Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದಾಂಪತ್ಯ ಜೀವನದಲ್ಲಿ ಈ ಎರಡು ಮುಖಗಳು ಏಕೆ?

ಮದುವೆಯನ್ನು ನರಕ, ಸ್ವರ್ಗ ಎಂದು ಹೇಳುವವರಿಬ್ಬರೂ ಮದುವೆಯಾಗುವಾಗ ನೂರಾರು ಸುಂದರ ಕನಸ್ಸುಗಳಿಂದ ಹೊಸ ಬಾಳಿಗೆ ಕಾಲಿಟ್ಟಿರುತ್ತಾರೆ. ಆದರೆ ನಂತರ ಅವರು ರೂಪಿಸಿಕೊಂಡ ಜೀವನದಿಂದಾಗಿ ಅವರ ಜೀವನ ವಿಚಿತ್ರ ತಿರುವುಗಳನ್ನು ಪಡೆದಿರುತ್ತದೆ.
ಅದರಲ್ಲೂ ಇತ್ತೀಚಿಗೆ ವಿಚ್ಛೇದನ ಪಡೆಯುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಈ ರೀತಿ ವಿಚ್ಛೇದನಕ್ಕೆ ಕಾರಣಗಳೇನು ಎಂದು ನೋಡಿದಾಗ ಈ ಕೆಳಗಿನ ಪ್ರಮುಖ ಅಂಶಗಳು ಕಂಡುಬರುತ್ತವೆ.
ಯೋಚನೆಯಲ್ಲಿ ಹೊಂದಾಣಿಕೆಯಿಲ್ಲದಿರುವುದು: ಗುಣದಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುವುದು ಸಹಜ. ಆದರೆ ಗುಣಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಒಳ್ಳೆಯ ವಿಷಯಗಳಿಗೆ ಹಠ ಇರಬೇಕು. ಆದರೆ ಹಠದಿಂದಾಗಿ ಜೀವನ ಹಾಳಾಗಬಾರದು. ಮದುವೆಯ ನಂತರ ಸ್ವಭಾವವನ್ನು ಸ್ವಲ್ಪ ಬದಲಾಯಿಸಬೇಕಾಗುತ್ತದೆ. ಆದರೆ ಹೆಚ್ಚಿನ ದಂಪತಿಗಳಲ್ಲಿ ಆ ಹೊಂದಾಣಿಕೆಯ ಗುಣ ಇಲ್ಲದಿರುವುದು ವಿಚ್ಛೇದನಕ್ಕೆ ಪ್ರಮುಖ ಕಾರಣವಾಗಿದೆ.
ತಪ್ಪು ತಿಳಿಯುವುದು: ಒಬ್ಬರ ಬಗ್ಗೆ ಮತ್ತೊಬ್ಬರಲ್ಲಿ ತಪ್ಪು ಭಾವನೆ, ಅವರ ಬಗ್ಗೆ ಗೌರವ ಇಲ್ಲದಿರುವುದು ಈ ರೀತಿ ಇದ್ದರೆ ಸಂಸಾರ ನರಕನೇ ಆಗುವುದು!
ಮಾತುಕತೆ ಕಡಿಮೆ: ಎಷ್ಟೋ ಸಂಸಾರದಲ್ಲಿ ಗಂಡ-ಹೆಂಡತಿ ನಡುವೆ ಸರಿಯಾಗಿ ಮಾತುಕತೆನೇ ಇರುವುದಿಲ್ಲ. ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥೈಸಿಕೊಳ್ಳುವುದಿಲ್ಲ. ಈ ರೀತಿ ಇದ್ದರೆ ಇಬ್ಬರ ನಡುವೆ ಭಾಂದವ್ಯ ಗಟ್ಟಿಯಾಗಲು ಸಾಧ್ಯವಿಲ್ಲ.
ನಂಬಿಕೆ ಇಲ್ಲದಿರುವುದು: ನಂಬಿಕೆ ಎಂಬುದು ಇಲ್ಲದ ಮೇಲೆ ಸಂಸಾರ ನಡೆಸುವುದು ಕಷ್ಟವಾಗುತ್ತದೆ. ನಂಬಿಕೆ ಇದ್ದರೆ ಎಂತಹ ಸಮಸ್ಯೆಯನ್ನೂ ಸುಲಭವಾಗಿ ನಿವಾರಿಸಬಹುದು.
ಅದೇ ದಾಂಪತ್ಯ ಜೀವನ ಸ್ವರ್ಗ ಅನ್ನುವವರು 3 ಗುಣಗಳನ್ನು ತಮ್ಮ ದಾಂಪತ್ಯದ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ.
1. ಸ್ನೇಹ
2. ಸ್ವಾತಂತ್ರ್ಯ
3. ಕ್ಷಮಿಸುವ ಗುಣ



Click it and Unblock the Notifications
