Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರೀತಿಯ ಆಳ ಹೆಚ್ಚಿಸುವ ಸಣ್ಣ ಪುಟ್ಟ ಅಂಶಗಳು

ಎಷ್ಟೊ ಜನರು ಹೇಳುವುದನ್ನು ಕೇಳಬಹುದು. 'ಪ್ರೀತಿಸಿದ ಶುರುವಿನಲ್ಲಿದ್ದ ಖುಷಿ, ಆಸಕ್ತಿ ಪ್ರೀತಿಸಿ ಸ್ವಲ್ಪ ದಿನಗಳ ಬಳಿಕ ಇಲ್ಲವಾಗಿದೆ. ಪ್ರೀತಿಸುವಾಗ ಸುತ್ತಿ-ಸುತ್ತಿ ಬರುತ್ತಿದ್ದ. ಈಗ ಕೆಲಸ ಕಾರ್ಯ ಎಂದು ಬ್ಯೂಸಿಯಾಗುತ್ತಾನೆ. ಹೊರಗಡೆ ಸುತ್ತಾಡಲು ಅವನಿಗೆ ಸಮಯವಿರುವುದಿಲ್ಲ' ಎಂದು ಬೇಜಾರುಪಟ್ಟುಕೊಳ್ಳುತ್ತಾರೆ. ರೀತಿ ಆದಾಗ ಸಂಬಂಧದಲ್ಲಿ ಜಗಳಗಳು ಪ್ರಾರಂಭವಾಗುತ್ತದೆ.
ಎಲ್ಲಾ ಸಮಯದಲ್ಲಿ ಪ್ರೀತಿ,ಪ್ರೇಮ ಅಂತ ಸುತ್ತಾಡುತ್ತಿದ್ದರೆ ಬದುಕು ಸಾಗುವುದಿಲ್ಲ. ಮುಂದಿನ ಬದುಕಿಗೆ ಗಟ್ಟಿ ಬುನಾದಿ ಹಾಕಲು ಯೌವನದಲ್ಲಿ ಹೆಚ್ಚು ಶ್ರಮದಿಂದ ದುಡಿಯಬೇಕಾಗುತ್ತದೆ. ಅದನ್ನು ಪ್ರೇಮಿಗಳು ಅರ್ಥ ಮಾಡಿಕೊಳ್ಳಬೇಕು. ಆದರೆ ಕೆಲಸದ ಒತ್ತಡಗಳಲ್ಲಿ ಪ್ರೀತಿಯನ್ನು ಕಡೆಗಣಿಸಬಾರದು. ನೀವು ಮಾಡುವ ಚಿಕ್ಕ ಪುಟ್ಟ ವಿಷಯಗಳಿಂದ ನಿಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿಯಾಗಿಸಬಹುದು. ಅದಕ್ಕಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1. ಈಗೀನ ಕಾಲದಲ್ಲಿ ಯಾರೂ ಪ್ರೇಮ ಪತ್ರ ಬರೆಯಿರಿ ಅಂದರೆ ಹಾಸ್ಯಾಸ್ಪದ ಕೂಡ ಅನಿಸಬಹುದು. ಆದರೆ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳುವಂತಹ ಒಂದು ಪ್ರೀತಿಯ ಮೆಸೇಜ್ ಟೈಪ್ ಮಾಡಿ ಕಳುಹಿಸಿ.
2. ನಿಮ್ಮ ಪ್ರೀತಿಯ ಸಂಕೇತವಾಗಿ ಇಬ್ಬರು ಒಂದೇ ರೀತಿಯ, ನಿಮಗೆ ಇಷ್ಟವಾದ ಟ್ಯಾಟೂ (ಹಚ್ಚೆ) ಹಾಕಿಸಬಹುದು.
3. ಐಪಾಡ್, ಐಪೋಡ್ ಅಥವಾ ಲ್ಯಾಪ್ ಟಾಪ್ ಇರುವುದು ದೊಡ್ಡ ವಿಷಯವಲ್ಲ. ನಿಮ್ಮ ಪ್ರೇಮಿಗೆ ಇಷ್ಟವಾಗಿರುವ ಹಾಡುಗಳ ಬಗ್ಗೆ ತಿಳಿದುಕೊಂಡು ಅವರಿಗೆ ಗೊತ್ತಾಗದಂತೆ ಅವರ ಐಪೋಡ್ ಅಥವಾ ಲ್ಯಾಪ್ ಟಾಪ್‌ಗಳಲ್ಲಿ ಅವರಿಗೆ ಇಷ್ಟವಾದ ಹಾಡುಗಳನ್ನು ಹಾಕಿಕೊಡಿ. ಈ ರೀತಿ ಮಾಡಲು ಕೆಲವೆ ನಿಮಿಷಗಳು ಸಾಕು.
4. ಸಣ್ಣ-ಪುಟ್ಟ ಗಿಫ್ಟ್‌ಗಳನ್ನು ನೀಡುವುದು, ಹೊರಗಡೆ ಸುತ್ತಾಡುವುದು, ಜೊತೆಗೆ ಕೂತು ತಿನ್ನುವುದು ಇವೆಲ್ಲ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
5. ಅವರು ಅಂದರೆ ನಿಮಗೆ ಏಕೆ ಇಷ್ಟ ಎಂದು ಪಟ್ಟಿ ಮಾಡಿ ಅವರ ಪರ್ಸ್‌ನಲ್ಲಿ ಹಾಕಿ. ಬಾಳಸಂಗಾತಿಗೆ ಇಷ್ಟವಾಗದ ವಿಷಯಗಳನ್ನು ಮಾಡದಿರುವುದು ಒಳ್ಳೆಯದು. ಈ ರೀತಿ ಮಾಡಿದರೆ ಜಗಳ ಕಮ್ಮಿಯಾಗುತ್ತದೆ, ಪ್ರೀತಿ ಹೆಚ್ಚಾಗುತ್ತದೆ.



Click it and Unblock the Notifications
