Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಚಾಣಕ್ಯ ನೀತಿ: ಅಪ್ಪಿ ತಪ್ಪಿಯು ಈ 5 ವಿಚಾರ ಪತ್ನಿ ಬಳಿ ಹೇಳಬಾರದಂತೆ..!
ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಅಡತಡೆ, ಸಮಸ್ಯೆ ಎಲ್ಲದಕ್ಕೂ ಚಾಣಕ್ಯ ನೀತಿಯಲ್ಲಿ ಪರಿಹಾರ ಮತ್ತು ಸಲಹೆಗಳ ನೀಡಲಾಗಿದೆ. ಇಲ್ಲಿ ದಾಂಪತ್ಯದಿಂದ ಹಿಡಿದು ಒಬ್ಬ ಯಾವೆಲ್ಲಾ ಪಾತ್ರ ನಿರ್ವಹಿಸುತ್ತಾನೋ ಅದೆಲ್ಲದರ ಕುರಿತ ನೀತಿ ಪಾಠಗಳಿ ನಮಗೆ ಚಾಣಕ್ಯ ನೀತಿಯಲ್ಲಿ ಸಿಗುತ್ತವೆ.
ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯ ನೀತಿ ಅನುಸರಿಸುವುದು ಉತ್ತಮವೆಂದು ಹೇಳಲಾಗಿದೆ. ರಾಜಕೀಯ, ರಾಜತಾಂತ್ರಿಕತೆ ಮತ್ತು ಅರ್ಥಶಾಸ್ತ್ರದ ಜ್ಞಾನವನ್ನು ಹೊಂದಿದ್ದವರು ಮಾತ್ರವಲ್ಲದೆ ಜೀವನವನ್ನು ಅತ್ಯಂತ ಸಂತೋಷವಾಗಿರಿಸಲು ಏನು ಬೇಕು ಎಂಬುದನ್ನು ಅವರು ವಿವರಿಸಿದ್ದಾರೆ.

ಇನ್ನು ದಾಂಪತ್ಯ ಜೀವನ ಸುಖವಾಗಿರಬೇಕು, ಯಾವ ಸಮಸ್ಯೆಯೂ ತಲೆದೂರಬಾರದು ಎಂಬುದು ಪ್ರತಿಯೊಬ್ಬರ ಆಶಯವಾಗಿರುತ್ತೆ. ಆದ್ರೆ ಹಾಗಾಗುವುದು ಬಹಳ ಕಡಿಮೆ. ದಾಂಪತ್ಯದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಜಗಳಗಳು, ಮನಸ್ತಾಪಗಳು, ಗಲಾಟೆಗಳು ನಡೆಯುತ್ತಲೇ ಇರುತ್ತದೆ. ಇದು ಕೆಲವೊಮ್ಮೆ ತೀವ್ರ ಸ್ವರೂಪ ಪಡೆದರೂ ಪಡೆಯಬಹುದು. ಹೀಗಿರುವಾಗ ಸಂಬಂಧವನ್ನು ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸುತ್ತದೆ.
ಹೀಗಾಗಿ ದಾಂಪತ್ಯದಲ್ಲಿ ಪತ್ನಿ ಬಳಿ ಕೆಲವೊಂದು ವಿಚಾರಗಳನ್ನು ಹೇಳದಿದ್ದರೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಿರುತ್ತೆ ಅನ್ನೋದು ಚಾಣಕ್ಯನ ನೀತಿಯಾಗಿದೆ. ಹಾಗಾದರೆ ವೈವಾಹಿಕ ಜೀವನದಲ್ಲಿ ಸಂತೋಷವಾಗಿರಲು ಹೆಂಡತಿಯಿಂದ ಯಾವೆಲ್ಲಾ ವಿಚಾರಗಳ ಮರೆಮಾಡಬೇಕು ಎಂಬುದನ್ನು ಚಾಣಕ್ಯ ಹೇಳಿದ್ದಾನೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಾಣಕ್ಯರ ಪ್ರಕಾರ ನೀವು ವೈವಾಹಿಕ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ನಿಮ್ಮ ಹೆಂಡತಿಯಿಂದ ಕೆಲವು ವಿಷಯಗಳನ್ನು ಮುಚ್ಚಿಡಬೇಕಂತೆ. ಪ್ರತಿಯೊಬ್ಬನು ತನ್ನ ಪತ್ನಿಯೊಂದಿಗೆ ಈ ವಿಚಾರಗಳನ್ನು ಎಂದಿಗೂ ಹಂಚಿಕೊಳ್ಳಬಾರದಂತೆ.
ನಿಮ್ಮ ಆದಾಯದ ಬಗ್ಗೆ ಮಾಹಿತಿ ನೀಡಬಾರದಂತೆ
ಚಾಣಕ್ಯ ನೀತಿಯ ಪ್ರಕಾರ ಪತಿ ತನ್ನ ಸಂಪಾದನೆಯ ಕುರಿತಂತೆ ಎಲ್ಲಾ ಮಾಹಿತಿಯನ್ನು ಪತ್ನಿಯೊಂದಿಗೆ ಚರ್ಚಿಸಬಾರದಂತೆ. ಏಕೆಂದರೆ ತನ್ನ ಪತಿಯ ಆದಾಯ ಎಷ್ಟು ಎಂದು ತಿಳಿದರೆ ಮನೆಯಲ್ಲಿ ಅನಗತ್ಯ ಖರ್ಚಿಗೆ ಆಕೆ ಮುಂದಾಗುತ್ತಾಳೆ ಎಂಬುದು ಚಾಣಕ್ಯ ನೀತಿಯ ಉಲ್ಲೇಖವಾಗಿದೆ. ಒಂದು ವೇಳೆ ಆಕೆಗೆ ನಿಮ್ಮ ಆದಾಯ ಎಷ್ಟು ಎಂದು ತಿಳಿಸಬೇಕೆಂದಿದ್ದರೆ ನಿಮ್ಮ ಖರ್ಚಿನ ಬಗ್ಗೆಯೂ ವಿವರಿಸಬೇಕಂತೆ.
ನಿಮ್ಮ ದೌರ್ಬಲ್ಯ ಮುಚ್ಚಿಡಿ
ಪತಿ ತನ್ನ ದೌರ್ಬಲ್ಯಗಳನ್ನು ಹೆಂಡತಿಯಿಂದ ಯಾವಾಗಲೂ ಮರೆಮಾಡಬೇಕು ಎಂದು ಚಾಣಕ್ಯನ ನೀತಿ ಹೇಳುತ್ತದೆ. ಏಕೆಂದರೆ ಕೆಲವೊಮ್ಮೆ ಪತಿಯ ದೌರ್ಬಲ್ಯದ ಲಾಭ ಪಡೆಯುವ ಸಾಧ್ಯತೆ ಇರುತ್ತದೆಯಂತೆ. ಇದರಿಂದಾಗಿ ಮನೆಯಲ್ಲಿ ಮತ್ತು ಸಮಾಜದಲ್ಲಿ ಅವಮಾನವನ್ನು ಎದುರಿಸಬೇಕಾಗಬಹುದು. ಅಥವಾ ಕುಟುಂಬದಲ್ಲಿ ಇದೊಂದು ಗಲಾಟೆಗೆ, ಮನಸ್ತಾಪಕ್ಕೆ ಕಾರಣವಾಗಬಹುದು ಎಂಬುದು ನೀತಿಯ ಸಾರವಾಗಿದೆ.
ನೀವು ದಾನ ಮಾಡಿದರ ಮಾಹಿತಿ ಗೌಪ್ಯವಾಗಿಡಿ
ನೀವು ಯಾವುದೇ ವಸ್ತು, ಹಣ ಅಥವಾ ಏನನ್ನಾದರು ದಾನ ಮಾಡಿದರೆ ಇಲ್ಲವೆ ಯಾರಿಗಾದರು ನೀಡಿದರೆ ಅದನ್ನು ಪತ್ನಿಯೊಂದಿಗೆ ಚರ್ಚಿಸದಿರುವುದೇ ಉತ್ತಮವಂತೆ. ಏಕೆಂದರೆ ಪತ್ನಿ ಬಳಿ ಈ ವಿಚಾರ ಚರ್ಚಿಸುವುದರಿಂದ ಆಕೆ ನಿಮ್ಮ ನಡೆಯ ಬಗ್ಗೆ ಅನುಮಾನಿಸಬಹುದಂತೆ, ಅಲ್ಲದೆ ನೀವು ನೀಡಿದ ವಸ್ತುವಿನ ಮೌಲ್ಯ ಅಥವಾ ಪ್ರಾಮುಖ್ಯತೆ ಕಳೆದುಕೊಳ್ಳಬಹುದಂತೆ.
ನಿಮಗಾದ ಅವಮಾನದ ಕುರಿತು ಹೇಳಬಾರದು
ಒಂದು ನಿಮಗೆ ಸಾರ್ವಜನಿಕವಾಗಿ ಇಲ್ಲವೆ ಕಚೇರಿಯಲ್ಲಿ ಇಲ್ಲವೆ ಎಲ್ಲಿಯಾದರು ಅವಮಾನ ಆಗಿರುವ ಘಟನೆ ನಡೆದರೆ ಅದನ್ನು ಪತ್ನಿ ಬಳಿ ಚರ್ಚಿಸಬಾರದಂತೆ. ಹೀಗಾದರೆ ಆಕೆ ಸಹಿಸುವುದಿಲ್ಲವಂತೆ. ಇದು ವಿವಾದ ಹುಟ್ಟಲು ಕಾರಣವಾಗಬಹುದಂತೆ. ಪತಿ ಬೇರೊಬ್ಬರ ಮುಂದೆ ಅವಮಾನಗೊಳ್ಳುವುದನ್ನು ಆಕೆ ಸಹಿಸುವುದಿಲ್ಲ. ಇದರಿಂದ ನಿಮ್ಮ ಮೇಲೆಯೇ ಮುನಿಸಿಕೊಳ್ಳವ ಸಾಧ್ಯತೆ ಇರುತ್ತದೆ.
ಅನ್ಯ ಸ್ತ್ರೀಯರ ಹೊಗಳಬೇಡಿ
ಚಾಣಕ್ಯ ನೀತಿ ಪ್ರಕಾರ ಪತಿಯಾದವನು ಅನ್ಯ ಸ್ತ್ರೀಯರನ್ನು ತನ್ನ ಪತ್ನಿ ಮುಂದೆ ಹೊಗಳಬಾರದಂತೆ. ಒಮ್ಮೆ ನೀವು ಹೊಗಳಿದರೆ ಆಕೆಯ ಮನದಲ್ಲಿ ಸಣ್ಣದಾಗಿ ಅನುಮಾನದ ಜೊತೆಗೆ ಮುನಿಸಿಗೆ ಕಾರಣವಾಗುತ್ತದೆ ಎಂಬುದು ನೀತಿಯ ಅಂಶವಾಗಿದೆ. ಬೇರೆ ಸ್ತ್ರೀಯರ ಕುರಿತ ಯಾವುದೇ ವಿಚಾರ ಚರ್ಚೆ ಮಾಡುವುದಕ್ಕಿಂತಲು ದೂರ ಉಳಿಯುವುದು ಉತ್ತಮ ಎಂಬುದು ಚಾಣಕ್ಯ ನೀತಿಯ ಅಂಶವಾಗಿದೆ.



Click it and Unblock the Notifications
