Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಬೇಡ ಎಂದು ಬಿಟ್ಟು ಹೋದ ಸಂಗಾತಿಯೊಂದಿಗೆ ಮತ್ತೆ ಒಂದಾಗೋದು ಸರಿನಾ?
ಮದುವೆ ಅನ್ನೋದು ಒಂದು ಸುಂದರ ದಾಂಪತ್ಯ ಬಂಧ. ದಂಪತಿಗಳ ಮಧ್ಯೆ ಎಲ್ಲವೂ ಚೆನ್ನಾಗಿದ್ದರೆ ಕೊನೆಯವರೆಗೂ ದಂಪತಿಗಳಿಬ್ಬರು ಸುಖವಾಗಿ ಇರಬಹುದು. ಆದರೆ ಯಾವಾಗ ಇಬ್ಬರ ಮಧ್ಯೆ ಕಲಹಗಳು ಶುರುವಾಗುತ್ತೋ ಆಗ ದಾಂಪತ್ಯದ ಬಂಧವನ್ನು ಮುರಿದುಕೊಳ್ಳೋದಕ್ಕೆ ಮುಂದಾಗ್ತಾರೆ. ಒಂದು ಸಾರಿ ಮುರಿದು ಹೋದ ಸಂಬಂಧವನ್ನು ಸರಿಪಡಿಸೋದು ತುಂಬಾನೇ ಕಷ್ಟ. ಅಷ್ಟಕ್ಕು ಮುರಿದು ಹೋದ ದಾಂಪತ್ಯವನ್ನು ಮತ್ತೆ ಸರಿಪಡಿಸೋದು ಹೇಗೆ ಅನ್ನೋದನ್ನು ತಿಳಿಯೋಣ.
1. ಅಡೆತಡೆಗಳನ್ನು ತೆಗೆದು ಹಾಕಿ
ದಂಪತಿಗಳು ದೂರವಾಗಲು ಮುಖ್ಯವಾದ ಕಾರಣ ಇರುತ್ತೆ. ಅದ್ರಲ್ಲಿ ಮುಖ್ಯವಾಗಿ ನಂಬಿಕೆ ದ್ರೋಹ, ಸುಳ್ಳು ಹೇಳುವುದು, ಮೋಸ ಮಾಡುವುದು ಇತ್ಯಾದಿ. ಈ ಕಾರಣಗಳಿಗಾಗಿ ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗೋದಕ್ಕೆ ನಿರ್ಧಾರ ಮಾಡಿರಬಹುದು. ನೀವು ಮತ್ತೆ ಸಂಬಂಧವನ್ನು ಸರಿ ಪಡಿಸೋದಕ್ಕೆ ಪ್ರಯತ್ನಿಸಿದ್ದೇ ಆದರೆ ಮೊದಲು ಈ ಅಡೆತಡೆಗಳನ್ನು ತೆಗೆದು ಹಾಕೋದಕ್ಕೆ ಪ್ರಯತ್ನಿಸಿ. ಈ ಸಮಸ್ಯೆಗಳೆಲ್ಲಾ ಸರಿಯಾದರೆ ಖಂಡಿತ ನೀವು ಮತ್ತೆ ಹೊಸ ಜೀವನವನ್ನು ಶುರು ಮಾಡಬಹುದು.

2. ನಿಮ್ಮ ಬೇಡಿಕೆಗಳನ್ನು ಕಡಿಮೆ ಮಾಡಿ
ಪ್ರತಿಯೊಬ್ಬ ಮನುಷ್ಯನಿಗೂ ಬೇಡಿಕೆಗಳು ಇದ್ದೇ ಇರುತ್ತದೆ. ಕೆಲವೊಂದು ಸಲ ನಮ್ಮ ಬೇಡಿಕೆಗಳನ್ನು ನಮ್ಮ ಸಂಗಾತಿಯಿಂದ ಪೂರೈಸಲು ಸಾಧ್ಯವಾಗದಿದ್ದರೆ ಆಗ ನಮಗೆ ನಿರಾಸೆ ಉಂಟಾಗೋದು ಸಾಮಾನ್ಯ. ಇದೇ ವಿಚಾರಕ್ಕೆ ಜಗಳಗಳಾಗಿ ಗಂಡ-ಹೆಂಡತಿ ದೂರ ಆಗಿರಬಹುದು.
ಮತ್ತೆ ನಿಮ್ಮ ಸಂಬಂಧವನ್ನು ಸರಿ ಪಡಿಸಲು ಯತ್ನಿಸಿದ್ದೇ ಆದರೆ ನಿಮ್ಮ ಹಳೆಯ ಬೇಡಿಕೆಗಳನ್ನು ಮರೆತುಬಿಡಿ. ಸಂಗಾತಿಯ ಆರ್ಥಿಕ ಪರಿಸ್ಥಿತಿ ಸರಿಯಾಗುವವರೆಗೂ ನೀವು ಕಾಯುವುದು ಒಳ್ಳೆಯದು. ನೀವು ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸುತ್ತೀರಿ ಎಂದಾದರೆ ಮಾತ್ರ ಸಂಬಂಧ ಸರಿಯಾಗೋದಕ್ಕೆ ಸಾಧ್ಯ.
3. ನೀವು ಬದಲಾಗಿ, ನಿಮ್ಮ ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ
ದಂಪತಿಗಳ ಮಧ್ಯೆ ಜಗಳಗಳಾದಾಗ ನಮಗೆ ಯಾವಾಗಲೂ ನಾವೇ ಸರಿ ಅಂತ ಅನ್ನಿಸುತ್ತೆ. ನಮ್ಮ ಸಂಗಾತಿಯೇ ತಪ್ಪು ಮಾಡಿದ್ದಾರೆ ಎಂದುಕೊಳ್ಳುತ್ತೇವೆ. ನಾವು ನಮ್ಮ ಬಗ್ಗೆ ಮಾತ್ರ ಚಿಂತೆ ಮಾಡುತ್ತೇವೆ.
ನೀವು ಮತ್ತೆ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿದ್ದೇ ಆದರೆ ಮೊದಲು ನಿಮ್ಮ ಸಂಗಾತಿಯ ಜಾಗದಲ್ಲಿ ನಿಂತು ಆಲೋಚಿಸಿ. ಆಗ ಮಾತ್ರ ನೀವು ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ನೀವು ನಿಮ್ಮ ಸಂಗಾತಿಯನ್ನು ಬದಲಾಯಿಸೋದಕ್ಕೆ ಪ್ರಯತ್ನಿಸುವ ಬದಲು ನೀವಾಗಿಯೇ ಬದಲಾದರೆ ಒಳ್ಳೆಯದಲ್ವಾ?
4. ಮೂರನೇ ವ್ಯಕ್ತಿಯ ಸಲಹೆ ಪಡೆಯಿರಿ
ದಾಂಪತ್ಯದಲ್ಲಿ ಕಲಹಗಳು, ಮನಸ್ಥಾಪಗಳು ಬಂದಾಗ ಸಂಬಂಧ ಮುರಿದು ಬೀಳೋದು ಸಾಮಾನ್ಯ. ಹಾಗಂತ ನಿಮ್ಮ ಸಂಬಂಧಕ್ಕೆ ಪೂರ್ಣ ವಿರಾಮ ಇಡೋದು ಸರಿಯಲ್ಲ. ಮತ್ತೆ ನಿಮ್ಮ ಸಂಬಂಧ ಸರಿ ಮಾಡೋದಕ್ಕೆ ಪ್ರಯತ್ನಸಿದ್ದೇ ಆದರೆ, ನಿಮ್ಮಿಂದ ಅದು ಸಾಧ್ಯವಾಗದೇ ಹೋದರೆ ನೀವು ಮೂರನೇ ವ್ಯಕ್ತಿಯ ಸಲಹೆಯನ್ನು ಪಡೆಯಬಹುದು. ಅದು ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಆಪ್ತರಾಗಿ ಇರಬಹುದು. ಖಂಡಿತ ಅವರು ನಿಮಗೆ ಸಲಹೆ ನೀಡುತ್ತಾರೆ. ಇದರಿಂದ ಕೂಡ ನಿಮ್ಮ ಸಂಬಂಧ ಮತ್ತೆ ಗಟ್ಟಿಯಾಗುವ ಸಾಧ್ಯತೆಯಿದೆ.
5. ನಿಮ್ಮ ದಂಪತಿಯ ಭಾವನಾತ್ಮಕ ಅವಶ್ಯಕತೆಗಳನ್ನು ಪೂರೈಸಿ
ಸಂಬಂಧಗಳು ಮುರಿದು ಬೀಳೋದಕ್ಕೆ ದೊಡ್ಡ ಕಾರಣಗಳು ಬೇಕಾಗಿಲ್ಲ. ಚಿಕ್ಕ-ಪುಟ್ಟ ವಿಚಾರಗಳಿಗೂ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದು ಆರ್ಥಿಕ ಕಾರಣ, ದೈಹಿಕ ಅಥವಾ ಭಾವನಾತ್ಮಕ ಕಾರಣ ಇರಬಹುದು. ನಿಮ್ಮ ಸಂಗಾತಿಗೆ ನೀವು ಸರಿಯಾಗಿ ಸಮಯ ನೀಡುತ್ತಿಲ್ಲ ಅನ್ನೋ ಕಾರಣಕ್ಕೆ ನಿಮ್ಮಿಂದ ಅವರು ದೂರವಾಗಿದ್ದರೆ, ಅವರಿಗೆ ನೀವು ಮುಂದಿನ ದಿನಗಳಲ್ಲಿ ಸಮಯ ನೀಡೋದಾಗಿ ಮಾತು ಕೊಡಿ.
ಕೆಲವೊಂದು ಸಲ ಲೈಂಗಿಕ ಅಗತ್ಯತೆಗಳು ಪೂರೈಸಲು ಸಾಧ್ಯವಾಗದೇ ಇದ್ದಾಗಲೂ ಕೂಡ ದಂಪತಿಗಳು ದೂರ ದೂರ ಆಗುತ್ತಾರೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಇನ್ನೂ ನೀವು ಅವರ ನೋವು, ದುಃಖಗಳಿಗೆ ಸ್ಪಂದಿಸದಿದ್ದಾಗಲೂ ಕೂಡ ಸಂಗಾತಿ ನಿಮ್ಮಿಂದ ದೂರವಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಿಂದೆ ನಿಮ್ಮಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಹೊಸದಾಗಿ ಸಂಬಂಧವನ್ನು ಶುರು ಮಾಡಿದರೆ ಒಳ್ಳೆಯದು.
6. ಸಂಗಾತಿಯನ್ನು ಸ್ನೇಹಿರಂತೆ ನೋಡಿ
ಯಾವುದೇ ರಕ್ತ ಸಂಬಂಧಗಳ ಹೊರತಾಗಿ ಹುಟ್ಟಿಕೊಳ್ಳುವುದೇ ಸ್ನೇಹ ಸಂಬಂಧ. ಸ್ನೇಹಿತರು ನಮ್ಮನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ನಿಮ್ಮ ಸಂಗಾತಿಯನ್ನು ಕೂಡ ಸ್ನೇಹಿತೆಯಂತೆ ಸ್ವೀಕರಿಸಿ. ಆಗ ನೀವಿಬ್ಬರೂ ಸಮಾನರೂ ಎಂಬ ಭಾವನೆ ಬರುತ್ತದೆ. ಕೆಲವೊಂದು ಪುರುಷರು ಸಂಗಾತಿಯೊಂದಿಗೆ ಪ್ರಾಬಲ್ಯವನ್ನು ಮೆರೆಯೋದಕ್ಕೆ ಹೋಗುತ್ತಾರೆ. ಇದು ಸರಿಯಲ್ಲ. ಅವರನ್ನು ಕೂಡ ನಿಮ್ಮಲ್ಲಿ ಒಬ್ಬರಂತೆ ಕಾಣಬೇಕು. ಆಗ ದಾಂಪತ್ಯದಲ್ಲಿ ಯಾವುದೇ ರೀತಿ ಸಮಸ್ಯೆಗಳು ಎದುರಾಗೋದಿಲ್ಲ.
ದಾಂಪತ್ಯ ಅನ್ನೋದು ಒಂದು ಸೂಕ್ಷ್ಮ ವಿಚಾರ. ದಾಂಪತ್ಯದ ಹಳಿ ತಪ್ಪೋದಕ್ಕೆ ಗಂಡ-ಹೆಂಡತಿ ಅವಕಾಶವನ್ನು ನೀಡಬಾರದು. ಮದುವೆ ಒಂದು ಸಲ ಮುರಿದು ಹೋದರೆ ಅದನ್ನು ಸರಿಪಡಿಸೋದು ತುಂಬಾನೇ ಕಷ್ಟ ಆಗುತ್ತದೆ. ಹೀಗಾಗಿ ಮುಂಗಾಗೃತೆಯಿಂದ ಇರಬೇಕು.



Click it and Unblock the Notifications

