Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತುಂಬಾ ಕಿರಿಕಿರಿ ಅನಿಸುವ ಗಂಡನ ಗುಣಗಳು!

ಪುರುಷರು ತಮ್ಮ ಹೆಂಡತಿಯಿಂದ ಕೆಲವೊಂದು ಗುಣಗಳನ್ನು ಬಯಸುವ ರೀತಿ ಹೆಣ್ಣು ಮಕ್ಕಳು ತಮ್ಮ ಗಂಡನ ಹತ್ತಿರ ಕೆಲವೊಂದು ಗುಣಗಳು ಇರಬೇಕೆಂದು ಬಯಸುತ್ತಾರೆ. ಆ ಗುಣಗಳು ಅವನಲ್ಲಿ ಇಲ್ಲದಿದ್ದರೆ ಅವಳಿಗೆ ಅವನ ನಡುವಳಿಕೆ ಕಿರಿಕಿರಿ ತರುತ್ತದೆ. ಆ ರೀತಿ ಕಿರಿಕಿರಿ ತರುವ ನಡುವಳಿಕೆಗಳು ಯಾವುವು ಎಂದು ತಿಳಿಯಲು ಮುಂದೆ ಓದಿ:
ಮುಖ್ಯ ದಿನವನ್ನೇ ಮರೆತು ಬಿಡುವುದು: ಸಾಕಷ್ಟು ಪುರುಷರಿಗೆ ಮದುವೆಯಾಗುವ ಮೊದಲು ತನ್ನ ಗರ್ಲ್ ಫ್ರೆಂಡ್ ನ ಹುಟ್ಟಿದ ದಿನ, ಸಿನಿಮಾಕ್ಕೆ ಹೋಗುವ ದಿನ ಎಲ್ಲಾ ನೆನೆಪಿರುತ್ತದೆ. ಆದರೆ ಮದುವೆಯಾಗಿ ಇನ್ನೂ ವರ್ಷ ತುಂಬಿರುವುದಿಲ್ಲ ಮುಖ್ಯವಾದ ದಿನವೆಲ್ಲಾ ಮರೆತು ಬಿಟ್ಟಿರುತ್ತಾರೆ. ಅವಳ ಹುಟ್ಟಿದ ದಿನ ನೆನೆಪಿರುವುದಿಲ್ಲ, ವೆಡ್ಡಿಂಗ್ ಆನಿವರ್ಸರಿ ನೆನೆಪಿರುವುದಿಲ್ಲ, ಸಿನಿಮಾಕ್ಕೆ ಹೋಗಬೇಕೆಂದು ಬೆಳಗ್ಗೆ ಹೇಳಿದ್ದು ಸಾಯಾಂಕಾಲ ಹೊತ್ತಿಗೆ ನೆನೆಪಿರುವುದಿಲ್ಲ. ಅದೇ ಯಾವ ದಿನ ಕ್ರಿಕೆಟ್ ಮ್ಯಾಚ್ ಇದೆ, ಫ್ರೆಂಡ್ಸ್ ಗಳ ಜೊತೆ ಔಟಿಂಗ್ ಯಾವ ದಿನ ಹೋಗಬೆಕು ಎಂಬುದೆಲ್ಲಾ ಚೆನ್ನಾಗಿ ನೆನಪಿನಲ್ಲಿರುತ್ತದೆ. ಈ ರೀತಿಯ ಗುಣ ಹೆಂಡತಿಯಲ್ಲಿ ಅತೃಪ್ತಿ ತರುತ್ತದೆ.
ವಸ್ತುಗಳನ್ನು ಎಲ್ಲಿಂದರಲ್ಲಿ ಅಲ್ಲಿ ಎಸೆಯುವುದು: ಬಟ್ಟೆ ಮತ್ತು ಶೂಗಳನ್ನು ಕ್ರಮಬದ್ಧವಾಗಿ ಒಂದು ಕಡೆ ಇಡದೆ ಸಿಕ್ಕ ಕಡೆ ಬಿಸಾಕುವುದು, ಅದನೆಲ್ಲಾ ನೋಡಿಕೊಳ್ಳಲು ತಾನೆ ಅವಳಿರುವುದು ಎಂಬ ಅಸಡ್ಡೆ, ನಾನೇ ಅವಳಿಗಿಂತ ಸುಪ್ರೀಮ್ ಎಂಬ ಮನೋಭಾವ ಇರುವ ಪುರುಷರಲ್ಲಿ ಕಂಡು ಬರುತ್ತದೆ. ಗಂಡ- ಹೆಂಡತಿ ನಡುವೆ ಯಾರು ಮೇಲಲ್ಲ, ಯಾರು ಕೀಳಲ್ಲ, ಒಬ್ಬರಿಗೊಬ್ಬರು ಅರ್ಥೈಹಿಸಿಕೊಂಡು ಹೋದರೆ ಮಾತ್ರ ಸುಂದರವಾದ ಸಂಸಾರ ನಡೆಸಲು ಸಾಧ್ಯ.
ಸಾರಿ ಕೇಳದೆ ಇರುವುದು: ಪ್ರತಿಯೊಬ್ಬರು ಸಣ್ಣ-ಪುಟ್ಟ ತಪ್ಪು ಮಾಡೇ ಮಾಡುತ್ತಾರೆ. ನಮ್ಮ ನಡುವಳಿಕೆಯಿಂದ ಇನ್ನೊಬ್ಬರಿಗೆ ನೋವಾದರೆ ಸಾರಿ ಕೇಳಬೇಕು. ಹೆಚ್ಚಿನ ಪುರುಷರು ತನ್ನದೇ ತಪ್ಪಿದ್ದರೂ ಹೆಂಡತಿಯಲ್ಲಿ ಸಾರಿ ಕೇಳಲು ಅಹಂ ಅಡ್ಡ ಬರುತ್ತದೆ. ಅಹಂನಿಂದ ಇನ್ನೊಬ್ಬರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ.
ಚುಡಾಯಿಸುವುದು: ಪ್ರೀತಿಯಿಂದ ಹೆಂಡತಿಯನ್ನು ಚುಡಾಯಿಸಿದರೆ ಸರಿ. ಆದರೆ ಕೆಲ ಪುರುಷರು ಮೂರನೇ ವ್ಯಕ್ತಿಯ ಮುಂದೆ ಹೆಂಡತಿಯನ್ನು ಚುಡಾಯಿಸುವುದು, ಅವಳ ತವರು ಮನೆಯವರ ಬಗ್ಗೆ ಲೇವಡಿ ಮಾಡುವುದು ಮಾಡುತ್ತಿರುತ್ತಾರೆ. ತನ್ನನ್ನು ಗಂಡ ಸದಾ ಹೀಯಾಳಿಸುತ್ತಿರುವುದು ಯಾವ ಹೆಂಡತಿಗೂ ಇಷ್ಟವಾಗುವುದಿಲ್ಲ.
ರಜಾದಿನದಲ್ಲಿ ಸೋಮಾರಿಯಾಗಿರುವುದು: ಕೆಲಸ ಇರುವ ಸಮಯದಲ್ಲಿ ಗಂಡ ಜೊತೆಗಿರುವುದಿಲ್ಲ. ಆದರೆ ಒಂದು ದಿನ ರಜಾವಿದ್ದಾಗ ಅವನು ನನ್ನ ಜತೆ ಇರಬೇಕು, ನನ್ನ ಹೊರಗಡೆ ಕರೆದುಕೊಂಡು ಹೋಗಬೇಕು ಎಂಬ ಆಸೆ ಹೆಣ್ಣುಮಕ್ಕಳಲ್ಲಿ ಇರುತ್ತದೆ. ಆದರೆ ರಜಾ ಇರುವ ದಿನ ಸೋಮಾರಿಯಾಗಿ ಮನೆಯಲ್ಲಿರುವುದು ಅಥವಾ ಫ್ರೆಂಡ್ಸ್ ಜೊತೆ ಹೊರಗಡೆ ಹೋಗಿ ಲೇಟಾಗಿ ಬರುವುದು ಮಾಡಿದರೆ ಗಂಡನ ಅಂತಹ ಗುಣಗಳನ್ನು ದ್ವೇಷಿಸಲಾರಂಭಿಸುತ್ತಾಳೆ.



Click it and Unblock the Notifications
