Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮುರಿದ ಮದುವೆ ಜೀವನ, ಅರಳಿದ ಹೊಸ ಪ್ರೀತಿ ಬಗ್ಗೆ ಹೇಳಿದ ವರ್ತೂರು ಸಂತೋಷ್
ಬಿಗ್‌ಬಾಸ್‌ಗೆ ಹೋದ ಸ್ಪರ್ಧಿಗಳಲ್ಲಿ ವರ್ತೂರು ಸಂತೋಷ್ ಸುದ್ದಿ ಮಾಡಿದಷ್ಟು ಯಾರೂ ಮಾಡಿಲ್ಲ. ಯಾವಾಗ ಸುದೀಪ್ ಅವರು ತಮಾಷೆಗೆ ವಾರ್ತಾರು ಎಂದರೋ ನಂತರ ಫುಲ್ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್ ಆಟಕ್ಕಿಂತ ವೈಯಕ್ತಿಕ ಕಾರಣದಿಂದಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ.
ಹುಲಿ ಉಗುರಿನ ಸಂಕಷ್ಟದಿಂದ ಪಾರಾಗಿ ಬಂದ ಮೇಲೆ ಇನ್ನೇನು ಸಮಸ್ಯೆಯಿಲ್ಲ ಎಂದಾಗಲೇ ಅವರ ಮದುವೆ ಸುದ್ದಿ ತುಂಬಾನೇ ಸುದ್ದಿ ಮಾಡಿತು. ಈಗಲೂ ಪ್ರತಿದಿನ ಅವರ ಮದುವೆ ಬಗ್ಗೆ ಒಂದೆಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇದೆ.

ಅವರಿಗೆ ಹೆಣ್ಣು ಕೊಟ್ಟ ಮಾವ ಬಂದು ವರ್ತೂರು ಸಂತೋಷ್ ಅವರ ಮೇಲೆ ಒಂದಿಷ್ಟೂ ಅಪಾದನೆ ಮಾಡಿದರು. ಆದರೆ ವರ್ತೂರು ಸ್ನೇಹಿತರು ಹಾಗೂ ಅವರ ಅಭಿಮಾನಿಗಳು ಸಂತೋಷ್ ಅವರು ಬಿಗ್‌ಬಾಸ್ ಮನೆಯೊಳಗಡೆ ಇರುವಾಗ ಈ ರೀತಿ ಮಾತನಾಡುವುದು ಸರಿಯಿಲ್ಲ, ಇಷ್ಟು ದಿನ ಅವರು ಇದ್ದಾಗ ಏನೂ ಮಾತನಾಡದೆ ಇದ್ದವರು ಈಗ ಬಂದು ಏಕೆ ಆರೋಪ ಮಾಡುತ್ತದ್ದಾರೆ ಎಂದು ಪ್ರಶ್ನಿಸಿದರು.
ವರ್ತೂರು ಸಂತೋಷ್ ಮದುವೆ ವಿಚಾರ ಅವರ ವೈಯಕ್ತಿಕ ವಿಚಾರ. ಆದರೆ ಅವರ ಮದುವೆ ವಿಚಾರ ಅವರು ಹೊರಗಡೆ ಬಂದ ಮೇಲೆ ಮಾತನಾಡಿದರೆ ಹೆಚ್ಚು ಚೆನ್ನಾಗಿರುತ್ತಿತ್ತು. ಏಕೆಂದರೆ ಇವರೇ ಸರಿ, ಅವರೇ ಸರಿ ಮೂರನೇಯ ವ್ಯಕ್ತಿಗೆ ಹೇಳಲು ಸಾಧ್ಯವಿಲ್ಲ. ಅವರಿಬ್ಬರ ನಡುವೆ ನೂರು ವಿಚಾರಗಳಿರುತ್ತದೆ, ಆದರೆ ಅದು ಅವರಿಗಷ್ಟೇ ಗೊತ್ತಿರುತ್ತದೆ, ಆದರೆ ಸಂತೋಷ್ ಅವರ ವಿಚಾರದಲ್ಲಿ ಈ ಮದುವೆ ವಿಷಯ ಹೊರ ಬಂದಾಗ ಜನ ನೂರು ತರ ಮಾತನಾಡಿಸಲಾರಂಭಿಸಿದರು.
ಬಿಗ್‌ಬಾಸ್ ಮನೆಯಲ್ಲಿ ಅಸಂತೋಷ ಮದುವೆ ಬದುಕಿನ ಬಗ್ಗೆ ಹೇಳಿದ ಸಂತೋಷ್
ಹೊರಗಡೆ ಅವರ ಮದುವೆ ವಿಚಾರ ಇಷ್ಟೆಲ್ಲಾ ದೊಡ್ಡ ಸದ್ದು ಮಾಡುತ್ತಿದೆ ಎಂದು ಅವರಿಗೆ ಗೊತ್ತಿಲ್ಲ, ಆದರೆ ಬಿಗ್‌ಬಾಸ್ ಮನೆಯಲ್ಲಿ ಅವರು ಹಳಿ ತಪ್ಪಿದ ದಾಂಪತ್ಯ ಜೀವನ, ಮರುಭೂಮಿಯಲ್ಲಿ ಓಯಸಿಸ್ ಆಗಿ ಬಂದ ಪ್ರೀತಿ ಎಲ್ಲದರ ಬಗ್ಗೆ ತುಂಬಾನೇ ಮುಕ್ತವಾಗಿ ಮಾತನಾಡಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ತುಂಬಾನೇ ಖುಷಿಯಾಗಿದೆ. ಜನರೂ ಸಾಕಷ್ಟು ವಿಚಾರಗಳಲ್ಲಿ ಉತ್ತರ ಸಿಕ್ಕಾಂತಾಗಿದೆ.
ಅವರೇ ಹೇಳುವಂತೆ ನಾಲ್ಕು ವರ್ಷವಿದ್ದಾಗ ತಂದೆ ತೀರಿ ಹೋಗುತ್ತಾರೆ. ದೊಡ್ಡಪ್ಪ-ಚಿಕ್ಕಪ್ಪಂದಿರ ಜೊತೆ ಬೆಳೆದ ಹುಡುಗ, ಹದಿ ಹರೆಯದ ಪ್ರಾಯದಲ್ಲಿ ಕೋಟ್ಯಾಂತರ ಆಸ್ತಿಯ ಜವಾಬ್ದಾರಿ ನೀಡಿದರು. ಆಗಲೂ ಜನ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಅಂತ ಆಡಿಕೊಂಡಿದ್ದರು, ಸಂತೋಷ್ ಹಸುಗಳನ್ನು ಸಾಕಲಾರಂಭಿಸಿದಾಗ ಅದಕ್ಕೂ ಜನ ಮಾತನಾಡಿದರು, ಆದರೆ ಇಂದು ಆ ಹಸುಗಳಿಂದ ಹಳ್ಳಿಕಾರ್ ಒಡೆಯ ಆಗಿದ್ದಾರೆ. ದೊಡ್ಡಪ್ಪ ತೋರಿಸಿದ ಹುಡುಗಿ ಜೊತೆ ಮದುವೆಯೂ ಆಗುತ್ತದೆ.
ಹುಡುಗಿ ಅಷ್ಟೇನು ರೂಪವತಿ ಅಲ್ಲ ಎಂದು ಕೆಲವರು ಹೇಳಿದಾಗ ರೂಪಕ್ಕಿಂತ ಮನೆತನ ಮುಖ್ಯ ಎಂದು ದೊಡ್ಡಪ್ಪ ಹೇಳಿದಾಗ ಅದರಂತೆ ವರ್ತೂರು ಮದುವೆಯಾಗುತ್ತಾರೆ. ನಂತರ ಅತ್ತೆ-ಸೊಸೆ ಮಧ್ಯೆ ಹೊಂದಾಣಿಕೆಯ ಕೊರತೆ ಬರುತ್ತದೆ. ಆವಾಗ ವರ್ತೂರು ಅವರು ತಾಯಿಯನ್ನು ಬಿಟ್ಟುಕೊಡುವುದಿಲ್ಲ, ಪತ್ನಿ ಮುನಿಸಿ ತವರಿಗೆ ಹೋಗುತ್ತಾಳೆ. ಅವಳ ಬದುಕು ಹಾಳಾಗಬಾರದೆಂದು ಮತ್ತೆ ಕರೆದುಕೊಂಡು ಬರಲು ಹೋದಾಗ ಗೇಟ್ ದಾಡು ಎಂದು ಹೇಳಿ ಅವರ ಮಾವ ಅವಮಾನಿಸುತ್ತಾರೆ, ಹೀಗೆ ಆ ಸಂಬಂಧ ದೂರಾಯ್ತು ಎಂಬುವುದಾಗಿ ಹೇಳಿದ್ದಾರೆ.
ಮತ್ತೆ ಮೂಡಿದ ಪ್ರೀತಿ ಬಗೆಯೂ ಹೇಳಿದ್ದಾರೆ
ಪತ್ನಿಯಿಂದ ದೂರವಾದ ಮೇಲೆ ಅವರನ್ನು ಖಿನ್ನತೆಯಿಂದ ಹೊರಬರಲು ಒಬ್ಬ ಹುಡುಗಿ ಸಹಾಯ ಮಾಡಿದ್ದಾಳೆ, ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವಾಗಿ ಹೇಳಿ ಈ ವಿಚಾರ ತಾಯಿಗೂ ಗೊತ್ತಿರುವುದಾಗಿ ಬಹಳ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ತನೀಷಾ ಜೊತೆ ಸ್ನೇಹ
ಬಿಗ್‌ಬಾಸ್ ಮನೆಯಲ್ಲಿ ವರ್ತೂರು ಅವರು ತನೀಷಾ ಜೊತೆ ಸ್ನೇಹದಿಂದ ಇದ್ದಾರೆ, ಇದನ್ನು ನೋಡಿ ಕೆಲವರು ತನೀಷಾ ಮೇಲೆ ಪ್ರೀತಿ ಆಗಿದೆ ಎಮದು ಭಾವಿಸಿದ್ದರು, ಆದರೆ ವರ್ತೂರು ತಾವು ಪ್ರೀತಿಸುತ್ತಿರುವ ಹುಡುಗಿ ಬಗ್ಗೆ ಹೇಳಿರುವುದರಿಂದ ಇನ್ನು ಯಾರೂ ತನೀಷಾ ಜೊತೆ ಸೇರಿಸಿ ಮಾತನಾಡಲ್ಲ. ತನೀಷಾ-ಸಂತೋಷ್ ಮಧ್ಯ ಒಂದು ಒಳ್ಳೆಯ ಸ್ನೇಹವಿದೆ. ಆದರೆ ಆ ಸ್ನೇಹವನ್ನು ನೋಡಿ ಅವರಿಬ್ಬರ ನಡುವೆ ಪ್ರೀತಿಯಿದೆ ಎಂದು ಭಾವಿಸಿ ಈ ಮದುವೆ ಸುದ್ದಿ ತುಂಬಾನೇ ಸದ್ದು ಮಾಡಿತು.
ಒಂದೇ ದೃಷ್ಟಿಯಿಂದ ನೋಡಿ ಒಬ್ಬರನ್ನು ದೂಷಿಸುವುದು ಸರಿಯಲ್ಲ
ಸಂತೋಷ್ ಮದುವೆ ವಿಚಾರದಲ್ಲಿ ಯಾರು ಸರಿ-ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ, ಇವರಿಗೆ ಇವರು ಸರಿಯಂತೆ ಕಂಡರೆ ಹೆಣ್ಣಿನ ಮನೆಯವರಿಗೆ ತಾವು ಸರಿ ಕಾಣುತ್ತದೆ. ಆದ್ದರಿಂದ ಅವರ ವೈಯಕ್ತಿಕ ಬದುಕಿನ ಬಗ್ಗೆ ಮೂರನೇಯವರು ಅಭಿಪ್ರಾಯ ಹೇಳಿ ಅವರ ಬದುಕನ್ನು ಮತ್ತಷ್ಟು ನರಕ ಮಾಡಬಾರದು ಅಲ್ಲವೇ?



Click it and Unblock the Notifications