Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಕಹಿಸತ್ಯ ಪುರುಷರ ಹತ್ತಿರ ಕೇಳಬೇಡಿ!

1. ಇದುವರೆಗೆ ಎಷ್ಟು ಸಂಪಾದನೆ ಮಾಡಲು ಸಾಧ್ಯವಾಯಿತು?
ಯಾವುದೇ ಕಾರಣಕ್ಕೆ ಈ ರೀತಿ ಕೇಳಬಾರದು. ಈ ರೀತಿ ಕೇಳಿದರೆ ಪುರುಷರಿಗೆ ಕೀಳೆರಿಮೆ ಉಂಟಾಗುವುದು. ಅವರ ಆದಾಯದ ಬಗ್ಗೆ ಗೊತ್ತಿರುತ್ತದೆ. ಇಷ್ಟೆಲ್ಲಾ ಇದ್ದು ಈ ರೀತಿ ಕೇಳುವುದು ತಪ್ಪು. ಸಾಧ್ಯವಾದರೆ ಹಣಕಾಸಿನ ವಿಷಯದಲ್ಲಿ ನೆರವು ನೀಡಲು ಪ್ರಯತ್ನಿಸಿ. ಕಷ್ಟದಲ್ಲಿದ್ದಾಗ ಧೈರ್ಯ ಹೇಳಿ. ಅಗ ಸಂಬಂಧ ಮಧುರವಾಗಿರುತ್ತದೆ.
2. ನಿನಗೆ ಕೊಂಡು ಕೊಡಲು ಏಕೆ ಸಾಧ್ಯವಿಲ್ಲ?
ಅವನ ಆದಾಯದ ಮಿತಿ ಅರೆತು ನಿಮ್ಮ ಬೇಡಿಕೆಗಳನ್ನು ಹೇಳಬೇಕು. ಗಂಡ ಸಾಲ ಮಾಡಿ ಬೈಕ್ ಕೊಂಡಿರುತ್ತಾನೆ. ಆದರೆ ಹೆಂಡತಿ ಅದಕ್ಕೆ ತೃಪ್ತಿಗೊಳ್ಳದೆ ಕಾರು ಬೇಕು ಅನ್ನುವುದು ಸರಿಯಲ್ಲ. ಅದು ಅವನ ಅಸಹಾಯಕತೆಯನ್ನು ಎತ್ತಿ ತೋರಿಸಿದಂತೆ ಅಗುತ್ತದೆ. ಇಲ್ಲ, ಆಗಲ್ಲ ಅಂತ ಚುಚ್ಚು ಮಾತು ಹೇಳುವ ಬದಲು ಅವರ ಆದಾಯಕ್ಕೆ ಹೊಂದಿಕೊಂಡು ಹೋಗುವುದನ್ನು ಕಲೆತರೆ ಸಂಸಾರ ಚೆನ್ನಾಗಿ ನಡೆಸಬಹುದು.
3.ನನ್ನ ತಂದೆ ನಿನಗಿಂತ ಬೆಟರ್: ನನ್ನ ತಂದೆ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಬೇಕಾಗಿದ್ದೆಲ್ಲಾ ಕೊಡಿಸುತ್ತಿದ್ದರು. ತುಂಬಾ ದುಡ್ಡು ಮಾಡಿದ್ದಾರೆ. ನಿನಗ್ಯಾಕೆ ಸಾಧ್ಯವಿಲ್ಲ ಎಂದು ಅನೇಕರು ಕೇಳುತ್ತಾರೆ. ಆದರೆ ಹಾಗೆ ಕೇಳುವ ಮೊದಲು ಯೋಚಿಸಬೇಕಾದ ವಿಷಯ ನಿಮ್ಮ ತಂದೆ ಇವರಿಗಿಂತ ಅನುಭವಸ್ಥರು. ಇವರಿಗೆ ಜೀವನದಲ್ಲಿ ಸಾಧಿಸಲು ಇನ್ನೂ ಸಮಯವಿದೆ. ಜೊತೆಗೆ ನಿಂತು ಮಾರ್ಗದರ್ಶನ ನೀಡಿ, ಕಷ್ಟಗಳನ್ನು ಹಂಚಿಕೊಳ್ಳಿ. ಖಂಡಿತ ಮುಂದೊಂದು ದಿನ ನಿಮ್ಮ ತಂದೆಗಿಂತ ಉತ್ತಮ ಸ್ಥಾನಮಾನ ಗಳಿಸುತ್ತಾರೆ.
4. ನಾನು ನಿನ್ನ ಮದುವೆಯಾಗಿ ತಪ್ಪು ಮಾಡಿದೆ: 'ನನಗೆ ನಿನಗಿಂತ ಒಳ್ಳೆಯ ಹುಡುಗ ಸಿಗುತ್ತಿದ್ದ. ನಿನ್ನ ಮದುವೆ ಮಾಡಿ ತಪ್ಪು ಮಾಡಿದೆ' ಇಂತಹ ಮಾತುಗಳನ್ನು ತಪ್ಪಿ ಕೂಡ ಹೇಳಬಾರದು. ಇವೆಲ್ಲಾ ಮದುವೆಗಿಂತ ಮೊದಲು ಯೋಚಿಸಬೇಕಾಗಿತ್ತು. ನಂತರ ಹೇಳಿದರೆ ಪ್ರಯೋಜನವಿಲ್ಲ. ಇಂತಹ ಮಾತುಗಳು ಗಂಡ ಹೆಂಡತಿ ನಡುವೆ ಸಾಕಷ್ಟು ಬಿರುಕು ತರುತ್ತದೆ.
5. ನಿಮ್ಮ ತಾಯಿಗೆ ಮತ್ತು ನನಗೆ ಸರಿ ಬರುವುದಿಲ್ಲ: ಅತ್ತೆ-ಸೊಸೆ ನಡುವೆ ಭಿನ್ನಾಭಿಪ್ರಾಯ ಹೆಚ್ಚಿನ ಮನೆಗಳಲ್ಲಿ ಸಾಮಾನ್ಯ. ಆದರೆ ಈ ರೀತಿ ಇದ್ದರೆ ಅದನ್ನು ನೇರವಾಗಿ ಹೇಳುವ ಬದಲು ನಿಮ್ಮ ತಾಯಿಗೆ ನನ್ನ ಏಕೆ ಇಷ್ಟವಿಲ್ಲ, ನನ್ನ ತಪ್ಪು ಏನು, ಹೇಗೆ ಇದನ್ನು ಸರಿಪಡಿಸಬಹುದು ಅವರ ಹತ್ತಿರ ಸಲಹೆ ಕೇಳಿ. ಸುಮ್ಮನೆ ಅತ್ತೆ ಮೇಲೆ ದೂರುವ ಅಭ್ಯಾಸವನ್ನು ನಿಲ್ಲಿಸಿ.
6. ನಿನ್ನ ಸ್ನೇಹಿತರು ನಿನಗಿಂತ ದುಡಿಯುತ್ತಾರೆ: ಯಾವುದೇ ಕಾರಣಕ್ಕೆ ಗಂಡನನ್ನು ಅವನ ಸ್ನೇಹಿತರಿಗೆ ಹೋಲಿಸಬೇಡಿ. ಅದು ಅವರಿಗೆ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರಿಗೆ ಚೆನ್ನಾಗಿ ದುಡಿಯಬೇಕು, ಕೈ ತುಂಬಾ ಸಂಬಳ ಬರಬೇಕು ಎಂದು ಬಯಸುತ್ತಾರೆ ಮತ್ತು ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ ಗಂಡ-ಹೆಂಡತಿ ಸಂಬಂಧ ಉತ್ತಮವಾಗಿರಬೇಕೆಂದು ಬಯಸುವವರು ಇಂತಹ ಮಾತುಗಳನ್ನು ಹೇಳದಿರುವುದೆ ಒಳ್ಳೆಯದು.



Click it and Unblock the Notifications
