ನೀವು ನಿಮ್ಮ ವೈಯಕ್ತಿಕ ಕೆಲಸಗಳನ್ನಷ್ಟೇ ಮಾಡಿ. ಇನ್ನೂ ಆತನ ಪ್ರತಿಯೊಂದು ನಿರ್ಧಾರಕ್ಕೂ ಒಪ್ಪಿಕೊಳ್ಳಬೇಡಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ನೀವು ಈ ರೀತಿ ಇದ್ದರೆ ಖಂಡಿತ ಗಂಡ ಸರಿ ದಾರಿಗೆ ಬರುತ್ತಾನೆ. ಹಾಗೂ ನಿಮಗೆ ಮರ್ಯಾದೆ, ಗೌರವ ಕೊಟ್ಟು ನಡೆಸಿಕೊಳ್ಳುತ್ತಾನೆ.



Click it and Unblock the Notifications


